ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನಿತ ಸಂಸ್ಥೆಯಿಂದ COVID-19 ರೋಗಿಗಳ ಚಿಕಿತ್ಸೆಗಾಗಿ ಗಾಳಿಯಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವ ಸಾಧನ

Posted On: 09 APR 2020 10:43AM by PIB Bengaluru

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನಿತ ಸಂಸ್ಥೆಯಿಂದ COVID-19 ರೋಗಿಗಳ ಚಿಕಿತ್ಸೆಗಾಗಿ ಗಾಳಿಯಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವ ಸಾಧನ

" ಆವಿಷ್ಕಾರವು ಅತ್ಯುತ್ತಮ ಮೌಲ್ಯದಭರವಸೆ ನೀಡುತ್ತದೆ":  ಡಿ ಎಸ್ ಟಿ ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ

 

ಸಿಎಸ್ಐಆರ್-ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯಿಂದ ಪರವಾನಗಿ ಪಡೆದ ತಂತ್ರಜ್ಞಾನವನ್ನು ಆಧರಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಅನುದಾನ ಪಡೆದ ಸ್ಪಿನ್-ಆಫ್ ಕಂಪನಿಯಾದ ಜೆನ್ರಿಕ್ ಮೆಂಬ್ರೇನ್ಸ್, COVID-19 ರೋಗಿಗಳ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿದ ಮೆಂಬರೇನ್ ಆಕ್ಸಿಜನೇಟರ್ ಉಪಕರಣಗಳ (ಎಂಒಇ) ಉತ್ಪಾದನೆಯನ್ನು ಹೆಚ್ಚಿಸಲಿದೆ. ನಾವೀನ್ಯತೆಯ, ದೇಶೀಯ, ಟೊಳ್ಳಾದ-ಫೈಬರ್ ಮೆಂಬರೇನ್ ತಂತ್ರಜ್ಞಾನದ ಆಧಾರದಲ್ಲಿ, MOE ಗಾಳಿಯಲ್ಲಿ ಆಮ್ಲಜನಕವನ್ನು (4-7 ಬಾರ್, ತೈಲ ಮುಕ್ತ ಸಂಕೋಚಕವನ್ನು ಬಳಸಿ) ಶೇ.35 ರವರೆಗೆ ಉತ್ಕೃಷ್ಟಗೊಳಿಸುತ್ತದೆ.

ಉಪಕರಣವು ಮೆಂಬರೇನ್ ಕಾರ್ಟ್ರಿಡ್ಜ್, ತೈಲ ಮುಕ್ತ ಸಂಕೋಚಕ, ಔಟ್ಪುಟ್ ಫ್ಲೋಮೀಟರ್, ಆರ್ದ್ರಕ ಬಾಟಲ್, ಮೂಗಿನ-ತೂರುನಳಿಗೆ ಮತ್ತು ಕೊಳವೆಗಳು ಮತ್ತು ಫಿಟ್ಟಿಂಗ್ಗಳನ್ನು ಒಳಗೊಂಡಿದೆ. ಸಂಕೋಚಕದಿಂದ ಸಂಕುಚಿತ, ಫಿಲ್ಟರ್ ಮಾಡಿದ ಗಾಳಿಯನ್ನು ಮೆಂಬರೇನ್ ಕಾರ್ಟ್ರಿಡ್ಜ್ಗೆ ನೀಡಲಾಗುತ್ತದೆ, ಇದು ಆಮ್ಲಜನಕವನ್ನು ಸಾರಜನಕದಿಂದ ಬೇರ್ಪಡಿಸುತ್ತದೆ. ಆಮ್ಲಜನಕ-ಪುಷ್ಟೀಕರಿಸಿದ ಗಾಳಿಯನ್ನು ಸುತ್ತುವರಿದ ಒತ್ತಡದಲ್ಲಿ ಉತ್ಪನ್ನವಾಗಿ ನೀಡುತ್ತದೆ. ಆಮ್ಲಜನಕ ಮತ್ತು ಸಾರಜನಕವನ್ನು ಪ್ರತ್ಯೇಕಿಸುವ ಸಾಮರ್ಥ್ಯವಿರುವ ಮೆಂಬರೇನ್ ಕಾರ್ಟ್ರಿಡ್ಜ್ ವೈರಸ್, ಬ್ಯಾಕ್ಟೀರಿಯಾಗಳ ಪ್ರವೇಶವನ್ನು ನಿರ್ಬಂಧಿಸುತ್ತದೆ. ಹೀಗೆ ಉತ್ಪತ್ತಿಯಾದ ಗಾಳಿಯು ವೈದ್ಯಕೀಯ ದರ್ಜೆಯದ್ದಾಗಿದೆ.

ಉಪಕರಣವು ಸುರಕ್ಷಿತವಾಗಿದ್ದು, ಇದರ ಬಳಕೆಗೆ ತರಬೇತಿ ಪಡೆದ ಮಾನವಶಕ್ತಿಯ ಅಗತ್ಯವಿರುವುದಿಲ್ಲ. ನಿರ್ವಹಣೆ ಸುಲಭವಾಗಿದ್ದು, ಪೋರ್ಟಬಲ್ ಆಗಿದೆ ಮತ್ತು ಪ್ಲಗ್-ಅಂಡ್-ಪ್ಲೇ ಸೌಲಭ್ಯವು ಆನ್-ಸೈಟ್, ತ್ವರಿತವಾಗಿ ಆಮ್ಲಜನಕ-ಪುಷ್ಟೀಕರಿಸಿದ ಗಾಳಿಯನ್ನು ಒದಗಿಸುತ್ತದೆ.

Description: oxygenator-1

"ವೈದ್ಯಕೀಯ ದರ್ಜೆಯ ಆಮ್ಲಜನಕ-ಪುಷ್ಟೀಕರಿಸಿದ ಗಾಳಿಯು ಜಾಗತಿಕ ಅನುಭವದ ಪ್ರಕಾರ ಸುಮಾರು 14% ಸೋಂಕುಗಳಿಗೆ ಕೆಲವು ರೀತಿಯ ಉಸಿರಾಟದ ಬೆಂಬಲ ಬೇಕಾಗುವ, ಆದರೆ ಕೇವಲ 4% ಜನರಿಗೆ ಮಾತ್ರ ಐಸಿಯು ಆಧಾರಿತ ವೆಂಟಿಲೇಟರ್ಗಳು ಅವಶ್ಯಕತೆಯಿರುವ COVID-19 ಸೇರಿದಂತೆ ವಿವಿಧ ರೋಗಿಗಳ ಆರೈಕೆಗಳಲ್ಲಿ ಅಗತ್ಯವಿದೆ. ಉಳಿದಂತೆ ದೀರ್ಘಕಾಲದ ಉಸಿರಾಟದ ಸಮಸ್ಯೆಗಳನ್ನು ಒಳಗೊಂಡ ಅನೇಕ ಪರಿಸ್ಥಿತಿಗಳಲ್ಲೂ ಆವಿಷ್ಕಾರವು ಅತ್ಯುತ್ತಮ ಮೌಲ್ಯದ ಭರವಸೆ ನೀಡುತ್ತದೆ "ಎಂದು ಡಿಎಸ್ಟಿ ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ ಹೇಳಿದರು.

COVID-19 ತೀವ್ರ ಲಕ್ಷಣಗಳಲ್ಲಿ ಒಂದಾದ ಉಸಿರಾಟದ ತೊಂದರೆಗೆ ಚಿಕಿತ್ಸೆ ನೀಡಲು ಉಸಿರಾಟದ ಮಧ್ಯಸ್ಥಿಕೆಗಳ ತುರ್ತು ಅವಶ್ಯಕತೆಯೊಂದಿಗೆ, ತೀವ್ರ ನಿಗಾ ಘಟಕಗಳಿಂದ (ಐಸಿಯು) ಬಿಡುಗಡೆಯಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಉಪಕರಣಗಳನ್ನು ಬಳಸಬಹುದು. ದೀರ್ಘಕಾಲದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ದೀರ್ಘಕಾಲದ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ), ಆಸ್ತಮಾ, ಇಂಟರ್ಸ್ಟಿಷಿಯಲ್ ಶ್ವಾಸಕೋಶ ಕಾಯಿಲೆ (ಐಎಲ್ಡಿ), -ಅವಧಿ ಪೂರ್ವ ಶಿಶುಗಳು, ಹಾವು ಕಡಿತ ಮತ್ತು ಮುಂತಾದವುಗಳಿಗೆ ಸಾಧನವು ಸಹಕಾರಿಯಾಗಿದೆ.

ಮೂಲಮಾದರಿಯ ಪರೀಕ್ಷೆ ಮತ್ತು ಅನುಮೋದನೆಯನ್ನು ಸಂಬಂಧಿತ ಪರಿಸರದಲ್ಲಿ ನಡೆಸಲಾಗಿದೆ. ಡಿಎಸ್ಟಿ- ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತೆ ಅಭಿವೃದ್ಧಿ ಮಂಡಳಿ (ಎನ್ಎಸ್ಟಿಇಡಿಬಿ) ಯಿಂದ ಬೆಂಬಲಿತವಾಗಿರುವ ಸ್ಟಾರ್ಟ್ ಅಪ್ ಗೆ ಸೀಡ್ ಸಪೋರ್ಟ್ ಸಿಸ್ಟಂ ನೀಡಿರುವ ಪುಣೆಯ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರವು. (ವೆಂಚರ್ ಸೆಂಟರ್) ಮೂರು ತಿಂಗಳೊಳಗೆ MOE ಸಾಧನವನ್ನು ಸಿದ್ಧಪಡಿಸುವಂತಹ ಸಾಮೂಹಿಕ ಉತ್ಪಾದನಾ ವೈದ್ಯಕೀಯ ಸಾಧನ ಕಂಪನಿಗಳೊಂದಿಗೆ ಕೈಜೋಡಿಸಲು ಯೋಜಿಸುತ್ತಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಡಾ. ರಾಜೇಂದ್ರ ಕೆ ಖರೂಲ್, rk.kharul@genrichmembranes.com, ಮೊಬೈಲ್: 8308822216)

***


(Release ID: 1612477) Visitor Counter : 163