ಗ್ರಾಮೀಣಾಭಿವೃದ್ಧಿ ಸಚಿವಾಲಯ

ದೇಶದಲ್ಲಿ ಕೋವಿಡ್ -19 ಹರಡುವುದನ್ನು ನಿಯಂತ್ರಿಸಲು ಸಮುದಾಯದ ಯೋಧರಾಗಿ ರೂಪುಗೊಂಡ ಎನ್ ಆರ್ ಎಲ್ಎಂ ಸ್ವಯಂ ಸ್ವಹಾಯ ಗುಂಪುಗಳ ಮಹಿಳೆಯರು

Posted On: 12 APR 2020 3:40PM by PIB Bengaluru

ದೇಶದಲ್ಲಿ ಕೋವಿಡ್ -19 ಹರಡುವುದನ್ನು ನಿಯಂತ್ರಿಸಲು ಸಮುದಾಯದ ಯೋಧರಾಗಿ ರೂಪುಗೊಂಡ ಎನ್ ಆರ್ ಎಲ್ಎಂ ಸ್ವಯಂ ಸ್ವಹಾಯ ಗುಂಪುಗಳ ಮಹಿಳೆಯರು

27 ರಾಜ್ಯಗಳ ಗ್ರಾಮೀಣ ಜೀವನೋಪಾಯ ಮಿಷನ್ (ಎಸ್ ಆರ್ ಎಲ್ ಎಂಎಸ್ )ನಡಿ 78 ಸಾವಿರ ಎಸ್ ಎಚ್ ಜಿ ಸದಸ್ಯರಿಂದ ಸುಮಾರು 2 ಕೋಟಿ ಮಾಸ್ಕ್ ಉತ್ಪಾದನೆ

ಹಲವು ರಾಜ್ಯಗಳ ಎಸ್ ಎಚ್ ಜಿಗಳಿಂದ 5 ಸಾವಿರಕ್ಕೂ ಅಧಿಕ ಪಿಪಿಇ ಕಿಟ್ ಗಳ ಉತ್ಪಾದನೆ; ಸುಮಾರು 9 ರಾಜ್ಯಗಳ 900 ಎಸ್ ಎಚ್ ಜಿ ಉದ್ಯಮಗಳಿಂದ ಒಂದು ಲಕ್ಷ ಲೀಟರ್ ಗೂ ಅಧಿಕ ಸ್ಯಾನಿಟೈಸರ್ ಉತ್ಪಾದನೆ; ಕಲವು ಎಸ್ ಎಚ್ ಜಿ ಗಳಿಂದ ಕ್ವಾರಂಟೈನ್ ಕೈತೊಳೆಯಲು ದ್ರವರೂಪದ ಸಾಬೂನು ಉತ್ಪಾದನೆ

 

ಕೋವಿಡ್-19 ವಿಶ್ವದಾದ್ಯಂತ ಅನಿರೀಕ್ಷಿತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ಇದರಿಂದಾಗಿ ಭಾರತದಲ್ಲಿ ಮಾಸ್ಕ್, ವೈಯಕ್ತಿಕ ರಕ್ಷಣಾ ಸಲಕರಣೆ(ಪಿಪಿಇ) ಮತ್ತು ವೈದ್ಯಕೀಯ, ಪೊಲೀಸ್ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ಮುಖರಕ್ಷಾ ಕವಚಗಳು ಇತ್ಯಾದಿ ವೈದ್ಯಕೀಯ ಸೌಕರ್ಯಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಸರ್ಕಾರ ಬಹುತೇಕ ಪ್ರದೇಶಗಳಲ್ಲಿ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಸೂಚಿಸಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿ ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಡಿಎವೈ-ಎನ್ಆರ್ ಎಲ್ಎಂ) ಅಡಿಯಲ್ಲಿ ದೇಶಾದ್ಯಂತ ಸುಮಾರು 63 ಲಕ್ಷ ಸ್ವಸಹಾಯ ಗುಂಪುಗಳಲ್ಲಿ ಅಂದಾಜು 690 ಲಕ್ಷ ಮಹಿಳಾ ಸದಸ್ಯರಿದ್ದಾರೆ. ಈ ಎಸ್ ಎಚ್ ಜಿ ಸದಸ್ಯರು ಕೋವಿಡ್-19 ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಕೊಡುಗೆ ನೀಡುವ ಮೂಲಕ ಸಮುದಾಯ ಯೋಧರಾಗಿ ರೂಪುಗೊಂಡಿದ್ದಾರೆ. ಕೋವಿಡ್-19 ವಿರುದ್ಧ ಮೊದಲ ಹಂತದ ರಕ್ಷಣೆಗೆ ಮಾಸ್ಕ್ ಗಳನ್ನು ಬಳಕೆ ಮಾಡಲಾಗುತ್ತಿದೆ, ಹಾಗಾಗಿ ಎಸ್ ಎಚ್ ಜಿಗಳು ತಕ್ಷಣವೇ ಮಾಸ್ಕ್ ಗಳ ಉತ್ಪಾದನೆ ಕೆಲಸವನ್ನು ಕೈಗೊಂಡಿದೆ. ಎರಡು-ಮೂರು ಪರದೆಯ ಅಥವಾ ಹೊಲಿಗೆ ಇಲ್ಲದ ಸರ್ಜಿಕಲ್ ಮಾಸ್ಕ್ ಗಳು, ಹತ್ತಿ ಬಟ್ಟೆಯ ಮಾಸ್ಕ್ ಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ)ದ ಮಾರ್ಗಸೂಚಿ ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳು ನೀಡುವ ನಿರ್ದೇಶನಗಳನ್ನು ಅನುಸರಿಸಿ ಸ್ವಸಹಾಯ ಗುಂಪುಗಳು ಮಾಸ್ಕ್ ಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿವೆ. ಆ ಮಾಸ್ಕ್ ಗಳನ್ನು ಆರೋಗ್ಯ ಇಲಾಖೆ, ಸ್ಥಳೀಯ ಸ್ವಯಂ ಆಡಳಿತಗಳು(ಎಲ್ಎಸ್ ಜಿ), ಸ್ಥಳೀಯ ಆಡಳಿತ, ಮುಂಚೂಣಿ ಕಾರ್ಯಕರ್ತರು, ಪೊಲೀಸರಿಗೆ ಪೂರೈಸಲಾಗುತ್ತಿದೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಕೂಡ ಮಾಡಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಈ ಮಾಸ್ಕ್ ಗಳನ್ನು ಗ್ರಾಮೀಣ ಕುಟುಂಬಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಎಸ್ ಎಚ್ ಜಿ ಸದಸ್ಯರು ಇದೀಗ ವೈಯಕ್ತಿಕ ರಕ್ಷಣಾ ಸಲಕರಣೆ(ಪಿಪಿಇ)ಗೆ ಮುಂಗವಚ(ಏಪ್ರಾನ್), ಗೌನ್, ಮುಖ ರಕ್ಷಾಕವಚ ಇತ್ಯಾದಿ ಉತ್ಪಾದನೆಯಲ್ಲಿ ತೊಡಗಿದ್ದಾರೆ.

ಎಸ್ ಎಚ್ ಜಿ ಜಾಲದ ಮೂಲಕ ಮಾಸ್ಕ್ ಪಿಪಿಇ, ಏಪ್ರಾನ್, ಮುಖ ರಕ್ಷಾಕವಚ ಇತ್ಯಾದಿ ಉತ್ಪಾದನೆಯ ವಿವರಗಳು ಮತ್ತು ಆ ಕುರಿತು ಮಾಧ್ಯಮಗಳ ವರದಿಗಳು ಈ ಕೆಳಗಿನಂತಿವೆ

ಎ. ಮಾಸ್ಕ್ ಗಳು : 27 ರಾಜ್ಯಗಳ ಗ್ರಾಮೀಣ ಜೀವನೋಪಾಯ ಮಿಷನ್(ಎಸ್ಆರ್ ಎಲ್ ಎಂ)ಗಳಅಡಿ ಎಸ್ ಎಚ್ ಜಿ ಸದಸ್ಯರಿಂದ(2020 ಏಪ್ರಿಲ್ 8ರ ವರೆಗೆ) ಸುಮಾರು 1.96 ಕೋಟಿ ಮಾಸ್ಕ್ ಗಳನ್ನು ಉತ್ಪಾದಿಸಿರುವುದು ವರದಿಯಾಗಿದೆ. ಸುಮಾರು 78,373 ಎಸ್ ಎಚ್ ಜಿ ಸದಸ್ಯರು ಪ್ರಸ್ತುತ ಈ ಮಾಸ್ಕ್ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಜಾರ್ಖಂಡ್ ನ ಎಸ್ ಎಚ್ ಜಿಗಳು ಮೊದಲಿಗೆ ಸ್ಪಂದಿಸಿ, 2020ರ ಮಾರ್ಚ್ 22ರಿಂದೀಚೆಗೆ 78,000 ಮಾಸ್ಕ್ ಗಳನ್ನು ಉತ್ಪಾದಿಸಿವೆ. ಈ ಮಾಸ್ಕ್ ಗಳನ್ನು ಜಿಲ್ಲಾ ಕಲೆಕ್ಟರ್ ಗಳ ಕಚೇರಿ ಹಾಗೂ ಮತ್ತಿತರ ಕಡೆ ಔಷಧ ಅಂಗಡಿಗಳು ಹಾಗೂ ಇನ್ನಿತರ ಕಡೆ ಸಬ್ಸಿಡಿ ಮತ್ತು ಕೈಗೆಟಕುವ ದರದಲ್ಲಿ ತಲಾ 10 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

jk.jpg

ಜಾರ್ಖಂಡ್ ಎಸ್ ಎಚ್ ಜಿ ಮಹಿಳೆಯರಿಂದ ಮಾಸ್ಕ್ ಉತ್ಪಾದನೆ (ಮೂಲ:ಟ್ವಿಟರ್)

· ದೇಶದ ಪೂರ್ವ ಭಾಗದಲ್ಲಿ ಛತ್ತೀಸ್ ಗಢದ 853 ಎಸ್ ಎಚ್ ಜಿ ಗಳಲ್ಲಿ 2516 ಗ್ರಾಮೀಣ ಮಹಿಳೆಯರು ರಾಜ್ಯಕ್ಕೆ ಮಾಸ್ಕ್ ಗಳನ್ನು ಪೂರೈಕೆ ಮಾಡಿದ್ದಾರೆ. ಒಡಿಶಾದಲ್ಲಿ ಸ್ವಸಹಾಯ ಗುಂಪುಗಳು ಒಂದು ಮಿಲಿಯನ್ ಗೂ ಅಧಿಕ ಮಾಸ್ಕ್ ಗಳನ್ನು ಉತ್ಪಾದನೆ ಮಾಡಿ ಸಾಮಾನ್ಯ ಜನರಿಗೆ ಉತ್ಪಾದಿಸಿವೆ. ಅರುಣಾಚಲ ಪ್ರದೇಶದಲ್ಲಿ ಮಹಾನಗರ ಪಾಲಿಕೆ, ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು 10,000 ಮುಖಗವಸುಗಳನ್ನು ಪೂರೈಕೆ ಮಾಡುವಂತೆ ಎಸ್ ಎಚ್ ಜಿ ಗಳಿಗೆ ಕೋರಿದೆ.

· ಆಂಧ್ರಪ್ರದೇಶದಲ್ಲಿ ಜಿಲ್ಲೆಯ 13 ಉಪ ವಿಭಾಗಗಳಲ್ಲಿ 2254 ಗುಂಪುಗಳು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ, ಬಟ್ಟೆಯಿಂದ ಮಾಸ್ಕ್ ಗಳನ್ನು ತಯಾರಿಸಿವೆ. ಅದೇ ರೀತಿ ಕರ್ನಾಟಕದಲ್ಲಿ ಗ್ರಾಮೀಣ ಸ್ವಸಹಾಯ ಗುಂಪುಗಳು ಕೇವಲ 12 ದಿನಗಳಲ್ಲಿ 1.56 ಲಕ್ಷ ಮುಖಗವಸುಗಳನ್ನು ಉತ್ಪಾದಿಸಿವೆ ಮತ್ತು ರಾಜ್ಯದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವ ಬದ್ಧತೆಯನ್ನು ತೋರಿವೆ.

· ಉತ್ತರ ಗೋವಾ ಜಿಲ್ಲೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಸ್ ಎಚ್ ಜಿಗಳ ಸಹಾಯದಿಂದ ರಾಜ್ಯಾದ್ಯಂತ 2,000 ಮಾಸ್ಕ್ ಗಳನ್ನು ಪೂರೈಸಿದೆ. ಹಿಮಾಚಲಪ್ರದೇಶದಲ್ಲಿ ಹೆಚ್ಚುತ್ತಿರುವ ಮಾಸ್ಕ್ ಬೇಡಿಕೆಗಳನ್ನು ಪೂರೈಸಲು 2000 ಮಹಿಳಾ ಸದಸ್ಯರಿರುವ ಎಸ್ ಎಚ್ ಜಿಗಳು ಸಂಪೂರ್ಣವಾಗಿ ರಕ್ಷಣಾ ಮಾಸ್ಕ್ ಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ.

ಬಿ. ವೈಯಕ್ತಿಕ ರಕ್ಷಣಾ ಉಪಕರಣ: ಎಸ್ ಎಚ್ ಜಿ ಸದಸ್ಯರು ಮುಂಗವಚ(ಏಪ್ರಾನ್), ಗೌನ್, ಮುಖರಕ್ಷಾ ಕವಚ ಇತ್ಯಾದಿ ಪಿಪಿಗಳ ಉತ್ಪಾದನೆಯಲ್ಲೂ ತೊಡಗಿದ್ದಾರೆ. ಈವರೆಗೆ ಮಧ್ಯಪ್ರದೇಶ, ಹಿಮಾಚಲಪ್ರದೇಶ, ಪಂಜಾಬ್, ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳ ಎಸ್ ಎಚ್ ಜಿಗಳು ಸುಮಾರು 5000 ಪಿಪಿಇ ಕಿಟ್ ಗಳನ್ನು ಉತ್ಪಾದಿಸಿವೆ. ಪಂಜಾಬ್ ನ ಎಸ್ಆರ್ ಎಲ್ ಎಂ, ಕಪುರ್ ತಲಾದ ಸಿವಿಲ್ ಸರ್ಜನ್ ಗಳಿಗೆ 500 ಮುಂಗವಚ(ಏಪ್ರಾನ್) ಪೂರೈಸಿದೆ. ಮೇಘಾಲಯದಲ್ಲಿ ಜಿಲ್ಲಾ ವೈದ್ಯಕೀಯ ಆರೋಗ್ಯಾಧಿಕಾರಿಗಳಿಗೆ 200 ಮುಖರಕ್ಷಾ ಕವಚಗಳನ್ನು ಪೂರೈಸಿರುವ ವರದಿಯಾಗಿದೆ. ಕರ್ನಾಟಕದಲ್ಲಿ 125 ಮುಖರಕ್ಷಾ ಕವಚಗಳನ್ನು ಉತ್ಪಾದಿಸಲಾಗಿದೆ. ಮೇಘಾಲಯ, ಜಾರ್ಖಂಡ್, ಕರ್ನಾಟಕ, ಹಿಮಾಚಲಪ್ರದೇಶ, ಪಂಜಾಬ್ ನ ಎಸ್ಆರ್ ಎಲ್ಎಂಗಳ ಎಸ್ ಎಚ್ ಜಿ ಸದಸ್ಯರು ಮುಖರಕ್ಷಾ ಕವಚ, ಗೌನ್ ಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ.

ಸಿ. ಮಹಿಳಾ ಉದ್ಯಮಿಗಳಿಂದ ಸಮುದಾಯದಲ್ಲಿ ಕೈಗೆಟಕುವ ದರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳ ಉತ್ಪಾದನೆ ಮತ್ತು ಉತ್ತೇಜನ

ಡಿಎವೈ-ಎನ್ಆರ್ ಎಲ್ಎಂನಿಂದ ನೆರವು ಪಡೆದಿರುವ ಸಣ್ಣ ಉದ್ಯಮಿಗಳು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಕೈತೊಳೆಯುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಅವು ಲಭ್ಯವಾಗುವಂತೆ ನೋಡಿಕೊಳ್ಳುತ್ತಿವೆ. 9 ರಾಜ್ಯಗಳ 900 ಎಸ್ ಎಚ್ ಜಿ ಉದ್ಯಮಿಗಳು 1.15 ಲೀಟರ್ ಸ್ಯಾನಿಟೈಸರ್ ಅನ್ನು ಮೂರು ರಾಜ್ಯಗಳಾದ ತಮಿಳುನಾಡು, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಉತ್ಪಾದಿಸಿದ್ದಾರೆ. ಪ್ರತಿಯೊಂದು ರಾಜ್ಯವು 25,000 ಲೀಟರ್ ಗೂ ಅಧಿಕ ಸ್ಯಾನಿಟೈಸರ್ ಉತ್ಪಾದಿಸಿವೆ. ಆಂಧ್ರಪ್ರದೇಶ, ಹಿಮಾಚಲಪ್ರದೇಶ, ಜಾರ್ಖಂಡ್, ಕೇರಳ, ಮಣಿಪುರ, ಮಧ್ಯಪ್ರದೇಶ, ನಾಗಾಲ್ಯಾಂಡ್, ತಮಿಳುನಾಡು, ಉತ್ತರಪ್ರದೇಶ ಮತ್ತು ಮಿಝೋರಾಂ ರಾಜ್ಯಗಳಲ್ಲಿ ನೆಲೆಸಿರುವ ಸುಮಾರು 900ಕ್ಕೂ ಅಧಿಕ ಎಸ್ ಎಚ್ ಜಿ ಉದ್ಯಮಿಗಳು ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಸ್ಯಾನಿಟೈಸರ್ ಉತ್ಪಾದನೆಯಲ್ಲಿ ತೊಡಗಿದ್ದಾರೆ.

 

Image

 

ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಮಾರ್ಗಸೂಚಿಗಳನ್ನು ಅನುಸರಿಸಿ ನಾಲ್ಕು ಬಗೆಯ ದ್ರಾವಣಗಳನ್ನು ಮಿಶ್ರಣ ಮಾಡಿ ಜಾರ್ಖಂಡ್ ನಲ್ಲಿ ಸ್ಯಾನಿಟೈಸರ್ ಅನ್ನು ಉತ್ಪಾದಿಸಲಾಗುತ್ತಿದೆ. ಸ್ಯಾನಿಟೈಸರ್ ಗಳನ್ನು ಆಲ್ಕೋಹಾಲ್(ಮದ್ಯಸಾರ)(72%), ಡಿಸ್ಟಿಲ್ಡ್ ವಾಟರ್(13%), ಗ್ಲಿಸರಿನ್(13%) ಮತ್ತು ಬಸಿಲ್ (2%) ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ. ವೈದ್ಯಕೀಯ ಪರಿಣಾಮಗಳಿಗಾಗಿ ಲೆಮನ್ ಗ್ರಾಸ್ ಅಥವಾ ಬಸಿಲ್ ಅನ್ನು ಹ್ಯಾಂಡ್ ಸ್ಯಾನಿಟೈಸರ್ ಗೆ ಸೇರಿಸಲಾಗುತ್ತದೆ, ಇದು ವೈರಸ್ ಅನ್ನು ಪರಿಣಾಮಕಾರಿಯಾಗಿ ನಾಶಗೊಳಿಸುತ್ತದೆ. ಸ್ಯಾನಿಟೈಸರ್ ನ ದರ ಸಾಧಾರಣವಾಗಿರಲಿದ್ದು, ಪ್ರತಿ 100 ಎಂಎಲ್ ಬಾಟಲಿಗೆ 30 ರೂ. ನಿಗದಿ ಪಡಿಸಲಾಗಿದ್ದು, ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತಿತರ ಕಡೆ ಇವು ದೊರಕುತ್ತವೆ.

ಕೆಲವು ಎಸ್ಎಚ್ ಜಿಗಳು ಕ್ವಾರಂಟೈನ್ ಸುರಕ್ಷಿತ ಕೈಶುಚಿತ್ವ ಕಾಪಾಡಲು ಲಿಕ್ವಿಡ್ ಸೋಪುಗಳನ್ನು ಮಾರಾಟ ಮಾಡುತ್ತಿವೆ. ಆಂಧ್ರಪ್ರದೇಶ, ಛತ್ತೀಸ್ ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಝೋರಾಂ, ನಾಗಾಲ್ಯಾಂಡ್, ತಮಿಳುನಾಡಿನಲ್ಲಿ ನೆಲೆಸಿರುವ ಎಸ್ಎಚ್ ಜಿ ಘಟಕಗಳು, 50,000 ಲೀಟರ್ ಕೈ ತೊಳೆಯುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ.

ಸ್ವಸಹಾಯ ಸಂಘಗಳು ಸಾಮಾಜಿಕ ಕೊಡುಗೆ ನೀಡುವ ಮೂಲಕ ತಮ್ಮ ಜೀವನೋಪಾಯದ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಆಯಾ ಸಮುದಾಯಗಳಲ್ಲಿ ಸುರಕ್ಷಿತ ಮತ್ತು ಸ್ವಚ್ಛತೆಯ ಪದ್ಧತಿಗಳನ್ನು ಉತ್ತೇಜಿಸುತ್ತಿವೆ. ಈ ಮಹಿಳೆಯರು ಕೋವಿಡ್-19 ವಿರುದ್ಧ ಅತ್ಯಂತ ಬದ್ಧತೆ ಮತ್ತು ಏಕಾಗ್ರತೆಯಿಂದ ಹೋರಾಟ ನಡೆಸುತ್ತಿದ್ದಾರೆ.

****



(Release ID: 1613790) Visitor Counter : 229