ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್–19 ಅಪ್ ಡೇಟ್ಸ್

Posted On: 08 APR 2020 6:27PM by PIB Bengaluru

ಕೋವಿಡ್–19 ಅಪ್ ಡೇಟ್ಸ್

 

ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ರಾಜ್ಯಗಳು/ ಕೇಂದ್ರಾಡಳಿತ ಪ್ರಧೇಶಗಳ ಜೊತೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರಧೇಶಗಳ ಪರಿಣಾಮಕಾರಿಯಾದ ಲಾಕ್ ಡೌನ್ ಕ್ರಮಗಳ ಏಕರೂಪದ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಮತ್ತು ನಾಗರಿಕರು ಪರಿಣಾಮಕಾರಿಯಾಗಿ ಸಾಮಾಜಿಕ ಅಂತರವನ್ನು ರೂಡಿ ಮಾಡಿಕೊಳ್ಳುವದರ ಬಗ್ಗೆ ಸರ್ಕಾರವು ಗಮನ ಹರಿಸುತ್ತಿದೆ. ಇದು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಎದುರಿಸಲು ಸಹಾಯ ಮಾಡುತ್ತದೆ.

ಪ್ರಸರಣದ ಸರಪಳಿಯನ್ನು ಮುರಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಸರಣಿ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ಹೆಚ್ಚುತ್ತಿರುವ ಪ್ರಕರಣಗಳ ಅನುಗುಣವಾಗಿ ಜವಾಬ್ದಾರಿಗಳನ್ನು ಹೆಚ್ಚಿಸಲಾಗಿದೆ. ದೇಶಾದ್ಯಂತ ಸಾಕಷ್ಟು ಕೋವಿಡ್-19 ಆರೈಕೆ ಕೇಂದ್ರಗಳು ಕಾರ್ಯನಿರ್ವಹಿಸಲು ಸಿದ್ಧವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ.

ಹಲವಾರು ಜಿಲ್ಲೆಗಳು ಉತ್ತಮ ಕ್ರಮಗಳಾಗಿ ಹೊರಹೊಮ್ಮಿದ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಇವುಗಳಲ್ಲಿ ಕೆಲವು ಕೆಳಕಂಡಂತಿವೆ:

  • ಪುಣೆ ಜಿಲ್ಲೆಯು, ಪುಣೆ ಮತ್ತು ಕೊಂಡ್ವಾ ಪ್ರದೇಶದ ಮಧ್ಯ ಭಾಗಗಳನ್ನು ಪರಿಣಾಮಕಾರಿಯಾಗಿ ಮುಚ್ಚಿತು ಮತ್ತು 35 ಚದರ ಕಿ.ಮೀ ವ್ಯಾಪ್ತಿಯಲ್ಲಿ ಮನೆ-ಮನೆ ಸಮೀಕ್ಷೆಯನ್ನು ನಡೆಸಿತು. ಪ್ರಯಾಣದ ಇತಿಹಾಸ ಮತ್ತು ಸಂಪರ್ಕ ಪತ್ತೆಹಚ್ಚುವಿಕೆಯ ಹೊರತಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ವ್ಯಕ್ತಿಗಳನ್ನು ತಂಡವು ಪರಿಶೀಲಿಸುತ್ತಿದೆ.

 

  • ಪಟ್ಟಣಂತ್ತಿಟ್ಟ ಜಿಲ್ಲೆಯು ಕಣ್ಗಾವಲು, ಪ್ರಯಾಣದ ಇತಿಹಾಸವನ್ನು ಸಂಗ್ರಹಿಸುವುದು, ಸಂಪರ್ಕವನ್ನು ಪತ್ತೆಹಚ್ಚುವುದು, ಕ್ವಾರಂಟೈನ್ ಸವಲತ್ತುಗಳು ಮತ್ತು ಅಗತ್ಯವಾದ ಮತ್ತು ಮಾನಸಿಕ ನೆರವು ನೀಡುವುದನ್ನು ಖಾತ್ರಿಪಡಿಸಿದೆ.

ಕೋವಿಡ್-19 ನಿರ್ವಹಣೆಗಾಗಿ ಭಾರತ ಸರ್ಕಾರವು ದೀಕ್ಷಾ (ಡಿಐಕೆಎಸ್ ಹೆಚ್ ) ಪೋರ್ಟಲ್ ನಲ್ಲಿ ಇಂಟಿಗ್ರೇಟೆಡ್ ಗವರ್ನಮೆಂಟ್ಆನ್ ಲೈನ್ ಟ್ರೈನಿಂಗ್ ‘(ಐಗೋಟ್) ಎಂಬ ಹೆಸರಿನ ತರಬೇತಿ ಘಟಕವನ್ನು ಪ್ರಾರಂಭಿಸಿದೆ. ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿಭಾಯಿಸಲು ಮುಂಚೂಣಿಯಲ್ಲಿರುವ ಕಾರ್ಮಿಕರ ಸಾಮರ್ಥ್ಯ ವೃದ್ಧಿ ತರಬೇತಿಯ ಉದ್ಧೇಶ. ಇದರಲ್ಲಿ ವೈದ್ಯರು, ದಾದಿಯರು, ಅರೆವೈದ್ಯರು, ತಂತ್ರಜ್ಞರು, ಎಎನ್ಎಂಗಳು, ರಾಜ್ಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ಅಧಿಕಾರಿಗಳು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ), ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ಇಂಡಿಯನ್ ರೆಡ್ಕ್ರಾಸ್ ಸೊಸೈಟಿ (ಐಆರ್ಸಿಎಸ್) ಮತ್ತು ಇತರ ಸ್ವಯಂಸೇವಕರು ಸೇರಿದ್ದಾರೆ. ಪೋರ್ಟಲ್ ಜಾಲತಾಣದ ಕೊಂಡಿ : https://igot.gov.in/igot .

ಕೋವಿಡ್-19 ನಿರ್ವಹಣೆಗೆ ವಿವಿಧ ವರ್ಗದ ಆರೋಗ್ಯ ವೃತ್ತಿಪರರ ಸಾಮರ್ಥ್ಯವನ್ನು ಹೆಚ್ಚಿಸಲು ನವದೆಹಲಿಯ ಏಮ್ಸ್ ಹಲವಾರು ವೆಬಿನಾರ್ಗಳನ್ನು ನಡೆಸುತ್ತಿದೆ. ಕೋವಿಡ್-19 ಸೋಂಕಿನೊಂದಿಗೆ ಶಂಕಿತ ಅಥವಾ ದೃಢಪಡಿಸಿದ ಗರ್ಭಿಣಿ ಮಹಿಳೆಯರ ಪ್ರಸವಪೂರ್ವ ಆರೈಕೆ ಮತ್ತು ಕಾರ್ಮಿಕ ನಿರ್ವಹಣೆಗಾಗಿ ವೈದ್ಯರ ಆನ್ಲೈನ್ ತರಬೇತಿಯನ್ನು ವಾರದಲ್ಲಿ ಏಮ್ಸ್ ನಿಗದಿಪಡಿಸಿದೆ. ವಿವರವಾದ ವೇಳಾಪಟ್ಟಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಾಲತಾಣ www.mohfw.gov.in ನಲ್ಲಿ ಲಭ್ಯವಿದೆ.

ಪ್ರಸ್ತುತ, 5194 ದೃಢಪಡಿಸಿದ ಪ್ರಕರಣಗಳು ಮತ್ತು 149 ಸಾವುಗಳು ವರದಿಯಾಗಿವೆ. 402 ಮಂದಿ ಗುಣಮುಖರಾಗಿದ್ದು ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ.

ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ: + 91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19 ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1612358) Visitor Counter : 181