ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ದೇಶದಲ್ಲಿ ರಸಗೊಬ್ಬರಗಳ ಸಾಕಷ್ಟು ಲಭ್ಯತೆಯನ್ನು ಸರ್ಕಾರ ಖಾತರಿಪಡಿಸಿಕೊಂಡಿದೆ: ಸದಾನಂದ ಗೌಡ
Posted On:
09 APR 2020 5:14PM by PIB Bengaluru
ದೇಶದಲ್ಲಿ ರಸಗೊಬ್ಬರಗಳ ಸಾಕಷ್ಟು ಲಭ್ಯತೆಯನ್ನು ಸರ್ಕಾರ ಖಾತರಿಪಡಿಸಿಕೊಂಡಿದೆ: ಸದಾನಂದ ಗೌಡ
ಮುಂಬರುವ ಮುಂಗಾರು ಋತುವಿನಲ್ಲಿ ರಸಗೊಬ್ಬರಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಸಗೊಬ್ಬರ ಇಲಾಖೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಸದ್ಯಕ್ಕೆ, ಲಭ್ಯತೆಯು ಉತ್ತಮವಾಗಿದೆ ಎಂದು ಶ್ರೀ ಗೌಡ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಶ್ರೀ ಗೌಡ ಹೇಳಿದ್ದಾರೆ. ರಸಗೊಬ್ಬರಗಳ ಇಲಾಖೆಯು ರಸಗೊಬ್ಬರಗಳ ಉತ್ಪಾದನೆ, ಸಾಗಣೆ ಮತ್ತು ಲಭ್ಯತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಮತ್ತು ರೈಲ್ವೆ ಸಚಿವಾಲಯದೊಮದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ.
"ಕರ್ನಾಟಕಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳಿಗೆ ಕೊರತೆಯಿಲ್ಲ. ಈ ವಿಷಯದಲ್ಲಿ ನಾವು ಕರ್ನಾಟಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಬಳಿ ಈಗ 7.3 ಲಕ್ಷ ಟನ್ ಸಂಗ್ರಹವಿದ್ದು, ಮಾಸಿಕ ಅಗತ್ಯ 2.57 ಲಕ್ಷ ಟನ್ ಗಳು ಎಂದು ಕರ್ನಾಟಕವನ್ನು ಉಲ್ಲೇಖಿಸಿರುವ ಮತ್ತೊಂದು ಟ್ವೀಟ್ನಲ್ಲಿ ಸಚಿವರು ಹೇಳಿದ್ದಾರೆ,
ರಸಗೊಬ್ಬರಗಳ ಇಲಾಖೆಯ ಸಾರ್ವಜನಿಕ ಉದ್ಯಮವಾದ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ - ಎನ್ಎಫ್ಎಲ್, ನಂಗಲ್, ಬಟಿಂಡಾ, ಪಾಣಿಪಾತ್ ಮತ್ತು ವಿಜಯಪುರದ ತನ್ನ ಉತ್ಪಾದನಾ ಘಟಕಗಳು ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಟ್ವೀಟ್ನಲ್ಲಿ ತಿಳಿಸಿದೆ. ಯೂರಿಯಾವನ್ನು ಕೃಷಿ ಸಮುದಾಯದ ಅನುಕೂಲಕ್ಕಾಗಿ ನಿಯಮಿತವಾಗಿ ಮಾರುಕಟ್ಟೆಗೆ ರವಾನಿಸಲಾಗುತ್ತಿದೆ ಎಂದು ತಿಳಿಸಿದೆ.
***
(Release ID: 1612573)
Visitor Counter : 242
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu