ಗೃಹ ವ್ಯವಹಾರಗಳ ಸಚಿವಾಲಯ

COVID-19 ವಿರುದ್ಧದ ಹೋರಾಟದ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸರಕುಗಳ (ಇಸಿ) ಕಾಯ್ದೆ 1955 ರ ನಿಬಂಧನೆಗಳನ್ನು ಅನ್ವಯಿಸುವ ಮೂಲಕ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು  ರಾಜ್ಯಗಳಿಗೆ ಗೃಹ ಸಚಿವಾಲಯದ ಪತ್ರ

Posted On: 08 APR 2020 11:20AM by PIB Bengaluru

COVID-19 ವಿರುದ್ಧ ಹೋರಾಟದ ಲಾಕ್ಡೌನ್ ಅವಧಿಯಲ್ಲಿ ಅಗತ್ಯ ಸರಕುಗಳ (ಇಸಿ) ಕಾಯ್ದೆ 1955 ನಿಬಂಧನೆಗಳನ್ನು ಅನ್ವಯಿಸುವ ಮೂಲಕ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು  ರಾಜ್ಯಗಳಿಗೆ ಗೃಹ ಸಚಿವಾಲಯದ ಪತ್ರ

 

ದೇಶದಲ್ಲಿ ಅಗತ್ಯ ವಸ್ತುಗಳ ಸುಗಮ ಪೂರೈಕೆಯನ್ನು ನಿರ್ವಹಿಸುವ ಭಾಗವಾಗಿ, ಅಗತ್ಯ ಸರಕುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸರಕುಗಳ (ಇಸಿ) ಕಾಯ್ದೆ 1955 ಅಡಿಯಲ್ಲಿ  ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಕ್ರಮಗಳಲ್ಲಿ ಸ್ಟಾಕ್ ಮಿತಿಗಳನ್ನು ನಿಗದಿಪಡಿಸುವುದು, ಬೆಲೆಗಳನ್ನು ನಿಭಾಯಿಸುವುದು, ಉತ್ಪಾದನೆಯನ್ನು ಹೆಚ್ಚಿಸುವುದು, ವಿತರಕರ ಖಾತೆಗಳ ಪರಿಶೀಲನೆ ಮತ್ತು ಇತರ ಕ್ರಮಗಳು ಸೇರಿವೆ.

ಅನೇಕ ಕಾರಣಗಳಿಂದಾಗಿ ವಿಶೇಷವಾಗಿ ಕಾರ್ಮಿಕರ ಪೂರೈಕೆಯಲ್ಲಿನ ಕಡಿತದಿಮದಾಗಿ ಉತ್ಪಾದನೆಯಲ್ಲಿ ನಷ್ಟದ ವರದಿಗಳು ಬಂದಿವೆ. ಪರಿಸ್ಥಿತಿಯಲ್ಲಿ, ಅಕ್ರಮ ದಾಸ್ತಾನು ಕಟ್ಟಡ ಮತ್ತು ಕಾಳ ಮಾರುಕಟ್ಟೆ, ಲಾಭಕೋರತನದ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಸಾರ್ವಜನಿಕರಿಗೆ ನ್ಯಾಯಯುತ ಬೆಲೆಯಲ್ಲಿ ಸರಕುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳನ್ನು ಕೋರಲಾಗಿದೆ.

ಮೊದಲು, ಗೃಹ ಸಚಿವಾಲಯವು ವಿಪತ್ತು ನಿರ್ವಹಣಾ ಕಾಯ್ದೆಯಡಿ ತನ್ನ ಆದೇಶದಲ್ಲಿ, ಆಹಾರ ಪದಾರ್ಥಗಳು, ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳಂತಹ ಅಗತ್ಯ ವಸ್ತುಗಳ ವಿಷಯದಲ್ಲಿ ಉತ್ಪಾದನೆ, ಸಾರಿಗೆ ಮತ್ತು ಇತರ ಸಂಬಂಧಿತ ಪೂರೈಕೆ-ಸರಪಳಿ ಚಟುವಟಿಕೆಗಳಿಗೆ ಅವಕಾಶ ನೀಡಿದೆ.

ಇದಲ್ಲದೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು, ಕೇಂದ್ರ ಸರ್ಕಾರದ ಪೂರ್ವ ಒಪ್ಪಿಗೆಯ ಅಗತ್ಯವಿಲ್ಲದೇ 2020 ಜೂನ್ 30 ರವರೆಗೆ ಅಗತ್ಯ ಸರಕುಗಳ ಕಾಯ್ದೆ 1955 ಅಡಿಯಲ್ಲಿ ಆದೇಶಗಳನ್ನು ಹೊರಡಿಸಲು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕಾರ ನೀಡಿದೆ.

ಅಗತ್ಯ ವಸ್ತುಗಳ ಕಾಯ್ದೆಯಡಿಯ ಅಪರಾಧಗಳು, ಕ್ರಿಮಿನಲ್ ಅಪರಾಧಗಳಾಗಿದ್ದು 7 ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ರಾಜ್ಯ/ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಕಾಳ-ಮಾರುಕಟ್ಟೆ ತಡೆಗಟ್ಟುವಿಕೆ ಮತ್ತು ಅಗತ್ಯ ವಸ್ತುಗಳ ಸರಬರಾಜು ನಿರ್ವಹಣೆ ಕಾಯ್ದೆ, 1980 ಅಡಿಯಲ್ಲಿ ಅಪರಾಧಿಗಳ ಬಂಧನವನ್ನು ಪರಿಗಣಿಸಬಹುದು.

***



(Release ID: 1612210) Visitor Counter : 349