ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
2020 ರ ಜೆಇಇ (ಮುಖ್ಯ) ಪರೀಕ್ಷೆಯ ಆನ್ಲೈನ್ ಅರ್ಜಿಯಲ್ಲಿ ಪರೀಕ್ಷಾ ಕೇಂದ್ರ ನಗರಗಳ ಆಯ್ಕೆಯಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸಲಹೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಸಮ್ಮತಿ
Posted On:
09 APR 2020 3:56PM by PIB Bengaluru
2020 ರ ಜೆಇಇ (ಮುಖ್ಯ) ಪರೀಕ್ಷೆಯ ಆನ್ಲೈನ್ ಅರ್ಜಿಯಲ್ಲಿ ಪರೀಕ್ಷಾ ಕೇಂದ್ರ ನಗರಗಳ ಆಯ್ಕೆಯಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸಲಹೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಸಮ್ಮತಿ
COVID-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮತ್ತು 2020 ರ ಜೆಇಇ (ಮುಖ್ಯ) ಪರೀಕ್ಷೆಯ ಆಕಾಂಕ್ಷಿಗಳು ಎದುರಿಸುತ್ತಿರುವ ಕಷ್ಟಗಳ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಅರ್ಜಿ ನಮೂನೆಗಳಲ್ಲಿ ಪರೀಕ್ಷಾ ಕೇಂದ್ರಗಳ ನಗರಗಳ ಆಯ್ಕೆಯನ್ನು ತಿದ್ದುಪಡಿ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸಲಹೆ ನೀಡಿದ್ದರು. ಅದರಂತೆ, 2020 ರ ಜೆಇಇ (ಮುಖ್ಯ) ಪರೀಕ್ಷೆಯ ಆನ್ಲೈನ್ ಅರ್ಜಿ ನಮೂನೆಯಲ್ಲಿ ತಿದ್ದುಪಡಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 01.04.2020 ರ ಸಾರ್ವಜನಿಕ ಪ್ರಕಟಣೆಯ ಮುಂದುವರಿಕೆಯಾಗಿ, ಇಂದು ಅರ್ಜಿ ನಮೂನೆಗಳಲ್ಲಿ ಪರೀಕ್ಷಾ ಕೇಂದ್ರಗಳ ನಗರಗಳ ಆಯ್ಕೆ ತಿದ್ದುಪಡಿಗೆ ಅವಕಾಶವನ್ನು ವಿಸ್ತರಿಸಿದೆ.
ಅಪೇಕ್ಷಿತ ನಗರದಲ್ಲಿರುವ ಸಾಮರ್ಥ್ಯದ ಲಭ್ಯತೆಗೆ ಒಳಪಟ್ಟು ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಈಗ ಆಯ್ಕೆ ಮಾಡಿಕೊಳ್ಳುವ ಕ್ರಮಗಳಿಗೆ ಅನುಗುಣವಾಗಿ ಪರೀಕ್ಷಾ ನಗರವನ್ನು ಅಭ್ಯರ್ಥಿಗಳಿಗೆ ನೀಡಲು ಎನ್ಟಿಎ ಪ್ರಯತ್ನಿಸುತ್ತದೆ. ಆದಾಗ್ಯೂ, ಆಡಳಿತಾತ್ಮಕ ಕಾರಣಗಳಿಂದಾಗಿ, ಬೇರೆ ನಗರವನ್ನು ಮಂಜೂರು ಮಾಡಬಹುದು ಮತ್ತು ಪರೀಕ್ಷಾ ಕೇಂದ್ರದ ಹಂಚಿಕೆಗೆ ಸಂಬಂಧಿಸಿದಂತೆ ಎನ್ಟಿಎ ನಿರ್ಧಾರವು ಅಂತಿಮವಾಗಿರುತ್ತದೆ.
ಆನ್ಲೈನ್ ಅರ್ಜಿ ನಮೂನೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ನಗರಗಳ ಆಯ್ಕೆ ಸೇರಿದಂತೆ ವಿವರಗಳಲ್ಲಿ ತಿದ್ದುಪಡಿ ಮಾಡುವ ಸೌಲಭ್ಯವು ಈಗ https://jeemain.nta.nic ವೆಬ್ಸೈಟ್ನಲ್ಲಿದೆ ಮತ್ತು ಇದು 14/04/2020 ರವರೆಗೆ ಲಭ್ಯವಿರುತ್ತದೆ ಎಂದು 2020 ರ ಜೆಇಇ (ಮುಖ್ಯ) ಪರೀಕ್ಷೆಯ ಎಲ್ಲ ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ. ಅಭ್ಯರ್ಥಿಗಳು ವೆಬ್ಸೈಟ್ಗೆ ಭೇಟಿ ನೀಡಿ ಅವರ ವಿವರಗಳನ್ನು ಪರಿಶೀಲಿಸಲು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡಲು ಸೂಚಿಸಲಾಗಿದೆ.
ಆನ್ಲೈನ್ ಅರ್ಜಿ ನಮೂನೆಗಳಲ್ಲಿನ ವಿವರಗಳಲ್ಲಿನ ತಿದ್ದುಪಡಿಗಳನ್ನು 14/04/2020ರ ಸಂಜೆ 05.00 ರವರೆಗೆ ಸ್ವೀಕರಿಸಲಾಗುವುದು ಮತ್ತು ಶುಲ್ಕವನ್ನು 14/04/2020ರ ರಾತ್ರಿ 11.50 ರೊಳಗೆ ಸಲ್ಲಿಸಬೇಕು.
ಅಗತ್ಯವಾದ (ಹೆಚ್ಚುವರಿ) ಶುಲ್ಕ ಅನ್ವಯಿಸಿದರೆ, ಕ್ರೆಡಿಟ್/ ಡೆಬಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್/ ಯುಪಿಐ ಮತ್ತು ಪೇಟಿಎಂ ಮೂಲಕ ಪಾವತಿಸಬಹುದು.
ಒಂದು ವೇಳೆ ಅರ್ಜಿಯಲ್ಲಿ ಮಾಡಿದ ಬದಲಾವಣೆಗಳನ್ನು ಅವಲಂಬಿಸಿ ಹೆಚ್ಚುವರಿ ಶುಲ್ಕ ಪಾವತಿಯ ಅಗತ್ಯವಿದ್ದರೆ, ಅದರ ಪಾವತಿಯ ನಂತರ ಅಂತಿಮ ಅಪ್ ಡೇಟ್ ಕಾಣಿಸುತ್ತದೆ.
***
(Release ID: 1612565)
Visitor Counter : 277
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam