ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ದೊಡ್ಡದಾಗಿ ಯೋಚಿಸಿ, ಕೋವಿಡೋತ್ತರ ಕಾಲದಲ್ಲಿ ಸಾಮರ್ಥ್ಯ ತೋರಲು ಸಿದ್ದರಾಗಿರಲು ರಫ್ತುದಾರರಿಗೆ ಶ್ರೀ ಪಿಯೂಷ್ ಗೋಯಲ್ ಕರೆ

Posted On: 08 APR 2020 7:46PM by PIB Bengaluru

ದೊಡ್ಡದಾಗಿ ಯೋಚಿಸಿ, ಕೋವಿಡೋತ್ತರ ಕಾಲದಲ್ಲಿ ಸಾಮರ್ಥ್ಯ ತೋರಲು ಸಿದ್ದರಾಗಿರಲು ರಫ್ತುದಾರರಿಗೆ ಶ್ರೀ ಪಿಯೂಷ್ ಗೋಯಲ್ ಕರೆ

ನಾವು ಜಾಗತಿಕವಾಗಿ ಜವಾಬ್ದಾರಿಯತ ನಾಗರಿಕರು: ಪಿಯೂಷ್ ಗೋಯಲ್

 

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ದೇಶದ ವಿವಿಧ ರಫ್ತು ಉತ್ತೇಜನ ಮಂಡಳಿಗಳ ಜೊತೆ ಕೋವಿಡ್ -19 ರ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ಎದುರಾಗಿರುವ ವಾಸ್ತವಿಕ ಸ್ಥಿತಿ ಮತ್ತು ಸಮಸ್ಯೆಗಳ ಕುರಿತಂತೆ ಸಂವಾದ ನಡೆಸಿದರು. ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಇದು ಮೂರನೇ ಇಂತಹ ಸಭೆಯಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಹಾಗು ರೈಲ್ವೇ ಸಚಿವ ಶ್ರೀ ಪಿಯೂಷ್ ಗೋಯಲ್ , ಸಹಾಯಕ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ವಾಣಿಜ್ಯ ಕಾರ್ಯದರ್ಶಿ ಡಾ. ಅನೂಪ್ ವಾಧ್ವಾನ್, ಡಿ.ಜಿ.ಎಫ್.ಟಿ ಮತ್ತು ವಾಣಿಜ್ಯ ಇಲಾಖೆಯ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ರಫ್ತುದಾರರಿಗೆ ಬೃಹತ್ತಾಗಿ ಯೋಚಿಸುವಂತೆ ಕರೆ ನೀಡಿದ ಶ್ರೀ ಗೋಯೆಲ್ ಅವರು ಕೋವಿಡೋತ್ತರ ಕಾಲದಲ್ಲಿ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳಲು ಸಿದ್ದರಾಗಿರುವಂತೆಯೂ ಹೇಳಿದರು. ನಮ್ಮ ಗುಣಮಟ್ಟವನ್ನು ಸುಧಾರಿಸಿದರೆ , ಸಾಮರ್ಥ್ಯ ನಿರ್ಮಾಣ ಮಾಡಿದರೆ, ಆರ್ಥಿಕವಾಗಿ ಮಾನದಂಡಗಳನ್ನು ಅಳವಡಿಸಿಕೊಂಡರೆ , ದರದಲ್ಲಿ ಸ್ಪರ್ಧಾತ್ಮಕತೆಯನ್ನು ಸುಧಾರಿಸಿದರೆ , ಆಗ ನಾವು ಬೆಳೆಯಬಹುದು ಮತ್ತು ಕೋವಿಡೋತ್ತರ ವಿಶ್ವದಲ್ಲಿ ಅವಕಾಶಗಳನ್ನು ಬಳಸಿಕೊಳ್ಳಬಹುದು ಎಂದವರು ಹೇಳಿದರು. “ನನ್ನ ವೈಯಕ್ತಿಕ ನಂಬಿಕೆಯ ಪ್ರಕಾರ ದೇಶವು ದೊಡ್ಡ ಪ್ರಮಾಣದಲ್ಲಿ ತೊಡಗಿಕೊಂಡು , ಮಾರುಕಟ್ಟೆಯಲ್ಲಿ ಪ್ರಾಬಲ್ಯಕ್ಕೆ ಹವಣಿಸಿದರೆ ಆಗ ನೀವು ತನ್ನಿಂದ ತಾನಾಗಿಯೇ ನೀವು ಗುಣಮಟ್ಟದತ್ತ ಆದ್ಯತೆ ನೀಡುತ್ತೀರಿ, ಉತ್ಪಾದನಾ ವೆಚ್ಚ ತಗ್ಗುತ್ತದೆ, ಉತ್ಪಾದಕತೆ ಹೆಚ್ಚುತ್ತದೆ, ದಕ್ಷತೆ ಹೆಚ್ಚುತ್ತದೆ “ ಎಂದವರು ನುಡಿದರು. ಎಲ್.ಇ.ಡಿ. ಬಲ್ಬುಗಳ ಬಳಕೆ , ದೇಶಾದ್ಯಂತ ಶೌಚಾಲಯಗಳ ಒದಗಿಸುವಿಕೆ , ಎಲ್ಲರಿಗೂ ವಿದ್ಯುತ್ ಒದಗಿಸುವಿಕೆ ಮತ್ತು ಸಾರ್ವತ್ರಿಕ ಆರೋಗ್ಯ ಯೋಜನೆಗಳ ಉದಾಹರಣೆಗಳನ್ನು ನೀಡಿದ ಶ್ರೀ ಗೋಯಲ್ ಸರಕಾರವು ದೊಡ್ಡದಾಗಿ ಯೋಚಿಸುತ್ತಿದೆ ಮತ್ತು ಆ ಚಿಂತನೆಗಳನ್ನು ಅನುಷ್ಟಾನಿಸುತ್ತದೆ ಎಂದರು.

ಇಂತಹ ಸವಾಲಿನ ಸಮಯದಲ್ಲಿ , ನಾವು ರಫ್ತುಗಳನ್ನು ತೆರೆದಿಡುವುದಕ್ಕೆ ನಮ್ಮ ಆದ್ಯತೆಯನ್ನು ನೀಡಬೇಕು , ಆಗ ನಾವು ನಮ್ಮ ರಫ್ತು ಮಾರುಕಟ್ಟೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವುದಿಲ್ಲ ಎಂದೂ ಶ್ರೀ ಗೋಯಲ್ ಹೇಳಿದರು. ಯಾವುದಾದರೂ ಕಾರಣದಿಂದ ಸಿಕ್ಕಿ ಹಾಕಿಕೊಂಡಿದ್ದರೆ , ಅವುಗಳನ್ನು ಆದಷ್ಟು ಬೇಗ ಕಾರ್ಯ ರೂಪಕ್ಕೆ ತರಲು ತುರ್ತು ಮತ್ತು ಪ್ರಮುಖ ರಫ್ತು ಆದೇಶಗಳನ್ನು ಖಾತ್ರಿ ಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ ಅವರು ರಫ್ತಿಗೆ ಪುನಶ್ಚೇತನ ನೀಡಲು ಸಚಿವಾಲಯವು ಬಿರುಸಿನಿಂದ ಕಾರ್ಯಾಚರಿಸುತ್ತಿದೆ ಎಂದರು. ರಫ್ತು ಅವಕಾಶಗಳ ವಿಸ್ತರಣೆಗೆ ಎದುರು ನೋಡಲಾಗುತ್ತಿದೆ. ಕೆಲವು ಭೌಗೋಳಿಕ ವ್ಯಾಪ್ತಿಗಳು ಕಳವಳಕಾರಿಯಾಗಿವೆ ಎಂದವರು ಅಭಿಪ್ರಾಯಪಟ್ಟರು. “ ರಫ್ತು ಮತ್ತು ಉತ್ಪಾದನಾ ವ್ಯವಹಾರಕ್ಕೆ ಸಂಬಂಧಿಸಿ ಅವರ ಯೋಚನಾ ಕ್ರಮದಲ್ಲಿ ಬದಲಾವಣೆ ತರಲು ಇದಕ್ಕಿಂತ ಉತ್ತಮ ಕಾಲ ಯಾವುದೂ ಇಲ್ಲ. ನೀವು ನಿಮ್ಮ ಸಾಮರ್ಥ್ಯದ ಕ್ಷೇತ್ರದ ಬಗ್ಗೆ ಆದ್ಯತೆಯನ್ನು ನೀಡಬಹುದು. ನಾವು ಬಲಿಷ್ಟರಾಗಿರುವ ಕ್ಷೇತ್ರದತ್ತ ಮಾತ್ರ ನಾವು ಗಮನಿಸಬೇಕು, ಆದರೆ ನಮ್ಮ ಜಾಗತಿಕ ಪಾಲುದಾರಿಕೆ ಬಹಳ ಸಣ್ಣದು,ನಾವು ಅಂತಹ ಕ್ಷೇತ್ರಗಳಲ್ಲಿ ನಿರಂತರ ಸುಧಾರಣೆಯನ್ನು ತರಬಹುದು “ ಎಂದವರು ಹೇಳಿದರು.

ಕೋವಿಡೋತ್ತರ ಜಗತ್ತಿನಲ್ಲಿ, ರೋಮಾಂಚಕ ಮತ್ತು ಪಾರದರ್ಶಕ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಮತ್ತು ಮಾನವೀಯ ಧೋರಣೆಯೊಂದಿಗೆ ಕಾನೂನಿಗೆ ಅನುಗುಣವಾಗಿ ಕಾರ್ಯಾಚರಿಸುವ ದೇಶವಾಗಿ ಭಾರತ ಪ್ರಕಾಶಿಸಬಹುದು ಎಂದು ಸಚಿವರು ಹೇಳಿದರು. “ನಾವು ಜಾಗತಿಕವಾಗಿ ಜವಾಬ್ದಾರಿಯುತ ನಾಗರಿಕರು ಮತ್ತು ನಾವು ನಮ್ಮ ಔಷಧಿ ಕ್ಷೇತ್ರವನ್ನು ಜಾಗತಿಕ ಆವಶ್ಯಕತೆಗಳಿಗಾಗಿ ಉತ್ತೇಜಿಸುತ್ತೇವೆ . ನಾವು ಇಡೀ ವಿಶ್ವದ ಜೊತೆ ಒಂದು ಕುಟುಂಬವಾಗಿದ್ದೇವೆ. ನಾವು ಬಹಳಷ್ಟು ಫಾರ್ಮಾ ಉತ್ಪಾದನೆಗಳನ್ನು ಹೊಂದಿದ್ದೇವೆ , ನಾವು ವಿಶ್ವಕ್ಕೆ ಸಹಾಯ ಮಾಡಬೇಕೇ ಅಥವಾ ಅತ್ಯಾಶೆಯವರಾಗಬೇಕೇ. ನಮಗೆ ಜವಾಬ್ದಾರಿ ಇದೆ ಎಂದು ನಂಬುವ ನಮ್ಮ ಪ್ರಧಾನ ಮಂತ್ರಿ ಅವರ ಬಗ್ಗೆ ನಾನು ಹೆಮ್ಮೆ ಹೊಂದಿದ್ದೇನೆ” ಎಂದೂ ಅವರು ಹೇಳಿದರು.

ನಾವು ಜನರ ಆರೋಗ್ಯದ ಬಗ್ಗೆ ರಾಜಿ ಮಾಡದೆ ಆರ್ಥಿಕತೆಯನ್ನು ಮರಳಿ ಹಳಿಗೆ ತರಬೇಕಾಗಿದೆ. ಅಂತಿಮ ನಿರ್ಧಾರ ಆರೋಗ್ಯವನ್ನು ಅವಲಂಬಿಸಿರುತ್ತದೆ ಎಂದು ಸಚಿವರು ಹೇಳಿದರು. ಮಾಹಿತಿ ತಂತ್ರಜ್ಞಾನದ ಉದಾಹರಣೆಯನ್ನು ನೀಡಿದ ಅವರು ಸರಕಾರದ .. ನೆರವನ್ನು ಆಶಿಸಬಾರದು ಎಂದು ರಫ್ತುದಾರರಿಗೆ ಕರೆ ನೀಡಿದರಲ್ಲದೆ ಗೆಲ್ಲುವವರಿಗೆ ಒಂದು ಅದಮ್ಯ ಛಲವಿರುತ್ತದೆ, ಅದು ಅವರನ್ನು ಅತ್ಯುತ್ತಮ ದ್ವಿತೀಯ ಸ್ಥಾನದಲ್ಲಿರಲು ಅವಕಾಶ ಕೊಡುವುದಿಲ್ಲ ಎಂದರು. ರಪ್ತುದಾರರು ಆರೋಗ್ಯ ಸೇತು ಆಪ್ ಅನ್ನು ತಮ್ಮ ಮೊಬೈಲ್ ಗಳಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ ಅವರು ಅದನ್ನು ಇತರರಲ್ಲಿಯೂ ಜನಪ್ರಿಯಗೊಳಿಸುವಂತೆ ಸಲಹೆ ಮಾಡಿದರು. ತಂತ್ರಜ್ಞಾನವನ್ನು ಬಳಸಿ, ಕೃತಕ ಬುದ್ದಿಮತ್ತೆಯನ್ನು ಅಳವಡಿಸಿಕೊಂಡು ಮತ್ತು ಅಪಾಯದ ಕೇಂದ್ರಸ್ಥಳಗಳನ್ನು (ಹಾಟ್ ಸ್ಪಾಟ್) ಗುರುತಿಸಿಕೊಂಡು ಕೋವಿಡ್ ವಿರುದ್ದ ಹೋರಾಡಲು ಇದು ಸಹಾಯ ಮಾಡುತ್ತದೆ ಎಂದೂ ಅವರು ಹೇಳಿದರು. ಸಚಿವರು ಅವರಿಗೆ ಉದಾರ ಹೃದಯದಿಂದ ಪಿ.ಎಂ. ಕೇರ್ಸ್ ನಿಧಿಗೆ ದೇಣಿಗೆ ನೀಡುವಂತೆಯೂ ಕರೆ ನೀಡಿದರು.

ಸಭೆಯಲ್ಲಿ ಎಫ್.ಐ.ಇ.ಒ, ಮುತ್ತು ಮತ್ತು ಆಭರಣಗಳ ಇ.ಪಿ.ಸಿ.ಗಳು, ಚರ್ಮ, ಇಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ ವೇರ್, ಸಿಂಥೆಟಿಕ್ಸ್ ಮತ್ತು ರೇಯಾನ್, ಕರಕುಶಲ ವಸ್ತುಗಳು, ಯೋಜನಾ ರಪ್ಥುಗಳು, ಟೆಲಿಕಾಂ, ಜವಳಿ, ಗೇರುಬೀಜ, ಪ್ಲಾಸ್ಟಿಕ್ ಗಳು, ಕ್ರೀಡಾ ಸಾಮಗ್ರಿಗಳು, ಉಲನ್, ತೈಲ ಬೀಜಗಳು ಮತ್ತು ಉತ್ಪಾದನೆಗಳು, ರೇಷ್ಮೆ, ಇಂಜಿನಿಯರಿಂಗ್ ರಫ್ತುಗಳು, ಸೇವೆಗಳು, ಔಷಧ, ರಾಸಾಯನಿಕಗಳು ಮತ್ತು ಡೈ, ಅರಣ್ಯೋತ್ಪನ್ನಗಳು, ಕಾರ್ಪೆಟ್, ಸಂಯೋಜಿತ ರಾಸಾಯನಿಕಗಳು ಕ್ಷೇತ್ರದ ಪ್ರತಿನಿಧಿ ಸಂಸ್ಥೆಗಳು ಭಾಗವಹಿಸಿದ್ದವು.

***

 



(Release ID: 1612443) Visitor Counter : 173