ರೈಲ್ವೇ ಸಚಿವಾಲಯ

ಕೋವಿಡ್ -19  ರಿಂದ ಭಾರತವನ್ನು ರಕ್ಷಿಸುವಲ್ಲಿ ರೈಲ್ವೇ ಮುಂಚೂಣಿಯಲ್ಲಿ

Posted On: 09 APR 2020 1:33PM by PIB Bengaluru

ಕೋವಿಡ್ -19  ರಿಂದ ಭಾರತವನ್ನು ರಕ್ಷಿಸುವಲ್ಲಿ ರೈಲ್ವೇ ಮುಂಚೂಣಿಯಲ್ಲಿ

ಜಾಗತಿಕ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ, ಭಾರತೀಯ ರೈಲ್ವೇಯು 6 ಲಕ್ಷದಷ್ಟು  ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು ಮತ್ತು 40000 ಲೀಟರಿಗೂ ಅಧಿಕ ಹ್ಯಾಂಡ್ ಸ್ಯಾನಿಟೈಸರುಗಳನ್ನು ತಯಾರಿಸಿದೆ

ಎಲ್ಲಾ ರೈಲ್ವೇ ವಲಯಗಳು, ಉತ್ಪಾದನಾ ಘಟಕಗಳು, ಮತ್ತು ಪಿ.ಎಸ್.ಯು.ಗಳು ಒಳಗೊಂಡಿವೆ; ಡಬ್ಲ್ಯು.ಆರ್., ಎನ್.ಸಿ.ಆರ್., ಎನ್. ಡಬ್ಲ್ಯು.ಆರ್., ಸಿ.ಆರ್., .ಸಿ.ಆರ್., ಮತ್ತು ಡಬ್ಲ್ಯು. ಸಿ.ಆರ್. ನಂತಹ ಕೆಲವು ವಲಯಗಳು ಇದರಲ್ಲಿ ಮುಂಚೂಣಿ ಸ್ಥಾನವನ್ನು ವಹಿಸಿವೆ

ಮುಖಗವಸುಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳು ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿಗಳಿಗೂ ಲಭ್ಯವಾಗುವಂತೆ ಮಾಡಲಾಗುತ್ತಿದೆ; ಇವುಗಳನ್ನು ಗುತ್ತಿಗೆ ಕಾರ್ಮಿಕರಿಗೂ ಒದಗಿಸಲಾಗುತ್ತಿದೆ

 

ಕೋವಿಡ್ -19 ಹರಡುವಿಕೆ ನಿರ್ಬಂಧಿಸಲು ಕೈಗೊಳ್ಳಲಾಗಿರುವ ಕ್ರಮಗಳ ಮುಂದುವರಿಕೆ ಭಾಗವಾಗಿ ಭಾರತೀಯ ರೈಲ್ವೇಯು ಭಾರತ ಸರಕಾರದ ಆರೋಗ್ಯ ರಕ್ಷಣಾ ಉಪಕ್ರಮಗಳನ್ನು ಬೆಂಬಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು  ಉತ್ಪಾದಿಸುತ್ತಿದೆ ಮಾತ್ರವಲ್ಲ ಅದರ ಎಲ್ಲಾ ವಲಯ ರೈಲ್ವೇ ಉತ್ಪಾದನಾ ಘಟಕ ಮತ್ತು ಪಿ.ಎಸ್.ಯು .ಗಳಲ್ಲಿ ಸ್ಯಾನಿಟೈಸರ್ ಗಳನ್ನು ತಯಾರಿಸುತ್ತಿದೆ.

ಭಾರತೀಯ ರೈಲ್ವೇಯು ಒಟ್ಟು 582317 ಸಂಖ್ಯೆಯ ಮರುಬಳಕೆಯ ಮುಖಗವಸುಗಳನ್ನು ಮತ್ತು 41882 ಲೀಟರಿನಷ್ಟು ಹ್ಯಾಂಡ್ ಸ್ಯಾನಿಟೈಸರ್ ನ್ನು 2020 ರ ಏಪ್ರಿಲ್ 7 ರ ವರೆಗೆ ತನ್ನ ವಲಯ ರೈಲ್ವೇಗಳಲ್ಲಿ , ಉತ್ಪಾದನಾ ಘಟಕಗಳಲ್ಲಿ  ಮತ್ತು ಪಿ.ಎಸ್.ಯು.ಗಳಲ್ಲಿ ತಯಾರಿಸಿದೆ. ಪಶ್ಚಿಮ ರೈಲ್ವೇ (ಡಬ್ಲ್ಯು.ಆರ್.) 81008 ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು ಮತ್ತು 2569 ಲೀಟರುಗಳಷ್ಟು ಹ್ಯಾಂಡ್ ಸ್ಯಾನಿಟೈಸರುಗಳನ್ನು , ಉತ್ತರ ಮಧ್ಯ ರೈಲ್ವೇಯು (ಎನ್.ಸಿ.ಆರ್.) 77995 ಸಂಖ್ಯೆಯಲ್ಲಿ ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು ಮತ್ತು 3622 ಲೀಟರು ಹ್ಯಾಂಡ್ ಸ್ಯಾನಿಟೈಸರನ್ನು , ವಾಯುವ್ಯ  (ಎನ್.ಡಬ್ಲ್ಯು. ಆರ್.) 51961ಸಂಖ್ಯೆಯಲ್ಲಿ ಮುಖಗವಸುಗಳನ್ನು ಮತ್ತು 3027 ಲೀಟರು ಹ್ಯಾಂಡ್ ಸ್ಯಾನಿಟೈಸರನ್ನು , ಕೇಂದ್ರೀಯ ರೈಲ್ವೇಯು (ಸಿ.ಆರ್.) 38904 ಸಂಖ್ಯೆಯಲ್ಲಿ ಮರುಬಳಕೆ ಮಾಡುವ ಮುಖಗವಸುಗಳನ್ನು ಮತ್ತು 3015 ಲೀಟರು ಹ್ಯಾಂಡ್ ಸ್ಯಾನಿಟೈಸರನ್ನು, ಪೂರ್ವ ಮಧ್ಯೆ ರೈಲ್ವೇಯು  (.ಸಿ.ಆರ್.) 33473 ಸಂಖ್ಯೆಯಲ್ಲಿ ಮರುಬಳಕೆ ಮಾಡುವ ಮುಖಗವಸುಗಳನ್ನು ಮತ್ತು 4100 ಲೀಟರು ಹ್ಯಾಂಡ್ ಸ್ಯಾನಿಟೈಸರನ್ನು, ಪಶ್ಚಿಮ ಕೇಂದ್ರೀಯ ರೈಲ್ವೇ (ಡಬ್ಲ್ಯು.ಸಿ.ಆರ್.) 36342 ಸಂಖ್ಯೆಯಲ್ಲಿ ಮರುಬಳಕೆ ಮಾಡುವ ಮುಖಗವಸುಗಳನ್ನು ಮತ್ತು 3756 ಲೀಟರು ಹ್ಯಾಂಡ್ ಸ್ಯಾನಿಟೈಸರನ್ನು ಉತ್ಪಾದಿಸಿ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ.

ಸರಕು ಸಾಗಾಣಿಕೆ ಕಾರ್ಯಾಚರಣೆಗಳು ೨24*7 ಅವಧಿಯಲ್ಲೂ ನಡೆಯುತ್ತಿವೆ. ಜೀವನಾವಶ್ಯಕ ವಸ್ತುಗಳನ್ನು  ಪೂರೈಸಲು ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿಗಳು ಹಗಲು ರಾತ್ರಿ ಕಾರ್ಯನಿರತರಾಗಿದ್ದಾರೆ. ಈ ಸಿಬ್ಬಂದಿಗಳ ಸುರಕ್ಷೆಯನ್ನು ಖಾತ್ರಿಪಡಿಸಲು ಮತ್ತು ನೈತಿಕ ಬಲವನ್ನು ಹೆಚ್ಚಿಸಲು , ಈ ಕೆಳಗಿನ ಕ್ರಮಗಳನ್ನು ಕೆಲಸದ ಸ್ಥಳಗಳಲ್ಲಿ ಕೈಗೊಳ್ಳಲಾಗಿದೆ.

  1. ತೆಗೆಯಬಹುದಾದ ಮುಖಗವಸುಗಳು, ಮತ್ತು ಹ್ಯಾಂಡ್ ಸ್ಯಾನಿಟೈಸರುಗಳನ್ನು ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿಗಳಿಗೂ ಲಭ್ಯವಾಗುವಂತೆ ಮಾಡಲಾಗಿದೆ. ಇವುಗಳನ್ನು ಗುತ್ತಿಗೆ ಕಾರ್ಮಿಕರಿಗೂ ಒದಗಿಸಲಾಗಿದೆ. ರೈಲ್ವೇ ಕಾರ್ಯಾಗಾರಗಳು , ಬೋಗಿಗಳ ಡಿಪೋ ಗಳು ಮತ್ತು ಆಸ್ಪತ್ರೆಗಳನ್ನು ಸಂದರ್ಭಕ್ಕೆ ತಕ್ಕಂತೆ ರೂಪಿಸಲಾಗಿದ್ದು, ಅಲ್ಲಿ ಸ್ಥಳೀಯವಾಗಿ ಸ್ಯಾನಿಟೈಸರ್ ಗಳು ಮತ್ತು ಮುಖಗವಸುಗಳನ್ನು ಅವಶ್ಯ ಪೂರೈಕೆಗೆ ಅನುಗುಣವಾಗಿ ಒದಗಿಸಲಾಗುತ್ತಿದೆ.
  2. ಉತ್ತಮ ಸ್ವಚ್ಚತೆಯನ್ನು ಕಾಪಾಡಲು ಮರುಬಳಕೆ ಮಾಡಬಹುದಾದ ಮುಖಗವಸುಗಳನ್ನು ಬಳಸುವಂತೆ ಎಲ್ಲಾ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಿಬ್ಬಂದಿಗೆ ಮರುಬಳಕೆ ಮಾಡಬಹುದಾದ ಎರಡು ಸೆಟ್ ಮುಖಗವಸುಗಳು ಲಭ್ಯವಾಗುವಂತೆ ಮಾಡಲಾಗಿದೆ. ಪ್ರತೀದಿನ ಸಾಬೂನು ಬಳಸಿ ಮುಖಗವಸುಗಳನ್ನು ತೊಳೆಯುವಂತೆ ಎಲ್ಲಾ ಸಿಬ್ಬಂದಿಗಳಿಗೂ ಸಲಹಾ ಸಮಾಲೋಚನೆ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ನಿಟ್ಟಿನಲ್ಲಿ ಹೊರಡಿಸಿರುವ ವಿವರವಾದ ಸಲಹಾ ಮಾರ್ಗದರ್ಶಿಯನ್ನು ಎಲ್ಲರಿಗೂ ವಿತರಿಸಲಾಗಿದೆ.  
  3. ಎಲ್ಲಾ ಕೆಲಸದ ಸ್ಥಳಗಳಲ್ಲಿ ಸಾಬೂನು, ನೀರು, ಮತ್ತು ತೊಳೆಯುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸ್ಥಳೀಯ ಅನ್ವೇಷಣೆಗಳೊಂದಿಗೆ ಕೈತೊಳೆಯುವ ಸವಲತ್ತುಗಳನ್ನು ಒದಗಿಸಲಾಗಿದೆ.
  4. ಸಾಮಾಜಿಕ ಅಂತರ ಪಾಲನೆಯನ್ನು ಖಾತ್ರಿಪಡಿಸಲಾಗುತ್ತಿದೆ. ಟ್ರ್ಯಾಕ್ ಮನ್ ಮತ್ತು ಲೊಕೊಮೋಟಿವ್ ಪೈಲೆಟ್ ಸಹಿತ ಎಲ್ಲಾ ಸಿಬ್ಬಂದಿಗಳಲ್ಲಿ ಈ ನಿಟ್ಟಿನಲ್ಲಿ ನಿಯಮಿತವಾಗಿ ಜಾಗೃತಿಯನ್ನು ಪ್ರಸಾರ ಮಾಡಲಾಗುತ್ತಿದೆ.

***

 


(Release ID: 1612513) Visitor Counter : 237