ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಡಿಜಿಟಲ್ ಕಲಿಕೆಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ

Posted On: 09 APR 2020 5:18PM by PIB Bengaluru

ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ ಡಿಜಿಟಲ್ ಕಲಿಕೆಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ

ಎಚ್ಆರ್ಡಿ ಸಚಿವಾಲಯದ -ಕಲಿಕಾ ವೇದಿಕೆಗಳಲ್ಲಿ ಐದು ಪಟ್ಟು ಹೆಚ್ಚಳ ಪ್ರವೇಶ

ಶೈಕ್ಷಣಿಕ ಟಿವಿ ವಾಹಿನಿಗಳಾದ ಸ್ವಯಂ ಪ್ರಭಾ ಮತ್ತು ಗ್ಯಾನ್ ದರ್ಶನ್ ಬಳಸಿಕೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಒತ್ತಾಯಿಸಿದರು

 

ಕೋವಿಡ್ -19 ಲಾಕ್ಡೌನ್ಪರಿಣಾಮಗಳನ್ನು ತಗ್ಗಿಸಲು ಮತ್ತು ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ನಿರಂತರ ಹಾದಿ ಒದಗಿಸುವ ಪ್ರಯತ್ನಗಳನ್ನು ಮಾನವ ಸಂಪನ್ಮೂಲ ಸಚಿವಾಲಯವು ನಡೆಸುತ್ತಿರುವುದರಿಂದ, ಕಳೆದ ಎರಡು ವಾರಗಳಲ್ಲಿ ದೇಶದಲ್ಲಿ -ಲರ್ನಿಂಗ್ ಗಮನಾರ್ಹ ಏರಿಕೆ ಕಂಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಅಗತ್ಯ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಹಾಗೂ ನಿಟ್ಟಿನಲ್ಲಿ ಪ್ರತಿಕ್ರಿಯೆಗಳನ್ನೂ ಸ್ವೀಕರಿಸುತ್ತಿದ್ದಾರೆ.

ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಆನ್ಲೈನ್ ತರಗತಿಗಳ ವಿವಿಧ ವಿಧಾನಗಳನ್ನು ಪ್ರಾರಂಭಿಸಿವೆ. ಲಭ್ಯವಿರುವ ಸಂಪನ್ಮೂಲಗಳನ್ನು ಅವಲಂಬಿಸಿ ಅಧ್ಯಯನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಕಾರ್ಯವೂ ಆರಂಭವಾಗಿದೆ. ಸ್ಕೈಪ್, ಜೂಮ್, ಗೂಗಲ್ ಕ್ಲಾಸ್ರೂಮ್, ಗೂಗಲ್ ಹ್ಯಾಂಗೌಟ್, ಪಿಯಾಜಾ ಮುಂತಾದ ವೇದಿಕೆಗಳ ಮೂಲಕ ರಚನಾತ್ಮಕ ಆನ್ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಯೂಟ್ಯೂಬ್, ವಾಟ್ಸಾಪ್ ಮೂಲಕ ಉಪನ್ಯಾಸಗಳು ಮತ್ತು ತರಗತಿ ಟಿಪ್ಪಣಿಗಳನ್ನು ಅಪ್ಲೋಡ್ ಮಾಡುವ ಶಿಕ್ಷಕರು, ಡಿಜಿಟಲ್ ಕಲಿಕಾ ಸಂಪನ್ಮೂಲಗಳಾದ ಸ್ವಯಂ, ಎನ್ಪಿಟಿಇಎಲ್ ಲಿಂಕ್ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದಾರೆ. ಇದರಿಂದ ಆನ್ಲೈನ್ ಜರ್ನಲ್ಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕುತ್ತದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿಗಳು, ಐಐಐಟಿಗಳು, ಎನ್ಐಟಿಗಳು, ಐಐಎಸ್ಇಆರ್ ಗಳಂತಹ ಉನ್ನತ ಶಿಕ್ಷಣ ಸುಮಾರು 50-65 ಪ್ರತಿಶತದಷ್ಟು ವಿದ್ಯಾರ್ಥಿಗಳು ಕೆಲವು ರೀತಿಯ -ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಅಂತರ್ಜಾಲ ಸಂಪರ್ಕ ಮತ್ತು ವಿದ್ಯಾರ್ಥಿಗಳೊಂದಿಗೆ ಅಗತ್ಯವಿರುವ ಇತರ ಡಿಜಿಟಲ್ ಮೂಲಸೌಕರ್ಯಗಳ ಕೊರತೆಯಿಂದಾಗಿ ಅನೇಕ ಸಂದರ್ಭಗಳಲ್ಲಿ -ಕಲಿಕೆಗೆ ಅಡ್ಡಿಯಾಗಿದೆ ಎಂಬುದು ಸಾಬೀತಾಗಿದೆ. ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲು, ಶಿಕ್ಷಕರು ರೆಕಾರ್ಡ್ ಮಾಡಿದ ಮತ್ತು ನೇರ ಉಪನ್ಯಾಸಗಳ ಹೊರತಾಗಿ ಸ್ಲೈಡ್ಗಳು ಅಥವಾ ಕೈಬರಹದ ಟಿಪ್ಪಣಿಗಳನ್ನು ಸಹ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದಾರೆ. ಇದರಿಂದ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸ್ವಲ್ಪವಾದರೂ ಕಲಿಕಾ ಸಾಮಾಗ್ರಿಗಳು ದೊರೆಯುತ್ತಿವೆ. ರೆಕಾರ್ಡ್ ಮಾಡಿದ ಉಪನ್ಯಾಸಗಳಿಂದ ನೆಟ್ವರ್ಕ್ ಅಲ್ಪಾವಧಿಯ ಸಮಸ್ಯೆಯು ವಿದ್ಯಾರ್ಥಿಯನ್ನು ಯಾವುದೇ ರೀತಿಯಿಂದಲೂ ನಿರ್ಬಂಧಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಅಧ್ಯಾಪಕರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಅಂತರ್ಜಾಲ ಚಾಟ್ ಸೆಷನ್ಗಳನ್ನು ನಡೆಸುತ್ತಿದ್ದಾರೆ.

ಮಾನವ ಸಂಪನ್ಮೂಲ ಸಚಿವಾಲಯದ ವಿವಿಧ -ಲರ್ನಿಂಗ್ ವೇದಿಕೆಗಳು 2020 ಮಾರ್ಚ್ 23ರಿಂದ 1.4 ಕೋಟಿಗೂ ಅಧಿಕ ಪ್ರವೇಶವನ್ನು ಕಂಡಿವೆ. ರಾಷ್ಟ್ರೀಯ ಆನ್ಲೈನ್ ಶಿಕ್ಷಣ ವೇದಿಕೆ ಸ್ವಯಂನಲ್ಲಿ ನಿನ್ನೆಯವರೆಗೆ ಸುಮಾರು 2.5 ಲಕ್ಷ ಸದಸ್ಯರ ಪ್ರವೇಶ ದಾಖಲಾಗಿದೆ. ಇದು ಮಾರ್ಚ್ ಕೊನೇ ವಾರದಲ್ಲಿ 50,000ಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಇದು ಈಗಾಗಲೇ ಸ್ವಯಂ ವೇದಿಕೆಯಲ್ಲಿ ಲಭ್ಯವಿರುವ 574 ಕೋರ್ಸ್ಗಳಿಗೆ ಸುಮಾರು 26 ಲಕ್ಷ ಕಲಿಕಾರ್ಥಿಗಳು ಹೆಚ್ಚುವರಿಯಾಗಿ ದಾಖಲಾಗಿದ್ದಾರೆ. ಅದೇ ರೀತಿ ಪ್ರತಿದಿನ ಸುಮಾರು 59 ಸಾವಿರ ಜನರು ಸ್ವಯಂ ಪ್ರಭಾ ಡಿಟಿಎಚ್ ಟಿವಿ ವಾಹಿನಿಗಳ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆ. ಲಾಕ್ಡೌನ್ ಪ್ರಾರಂಭವಾದಾಗಿನಿಂದ 6.8 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.

ಇವು ಸಚಿವಾಲಯ ಮತ್ತು ಅದರ ಅಡಿಯಲ್ಲಿರುವ ಸಂಸ್ಥೆಗಳ ಇತರ ಡಿಜಿಟಲ್ ಉಪಕ್ರಮಗಳಂತೆಯೇ ಇವೆ. ರಾಷ್ಟ್ರೀಯ ಡಿಜಿಟಲ್ ಲೈಬ್ರರಿಗೆ ನಿನ್ನೆ ಕೇವಲ ಒಂದು ದಿನದ ಅವಧಿಯಲ್ಲಿ ಸುಮಾರು 1,60,804 ಬಾರಿ ಮತ್ತು ಲಾಕ್ಡೌನ್ಅವಧಿಯಲ್ಲಿ ಸುಮಾರು 14,51,886 ಬಾರಿ ಸದಸ್ಯರು ಪ್ರವೇಶಿಸಿದ್ದಾರೆ. ಮೊದಲು ಸುಮಾರು 22000 ಬಾರಿ ಸದಸ್ಯರು ಭೇಟಿ ನೀಡುತ್ತಿದ್ದರು. ಎನ್ಸಿಇಆರ್ಟಿಯ ಶಿಕ್ಷಣ ಪೋರ್ಟಲ್ಗಳಾದ ದೀಕ್ಷಾ, -ಪಾಠಶಾಲಾ, ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ರಾಷ್ಟ್ರೀಯ ಭಂಡಾರ, ಎನ್ಐಒಎಸ್ ಹಿರಿಯ ಮಾಧ್ಯಮಿಕ ಕೋರ್ಸ್ಗಳು, ಎನ್ಪಿಟಿಇಎಲ್, ನೀಟ್, ಎಐಸಿಟಿಇ ವಿದ್ಯಾರ್ಥಿ-ಕಾಲೇಜು ಸಹಾಯವಾಣಿ ಜಾಲತಾಣ, ಎಐಸಿಟಿಇ ತರಬೇತಿ ಮತ್ತು ಕಲಿಕೆ (ಎಟಿಎಎಲ್), ಇಗ್ನೋ ಕೋರ್ಸ್ಗಳು, ಯುಜಿಸಿ ಮೂಕ್ಸ್ ಕೋರ್ಸ್ಗಳು, ಶೋಧಗಂಗಾ, ಶೋಧ್ಶುದ್ದಿ, ವಿದ್ವಾನ್, -ಪಿಜಿ ಪಾಠಶಾಲ, ಮತ್ತು ಇತರ ಐಸಿಟಿ ಉಪಕ್ರಮಗಳಾದ ರೊಬೊಟಿಕ್ಸ್ ಶಿಕ್ಷಣ (-ಯಂತ್ರ), ಓಪನ್ ಸೋರ್ಸ್ ಸಾಫ್ಟ್ವೇರ್ ಫಾರ್ ಎಜುಕೇಶನ್ (ಎಫ್ಒಎಸ್ಎಸ್ಇಇ), ವರ್ಚುವಲ್ ಪ್ರಯೋಗಗಳು (ವರ್ಚುವಲ್ ಲ್ಯಾಬ್ಸ್) ಮತ್ತು ಲರ್ನಿಂಗ್ ಪ್ರೋಗ್ರಾಮಿಂಗ್ (ಸ್ಪೋಕನ್ ಟ್ಯುಟೋರಿಯಲ್) ಸಹ ಹೆಚ್ಚಿನ ಪ್ರಮಾಣದ ಪ್ರವೇಶವನ್ನು ಕಾಣುತ್ತಿವೆ.

ಕಂಪ್ಯೂಟರ್ ಮತ್ತು ಅಂತರ್ಜಾಲ ಸಂಪರ್ಕ ಹೊಂದಿರದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ, ಸಚಿವಾಲಯವು ದೂರದರ್ಶನದ ಮೂಲಕ ಕಲಿಕೆಯನ್ನು ಉತ್ತೇಜಿಸುತ್ತಿದೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದರು. 32 ಡಿಟಿಎಚ್ ಚಾನೆಲ್ಗಳನ್ನು ಒಳಗೊಂಡಿರುವ ಸ್ವಯಂಪ್ರಭಾವು ಜಿಎಸ್ಎಟಿ -15 ಉಪಗ್ರಹವನ್ನು ಬಳಸಿಕೊಂಡು 24X7 ಆಧಾರಿತ ಉತ್ತಮ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಎನ್ಪಿಟಿಇಎಲ್, ಐಐಟಿಗಳು, ಯುಜಿಸಿ, ಸಿಇಸಿ, ಇಗ್ನೋ, ಎನ್ಸಿಇಆರ್ಟಿ ಮತ್ತು ಎನ್ಐಒಎಸ್ ಗಳು ವಿಷಯಗಳನ್ನು ಒದಗಿಸುತ್ತಿವೆ. ಅದೇ ರೀತಿ, ಇಗ್ನೋದ ಜ್ಞಾನವಾಣಿ (105.6 ಎಫ್ಎಂ ರೇಡಿಯೋ) ಮತ್ತು ಜ್ಞಾನ ದರ್ಶನಗಳು 24 ಗಂಟೆಗಳ ಶೈಕ್ಷಣಿಕ ವಾಹಿನಿಯಾಗಿದ್ದು, ಇದು ಪೂರ್ವಶಾಲಾ, ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಮಾಧ್ಯಮಿಕ ವಿದ್ಯಾರ್ಥಿಗಳು, ಕಾಲೇಜು/ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವೃತ್ತಿ ಅವಕಾಶಗಳನ್ನು ಬಯಸುವ ಯುವಕರಿಗೆ, ಗೃಹಿಣಿಯರು ಮತ್ತು ವೃತ್ತಿಪರರಿಗೆ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ವಾಹಿನಿಗಳನ್ನು ತಮ್ಮ ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳುವಂತೆ ಸಚಿವರು ವಿದ್ಯಾರ್ಥಿಗಳನ್ನು ಕೋರಿದ್ದಾರೆ.

 

*****

 



(Release ID: 1612761) Visitor Counter : 1263