ರಕ್ಷಣಾ ಸಚಿವಾಲಯ

ಪೋರ್ಟ್ ಬ್ಲೇರ್ ನಲ್ಲಿ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದ ಭಾರತೀಯ ನೌಕಾಪಡೆ

Posted On: 12 APR 2020 11:20AM by PIB Bengaluru

ಪೋರ್ಟ್ ಬ್ಲೇರ್ ನಲ್ಲಿ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದ ಭಾರತೀಯ ನೌಕಾಪಡೆ

 

ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ನೌಕಾ ವಾಯುನೆಲೆ (ಎನ್ಎಎಸ್) ಉತ್ಕ್ರೋಶ್ ಮತ್ತು ಮೆಟೀರಿಯಲ್ ಆರ್ಗನೈಸೇಶನ್ (ಪೋರ್ಟ್ ಬ್ಲೇರ್) ಪೋರ್ಟ್ ಬ್ಲೇರ್ನಲ್ಲಿ ಅಗತ್ಯವಿರುವವರಿಗೆ ಆಹಾರ ವಿತರಣೆ ಮಾಡಿದವು.

ಎನ್ಎಎಸ್ ಉತ್ಕ್ರೋಶ್ ವಾಯು ನೆಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಕೆಲಸ ಮಾಡುವ 155 ಕಾರ್ಮಿಕರಿಗೆ ಆಹಾರ ವಿತರಣಾ ಶಿಬಿರವನ್ನು ಆಯೋಜಿಸಿತ್ತು. ಕಾರ್ಮಿಕರು ಪ್ರಸ್ತುತ ವಾಯು ನೆಲೆಯ ಸಮೀಪದಲ್ಲಿ ಇದ್ದಾರೆ.

ಎಂಒ (ಪಿಬಿಆರ್) ತಂಡವು ವನವಾಸಿ ಕಲ್ಯಾಣ್ ಆಶ್ರಮಕ್ಕೆ ಭೇಟಿ ನೀಡಿ ಮಕ್ಕಳು ಮತ್ತು ಸಿಬ್ಬಂದಿಗೆ ಬಿಸಿ ಊಟ ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿತು. ವನವಾಸಿ ಕಲ್ಯಾಣ್ ಆಶ್ರಮವು ಲಾಭರಹಿತ ಸಂಸ್ಥೆಯಾಗಿದ್ದು, ಆದಿವಾಸಿ ಮಕ್ಕಳಿಗೆ ಆಹಾರ ಮತ್ತು ಆಶ್ರಯ ನೀಡುತ್ತಿದೆ. ಸಂಸ್ಥೆಯ ಪೋರ್ಟ್ ಬ್ಲೇರ್ ಘಟಕದಲ್ಲಿ ಸುಮಾರು 38 ಮಕ್ಕಳನ್ನು ಇದ್ದಾರೆ. ಪೋರ್ಟ್ ಬ್ಲೇರ್ಗೆ ವೈದ್ಯಕೀಯ ಚಿಕಿತ್ಸೆಗಾಗಿ ಭೇಟಿ ನೀಡುವ ಬಡ ಆದಿವಾಸಿ ಕುಟುಂಬಗಳಿಗೆ ಸಂಸ್ಥೆ ವಸತಿ ಸೌಲಭ್ಯವನ್ನು ಒದಗಿಸುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಲಾಕ್ಡೌನ್ ಸಮಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸಂಸ್ಥೆಯು ಮಕ್ಕಳು ಮತ್ತು ಸಿಬ್ಬಂದಿಗೆ ಜಾಗೃತಿ ಮೂಡಿಸುತ್ತಿದೆ.

https://ci3.googleusercontent.com/proxy/FlbDvlJ2yPi0EiG7bTZ4JB45Uk-xKJPVbLdYay4p9lU1IhkFOKnv2jTiPBvpk6gq4qvJywR13Eh6gMyM_2ehdtdui0d0ej3ddZHGrydJIXABoIkTqcg=s0-d-e1-ft#https://static.pib.gov.in/WriteReadData/userfiles/image/PIC(1)QWFA.jpeg

https://ci5.googleusercontent.com/proxy/C45whbtH3drklAg3FKEYCr_aMK-gCdaJbv1i4otvYDZaHIVbk49iOwXeaYlddp_Xyvw0uNHXQTlh5Oh7F74LLPiMKCLgKHe4HQBsB8SjoMm4gLwvwho=s0-d-e1-ft#https://static.pib.gov.in/WriteReadData/userfiles/image/PIC(5)2SKH.jpeg

***



(Release ID: 1613562) Visitor Counter : 156