ಹಣಕಾಸು ಸಚಿವಾಲಯ
ದೃಢವಾದ ಡಿಜಿಟಲ್ ಪಾವತಿ ಮೂಲಸೌಕರ್ಯವು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ನಗದು ಪಾವತಿಯ ತ್ವರಿತ ವರ್ಗಾವಣೆಯನ್ನು ಸಕ್ರಿಯಗೊಳಿಸುತ್ತದೆ
Posted On:
12 APR 2020 7:05PM by PIB Bengaluru
ದೃಢವಾದ ಡಿಜಿಟಲ್ ಪಾವತಿ ಮೂಲಸೌಕರ್ಯವು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ನಗದು ಪಾವತಿಯ ತ್ವರಿತ ವರ್ಗಾವಣೆಯನ್ನು ಸಕ್ರಿಯಗೊಳಿಸುತ್ತದೆ
ಜನ-ಧನ್ ಖಾತೆಗಳನ್ನು ಮತ್ತು ಇತರ ಖಾತೆಗಳನ್ನು ಖಾತೆದಾರರ ಮೊಬೈಲ್ ಸಂಖ್ಯೆಗಳು ಮತ್ತು ಆಧಾರ್ [ಜನ ಧನ್-ಆಧಾರ್-ಮೊಬೈಲ್ (ಜಾಮ್)] ನೊಂದಿಗೆ ಲಿಂಕ್ ಮಾಡುವ ಮೂಲಕ ಡಿಜಿಟಲ್ ಮಾರ್ಗವನ್ನು (ಡಿಜಿಟಲ್ ಪೈಪ್ ಲೈನ್) ರೂಪಿಸಲಾಗಿದೆ. ಈ ಮೂಲಸೌಕರ್ಯ ದ ಡಿಜಿಟಲ್ ಮಾರ್ಗವು ಡಿ ಬಿ ಟಿ ಹರಿವು, ಸಾಮಾಜಿಕ ಭದ್ರತೆ / ಪಿಂಚಣಿ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಇತ್ಯಾದಿಗಳಿಗೆ ಅಗತ್ಯವಾದ ಮುಖ್ಯ ಸೌಲಭ್ಯವನ್ನು ಒದಗಿಸುತ್ತಿದೆ. ಪ್ರಧಾನ್ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ) ಅನ್ನು ಆಗಸ್ಟ್, 2014 ರಲ್ಲಿ ಪ್ರಾರಂಭಿಸಲಾಯಿತು. 20 ಮಾರ್ಚ್ 2020 ರಷ್ಟರಲ್ಲಿ ಸುಮಾರು 126 ಕೋಟಿ ಚಾಲ್ತಿಯಲ್ಲಿರುವ ಸಿಎಎಸ್ಎ ಖಾತೆಗಳಲ್ಲಿ, ಪಿಎಂಜೆಡಿವೈ ಅಡಿಯಲ್ಲಿ 38 ಕೋಟಿಗೂ ಹೆಚ್ಚು ತೆರೆಯಲಾಗಿದ್ದವು.
· ಪರಸ್ಪರ ಕಾರ್ಯಸಾಧ್ಯವಾದ, ತ್ವರಿತ ಮತ್ತು ನಿಖರವಾದ ವಹಿವಾಟುಗಳ ಸಕ್ರಿಯಗೊಳಿಸುವಿಕೆ:
o ಬ್ಯಾಂಕ್ ಶಾಖೆಗಳು, ಬ್ಯಾಂಕ್ ಪ್ರತಿನಿದಿಗಳ (ಬಿಸಿನೆಸ್ ಕರೆಸ್ಪಾಂಡೆಂಟ್ ಬಿ.ಸಿ) ಪಾಯಿಂಟ್ ಗಳು, ವ್ಯಾಪಾರಿ ಸ್ಥಳಗಳು ಮತ್ತು ಅಂತರ್ಜಾಲದಲ್ಲಿ ನಗದು ಮತ್ತು ಡಿಜಿಟಲ್ ವಹಿವಾಟುಗಳನ್ನು ನಡೆಸಲು ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸಲಾಗಿದೆ. ಬಯೋಮೆಟ್ರಿಕ್ ಐಡಿ ಬಳಸಿ, ಎಇಪಿಎಸ್ / ಭೀಮ್ ಆಧಾರ್ ಪೇ ನಂತಹ ಹೆಚ್ಚು ಮಿತವ್ಯಯದ ಪಾವತಿ ಪರಿಹಾರಗಳನ್ನು ಬ್ಯಾಂಕಿಂಗ್ ಸೇವೆಗಳಿಗೆ ಮತ್ತು ಚಿಲ್ಲರೆ ಪಾವತಿಗಳಿಗಾಗಿ ರಚಿಸಲಾಗಿದೆ.
o ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯು ಈ ಕೆಳಗಿನ ವಿಧಾನಗಳನ್ನು ಒಳಗೊಂಡಿದೆ:
ü ಎಇಪಿಎಸ್: ಶಾಖೆ / ಬಿ.ಸಿ ಸ್ಥಳಗಳಲ್ಲಿ ಆಧಾರ್ ದೃಢೀರಣವನ್ನು ಬಳಸಿಕೊಂಡು ಹಣವನ್ನು ಹಿಂಪಡೆಯಲು ಸಹಾಯ ಮಾಡುತ್ತದೆ.
ü ಭೀಮ್ ಅಧಾರ್ ಪೇ: ಆಧಾರ್ ದೃಢೀರಣವನ್ನು ಬಳಸಿಕೊಂಡು ವ್ಯಾಪಾರಿಗಳಿಗೆ ಪಾವತಿಯನ್ನು ಮಾಡಲು ಸಹಾಯಮಾಡುತ್ತದೆ
ü ರುಪೇ ಡೆಬಿಟ್ ಕಾರ್ಡ್ಗಳು: ಮಾರ್ಚ್ 31, 2020 ರ ವೇಳೆಗೆ, ಪಿಎಂಜೆಡಿವೈ ಖಾತೆಗಳಲ್ಲಿ ನೀಡಲಾದ 29 ಕೋಟಿ ಸೇರಿದಂತೆ ಒಟ್ಟು 60.4 ಕೋಟಿ ರುಪೇ ಕಾರ್ಡ್ಗಳನ್ನು ನೀಡಲಾಗಿದೆ. ಈ ಕಾರ್ಡ್ಗಳನ್ನು ಎಟಿಎಂಗಳಲ್ಲಿ ನಗದು ಹಿಂಪಡೆಯಲು ಮತ್ತು ಪಾಯಿಂಟ್ಸ್ ಆಫ್ ಸೇಲ್ (ಪಿಒಎಸ್) ಮತ್ತು ಡಿಜಿಟಲ್ ಪಾವತಿಗಳಿಗಾಗಿ ಇ-ಕಾಮರ್ಸ್ನಲ್ಲಿ ಬಳಸಬಹುದು.
ü ಯುಪಿಐ: ವ್ಯಕ್ತಿಯಿಂದ ವ್ಯಕ್ತಿ (ಪಿ 2 ಪಿ) ಮತ್ತು ವ್ಯಕ್ತಿಯಿಂದ ವ್ಯಾಪಾರಿ (ಪಿ 2 ಎಂ) ವಹಿವಾಟುಗಳಿಗೆ ಸಹಾಯ ಮಾಡುವ ತಕ್ಷಣದ ನೈಜ ಸಮಯ ಪಾವತಿ ವ್ಯವಸ್ಥೆ.
ü ಬಿಬಿಪಿಎಸ್: ನಗದು ಮತ್ತು ಡಿಜಿಟಲ್ ವಿಧಾನಗಳನ್ನು ಬಳಸಿಕೊಂಡು ಇಂಟರ್ನೆಟ್ ಮತ್ತು ಬಿ.ಸಿ ಸ್ಥಳಗಳ ಮೂಲಕ ವಿದ್ಯುತ್, ನೀರು ಇನ್ನಿತರ ಬಳಕೆದಾರರ ಬಿಲ್ಗಳನ್ನು ಪಾವತಿಸಲು ಸಹಾಯ ಮಾಡುತ್ತದೆ.
ಮೇಲೆ ತಿಳಿಸಿದ ಡಿಜಿಟಲ್ ಪಾವತಿ ಸೌಕರ್ಯವನ್ನು ಬಳಸಿಕೊಂಡು, ಕೋವಿಡ್-19 ದೆಸೆಯಿಂದಾದ ಲಾಕ್ ಡೌನ್ ಪರಿಣಾಮದಿಂದ ಸುಧಾರಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಾರ್ಚ್ 26 ರಂದು ಘೋಷಿಸಿದ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ 30 ಕೋಟಿಗೂ ಹೆಚ್ಚು ಬಡವರು 28,256 ಕೋಟಿ ರೂಪಾಯಿಗಳ ಧನಸಹಾಯ ಪಡೆದಿದ್ದಾರೆ.
ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ 10 ಏಪ್ರಿಲ್ 2020 ರವರೆಗೆ ಈ ಕೆಳಗಿನ ಮೊತ್ತವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ.
ಯೋಜನೆ
|
ಫಲಾನುಭವಿಗಳ ಸಂಖ್ಯೆ
|
ಅಂದಾಜು ಮೊತ್ತ
|
ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಸಹಾಯ
|
19.86 ಕೋಟಿ (97%)
|
ರೂ. 9930 ಕೋಟಿ
|
ಪಿಎಮ್-ಕಿಸಾನ್ ಯೋಜನೆಯಡಿ ರೈತರಿಗೆ ಮುಂಗಡ ಹಣ ಪಾವತಿ
|
6.93 ಕೋಟಿ (8 ಕೋಟಿ ರೂಪಾಯಿಗಳಲ್ಲಿ)
|
ರೂ. 13,855 ಕೋಟಿ
|
ಎನ್ಎಸ್ಎಪಿ ಫಲಾನುಭವಿಗಳಿಗೆ ಸಹಾಯ (ವಿಧವೆಯರು, ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ)
|
2.82 ಕೋಟಿ
|
ರೂ 1405 ಕೋಟಿ
|
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸಹಾಯ
|
2.16 ಕೋಟಿ
|
ರೂ. 3066 ಕೋಟಿ
|
ಒಟ್ಟು
|
31.77 ಕೋಟಿ
|
ರೂ. 28,256 ಕೋಟಿ
|
***
***
(Release ID: 1613791)
Visitor Counter : 306
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam