ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಅಪ್ ಡೇಟ್ಸ್

Posted On: 10 APR 2020 7:42PM by PIB Bengaluru

ಕೋವಿಡ್ – 19 ಅಪ್ ಡೇಟ್ಸ್

 

ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆ ಸೇರಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇಂದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ರವರು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿದ ಪ್ರದೇಶಗಳ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು/ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರ ಸಮ್ಮುಖದಲ್ಲಿ ಕೋವಿಡ್-19ರ ನಿರ್ವಹಣೆಗೆ ಕ್ರಮಗಳು ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ಚರ್ಚೆಯನ್ನು ನಡೆಸಿದರು.

ಡಾ. ಹರ್ಷವರ್ಧನ್ ಅವರು ದೇಶದ ಪ್ರತಿ ಜಿಲ್ಲೆಯಲ್ಲೂ ಕೋವಿಡ್-19 ಮೀಸಲು ಆಸ್ಪತ್ರೆಗಳ ಅವಶ್ಯಕತೆಯಿದೆ ಮತ್ತು ಸಾಧ್ಯವಾದಷ್ಟು ಬೇಗ ಅವರಿಗೆ ತಿಳಿಸಬೇಕು, ಇದರಿಂದ ಜನರಿಗೆ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಆರೋಗ್ಯ ಕಾರ್ಯಕರ್ತರು/ ವೃತ್ತಿಪರರು ಯಾವ ವರ್ಗದ ಪಿಪಿಇ ಬಳಸಬೇಕೆಂಬುದರ ವಿವರವಾದ ಮಾರ್ಗಸೂಚಿಗಳು ಸಚಿವಾಲಯದ ವೆಬ್‌ಸೈಟ್‌ನಲ್ಲಿ ( www.mohfw.gov.in ) ಲಭ್ಯವಿದೆ ಮತ್ತು ರಾಜ್ಯಗಳು ತಮ್ಮ ತರ್ಕಬದ್ಧ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು. ಆಸ್ಪತ್ರೆಗಳ ವಿವಿಧ ಪ್ರದೇಶಗಳಲ್ಲಿ ಪಿಪಿಇ ಯ ಸೂಕ್ತ ಬಳಕೆಯನ್ನು ತೋರಿಸುವ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ ಇದು https://www.youtube.com/watch?v=LzB5krucZoQ&feature=youtu.be ನಲ್ಲಿ ಲಭ್ಯವಿದೆ.

'ಇಂಡಿಯಾ ಕೋವಿಡ್ -19 ‘ತುರ್ತು ಪ್ರತಿಸ್ಪಂದನಾ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್' ಗಾಗಿ ಭಾರತ ಸರ್ಕಾರವು 15 ಸಾವಿರ ಕೋಟಿ ರೂಪಾಯಿಗಳನ್ನು ಘೋಷಿಸಿದೆ. ಇದನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಬಳಸಬಹುದು ಮತ್ತು ಕೋವಿಡ್-19 ಅನ್ನು ಕೇಂದ್ರೀಕರಿಸಿ ದೇಶದ ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸಬಹುದು. ಇದು ಕೋವಿಡ್-19ರ ಪರೀಕ್ಷಾ ಸೌಲಭ್ಯಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಪ್ರತ್ಯೇಕ ಹಾಸಿಗೆಗಳು, ಐಸಿಯು ಹಾಸಿಗೆಗಳು, ವೆಂಟಿಲೇಟರ್‌ಗಳು ಮತ್ತು ಇತರ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಮತ್ತು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ತರಬೇತಿಗಾಗಿ ಬಳಸಬಹುದು.

ವೈಯಕ್ತಿಕ ರಕ್ಷಣಾ ಸಲಕರಣೆಗಳಿಗಾಗಿ (ಪಿಪಿಇ) 39 ದೇಶೀಯ ತಯಾರಕರನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಎಲ್ಲಾ ರಾಜ್ಯಗಳಲ್ಲಿ ಇರುವ ನಮ್ಮ ಮುಂಚೂಣಿಯ ಕೆಲಸಗಾರರಿಗೆ ಪಿಪಿಇಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ.

ರಾಜ್ಯಗಳಿಗೆ ಸುಮಾರು 20.4 ಲಕ್ಷ ಎನ್-95 ಮುಖಗವಸುಗಳನ್ನು ಸರಬರಾಜು ಮಾಡಲಾಗಿದೆ ಮತ್ತು ಭವಿಷ್ಯದ ಅವಶ್ಯಕತೆಗಳಿಗಾಗಿ ಈಗಾಗಲೇ ಹೆಚ್ಚಿನ ಸಂಗ್ರಹವನ್ನು ಪ್ರಾರಂಭಿಸಲಾಗಿದೆ. ಅಲ್ಲದೆ, 49000 ವೆಂಟಿಲೇಟರ್‌ಗಳಿಗೆ ಆದೇಶವನ್ನು ನೀಡಲಾಗಿದೆ ಮತ್ತು ಭವಿಷ್ಯದ ಅವಶ್ಯಕತೆಗಳಿಗಾಗಿ ದಾಸ್ತಾನು ಮಾಡಲಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಕ್ತ ಮತ್ತು ರಕ್ತದ ಘಟಕಗಳ ಸಮರ್ಪಕ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ರಕ್ತ ವರ್ಗಾವಣೆಯು ಜೀವ ಉಳಿಸುವ ಕ್ರಮವಾಗಿರುವ ರೋಗಿಗಳಿಗೆ ರಕ್ತ ವರ್ಗಾವಣೆ ಮತ್ತು ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಾರ್ಗಸೂಚಿಗಳು https://www.mohfw.gov.in/pdf/NBTCGUIDANCEFORCOVID19.pdf ನಲ್ಲಿ ಲಭ್ಯವಿದೆ

ಯೋಜಿತ 1 ಕೋಟಿ ಹೈಡ್ರಾಕ್ಸಿಕ್ಲೋರೊಕ್ವಿನ್ (ಎಚ್‌ಸಿಕ್ಯು) ಮಾತ್ರೆಗಳ ಅವಶ್ಯಕತೆಗಿಂತಲೂ (ಕೋವಿಡ್-19 ರೋಗಿಗಳೊಂದಿಗೆ ವ್ಯವಹರಿಸುವ ಆರೋಗ್ಯ ಕಾರ್ಯಕರ್ತರು, ಐಸಿಯು ಪ್ರಕರಣಗಳು ಮತ್ತು ಹೆಚ್ಚಿನ ಅಪಾಯದ ವ್ಯಕ್ತಿಗಳನ್ನು ಒಳಗೊಂಡಂತೆ), ಈಗ ಹೆಚ್ಚುವರಿಯಾಗಿ 3.28 ಕೋಟಿ ಮಾತ್ರೆಗಳು, ಲಭ್ಯವಿವೆ, ಅಂದರೆ ದೇಶದಲ್ಲಿ ಅಗತ್ಯಕ್ಕಿಂತ ಇದು 3 ಪಟ್ಟು ಹೆಚ್ಚು ಇವೆ. ಇದಲ್ಲದೆ, ಸುಮಾರು 2-3 ಕೋಟಿ ದಾಸ್ತಾನನ್ನು ಸಂಗ್ರಹಿಸಲಾಗಿದೆ.

ಗರ್ಭ ಮತ್ತು ಪ್ರಸೂತಿ ನಿರ್ವಹಣೆ ಕುರಿತು ಆನ್‌ಲೈನ್ ತರಬೇತಿಯನ್ನು ಏಮ್ಸ್ ತಮ್ಮ ವೆವಿನಾರ್‌ಗಳ ಭಾಗವಾಗಿ ಕೈಗೆತ್ತಿಕೊಂಡಿದೆ ಮತ್ತು ಇಲ್ಲಿಯೂ ಕೂಡ ಲಭ್ಯವಿದೆ:

https://www.youtube.com/watch?v=MJwgi1LCu8o&feature=youtu.be

ಪ್ರಸ್ತುತ, 146 ಸರ್ಕಾರಿ ಪ್ರಯೋಗಾಲಯಗಳು, 16000 ಕ್ಕೂ ಹೆಚ್ಚು ಸಂಗ್ರಹ ಕೇಂದ್ರಗಳನ್ನು ಹೊಂದಿರುವ 67 ಖಾಸಗಿ ಲ್ಯಾಬ್‌ಗಳ ಮೂಲಕ ಪರೀಕ್ಷೆಯ ಸೌಲಭ್ಯವನ್ನು ಹೆಚ್ಚಿಸಲಾಗಿದೆ. 9 ಏಪ್ರಿಲ್ 2020 ರಂದು, ಸುಮಾರು 16002 ಪರೀಕ್ಷೆಗಳನ್ನು ಕೈಗೊಳ್ಳಲಾಯಿತು, ಅದರಲ್ಲಿ 320 ಪಾಸಿಟಿವೆ ಎಂದು ಕಂಡುಬಂದಿದೆ (ಸುಮಾರು 2%). ಆದಾಗ್ಯೂ, ಸಂಗ್ರಹಿಸಿದ ಮಾದರಿಗಳನ್ನು ಅವಲಂಬಿಸಿ ಈ ಅಂಕಿ-ಅಂಶವು ದಿನನಿತ್ಯದ ಆಧಾರದ ಮೇಲೆ ಬದಲಾಗುತ್ತದೆ.

ಪ್ರಸ್ತುತ, 6412 ದೃಢ ಪ್ರಕರಣಗಳು ಮತ್ತು 199 ಸಾವುಗಳು ವರದಿಯಾಗಿವೆ. 503 ಜನರನ್ನು ಗುಣಪಡಿಸಲಾಗಿದೆ/ ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ.

ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19ರ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : + 91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ

ಕೋವಿಡ್-19 ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

*****

 



(Release ID: 1613161) Visitor Counter : 171