ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

YUKTI (ಯುವಭಾರತವು ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ) ವೆಬ್ ಪೋರ್ಟಲ್ ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ “ನಿಶಾಂಕ್” ಅವರಿಂದ ಚಾಲನೆ

Posted On: 12 APR 2020 2:27PM by PIB Bengaluru

YUKTI (ಯುವಭಾರತವು ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ) ವೆಬ್ ಪೋರ್ಟಲ್ ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ನಿಶಾಂಕ್ಅವರಿಂದ ಚಾಲನೆ

ಕೋವಿಡ್-19 ನಿಗ್ರಹಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೈಗೊಂಡ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ದಾಖಲಿಸುವ ಉದ್ದೇಶವನ್ನು ಪೋರ್ಟಲ್ ಹೊಂದಿದೆ: ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್'

 

YUTKI (ಯುವಭಾರತವು, ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ) ಎಂಬ ವೆಬ್ ಪೋರ್ಟಲ್ ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ನಿಶಾಂಕ್ಅವರು ಇಂದು ನವದೆಹಲಿಯಲ್ಲಿ ಚಾಲನೆ ನೀಡಿದರು.. ಇದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ದಾಖಲಿಸುವ ಒಂದು ಅನನ್ಯ ಪೋರ್ಟಲ್ ಮತ್ತು ಡ್ಯಾಶ್ಬೋರ್ಡ್ ಆಗಿದೆ. ಕೋವಿಡ್-19 ಸವಾಲುಗಳ ವಿಭಿನ್ನ ಆಯಾಮಗಳನ್ನು ಅತ್ಯಂತ ಸಮಗ್ರ ರೀತಿಯಲ್ಲಿ ಒಳಗೊಳ್ಳಲು ಪೋರ್ಟಲ್ ಉದ್ದೇಶಿಸಿದೆ.

ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ನಮ್ಮ ಶೈಕ್ಷಣಿಕ ಸಮುದಾಯವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಿಸುವುದು ಮತ್ತು ಕಲಿಯುವವರಿಗೆ ನಿರಂತರ ಉನ್ನತ-ಗುಣಮಟ್ಟದ ಕಲಿಕೆಯ ವಾತಾವರಣವನ್ನು ಒದಗಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಗುರಿಯನ್ನು ಸಾಧಿಸಲು ಮಾನವ ಸಂಪನ್ಮೂಲ ಸಚಿವಾಲಯದ ಮಾಡಿರುವ ಪ್ರಯತ್ನವೇ ಪೋರ್ಟಲ್ ಎಂದರು.

ಶಿಕ್ಷಣ ಸಂಸ್ಥೆಗಳ ವಿವಿಧ ಉಪಕ್ರಮಗಳು ಮತ್ತು ಪ್ರಯತ್ನಗಳು, ವಿಶೇಷವಾಗಿ ಕೋವಿಡ್ ಗೆ ಸಂಬಂಧಿಸಿದ ಸಂಶೋಧನೆ, ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಉಪಕ್ರಮಗಳು ಮತ್ತು ವಿದ್ಯಾರ್ಥಿಗಳ ಒಟ್ಟು ಯೋಗಕ್ಷೇಮಕ್ಕಾಗಿ ಕೈಗೊಂಡ ಕ್ರಮಗಳನ್ನು ಇದು ಒಳಗೊಂಡಿದೆ ಎಂದು ಶ್ರೀ ಪೋಖ್ರಿಯಾಲ್ ಮಾಹಿತಿ ನೀಡಿದರು. ಶೈಕ್ಷಣಿಕ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಪೋರ್ಟಲ್ ಗುಣಾತ್ಮಕ ಮತ್ತು ಪರಿಮಾಣಾತ್ಮಕ ನಿಯತಾಂಕಗಳನ್ನು ಒಳಗೊಂಡಿರುತ್ತದೆ. ಕೋವಿಡ್-19 ಬಿಕ್ಕಟ್ಟಿನಪರಿಸ್ಥಿತಿ ಮತ್ತು ಭವಿಷ್ಯದ ಇತರ ಉಪಕ್ರಮಗಳಿಂದಾಗಿ ವಿವಿಧ ಸವಾಲುಗಳಿಗೆ ತಮ್ಮ ಕಾರ್ಯತಂತ್ರಗಳನ್ನು ಹಂಚಿಕೊಳ್ಳಲು ಸಹ ಪೋರ್ಟಲ್ ನೆರವಾಗುತ್ತದೆ ಎಂದು ಅವರು ಹೇಳಿದರು. ಪೋರ್ಟಲ್ ಉತ್ತಮ ಯೋಜನೆಗಾಗಿ ಅಭಿಪ್ರಾಯಗಳನ್ನು ನೀಡುತ್ತದೆ ಮತ್ತು ಮುಂದಿನ ಆರು ತಿಂಗಳವರೆಗೆ ಮಾನವ ಸಂಪನ್ಮೂಲ ಸಚಿವಾಲಯವಯ ತನ್ನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ಆಶಿಸಿದರು.

ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಸಂಸ್ಥೆಗಳ ನಡುವೆ ಪೋರ್ಟಲ್ ದ್ವಿಮುಖ ಸಂವಹನ ಮಾರ್ಗವನ್ನು ಸಹ ಸ್ಥಾಪಿಸಲಿದ್ದು, ಇದರಿಂದಾಗಿ ಸಚಿವಾಲಯವು ಸಂಸ್ಥೆಗಳಿಗೆ ಅಗತ್ಯವಾದ ಬೆಂಬಲ ವ್ಯವಸ್ಥೆಯನ್ನು ಒದಗಿಸುತ್ತದೆ ಎಂದು ಶ್ರೀ ನಿಶಾಂಕ್ ತಿಳಿಸಿದರು. ಸವಾಲಿನ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಚಾರ ನೀತಿಗಳು, ನಿಯೋಜನೆಗಳಿಗೆ ಸಂಬಂಧಿಸಿದ ಸವಾಲುಗಳು ಮತ್ತು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳಿಗೆ ಪೋರ್ಟಲ್ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ವೆಬ್ ಪ್ಲಾಟ್ಫಾರ್ಮ್ ಯುಕ್ತಿತನ್ನ ಹೆಸರಿಗೆ ತಕ್ಕಂತೆ ಕೆಲಸ ಮಾಡುತ್ತದೆ ಮತ್ತು ಸಂಶೋಧನೆಯನ್ನು ಅಂತಿಮ ಪಾಲುದಾರರಾದ ದೇಶದ ನಾಗರಿಕರಿಗೆ ತಲುಪಿಸುವಲ್ಲಿ ಉತ್ತಮ ವಾಹಕ ಎಂದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

***

 


(Release ID: 1613678) Visitor Counter : 258