ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಗರ್ಭ ಧರಿಸುವ ಮುನ್ನ ಅಥವಾ ಆನಂತರ ಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸುವ ಪಿಸಿ ಮತ್ತು ಪಿಎನ್ ಡಿಟಿ ಕಾಯಿದೆಯನ್ನು ಅಮಾನತುಗೊಳಿಸಿಲ್ಲವೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟನೆ
Posted On:
09 APR 2020 7:13PM by PIB Bengaluru
ಗರ್ಭ ಧರಿಸುವ ಮುನ್ನ ಅಥವಾ ಆನಂತರ ಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸುವ ಪಿಸಿ ಮತ್ತು ಪಿಎನ್ ಡಿಟಿ ಕಾಯಿದೆಯನ್ನು ಅಮಾನತುಗೊಳಿಸಿಲ್ಲವೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟನೆ
ಕೆಲವು ಮಾಧ್ಯಮಗಳಲ್ಲಿ ಪಿಸಿ ಮತ್ತು ಪಿಎನ್ ಡಿಟಿ (ಗರ್ಭ ಧರಿಸುವ ಮುನ್ನ ಮತ್ತು ಆನಂತರ ಪತ್ತೆ ತಂತ್ರಜ್ಞಾನ ಬಳಸಿ)(ಲಿಂಗ ಆಯ್ಕೆ ನಿಷೇಧ) ಕಾಯ್ದೆ – 1994ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಮೂಲಕ ಸ್ಪಷ್ಟಪಡಿಸುತ್ತಿರುವುದೇನೆಂದರೆ ಗರ್ಭಧರಿಸುವ ಮುನ್ನ ಅಥವಾ ಆನಂತರ ಲಿಂಗ ಪತ್ತೆಯನ್ನು ಪರೀಕ್ಷಿಸುವುದನ್ನು ನಿಷೇಧಿಸುವ ಪಿಸಿ ಮತ್ತು ಪಿಎನ್ ಡಿಟಿ ಕಾಯ್ದೆಯನ್ನು ಅಮಾನತುಗೊಳಿಸಿಲ್ಲ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಪ್ರಸಕ್ತ ಲಾಕ್ ಡೌನ್ ಇರುವುದರಿಂದ ಆರೋಗ್ಯ ಸಚಿವಾಲಯ 2020ರ ಏಪ್ರಿಲ್ 4ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಪಿಸಿ ಮತ್ತು ಪಿಎನ್ ಡಿಟಿ ನಿಯಮಗಳು 1996ರಲ್ಲಿ ಕೆಲವು ಅಂಶಗಳನ್ನು ಮುಂದೂಡಲಾಗಿದೆ/ ಅಮಾನತುಗೊಳಿಸಲಾಗಿದೆ. ಈ ಅಂಶಗಳು ಲಾಕ್ ಡೌನ್ ಅವಧಿಯಲ್ಲಿ ನೋಂದಣಿ ನವೀಕರಣ ಅರ್ಜಿ ಸಲ್ಲಿಸುವುದು, ಡಯಾಗ್ನಾಸ್ಟಿಕ್ ಸೆಂಟರ್ ಗಳು ಪ್ರತಿ ತಿಂಗಳ 5ನೇ ತಾರೀಖಿಗೆ ವರದಿಯನ್ನು ಸಲ್ಲಿಸಬೇಕಾಗಿರುವುದು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿ ತ್ರೈಮಾಸಿಕ ವರದಿ(ಕ್ಯೂಪಿಆರ್)ಗೆ ಸಲ್ಲಿಸುವುದಕ್ಕೆ ಸಂಬಂಧಿಸಿದ್ದಾಗಿದೆ.
ಕಾನೂನಿನಲ್ಲಿ ನಿಗದಿಪಡಿಸಿರುವಂತೆ ಎಲ್ಲಾ ಆಲ್ಟ್ರಾಸೌಂಡ್ ಕ್ಲಿನಿಕ್, ಜೆನೆಟಿಕ್ ಕೌನ್ಸಲಿಂಗ್ ಸೆಂಟರ್, ಜೆನೆಟಿಕ್ ಪ್ರಯೋಗಾಲಯ, ಜೆನೆಟಿಕ್ ಕ್ಲಿನಿಕ್ ಅಂಡ್ ಇಮೇಜಿಂಗ್ ಸೆಂಟರ್ ಇವುಗಳು ಕಡ್ಡಾಯವಾಗಿ ದೈನಂದಿನ ಆಧಾರದಲ್ಲಿ ದಾಖಲೆಗಳನ್ನು ನಿರ್ವಹಣೆ ಮಾಡಬೇಕು ಎಂದು ಪುನರುಚ್ಚರಿಸಲಾಗಿದೆ. ನಿಯಮದಂತೆ ಕೆಲವು ಪ್ರಾಧಿಕಾರಗಳು ಸಲ್ಲಿಸಬೇಕಾಗಿದ್ದ ವರದಿಗಳಿಗೆ ಇದ್ದ ಗಡುವನ್ನು ಮಾತ್ರ 2020ರ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಆದರೆ ಪಿಸಿ ಮತ್ತು ಪಿಎನ್ ಡಿಟಿ ಕಾಯ್ದೆಯ ಅಂಶಗಳ ಪಾಲನೆಗೆ(ಡಯಾಗ್ನಾಸ್ಟಿಕ್ ಸೆಂಟರ್ ಗಳಿಗೆ) ಯಾವುದೇ ವಿನಾಯಿತಿಯನ್ನು ನೀಡಲಾಗಿಲ್ಲ.
ನಿಯಮದಂತೆ ಎಲ್ಲಾ ದಾಖಲೆಗಳನ್ನು ನಿರ್ವಹಣೆ ಮಾಡುವುದು ಕಡ್ಡಾಯವಾಗಿದೆ. ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಪಿಸಿ ಮತ್ತು ಪಿಎನ್ ಡಿಟಿ ಕಾಯ್ದೆ ಹಾಗೂ ನಿಯಮಗಳ ಕಠಿಣ ಜಾರಿ ಅಗತ್ಯತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
*****
(Release ID: 1613215)
Visitor Counter : 199
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu