PIB Headquarters
ಕೋವಿಡ್ -19: ಪಿ ಐ ಬಿ ದೈನಿಕ ವರದಿ
Posted On:
11 APR 2020 6:59PM by PIB Bengaluru
ಕೋವಿಡ್ -19: ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)
ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ನಿನ್ನೆಯಿಂದ ಇಲ್ಲಿಯವರೆಗೆ 1035 ಕೋವಿಡ್ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳಲ್ಲಿ 855 ಹೆಚ್ಚಳವಾಗಿದೆ. ಈ ದಿನದವರೆಗೆ ಮೃತಪಟ್ಟವರ ಸಂಖ್ಯೆ 239 ಆಗಿದೆ. 642 ಜನರು ಗುಣಮುಖರಾಗಿ/ ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಹೊತ್ತಿನವರೆಗೆ ದೇಶದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 7447 ತಲುಪಿದೆ. ಭಾರತ ಸರ್ಕಾರ ದೇಶದಾದ್ಯಂತ ಪ್ರತಿ ರಾಜ್ಯದಲ್ಲೂ ಪಿಪಿಇಗಳು, ಎನ್.95 ಮಾಸ್ಕ್, ಪರೀಕ್ಷಾ ಕಿಟ್ ಗಳು, ಔಷಧ ಮತ್ತು ವೆಂಟಿಲೇಟರ್ ಗಳ ಕೊರತೆ ಬಾರದಂತೆ ತನ್ನ ಪ್ರಯತ್ನ ಮುಂದುವರಿಸಿದ್ದು, ಶ್ರೇಣೀಕೃತ ಸ್ಪಂದನೆಯ ದೃಷ್ಟಿಕೋನ ಅಳವಡಿಸಿಕೊಂಡಿದೆ.
ಕೋವಿಡ್ 19 ಎದುರಿಸಲು ಮುಂದಿನ ವ್ಯೂಹ ರಚನೆಗೆ ಸಿಎಂಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನ ಕೋವಿಡ್ 19ರ ಪರಿಣಾಮಗಳನ್ನು ತಗ್ಗಿಸಲು ಖಂಡಿತಾ ಸಹಕಾರಿಯಾಗಿದೆ ಎಂಬುದನ್ನು ಗಮನಿಸಿದರು., ಆದರೆ, ಪರಿಸ್ಥಿತಿ ತ್ವರಿತವಾಗಿ ಹೊರಹೊಮ್ಮುತ್ತಿರುವುದರಿಂದ ನಿರಂತರ ನಿಗಾ ಅತ್ಯಗತ್ಯ ಎಂದರು. ಲಾಕ್ ಡೌನ್ ನಿಂದ ಹೊರಬರುವ ಯೋಜನೆಯ ಕುರಿತಂತೆ ಮಾತನಾಡಿದ ಅವರು, ಮತ್ತೆರೆಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆಗೆ ಎಲ್ಲ ರಾಜ್ಯಗಳೊಂದಿಗೆ ಸಹಮತ ಅಗತ್ಯ ಎಂದರು.
ಸಾಗರ ಮೀನುಗಾರಿಕೆ/ ಮತ್ಯೋದ್ಯಮಕ್ಕೆ ಮತ್ತು ಅದರ ಕಾರ್ಮಿಕರಿಗೆ ಕೋವಿಡ್ 19 ವಿರುದ್ಧದ ಹೋರಾಟದ ಲಾಕ್ ಡೌನ್ ಷರತ್ತುಗಳಿಂದ ವಿನಾಯಿತಿ ನೀಡಲು 5ನೇ ಅನುಬಂಧ ಹೊರಡಿಸಿದ ಎಂ.ಎಚ್.ಎ.
ಕೋವಿಡ್-19 ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಕುರಿತಂತೆ ಗೃಹ ಸಚಿವಾಲಯವು ಎಲ್ಲಾ ಸಚಿವಾಲಯಗಳು/ ಇಲಾಖೆಗಳಿಗೆ ಏಕೀಕೃತ ಮಾರ್ಗಸೂಚಿಗಳಿಗೆ ಒಂದು ಅನುಬಂಧವನ್ನು ಬಿಡುಗಡೆ ಮಾಡಿದೆ. 5 ನೇ ಅನುಬಂಧವು ಮೀನುಗಳಿಗೆ ಆಹಾರ ನೀಡಿಕೆ ಮತ್ತು ನಿರ್ವಹಣೆ, ಕೊಯ್ಲು, ಸಂಸ್ಕರಣೆ, ಪ್ಯಾಕೇಂಜಿಗ್, ಶೀಥಲೀಕರಣ ಸರಪಣಿ, ಮಾರಾಟ ಮತ್ತು ಮಾರುಕಟ್ಟೆ; ಮೊಟ್ಟೆ ಕೇಂದ್ರಗಳು, ಆಹಾರ ಸಸ್ಯಗಳು, ವಾಣಿಜ್ಯ ಮೀನುಗಾರಿಕೆ, ಮೀನು/ ಸೀಗಡಿ ಮತ್ತು ಮೀನು ಉತ್ಪನ್ನಗಳ ಸಾಗಾಟ, ಮೀನು ಮರಿಮಾಡುವುದು/ ಆಹಾರ ನೀಡಿಕೆ ಮತ್ತು ಅದರಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಸೇರಿದಂತೆ ಇದರ ಎಲ್ಲಾ ಚಟುವಟಿಕೆಗಳಿಗೆ ಲಾಕ್ ಡೌನ್ ಷರತ್ತುಳಿಂದ ವಿನಾಯಿತಿ ನೀಡಲಾಗಿದೆ.
ಕೋವಿಡ್ 19 ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಡಾ. ಹರ್ಷವರ್ಧನ್
ರೋಗದ ಸರಪಣಿಯನ್ನು ಮುರಿಯಲು ಮುಂದಿನ ಕೆಲವು ವಾರ ಅತ್ಯಂತ ಮಹತ್ವವಾಗಿದೆ ಎಂದು ತಿಳಿಸಿರುವ ಡಾ. ಹರ್ಷವರ್ಧನ್, ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಪರಿಹಾರವಾಗಿರುವ ಸಾಮಾಜಿಕ ಅಂತರ ಖಾತ್ರಿಪಡಿಸಿಕೊಳ್ಳುವಂತೆ ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಎಲ್ಲರಿಗೂ ಆಗ್ರಹಿಸಿದ್ದಾರೆ. ಕೋವಿಡ್ 19 ವಿರುದ್ಧ ಹೋರಾಟಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಆರೋಗ್ಯ ಸೇತು ಮೊಬೈಲ್ ಆಪ್ ಉತ್ತೇಜಿಸುವಂತೆ ರಾಜ್ಯಗಳಿಗೆ ಅವರು ಮನವಿ ಮಾಡಿದ್ದಾರೆ.
ಕೋವಿಡ್ 19ರಿಂದ ಅಕಸ್ಮಾತ್ ಸಾವು ಸಂಭವಿಸಿದರೆ ಎಫ್.ಸಿ.ಐ.ನ ಉದ್ಯೋಗಿಗಳಿಗೆ ರೂ.1 ಲಕ್ಷಕ್ಕೂ ಹೆಚ್ಚು ಎಕ್ಸ್ ಗ್ರೆಷಿಯಾ ಪರಿಹಾರ ನೀಡಲು ಅನುಮೋದಿಸಿದ ಸರ್ಕಾರ
ಕೊರೊನಾ ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆಯ ನಡುವೆಯೂ ದೇಶಾದ್ಯಂತ ಆಹಾರ ಧಾನ್ಯಗಳನ್ನು ಪೂರೈಸಲು 24x7 ಕೆಲಸ ಮಾಡುತ್ತಿರುವ 80,000 ಕಾರ್ಮಿಕರು ಸೇರಿದಂತೆ ಭಾರತದ ಆಹಾರ ನಿಗಮದ 1,08,714 ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಎಕ್ಸ್-ಗ್ರೇಷಿಯಾ ಹಣಕಾಸು ಪರಿಹಾರ ನೀಡುವ ಪ್ರಸ್ತಾಪವನ್ನು ಸರ್ಕಾರ ಅನುಮೋದಿಸಿದೆ.
ಲಾಕ್ ಡೌನ್ ಅವಧಿಯಲ್ಲಿ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಗಳು ಕೈಗೊಂಡ ಕ್ರಮಗಳು
ಲಾಕ್ ಡೌನ್ ಅವಧಿಯಲ್ಲಿ ಕ್ಷೇತ್ರ ಮಟ್ಟದಲ್ಲಿ ಕೃಷಿ ಚಟುವಟಿಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.
ಲಾಕ್ ಡೌನ್ ನಿರ್ಬಂಧಗಳ ನಡುವೆಯೂ ತಡೆರಹಿತವಾಗಿ ಮುಂದುವರಿದ ಬೇಸಿಗೆ ಬೆಳೆ ಬಿತ್ತನೆ ಚಟುವಟಿಕೆ
21 ದಿನಗಳ ಲಾಕ್ ಡೌನ್, ಕೊರೋನಾ ವೈರಾಣುವಿನ ಸ್ಫೋಟದಂಥ ಸಂಕಷ್ಟಗಳ ನಡುವೆಯೂ ಬೇಸಿಗೆ ಬೆಳೆ ಬಿತ್ತನೆ ಕಾರ್ಯ ತೃಪ್ತಿದಾಯಕವಾಗಿ ಪ್ರಗತಿಯಲ್ಲಿದೆ. ಬೇಸಿಗೆ ಬೆಳೆಯ ಒಟ್ಟು ಪ್ರದೇಶ (ಭತ್ತ, ಬೇಳೆಕಾಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಕಾಳುಗಳು)ದ ಸಾಗುವಳಿ ಗಣನೀಯವಾಗಿ ಏರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.11.64ರಷ್ಟು ಹೆಚ್ಚಳ ದಾಖಲಿಸಿದೆ.
ಕೊರೊನಾ ಸಾಂಕ್ರಾಮಿಕ ಸಂಬಂಧಿತ ತೊಂದರೆಗಳನ್ನು ಪರಿಹರಿಸಲು ರಫ್ತುದಾರರಿಗೆ ವಾಣಿಜ್ಯ ಇಲಾಖೆ ಹಲವಾರು ಅನುಸರಣೆ ಗಡುವಿನ ವಿಸ್ತರಣೆ/ ವಿನಾಯಿತಿ ಇತ್ಯಾದಿ ಒದಗಿಸಿದೆ
ಕೊರೋನಾ ವೈರಸ್ ಸಾಂಕ್ರಾಮಿಕದಿಂದ ವಾಣಿಜ್ಯ ಮತ್ತು ವ್ಯಕ್ತಿಗಳಿಗೆ ಉಂಟಾಗಿರುವ ಸಂಕಷ್ಟಗಳ ಹಿನ್ನೆಲೆಯಲ್ಲಿ ಪರಿಹಾರ ಒದಗಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಇಲಾಖೆ ತನ್ನ ಯೋಜನೆ ಮತ್ತು ಚಟುವಟಿಕೆಯ ಅಡಿಯಲ್ಲಿ ಕಡ್ಡಾಯವಾಗಿರುವ ಹಲವು ಅನುಸರಣೆಯ ಗಡುವಿಗೆ ವಿನಾಯಿತಿ, ವಿಸ್ತರಣೆ ನೀಡಿದೆ.
ಕೋವಿಡ್ 19 ವಿರುದ್ಧದ ಹೋರಾಡಲು ಸುಮಾರು 2000 ಎನ್.ಸಿ.ಸಿ. ಕೆಡೆಟ್ ಗಳ ನೇಮಕ ಮತ್ತು 50,000ಕ್ಕೂ ಹೆಚ್ಚು ಜನರ ಸ್ವಯಂ ಸೇವೆ
ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಸ್ವಯಂಸೇವಕ ಕೆಡೆಟ್‌ಗಳು 2020ರ ಏಪ್ರಿಲ್ 01 ರಿಂದ ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ‘ಎನ್ಸಿಸಿ ಯೋಗದಾನವನ್ನು ನೀಡುವ ಕಾರ್ಯಕ್ರಮದ ಅಡಿಯಲ್ಲಿ ನಾಗರಿಕ, ರಕ್ಷಣಾ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಹೆಗಲಿಗೆಹೆಗಲು ಕೊಟ್ಟು ಕೆಲಸ ಮಾಡುವ ಮೂಲಕ ನಾಗರಿಕ ಆಡಳಿತಕ್ಕೆ ಸಹಾಯ ಮಾಡುತ್ತಿದ್ದಾರೆ.
ಭಾರತೀಯ ರೈಲ್ವೆ 10 ಲಕ್ಷಕ್ಕೂ ಹೆಚ್ಚು ಅಗತ್ಯ ಇರುವ ವ್ಯಕ್ತಿಗಳಿಗೆ ಬಿಸಿಯೂಟವನ್ನು ಉಚಿತವಾಗಿ ಪೂರೈಸುತ್ತಿದೆ
ಭಾರತೀಯ ರೈಲ್ವೆಯ ವಿವಿಧ ಸಂಘಟನೆಗಳು ಅಂದರೆ ಐಆರ್.ಸಿಟಿಸಿ, ಆರ್.ಪಿ.ಎಫ್., ವಿಭಾಗೀಯ ರೈಲ್ವೆ ಮತ್ತು ಇತರ ಸಿಬ್ಬಂದಿ ರೈಲ್ವೆಯ ಸಮಾಜ ಸೇವೆಯ ಬದ್ಧತೆಯನ್ನು ಜೀವಂತವಾಗಿಡಲು ಬಿಡುವಿಲ್ಲದೆ ನಿಸ್ವಾರ್ಥವಾಗಿ ಶ್ರಮಿಸುತ್ತಿದ್ದು ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಆದ ಬಳಿಕ ಅಗತ್ಯ ಇರುವವರಿಗೆ ಉಚಿತವಾಗಿ ಬಿಸಿಯೂಟ ಪೂರೈಸುತ್ತಿದೆ.
ಕೋವಿಡ್ - 19 ಬಿಕ್ಕಟ್ಟುಗಳ ಸಂದರ್ಭದಲ್ಲಿ ಸ್ವಯಂಆರೈಕೆಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮಗಳನ್ನು ಆಯುಷ್ ಪುನರುಚ್ಚರಿಸಿದೆ
ಆಯುಷ್ ಸಚಿವಾಲಯವು ಆಯುರ್ವೇದದಲ್ಲಿ ಕಾಲ ಕಾಲಕ್ಕೆ ಸಾಬೀತಾಗಿರುವ ವಿವಿಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ರಮಗಳ ಕುರಿತಂತೆ ಸಲಹೆಯನ್ನು ಬಿಡುಗಡೆ ಮಾಡಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮವಾಗಿ ಎಲ್ಲರ ಪ್ರಯತ್ನಗಳನ್ನು ಬೆಂಬಲಿಸಲು ಈ ಪರೀಕ್ಷಾ ಸಮಯಗಳಲ್ಲಿ ಸಲಹೆಯನ್ನು ಮತ್ತೆ ಪುನರುಚ್ಚರಿಸಲಾಗಿದೆ.
ರೈಲ್ವೆ ಸಿಬ್ಬಂದಿ ಲಾಕ್ ಡೌನ್ ಆರಂಭವಾದ ಮೊದಲ ಎರಡು ವಾರದಲ್ಲಿ ಸಹಾಯವಾಣಿ (138 ಮತ್ತು 139), ಸಾಮಾಜಿಕ ಮಾಧ್ಯಮ ಮತ್ತು ಇಮೇಲ್ ನಲ್ಲಿ 2,05,000 ವಿಚಾರಣೆಗಳಿಗೆ ಸ್ಪಂದಿಸಿದೆ
ಲಾಕ್ ಡೌನ್ ಘೋಷಣೆಯಾದ ತರುವಾಯ ರೈಲ್ವೆ ಪ್ರಯಾಣಿಕರಿಗೆ, ಇತರ ನಾಗರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮತ್ತು ಸರಕು ಸಾಗಣೆಯ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ರೈಲ್ವೆ ತನ್ನ ಸಹಾಯವಾಣಿ ಸೌಲಭ್ಯವನ್ನು ಹೆಚ್ಚಿಸಿದೆ
ಪಿಎಂ ಗರೀಬ್ ಕಲ್ಯಾಣ ಯೋಜನೆಯ ರೀತ್ಯ ಚಂದಾದಾರರ ಇಪಿಎಫ್ ಮತ್ತು ಇಪಿಎಸ್ ಖಾತೆಗಳಿಗೆ ಹಣ ಜಮಾ ಮಾಡುವ ಆನ್ ಲೈನ್ ವ್ಯವಸ್ಥೆಯನ್ನು ಇಪಿಎಫ್ಓ ಜಾರಿ ಮಾಡಿದೆ
ನೌಕರರ ಭವಿಷ್ಯ ನಿಧಿ ಸಂಸ್ಥೆ ಪಿಎಂ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ 26.03.2020ರಂದು ಘೋಷಣೆ ಮಾಡಿರುವ ಪ್ಯಾಕೇಜ್ ನಂತೆ ಬಡವರಿಗೆ ಕೊರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಅನುವಾಗುವಂತೆ ಇಪಿಎಫ್ ಮತ್ತು ಇಪಿಎಸ್ ಚಂದಾದಾರರ ಖಾತೆಗಳಿಗೆ ಹಣ ಜಮಾ ಮಾಡಲು ಎಲೆಕ್ಟ್ರಾನಿಕ್ ವ್ಯವಸ್ಥೆ ಜಾರಿಗೆ ತಂದಿದೆ.
ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಡೈರಿ ಉತ್ಪನ್ನಗಳು ಮತ್ತು ಬೀಜಗಳು ಸೇರಿದಂತೆ ಬೇಗ ಹಾಳಾಗುವ ಉತ್ಪನ್ನಗಳನ್ನು ಸಾಗಿಸಲು ಪಾರ್ಸೆಲ್ ವಿಶೇಷ ರೈಲುಗಳಿಗೆ 67 ಮಾರ್ಗಗಳನ್ನು ರೈಲ್ವೆ ಗುರುತಿಸಿದೆ
ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ತಮ್ಮ ಎಲ್ಲ ಸಂಪನ್ಮೂಲ ಕ್ರೋಡೀಕರಿಸಿ ವಿಶೇಷ ರೈಲುಗಳ ಪ್ರಯೋಜನ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಅಭಿಯಾನದ ನಿರ್ದೇಶಕ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿತ ಕಾರ್ಯದರ್ಶಿಗಳಿಗೆ ತಿಳಿಸಿದೆ.
ಕುಶಲಕರ್ಮಿಗಳು/ ಎಸ್.ಎಚ್.ಜಿ.ಗಳು, ವನ್ ಧನ್ ಫಲಾನುಭವಿಗಳು ಮತ್ತು ಎನ್.ಜಿ.ಓ. ತಯಾರಿಸಿದ ಮಾಸ್ಕ್ ಗಳನ್ನು ಟ್ರೈಫೆಡ್ ಪೂರೈಕೆ ಮಾಡುವುದಾಗಿ ತಿಳಿಸಿದೆ
ಈ ಸರಬರಾಜುದಾರರು ತಯಾರಿಸುವ ಮಾಸ್ಕ್ ಗಳ ಪೂರೈಕೆ ಅವರಿಗೆ ಸುರಕ್ಷತೆ ಒದಗಿಸುವುದರ ಜೊತೆಗೆ ಜೀವನೋಪಾಯದ ಮಾರ್ಗವನ್ನೂ ಸೃಷ್ಟಿಸಲು ಸಹಾಯ ಮಾಡುತ್ತದೆ.
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯಿಂದ ಪತ್ರಿಕಾ ಹೇಳಿಕೆ
ಹೊಮಿಯೋಪಥಿ ವೈದ್ಯಪದ್ಧತಿಯ ವೈದ್ಯರಿಗೆ ಟೆಲಿಮೆಡಿಸಿನ್ ಮಾರ್ಗಸೂಚಿಗಳ ಅನುಮೋದನೆ
ಆಯುಷ್ ಸಚಿವ ಶ್ರೀಪಾದ್ ನಾಯಕ್ ವಿಶ್ವ ಹೋಮಿಯೋಪಥಿ ದಿನದಂದು ಅಂತಾರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿದರು. ಬಹುತೇಕ ಭಾಷಣಕಾರರು ಹೋಮಿಯೋಪಥಿಯ ಸಾಮರ್ಥ್ಯದ ಬಗ್ಗೆ ಮಾತನಾಡಿ, ಕೋವಿಡ್ 19ರ ನಿಗ್ರಹದಲ್ಲೂ ಅದರ ಪ್ರಯೋಜನ ಪಡೆಯುವಂತೆ ತಿಳಿಸಿದರು ಮತ್ತು ಕೋವಿಡ್ ರೋಗಿಗಳಿಗೆ ಪ್ರಮಾಣಿತ ಆರೈಕೆಯೊಂದಿಗೆ ಗುಣಮಟ್ಟದ ಹೋಮಿಯೋಪತಿ ಬಳಕೆಯ ಬಗ್ಗೆ ಸತ್ಯಗಳನ್ನು ಪ್ರಸ್ತುತಪಡಿಸಿದರು.
ಸ್ಟ್ರಾಂಡೆಡ್ ಇಂಡಿಯಾ ಪೋರ್ಟಲ್ ನಿಂದ ಏಪ್ರಿಲ್ 9ರವರೆಗೆ 1194 ಪ್ರವಾಸಿಗರಿಗೆ ನೆರವು
ಪ್ರವಾಸೋದ್ಯಮ ಸಚಿವಾಲಯದ ಸ್ಟ್ರಾಂಡೆಂಡ್ ಇಂಡಿಯಾ ಪೋರ್ಟಲ್ ಪ್ರವಾಸಿಗರಿಗೆ ತನ್ನ ನೆರವು ಮುಂದುವರಿಸಿದೆ. ಏಪ್ರಿಲ್ 9ರವರೆಗೆ 1194 ಪ್ರವಾಸಿಗರಿಗೆ ನೆರವಾಗಿದೆ. ಇದರ ಜೊತೆಗೆ ಪ್ರವಾಸೋದ್ಯಮ ಸಚಿವಾಲಯ ನಡೆಸುವ ನಿಗದಿತ ಉಚಿತ ಸಹಾಯವಾಣಿ 1363 ಗೆ 22 ಮಾರ್ಚ್ ನಿಂದ 9 ಏಪ್ರಿಲ್ ವರೆಗೆ 779 ಕರೆಗಳು ಬಂದಿವೆ.
ತಪಾಸಣೆ, ಪ್ರತ್ಯೇಕೀಕರಣ ಮತ್ತು ದಿಗ್ಬಂಧನಕ್ಕೆ ಎರಡು ಹಾಸಿಗೆಗಳ ಟೆಂಟ್ ಗಳನ್ನು ರೂಪಿಸಿದ ಓಎಫ್.ಬಿ
ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಓ.ಎಫ್.ಬಿ.) ಕೊರೋನಾ ವೈರಾಣು (ಕೋವಿಡ್) ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅವರು ಎರಡು ಹಾಸಿಗೆಗಳ ಟೆಂಟ್, ಹ್ಯಾಂಡ್ ಸ್ಯಾನಿಟೈಸರ್, ಮುಖ ಮಾಸ್ಕ್, ಧೂಮದ ಕೊಠಡಿ ಮತ್ತು ಕೈತೊಳೆಯುವ ವ್ಯವಸ್ಥೆಯನ್ನೂ ರೂಪಿಸಿದೆ.
ಕೋವಿಡ್ ವಿರುದ್ಧ ಸೆಣಸಲು ನಿಲುವಂಗಿ ತಯಾರಿಕೆಗೆ ವಸ್ತ್ರದ ಪರೀಕ್ಷೆಗೆ ಎನ್.ಎ.ಬಿ.ಎಲ್. ಅನುಮೋದನೆ ಪಡೆದ ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಓಎಫ್.ಬಿ. ಘಟಕಗಳು
ಮಹತ್ವದ ಬೆಳೆವಣಿಗೆಯಲ್ಲಿ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಓಎಫ್.ಬಿ.)ನ ಎರಡು ಘಟಕಗಳು ಅಂದರೆ ಉತ್ತರ ಪ್ರದೇಶದ ಕಾನ್ಪುರದ ಸ್ಮಾಲ್ ಆರ್ಮ್ಸ್ ಫ್ಯಾಕ್ಟರಿ (ಎಸ್.ಎ.ಎಫ್.), ಮತ್ತು ತಮಿಳುನಾಡಿನ ಅವದಿಯ ಹೆವಿ ವೆಹಿಕಲ್ ಫ್ಯಾಕ್ಟರಿ (ಎಚ್.ವಿ.ಎಫ್.) ಗಳು ತಯಾರಿಸಿದ ಪರೀಕ್ಷಾ ಉಪಕರಣಗಳು ಎಎಸ್ಟಿಎಂ ಎಫ್ 1670: 2003 ಮತ್ತು ಐಎಸ್.ಒ 16603: 2004 ಮಾನದಂಡಗಳನ್ನು ಪೂರೈಸಿದ್ದರಿಂದ ಇಂದು ‘ಟೆಸ್ಟ್ ಫಾರ್ ಬ್ಲಡ್ ಪೆನೆಟ್ರೇಷನ್ ರೆಸಿಟೆನ್ಸ್’ ನಡೆಸಲು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯದ ರಾಷ್ಟ್ರೀಯ ಮಾನ್ಯತೆ ಮಂಡಳಿ (ಎನ್.ಎಬಿಎಲ್) ಮಾನ್ಯತೆ ಪಡೆದಿವೆ.
ಐಐಟಿ, ಬಿಎಚ್.ಯುಗಳ ಆವಿಷ್ಕಾರ ಕೇಂದ್ರದಿಂದ ಸಂಪೂರ್ಣ ದೇಹದ ನೈರ್ಮಲ್ಯ ಸಾಧನ ತಯಾರಿಕೆ
ಸಾಧನವನ್ನು ಎಲ್ಲಿಯಾದರೂ ಆರೋಹಿಸಬಹುದು ಮತ್ತು ಅದು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಸಾಧನವು ಸಂವೇದಕ ಆಧಾರಿತವಾಗಿದ್ದು ಅದನ್ನು ಯಾವುದೇ ಆವರಣದ ಹೊರಗೆ ಸ್ಥಾಪಿಸಬಹುದು. ಸಂವೇದಕ ಆಧಾರಿತ ಸ್ಥಾಪಿತ ಯಂತ್ರವು ಸಾಧನದ ಮುಂದೆ ಬರುವ ವ್ಯಕ್ತಿಯನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು 10-15 ಮಿಲಿ ಸ್ಯಾನಿಟೈಜರ್ ಅನ್ನು 15 ಸೆಕೆಂಡುಗಳ ಕಾಲ ಸಿಂಪಡಿಸುತ್ತದೆ ಮತ್ತು ಇದು ವ್ಯಕ್ತಿಯ ಸಂಪೂರ್ಣ ದೇಹ, ಬಟ್ಟೆ, ಬೂಟುಗಳು ಇತ್ಯಾದಿಗಳನ್ನು ನೈರ್ಮಲ್ಯಗೊಳಿಸುತ್ತದೆ.
ಕೋವಿಡ್ -19 ಲಾಕ್ ಡೌನ್ ನಡುವೆಯೂ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಹೆಸರಾಂತ ಬೋಧಕ ಶ್ರೀ ಶ್ರೀ ರವಿ ಶಂಕರ್ ಅವರೊಂದಿಗೆ ಕೋವಿಡ್ ಕುರಿತಂತೆ ಸಂವದನಾತ್ಮಕ ಅಧಿವೇಶನ ನಡೆಸಿತು
ಪಿಐಬಿ ಕ್ಷೇತ್ರ ಕಚೇರಿಗಳ ವರದಿ
ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 435 ಕ್ಕೆ ಏರಿದೆ. ಏತನ್ಮಧ್ಯೆ, ಕೋವಿಡ್ 19 ರ ವಿರುದ್ಧ ಹೋರಾಡಲು ಸ್ಥಳೀಯ ಪ್ರದೇಶ ಅಭಿವೃದ್ಧಿಯ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಶಾಸಕರಿಗೆ ಅವಕಾಶ ನೀಡಿದೆ.
ಛತ್ತೀಸಗಢ: ಛತ್ತೀಸಗಢದಲ್ಲಿ 8 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 18 ಕ್ಕೆ ಏರಿದೆ. ಇವರಲ್ಲಿ 9 ಜನರು ಗುಣಮುಖರಾಗಿದ್ದಾರೆ.
ರಾಜಸ್ಥಾನ: ತೊಂದರೆಗೀಡಾದವರ ಘನತೆಯನ್ನು ಕಾಪಾಡಲು ಮತ್ತು ಕಾರ್ಯಕ್ರಮದ ಪ್ರಚಾರವನ್ನು ತಡೆಗಟ್ಟುವ ಉದ್ದೇಶದಿಂದ ರಾಜಸ್ಥಾನವು ಅಗತ್ಯವಿರುವವರಿಗೆ ಸ್ವಯಂಪ್ರೇರಿತವಾಗಿ ಆಹಾರ ಮತ್ತು ಪಡಿತರ ವಿತರಣೆಯ ಸಮಯದಲ್ಲಿ ಛಾಯಾಗ್ರಹಣವನ್ನು ನಿಷೇಧಿಸಿದೆ.
ಮಹಾರಾಷ್ಟ್ರ: ಒಡಿಶಾ ಮತ್ತು ಪಂಜಾಬ್‌ನ ನಂತರ ಏಪ್ರಿಲ್ 30 ರವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಸಲು ಮಹಾರಾಷ್ಟ್ರವೂ ನಿರ್ಧರಿಸಿದೆ. ಕಡಿಮೆ ಬಾಧಿತ ಪ್ರದೇಶಗಳಲ್ಲಿ ಕೆಲವು ರಿಯಾಯಿತಿಗಳಿರುತ್ತವೆ ಮತ್ತು ಮುಂಬೈ ಮತ್ತು ಪುಣೆಯಂತಹ ಹಾಟ್ ಸ್ಪಾಟ್‌ಗಳಲ್ಲಿ ಹೆಚ್ಚು ಕಠಿಣ ಕ್ರಮಗಳನ್ನು ಪರಿಚಯಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ-ಬಿ) ಒಂದು ತಂಡವು “ಡಿಜಿಟಲ್ ಸ್ಟೆಥೋಸ್ಕೋಪ್” ಅನ್ನು ಅಭಿವೃದ್ಧಿಪಡಿಸಿದೆ, ಅದು ಹೃದಯ ಬಡಿತಗಳನ್ನು ದೂರದಿಂದ ಆಲಿಸುತ್ತದೆ ಮತ್ತು ಅವುಗಳನ್ನು ದಾಖಲಿಸುತ್ತದೆ. ಕೋವಿಡ್ 19 ಸೋಂಕಿನಿಂದ ಬಳಲುತ್ತಿರುವ ಆರೋಗ್ಯ ವೃತ್ತಿಪರರ ಅಪಾಯವನ್ನು ಕಡಿಮೆ ಮಾಡುತ್ತದೆ.
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶ, ಪಾಸಿಘಾಟ್, ಪೂರ್ವ ಸಿಯಾಂಗ್ ಮೂಲದ ಸಿದ್ಧ ಉಡುಪು ಮತ್ತು ಉಡುಪು ಉದ್ಯಮ ಎಲಾಮ್ ಈಗ ಪಿಪಿಇ ಮತ್ತು ಮಾಸ್ಕ್ಗಳನ್ನು ಉತ್ಪಾದಿಸುತ್ತಿದೆ.
ಅಸ್ಸಾಂ: ಇತರ ರಾಜ್ಯಗಳು ಅಥವಾ ದೇಶಗಳಿಂದ ಅಸ್ಸಾಂಗೆ ಬರುವ ಯಾರೇ ಆದರೂ 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿರುತ್ತಾರೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಮಣಿಪುರ: ಖಾಸಗಿ ಶಾಲೆಗಳು ಲಾಕ್ ಡೌನ್ ಸಮಯದಲ್ಲಿ ಶುಲ್ಕ ವಿಧಿಸಬಾರದು ಎಂದು ಮಣಿಪುರ ಶಿಕ್ಷಣ ಸಚಿವರು ಆಗ್ರಹಿಸಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಆನ್‌ಲೈನ್ ತರಗತಿಗಳನ್ನು ಏರ್ಪಡಿಸಲಾಗಿದೆ.
ಮಿಜೋರಾಂ: ಮಕ್ಕಳಿಗಾಗಿ ದೂರದರ್ಶನದ ಮೂಲಕ ಹೋಮ್ ಸ್ಕೂಲಿಂಗ್ ನಡೆಸಲು ಮಿಜೋರಾಂ ಶಾಲಾ ಶಿಕ್ಷಣ ಇಲಾಖೆ ಒಂದು ನವೀನ್ಯಪೂರ್ಣ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಮೇಘಾಲಯ: ಲಾಕ್ ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದಿಲ್ಲ, ಆದರೆ ಸರಾಗವಾಗಲಿದೆ ಎಂದು ಮೇಘಾಲಯ ಸಿಎಂ ಹೇಳಿದ್ದಾರೆ; ಹೊರ ರಾಜ್ಯದಿಂದ ಯಾವುದೇ ಸಂಚಾರ ಇರುವುದಿಲ್ಲ.
ನಾಗಾಲ್ಯಾಂಡ್: ನಾಗಾಲ್ಯಾಂಡ್ ನಲ್ಲಿ, ದಿಮಾಪುರ ಜಿಲ್ಲಾ ಆಡಳಿತ ನಿಜವಾಗಿಯೂ ಉಳಿದಲ್ಲೇ ಉಳಿದಿರುವ ವಿದ್ಯಾರ್ಥಿಗಳಿಗೆ ವಿವರಗಳನ್ನು ಮತ್ತು ಅವರ ಸಮಸ್ಯೆಗಳನ್ನು ಸಹಾಯವಾಣಿ ಸಂಖ್ಯೆ ಮೂಲಕ ಒದಗಿಸುವಂತೆ ಸೂಚನೆ.
ಸಿಕ್ಕಿಂ: ಸಿಕ್ಕಿನ ಎಲ್ಲ ರಕ್ತ ನಿಧಿಗಳ ಅಗತ್ಯ ಪೂರೈಕೆ ಖಾತ್ರಿಪಡಿಸುವ ಸಲುವಾಗಿ ಲಾಕ್ ಡೌನ್ ವೇಳೆ, ಸಿಕ್ಕಿಂನ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ (ವಿಬಿಡಿಎಎಸ್) 12 ಕಿರು ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ.
ತ್ರಿಪುರ: ತ್ರಿಪುರ ಮುಖ್ಯಮಂತ್ರಿ ಪಿಎಂ ಮತ್ತು ಇತರ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿದ ಬಗ್ಗೆ ಟ್ವೀಟ್ ಮಾಡಿದ್ದಾರೆ, ತ್ರಿಪುರದ ಕೋವಿಡ್ 19 ಪರಿಸ್ಥಿತಿಯ ಬಗ್ಗೆ ಪಿಎಂಗೆ ತಿಳಿಸಿದ್ದಾಗಿ ಹೇಳಿದ್ದಾರೆ.
ಕೇರಳ: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಸಾಧ್ಯತೆಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ವರದಿಯನ್ನು ಕೇರಳ ಹೈಕೋರ್ಟ್ ಇಂದು ಕೇಳಿದೆ. ಕಣ್ಣೂರಿನಲ್ಲಿರುವ ಪರಿಯಾರಂ ಸರ್ಕಾರಿ ಎಂ.ಸಿ.ಯಲ್ಲಿ ಇನ್ನೂ ಒಂದು ಸಾವಾಗಿದೆ, . ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಮಾಹೆಯ 71 / ಎಂ.ರಲ್ಲಿ ರೋಗದ ಮೂಲ ತಿಳಿದು ಬಂದಿಲ್ಲ. ಕಸರಗೋಡ್ ಹಾಟ್ ಸ್ಪಾಟ್‌ನ ಐದು ಪ್ರದೇಶಗಳನ್ನು ತ್ರಿವಳಿ ಲಾಕ್‌ಡೌನ್ ಅಡಿಯಲ್ಲಿ ಇರಿಸಲಾಗಿದೆ. ನಿನ್ನೆ ತನಕ ಸಕ್ರಿಯ ಸೋಂಕಿನ ಪ್ರಕರಣಗಳು 238.
ತಮಿಳುನಾಡು: ರಾಜ್ಯವು ಲಾಕ್ ಡೌನ್ ಅನ್ನು ಇನ್ನೂ 2 ವಾರಗಳವರೆಗೆ ವಿಸ್ತರಿಸಬಹುದು. 8 ಸಂಸ್ಥೆಗಳು ಪಿಪಿಇ ಕಿಟ್ ಗಳನ್ನು ತಮಿಳುನಾಡಿಗೆ ತಯಾರಿಸಿ ಪೂರೈಸಲು ಮುಂದೆ ಬಂದಿವೆ. ನಿನ್ನೆ 77 ಹೊಸ ಪ್ರಕರಣಗಳು; ಒಟ್ಟು ಪ್ರಕರಣಗಳು 911; ಸಾವಿನ ಸಂಖ್ಯೆ 20; ಸಕ್ರಿಯ ಪ್ರಕರಣಗಳು 858; ಚೇತರಿಸಿಕೊಂಡವರು 44; ಇಲ್ಲ. ಪರೀಕ್ಷಿಸಿದ ಮಾದರಿಗಳು 8410; ಫಲಿತಾಂಶಕ್ಕಾಗಿ ಬಾಕಿ ಉಳಿದಿರುವುದು 661.
ಕರ್ನಾಟಕ: ಇಂದು ಮಧ್ಯಾಹ್ನದವರೆಗೆ 7 ಹೊಸ ಪ್ರಕರಣಗಳು ಪತ್ತೆಯಾಗಿವೆ; ಮೈಸೂರು 5, ಬೆಂಗಳೂರು 1 ಮತ್ತು ಬೀದರ್ 1. ಒಟ್ಟು ದೃಢಪಟ್ಟ ಪ್ರಕರಣಗಳು 214; ಸಾವು 6; ಚೇತರಿಸಿಕೊಂಡವರು 34. ಪ್ರಧಾನ ಮಂತ್ರಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಂತರ, ಏಪ್ರಿಲ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದರು.
ಆಂಧ್ರಪ್ರದೇಶ: ರಾಜ್ಯ ಸರ್ಕಾರ ಹೊಸ ಎಸ್.ಇ.ಸಿ. ನೇಮಕ ಮಾಡಿದ್ದು, ಹಾಲಿ ಅಧಿಕಾರದಲ್ಲಿದ್ದವರನ್ನು ಸುಗ್ರೀವಾಜ್ಞೆಯ ಮೂಲಕ ತೆಗೆದು ಹಾಕಿದೆ. ಟಿಡಿಪಿ ವರಿಷ್ಠರು ನಿರ್ಧಾರವನ್ನು ವಿರೋಧಿಸಿದ್ದಾರೆ. ಇಂದು ಮಧ್ಯಾಹ್ನದವರೆಗೆ 21 ಹೊಸ ಪ್ರಕರಣಗಳು ವರದಿಯಾಗಿವೆ, ಒಟ್ಟು ಪ್ರಕರಣಗಳು 402 ಕ್ಕೆ ಏರಿದೆ. ಕರ್ನೂಲ್ (82) ಗುಂಟೂರು (72) ನೆಲ್ಲೂರು (48) ದೃಢಪಟ್ಟ ಪ್ರಕರಣಗಳ ಪ್ರಮುಖ ಜಿಲ್ಲೆಗಳಾಗಿವೆ. ಕಳೆದ 24 ಗಂಟೆಗಳಲ್ಲಿ, 909 ಮಾದರಿಗಳನ್ನು ಪರೀಕ್ಷಿಸಲಾಗಿದೆ; 37 ರಲ್ಲಿ ಸೋಂಕು ಸಾಬೀತಾಗಿದೆ. ಸಕ್ರಿಯ ಪ್ರಕರಣಗಳು 385; ಗುಣವಾದವರು 11; ಸಾವು 6;
ತೆಲಂಗಾಣ: ಮಧ್ಯಾಹ್ನದವರೆಗೆ ಇನ್ನೂ 6 ಸೋಂಕಿತ ಪ್ರಕರಣಗಳು ವರದಿಯಾಗಿದ್ದು; ಒಟ್ಟು 493 ಕ್ಕೆ ಏರಿಕೆಯಾಗಿದೆ. ಐದು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಅಧಿಸೂಚಿಸಲಾಗಿದೆ. ತೆಲಂಗಾಣದಲ್ಲಿ ಶೀಘ್ರದಲ್ಲೇ ಕಾರ್ಯನಿರ್ವಹಿಸಲಿರುವ ಮೊದಲ ರೈಲ್ವೆ ಕರೋನಾ ಆಸ್ಪತ್ರೆ. ಲಾಕ್‌ಡೌನ್ ಸಮಯದಲ್ಲಿ ವೈದ್ಯರು ಮತ್ತು ತಜ್ಞರನ್ನು ಸಂಪರ್ಕಿಸಲು ಜಿಲ್ಲೆಗಳಲ್ಲಿ ಪರಿಚಯಿಸಲಾಗಿರುವ ಟೆಲಿಮೆಡಿಸಿನ್ ಸೌಲಭ್ಯವನ್ನು ರಾಜ್ಯದ ಜನರು ಬಳಸಿಕೊಳ್ಳುತ್ತಿದ್ದಾರೆ
Fact Check on #Covid19
***
(Release ID: 1613496)
Visitor Counter : 668
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam