ರೈಲ್ವೇ ಸಚಿವಾಲಯ

ರೈಲು ಸೇವೆಗಳ ಪುನರಾರಂಭದ ಸಮಯದಲ್ಲಿ  ಪ್ರಯಾಣಿಕರ ಶಿಷ್ಟಾಚಾರಗಳ ಬಗ್ಗೆ ಮಾಧ್ಯಮ ವರದಿಗಳ ಪ್ರಕಟಣೆ: ಮಾಧ್ಯಮಗಳಿಗೆ ಸಲಹೆ

Posted On: 10 APR 2020 1:42PM by PIB Bengaluru

ರೈಲು ಸೇವೆಗಳ ಪುನರಾರಂಭದ ಸಮಯದಲ್ಲಿ  ಪ್ರಯಾಣಿಕರ ಶಿಷ್ಟಾಚಾರಗಳ ಬಗ್ಗೆ ಮಾಧ್ಯಮ ವರದಿಗಳ ಪ್ರಕಟಣೆ: ಮಾಧ್ಯಮಗಳಿಗೆ ಸಲಹೆ

 

ಕಳೆದ ಎರಡು ದಿನಗಳಿಂದ, ರೈಲು ಪ್ರಯಾಣಿಕರ ವಿವಿಧ ಶಿಷ್ಟಾಚಾರಗಳ  ಬಗ್ಗೆ ಮಾಧ್ಯಮಗಳಲ್ಲಿ ಕೆಲವು ವರದಿಗಳು ಬಂದಿವೆ. ನಿರ್ದಿಷ್ಟ ದಿನಾಂಕದಿಂದ ಪ್ರಾರಂಭವಾಗುವ ರೈಲುಗಳ ಸಂಖ್ಯೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.

ವಿಷಯಗಳಿಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನವನ್ನು ಇನ್ನೂ ತೆಗೆದುಕೊಂಡಿಲ್ಲ ಮತ್ತು ಇಂತಹ ವಿಷಯಗಳ ಬಗ್ಗೆ ಅಪಕ್ವ ವರದಿಗಳು ಈಗಿನ ಸಂಕಷ್ಟ ಸನ್ನಿವೇಶದಲ್ಲಿ  ಸಾರ್ವಜನಿಕರ ಮನಸ್ಸಿನಲ್ಲಿ ಅನಗತ್ಯ ಗೊಂದಲ ಮತ್ತು ಊಹಾಪೋಹಗಳಿಗೆ ಕಾರಣವಾಗುತ್ತವೆ ಎಂದು ಮಾಧ್ಯಮಗಳ ಗಮನಕ್ಕೆ ತರಲಾಗುತ್ತಿದೆ.

ಅಂತಹ ಊಹಾಪೋಹಗಳಿಗೆ ಕಾರಣವಾಗಬಹುದಾದ ದೃಢೀಕರಿಸದ ಅಥವಾ ಪರಿಶೀಲಿಸದ ವಿಷಯಗಳನ್ನು ಮಾಧ್ಯಮಗಳು ಪ್ರಕಟಿಸಬಾರದು ಎಂದು ವಿನಮ್ರವಾಗಿ ವಿನಂತಿಸಲಾಗಿದೆ ಮತ್ತು ಸಲಹೆ ನೀಡಲಾಗಿದೆ.

ಲಾಕ್ಡೌನ್ ನಂತರದ ರೈಲ್ವೆ ಪ್ರಯಾಣಕ್ಕಾಗಿ, ರೈಲ್ವೆಯು ತನ್ನ ಪ್ರಯಾಣಿಕರು ಸೇರಿದಂತೆ ಎಲ್ಲಾ ಪಾಲುದಾರರ ಹಿತದೃಷ್ಟಿಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ಅಂತಹ ನಿರ್ಧಾರ ತೆಗೆದುಕೊಂಡಾಗ ಸಂಬಂಧಪಟ್ಟ ಎಲ್ಲರಿಗೂ ತಿಳಿಸಲಾಗುವುದು.

***


(Release ID: 1612909) Visitor Counter : 157