ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೋವಿಡ್-19 ಪತ್ತೆಗೆ ಪರೀಕ್ಷಾ ಉಪಕರಣ ಒದಗಿಸಲಿರುವ ಸಿಎಸ್ಐಆರ್ - ಸಿಎಫ್ ಟಿಆರ್ ಐ
Posted On:
07 APR 2020 10:14AM by PIB Bengaluru
ಕೋವಿಡ್-19 ಪತ್ತೆಗೆ ಪರೀಕ್ಷಾ ಉಪಕರಣ ಒದಗಿಸಲಿರುವ ಸಿಎಸ್ಐಆರ್ - ಸಿಎಫ್ ಟಿಆರ್ ಐ
ಮೈಸೂರು ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 24 ಗಂಟೆಗಳ ಅವಧಿಯಲ್ಲಿಯೇ 7 ಹೊಸ ಪ್ರಕರಣಗಳು ದೃಢಪಟ್ಟಿವೆ. ಕರ್ನಾಟಕ ಆರೋಗ್ಯ ಇಲಾಖೆಯ ಇತ್ತೀಚಿನ ಮಾಧ್ಯಮ ಪ್ರಕಟಣೆ ಪ್ರಕಾರ ಈ ಅಂಕಿ-ಅಂಶ ಲಭ್ಯವಾಗಿದೆ. ಮೈಸೂರು ಮೂಲದ ಸಿಎಸ್ಐಆರ್ - ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರ(ಸಿಎಸ್ಐಆರ್-ಸಿಎಫ್ ಟಿಆರ್ ಐ) ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದು, ಮಾದರಿಗಳ ಪರೀಕ್ಷೆಗೆ ಅಗತ್ಯವಿರುವ ಉಪಕರಣವನ್ನು ಒದಗಿಸಿದೆ.
ಪ್ರಸ್ತುತ ಕೋವಿಡ್-19 ಸೋಂಕನ್ನು ಅತ್ಯಂತ ಆಧುನಿಕ ರೀತಿಯಲ್ಲಿ ಮತ್ತು ಖಚಿತ ತಂತ್ರಜ್ಞಾನ ರಿಯಲ್ ಟೈಮ್ ಪಾಲಿಮರ್ಸ್ ಚೈನ್ ರಿಯಾಕ್ಷನ್(ಪಿಸಿಆರ್) ಪದ್ಧತಿ ಮೂಲಕ ಪತ್ತೆಹಚ್ಚಲಾಗುತ್ತಿದೆ. ಈ ಪಿಸಿಆರ್ ಪದ್ಧತಿಯಲ್ಲಿ ಮಾದರಿಯಿಂದ ಸೋಂಕಿನ ಆರ್ ಎನ್ ಎ ಪಡೆದು, ಅದನ್ನು ಪಿಸಿಆರ್ ಯಂತ್ರವನ್ನು ಬಳಸಿ, ಪತ್ತೆಹಚ್ಚಲಾಗುತ್ತಿದೆ. ಪಿಸಿಆರ್ ಪರೀಕ್ಷೆಯ ಖಚಿತ ಅನುಕೂಲವೆಂದರೆ ವ್ಯಕ್ತಿಯಲ್ಲಿನ ಸೋಂಕನ್ನು ಅತ್ಯಂತ ಆರಂಭಿಕ ಹಂತದಲ್ಲೇ, ಲಕ್ಷಣಗಳು ಕಂಡುಬರುತ್ತಿದ್ದಾಗಲೇ ಪತ್ತೆ ಹಚ್ಚಬಹುದಾಗಿದೆ.
ಮೈಸೂರು ಜಿಲ್ಲೆಯಲ್ಲಿ ಶಂಕಿತ ಸೋಂಕಿತರ ಸಂಖ್ಯೆ ಹೆಚ್ಚು ಇರುವ ಕಾರಣಕ್ಕೆ ಜಿಲ್ಲೆಯನ್ನು ರಾಜ್ಯದ ನಾಲ್ಕು ಪ್ರಮುಖ ಹಾಟ್ ಸ್ಪಾಟ್ ಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಶಂಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಗೆ ಒಳಪಡಿಸುವ ಮುಂಚೆ ಮತ್ತು ಕ್ವಾರಂಟೈನ್ ಅವಧಿಯ ನಂತರವೂ ಅವರ ದೇಹದಲ್ಲಿ ಸೋಂಕಿನ ಗುಣಲಕ್ಷಣಗಳ ಬಗ್ಗೆ ಪರೀಕ್ಷೆ ನಡೆಸುವ ಅಗತ್ಯವಿದೆ. ಒಂದು ವೇಳೆ ಸೋಂಕಿನ ಗುಣ ಲಕ್ಷಣಗಳು ಕಾಣಲಿ ಅಥವಾ ಕಾಣದೆ ಇರಲಿ ಆದರೂ ಪರೀಕ್ಷೆಗೆ ಒಳಪಡಿಸಬೇಕು.
ಸಿಎಸ್ಐಆರ್-ಸಿಎಫ್ ಟಿಆರ್ ಐ ಎರಡು ಪಿಸಿಆರ್ ಮಿಷನ್ ಗಳನ್ನು ಒದಗಿಸುತ್ತಿದೆ ಮತ್ತು ಒಂದು ಆರ್ ಎನ್ ಎ ಹೊರ ತೆಗೆಯುವ ಘಟಕವನ್ನು ಹಾಗೂ ಅತ್ಯಧಿಕ ಪ್ರಮಾಣದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುವುದರಿಂದ ಜಿಲ್ಲಾಡಳಿತಕ್ಕೆ ಅಗತ್ಯ ರಾಸಾಯಿನಿಕಗಳನ್ನು ಒದಗಿಸುತ್ತಿದೆ.
“ಖಚಿತ ಹಾಗೂ ಸ್ಪಷ್ಟ ಪರೀಕ್ಷಾ ಪದ್ಧತಿ ಈ ಸಂದರ್ಭದಲ್ಲಿ ಅತ್ಯಗತ್ಯ. ಪರೀಕ್ಷೆ ಅತ್ಯಂತ ಆಧುನಿಕ ರೀತಿಯಲ್ಲಿ ಇರುವುದರಿಂದ ಮತ್ತು ಕೇವಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಅನುಮೋದಿಸಿರುವ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಸಬೇಕಾಗಿರುವುದರಿಂದ ನಾವು ಲಭ್ಯವಿರುವ ಸಾಮರ್ಥ್ಯಕ್ಕೆ ಇನ್ನಷ್ಟು ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಸಿಎಸ್ಐಆರ್-ಸಿಎಫ್ ಟಿಆರ್ ಐನ ನಿರ್ದೇಶಕರಾದ ಡಾ. ಕೆಎಸ್ಎಂಎಸ್ ರಾಘವರಾವ್ ತಿಳಿಸಿದ್ದಾರೆ. ಉಪಕರಣಗಳ ಜೊತೆಗೆ ಜಿಲ್ಲಾಡಳಿತಕ್ಕೆ ಅಗತ್ಯವಾದ ಇಬ್ಬರು ಕೌಶಲ್ಯ ಹೊಂದಿದ ತಂತ್ರಜ್ಞರ ಸೇವೆಯನ್ನೂ ಸಹ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪಿಸಿಆರ್ ಯಂತ್ರಗಳು 2020ರ ಏಪ್ರಿಲ್ 5ರಂದು ಹಸ್ತಾಂತರಿಸಲಾಯಿತು. ವೈರಾಣು ಸಂಶೋಧನೆ ಮತ್ತು ಪತ್ತೆ ಪ್ರಯೋಗಾಲಯ(ವಿಆರ್ ಡಿಎಲ್)ದ ನೋಡಲ್ ಅಧಿಕಾರಿ ಮತ್ತು ಮೈಸೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಕೋವಿಡ್ ಪರೀಕ್ಷಾ ಪ್ರಯೋಗಾಲಯದ ಉಸ್ತುವಾರಿ ಡಾ. ಅಮೃತಾಕುಮಾರಿ ಅವರಿಗೆ ಉಪಕರಣವನ್ನು ಹಸ್ತಾಂತರಿಸಲಾಯಿತು. ಈ ಉಪಕರಣಗಳಿಂದಾಗಿ ಪ್ರತಿ ದಿನ ಮಾಡುತ್ತಿದ್ದ ಮಾದರಿ ಪರೀಕ್ಷೆ ಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ. ಆರ್ ಎನ್ ಎ ಹೊರತೆಗೆಯುವ ಘಟಕ ಇನ್ನೊಂದು ವಾರದಲ್ಲಿ ಅವರಿಗೆ ತಲುಪಲಿದೆ.
*****
(Release ID: 1611917)
Visitor Counter : 182
Read this release in:
English
,
Gujarati
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Odia
,
Tamil
,
Telugu