ಕೃಷಿ ಸಚಿವಾಲಯ
ಲಾಕ್ ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ಕೈಗೊಳ್ಳಲಾದ ಕ್ರಮಗಳನ್ನು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಮರ್ಶಿಸಿದ ಕೃಷಿ ಸಚಿವರು
Posted On:
07 APR 2020 8:12PM by PIB Bengaluru
ಲಾಕ್ ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ಕೈಗೊಳ್ಳಲಾದ ಕ್ರಮಗಳನ್ನು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಮರ್ಶಿಸಿದ ಕೃಷಿ ಸಚಿವರು
ನಿರಂತರ ನಿಗಾವಹಿಸಲು ನಿಯಂತ್ರಣ ಕೊಠಡಿಗಳನ್ನು ನಿರ್ಮಿಸುವಂತೆ ಶ್ರೀ ಎನ್ ಎಸ್ ತೋಮರ್ ನಿರ್ದೇಶನ
ಕೃಷಿ ಉತ್ಪನ್ನಗಳು ಮತ್ತು ಕೃಷಿ ಪರಿಕರಗಳ ಸಾಗಣೆಗೆ ಅಡಚಣೆಯಾಗಬಾರದು ಎಂದ ಸಚಿವರು
ಕೃಷಿ ಮತ್ತು ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಇಂದು ಲಾಕ್ ಡೌನ್ ಸಂದರ್ಭದಲ್ಲಿ ಕೃಷಿ ಕೈಂಕರ್ಯಗಳಿಗೆ ಅನುಕೂಲ ಕಲ್ಪಿಸಲು ಕೈಗೊಳ್ಳಲಾದ ಕ್ರಮಗಳ ಅವಲೋಕನಗೈಯ್ಯಲು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದರು. ರೈತರು ಮತ್ತು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಯಾವುದೇ ಅಡಚಣೆ ಇಲ್ಲದೆ ಕೆಲಸ ಮುಂದುವರೆಸುವುದನ್ನು ಖಚಿತಪಡಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ನೀಡಲಾದ ವಿನಾಯಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶ್ರೀ ತೋಮರ್ ಕರೆ ನೀಡಿದರು ಮತ್ತು ವಿವಿಧ ವಿನಾಯಿತಿಗಳು ಮತ್ತು ರಿಯಾಯಿತಿಗಳ ಮೇಲೆ ನಿರಂತರ ನಿಗಾ ಇಡಲು ನಿಯಂತ್ರಣಾ ಕೊಠಡಿಗಳನ್ನು ಸಿದ್ಧಪಡಿಸುವಂತೆ ನಿರ್ದೇಶಿಸಿದರು.
ಕೋವಿಡ್–19 ನಿಯಂತ್ರಿಸಲು 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಆರಂಭದಲ್ಲಿ ರೈತರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಶ್ರೀ ತೋಮರ್ ಅವರು ಕೇಂದ್ರ ಗೃಹ ಮತ್ತು ಆರ್ಥಿಕ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು ಮತ್ತು ರೈತರಿಗೆ ಪರಿಹಾರ ಕ್ರಮಗಳನ್ನು ತಕ್ಷಣವೇ ಜಾರಿಗೊಳಿಸಲಾಯಿತು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಪಾಲಿಸಲಾಗುತ್ತಿರುವುದರ ಕುರಿತು ಪರಿಶೀಲನೆಗೆ ಇಂದು ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ಪರಶೋತ್ತಮ ರುಪಾಲ್ ಮತ್ತು ಶ್ರೀ ಕೈಲಾಶ್ ಚೌಧರಿ ಅವರ ಜೊತೆಗೂಡಿ ಶ್ರೀ ತೋಮರ್ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಪೇರೆನ್ಸ್ ನಡೆಸಲಾಯಿತು.
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ನೀಡಲಾದ ವಿವಿಧ ವಿನಾಯಿತಿಗಳನ್ನು ಮತ್ತು ರಿಯಾಯಿತಿಗಳನ್ನು ಪಾಲಿಸುವಾಗ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶ್ರೀ ತೋಮರ್ ಒತ್ತಿ ಹೇಳಿದರು. ಬೆಳೆಗಳ ಕಟಾವಿನಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸಚಿವರು ಹೇಳಿದರು. ತಮ್ಮ ಕೃಷಿ ಭೂಮಿಗೆ ಹತ್ತಿರದಲ್ಲೇ ತಮ್ಮ ಉತ್ಪನ್ನಗಳನ್ನು ರೈತರು ಮಾರುವಂತೆ ಪ್ರಯತ್ನಿಸಬೇಕು, ಅದಲ್ಲದೆ ರಾಜ್ಯದಲ್ಲಿ ಮತ್ತು ಅಂತರ ರಾಜ್ಯಗಳಿಗೆ ಕೃಷಿ ಉತ್ಪನ್ನಗಳ ಸಾಗಣೆಯನ್ನು ಖಚಿತಪಡಿಸಬೇಕೆಂದು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯುವ ಟ್ರಕ್ ಗಳ ಓಡಾಟಕ್ಕೆ ವಿನಾಯಿತಿ ನೀಡಲಾಗಿದೆ. ಶೀಘ್ರದಲ್ಲೇ ಬಿತ್ತನೆ ಆರಂಭಗೊಳ್ಳುತ್ತದೆ ಎಂದು ಹೇಳಿದ ಸಚಿವರು ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗಬಾರದು ಎಂದು ತಿಳಿಸದರು. ಜೊತೆಗೆ ಆಹಾರ ಧಾನ್ಯಗಳ ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಯಾವ ತೊಂದರೆಯಾಗಬಾರದು ಎಂದೂ ಅವರು ಹೇಳಿದರು.
ಎಂಎಸ್ಪಿ ಕಾರ್ಯಾಚರಣೆಗಳು ಸೇರಿದಂತೆ ಕೃಷಿ ಉತ್ಪನ್ನಗಳ ಸಂಗ್ರಹದಲ್ಲಿ ತೊಡಗಿರುವ ಏಜೆನ್ಸಿಗಳ ಕಾರ್ಯಾಚರಣೆಗೆ, ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯಿಂದ ನಿರ್ವಹಿಸಲ್ಪಡುವ ಅಥವಾ ರಾಜ್ಯ ಸರ್ಕಾರ ಸೂಚಿಸಿದ ಮಂಡಿಗಳು, ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಮತ್ತು ಕೃಷಿ ಕಾರ್ಮಿಕರಿಂದ ಕೃಷಿ ಕಾರ್ಯಾಚರಣೆ; ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ‘ಕಸ್ಟಮ್ ನೇಮಕಾತಿ ಕೇಂದ್ರಗಳು (ಸಿಎಚ್‌ಸಿ)’; ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಬೀಜಗಳ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಘಟಕಗಳು; ಅಂತರ-ರಾಜ್ಯ ಮತ್ತು ರಾಜ್ಯದೊಳಗಡೆ ಕೊಯ್ಲು ಮತ್ತು ಬಿತ್ತನೆಯ ಸಂಯೋಜಿತ ಕೊಯ್ಲು ಯಂತ್ರ ಮತ್ತು ಇತರ ಕೃಷಿ / ತೋಟಗಾರಿಕೆ ಯಂತ್ರೋಪಕರಣಗಳ ಸಾಗಣೆಗೆ ಲಾಕ್‌ಡೌನ್‌ನಿಂದ ಸರ್ಕಾರ ವಿನಾಯಿತಿ ನೀಡಿದೆ. ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಸರಬರಾಜುದಾರರನ್ನೂ ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸಲು ಕೃಷಿ ಯಂತ್ರೋಪಕರಣಗಳ ಅಂಗಡಿಗಳು, ಅವಿಗಳ ಬಿಡಿ ಭಾಗಗಳು (ಅದರ ಸರಬರಾಜು ಸರಪಳಿಯೂ ಸೇರಿದಂತೆ) ಮತ್ತು ರಿಪೇರಿ ಹಾಗೂ ಹೆದ್ದಾರಿಗಳ ಮೇಲಿರುವ ಅದರಲ್ಲೂ ಇಂಧನ ಪಂಪ್ ಗಳ ಬಳಿ ಇರುವ ಟ್ರಕ್ ರಿಪೇರಿ ಅಂಗಡಿಗಳು ತೆರೆದಿರಬಹುದಾಗಿದೆ. ಅದರಂತೆ ಚಹಾ ತೋಟಗಳೂ ಸೇರಿದಂತೆ ಚಹಾ ಉದ್ಯಮ ಶೇ 50 ರಷ್ಟು ಕೆಲಸಗಾರರೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM) ಗೆ ಹೊಸ ಗುಣಲಕ್ಷಣಗಳನ್ನು ಸೇರಿಸಲಾಗಿದ್ದು, ಇದು ರೈತರು ತಮ್ಮ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ವೇದಿಕೆಯನ್ನು ಕಲ್ಪಿಸುತ್ತದೆ ಹಾಗೂ ಕೊವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಗಟು, ಮಂಡಿಗಳಲ್ಲಿ ಸೇರುವ ಜನರನ್ನು ಚದುರಿಸಬೇಕಾದ ಈ ಸಮಯದಲ್ಲಿ
ರೈತರು ತಾವು ಕಟಾವು ಮಾಡಿದ ಬೆಳೆಗಳನ್ನು ಸ್ವತಃ ಸಗಟು ಮಂಡಿಗಳಿಗೆ ಕೊಂಡೊಯ್ಯುವ ಶ್ರಮವನ್ನು ಕಡಿಮೆ ಮಾಡುತ್ತದೆ. ಮಾರ್ಚ್ 1, 2020 ರಿಂದ 31 ಮೇ 2020 ರ ನಡುವೆ ಬರಬೇಕಿದ್ದ/ ಬರಬೇಕಾದ 3 ಲಕ್ಷದವರೆಗಿನ ಅಲ್ಪಾವಧಿಯ ಬೆಳೆ ಸಾಲಗಳ ಕಂತಿನ ಮರುಪಾವತಿಯ ಕೊನೆಯ ದಿನವನ್ನು ಸರ್ಕಾರ 31 ಮೇ 2020 ರ ವರೆಗೆ ವಿಸ್ತರಿಸಿದೆ. ರೈತರು ಇಂತಹ ಸಾಲಗಳನ್ನು ವಿಸ್ತೃತ ಅವಧಿವರೆಗೆ ವಾರ್ಷಿಕ 4% ಬಡ್ಡಿ ದರದಲ್ಲಿ ಯಾವುದೇ ದಂಡವಿಲ್ಲದೇ ಮರುಪಾವತಿಸಬಹುದಾಗಿದೆ.
*****
(Release ID: 1612202)
Visitor Counter : 407
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu