ಪ್ರಧಾನ ಮಂತ್ರಿಯವರ ಕಛೇರಿ

ನೇಪಾಳ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ದೂರವಾಣಿ ಮಾತುಕತೆ

Posted On: 10 APR 2020 3:24PM by PIB Bengaluru

ನೇಪಾಳ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ದೂರವಾಣಿ ಮಾತುಕತೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ನೇಪಾಳದ ಪ್ರಧಾನಿ ಶ್ರೀ ಕೆ ಪಿ ಶರ್ಮಾ ಒಲಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಕೋವಿಡ್ -19 ಬಿಕ್ಕಟ್ಟು ಮತ್ತು ಎರಡೂ ದೇಶಗಳು ಮತ್ತು ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಗೆ ಸಾಂಕ್ರಾಮಿಕ ರೋಗವು ಒಡ್ಡುತ್ತಿರುವ ಸವಾಲುಗಳ ಬಗ್ಗೆ ಉಭಯ ನಾಯಕರು ಅಭಿಪ್ರಾಯಗಳನ್ನು ಹಂಚಿಕೊಂಡರು. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ತಮ್ಮ ದೇಶಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಚರ್ಚಿಸಿದರು.

ಪ್ರಧಾನಿ ಮೋದಿ ಅವರು ಪ್ರಧಾನಿ ಒಲಿ ಅವರ ನೇತೃತ್ವದಲ್ಲಿ ನೇಪಾಳ ಸರ್ಕಾರವು ಬಿಕ್ಕಟ್ಟನ್ನು ನಿರ್ವಹಹಿಸುತ್ತಿರುವ ರೀತಿ ಮತ್ತು ಸವಾಲನ್ನು ಎದುರಿಸುವಲ್ಲಿ ನೇಪಾಳದ ಜನರ ದೃಢಸಂಕಲ್ಪವನ್ನು ಶ್ಲಾಘಿಸಿದರು.

ಸಾರ್ಕ್ ದೇಶಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ಕ್ರಮಗಳನ್ನು ಕೈಗೊಳ್ಳಲು ಸಮನ್ವಯದ ಪ್ರಧಾನ ಮಂತ್ರಿಯವರ ಉಪಕ್ರಮಕ್ಕೆ ಪ್ರಧಾನಿ ಒಲಿ ತಮ್ಮ ಮೆಚ್ಚುಗೆಯನ್ನು ಪುನರುಚ್ಚರಿಸಿದರು. ಭಾರತವು ನೇಪಾಳಕ್ಕೆ ನೀಡಿದ ದ್ವಿಪಕ್ಷೀಯ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ನೇಪಾಳದ ಪ್ರಯತ್ನಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ಸಹಾಯವನ್ನು ನೀಡುವ ಭಾರತದ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಗಡಿಯಾಚೆಗೆ ಅಗತ್ಯ ಸರಕುಗಳ ಸರಬರಾಜು ಸೇರಿದಂತೆ ಕೋವಿಡ್ -19 ಪರಿಸ್ಥಿತಿಯಿಂದ ಉದ್ಭವಿಸುವ ಎಲ್ಲಾ ವಿಷಯಗಳ ಬಗ್ಗೆ ತಜ್ಞರು ಮತ್ತು ಅಧಿಕಾರಿಗಳು ಪರಸ್ಪರ ನಿಕಟವಾಗಿ ಸಮಾಲೋಚನೆ ಮತ್ತು ಸಮನ್ವಯವನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡರು.

ಪ್ರಧಾನಿ ಒಲಿ ಮತ್ತು ನೇಪಾಳದ ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಧಾನ ಮಂತ್ರಿ ಮೋದಿ ಶುಭಾಶಯಗಳನ್ನು ತಿಳಿಸಿದರು.

***



(Release ID: 1612944) Visitor Counter : 230