ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಫರಿದಾಬಾದ್ ಪ್ರಾಂತ್ಯಕ್ಕೆ ಕೋವಿಡ್-19 ಪರೀಕ್ಷೆ ನಡೆಸಲು ಡಿಬಿಟಿ ಸಂಸ್ಥೆಗೆ ಐಸಿಎಂಆರ್ ಅನುಮೋದನೆ

Posted On: 12 APR 2020 11:52AM by PIB Bengaluru

ಫರಿದಾಬಾದ್ ಪ್ರಾಂತ್ಯಕ್ಕೆ ಕೋವಿಡ್-19 ಪರೀಕ್ಷೆ ನಡೆಸಲು ಡಿಬಿಟಿ ಸಂಸ್ಥೆಗೆ ಐಸಿಎಂಆರ್ ಅನುಮೋದನೆ

ಫರಿದಾಬಾದ್ ಪ್ರಾಂತ್ಯದಲ್ಲಿ ಕೋವಿಡ್ -19 ಪರೀಕ್ಷಾ ಸೌಕರ್ಯಗಳುಳ್ಳ ಮೊದಲ ಮತ್ತು ಏಕೈಕ ಸಂಸ್ಥೆ ಡಿಬಿಟಿ-ಟ್ರಾನ್ಸ್ ಲೇಷನಲ್ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ

 

ಜೈವಿಕ ತಂತ್ರಜ್ಞಾನ ಇಲಾಖೆಯ ರೋಗ ನಿಧಾನ ತಪಾಸಣಾ ಪ್ರಯೋಗಾಲಯ ಫರಿದಾಬಾದ್ ಮೂಲದ ಟ್ರಾನ್ಸ್ ಲೇಷನಲ್ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಥಸ್ತಿ-ಟಿಎಚ್ ಎಸ್ ಟಿಐ) ಇದೀಗ ಫರಿದಾಬಾದ್ ನಲ್ಲಿ ಇಎಸ್ ಐಸಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕೋವಿಡ್ -19 ಪರೀಕ್ಷಾ ಸೌಕರ್ಯ ವಿಸ್ತರಣಾ ಘಟಕವಾಗಿ ಕಾರ್ಯನಿರ್ವಹಣೆ ಮಾಡಲಿದೆ. ಫರಿದಾಬಾದ್ ಪ್ರಾಂತ್ಯದಲ್ಲಿ ಇದು ಏಕೈಕ ಮತ್ತು ಮೊದಲ ಕೋವಿಡ್ -19 ಪರೀಕ್ಷಾ ಸೌಕರ್ಯವಾಗಿದೆ.

ಈ ಕುರಿತು ಎರಡೂ ಸಂಸ್ಥೆಗಳ ನಡುವೆ ಒಡಂಬಡಿಕೆ(ಎಂಒಯು)ಗೆ ಸಹಿ ಹಾಕಲಾಗಿದ್ದು, ಎರಡೂ ಸಂಸ್ಥೆಗಳು ಎರಡೂ ಸಂಸ್ಥೆಗಳು ರೋಗ ನಿಧಾನ ತಡೆ ಪ್ರಯೋಗಾಲಯದಲ್ಲಿ ಕೋವಿಡ್-19 ಪರೀಕ್ಷೆಗೆ ಅಗತ್ಯ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯವೃದ್ಧಿ ಕೆಲಸ ಮಾಡಲಿವೆ. ಥಸ್ತಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಬರುವ ಜೈವಿಕ ತಂತ್ರಜ್ಞಾನ ಇಲಾಖೆ ಆರ್ಥಿಕ ನೆರವು ನೀಡುತ್ತಿದೆ. ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಫರೀದಾಬಾದ್ ನ ಒಂದು ಪ್ರಮುಖ ವೈದ್ಯಕೀಯ ಸಂಸ್ಥೆಯಾಗಿದ್ದು, ಇದು ಕೇಂದ್ರ ಕಾರ್ಮಿಕ ಮತ್ತು ಔದ್ಯೋಗಿಕ ಸಚಿವಾಲಯದ ಅಧೀನದಲ್ಲಿ ಬರುತ್ತದೆ.

ಡಿಬಿಟಿ – ಥಸ್ತಿಯ ಬಯೋಸಿ ಪ್ರಯೋಗಾಲಯವನ್ನು ಡಿಬಿಟಿ ನೆರವಿನ ಥಸ್ತಿಯ ಟ್ರಾನ್ಸ್ ಲೇಶನಲ್ ಸಂಶೋಧನಾ ಕಾರ್ಯಕ್ರಮದ ನೆರವಿನಿಂದ ಸ್ಥಾಪಿಸಲಾಗಿದೆ. ಇದನ್ನು ಲಸಿಕೆಗಳು ಮತ್ತು ಬಯೋಲಾಜಿಕಲ್ ಗಳನ್ನು ಅಭಿವೃದ್ಧಿಪಡಿಸಲು ಸ್ಥಾಪಿಸಲಾಗಿದೆ. ಕ್ಲಿನಿಕಲ್ ಪ್ರಯೋಗಾಲಯಗಳಲ್ಲಿನ ಉತ್ತಮ ಪದ್ಧತಿಗಳ ಜಾಗತಿಕ ಮಾನದಂಡ(ಜಿಸಿಎಲ್ ಪಿ) ಈಡೇರಿಕೆ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಇದು ಲಸಿಕೆ ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ಲ್ಯಾಬೊರೇಟರೀಸ್ ಪ್ರಮಾಣೀಕರಣ ಮಂಡಳಿ(ಎನ್ಎಬಿಎಲ್) ಮಾನ್ಯತೆಯನ್ನು ಕೋರಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ತನ್ನ ವ್ಯಾಪ್ತಿಗೆ ಒಳಪಡದ ಸರ್ಕಾರಿ ಪ್ರಯೋಗಾಲಯಗಳಲ್ಲೂ ಪರೀಕ್ಷೆಯ ಪ್ರಕ್ರಿಯೆಯ ವಿಸ್ತರಣೆಗೆ ಅವಕಾಶ ನೀಡಲು ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಇದರಲ್ಲಿ ಡಿಬಿಟಿಯ ಪ್ರಯೋಗಾಲಯ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಸರ್ಕಾರದ ನೆರವಿನ ವೈದ್ಯಕೀಯ ಕಾಲೇಜುಗಳು ಮತ್ತಿತರ ಸಂಸ್ಥೆಗಳು ಸೇರಿವೆ.

 

[ಸಂಪರ್ಕ ವ್ಯಕ್ತಿ: ಡಾ.ಸಿಯೂಲಿ ಮಿತ್ರಾ (smitra@thsti.res.in)]

 

*****


(Release ID: 1613663)