PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ     

Posted On: 05 APR 2020 7:09PM by PIB Bengaluru

 ಕೋವಿಡ್-19: ಪಿ ಬಿ ದೈನಿಕ ವರದಿ     

                     

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಈವರೆಗೆ 3374 ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, 79 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 267 ಜನರು ಗುಣಮುಖರಾಗಿ/ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ 274 ಜಿಲ್ಲೆಗಳು ಕೋವಿಡ್ -19 ವೈರಾಣುವಿನಿಂದ ಬಾಧಿತವಾಗಿವೆ. ಸಂಪುಟ ಕಾರ್ಯದರ್ಶಿಯವರು ಎಲ್ಲ ಡಿ.ಎಂ.ಗಳಿಗೆ ಸೂಚನೆ ನೀಡಿದ್ದು, ಔಷಧ ಮತ್ತು ವೈದ್ಯಕೀಯ ಉಪಕರಣ ಉತ್ಪಾದಿಸುವ ಎಲ್ಲ ಔಷಧ ಘಟಕಗಳು ಸುಗಮವಾಗಿ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ..

https://pib.gov.in/PressReleseDetail.aspx?PRID=1611471

ಅಮೆರಿಕದ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಯವರ ನಡುವೆ ದೂರವಾಣಿ ಸಂಭಾಷಣೆ

ಎರಡೂ ದೇಶಗಳ ನಡುವಿನ ವಿಶೇಷ ಬಾಂಧವ್ಯವನ್ನು ಒತ್ತಿ ಹೇಳಿರುವ ಪ್ರಧಾನಮಂತ್ರಿಯವರು ಜಾಗತಿಕ ಮಹಾಮಾರಿಯಿಂದ ಹೊರಬರಲು ಅಮೆರಿಕದೊಂದಿಗೆ ಭಾರತದ ಏಕಮತ್ಯವನ್ನು ಪ್ರತಿಪಾದಿಸಿದರು. ಇಬ್ಬರೂ ನಾಯಕರು, ಕೋವಿಡ್-19ನ್ನು ಸಮರ್ಥವಾಗಿ ಮತ್ತು ದೃಢವಾಗಿ ನಿಗ್ರಹಿಸಲು ಸಂಪೂರ್ಣ ಬಲ ಹಾಕಲು ಸಮ್ಮತಿಸಿದರು.

https://pib.gov.in/PressReleseDetail.aspx?PRID=1611248

ಪ್ರಧಾನಮಂತ್ರಿ ಮತ್ತು ಬ್ರೆಜಿಲ್ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬ್ರೆಜಿಲ್ ಅಧ್ಯಕ್ಷ ಘನತೆವೆತ್ತ ಜೈರ್ ಮೆಸಿಯಾಸ್ ಬೊಲ್ಸನಾರೋ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರೂ ನಾಯಕರು ಕೋವಿಡ್ -19 ಮಹಾಮಾರಿಯ ಹಿನ್ನೆಲೆಯಲ್ಲಿ ಜಾಗತಿಕ ಪರಿಸ್ಥಿತಿಯ ಕುರಿತು ಚರ್ಚಿಸಿದರು. 

https://pib.gov.in/PressReleseDetail.aspx?PRID=1611249

ಪ್ರಧಾನಮಂತ್ರಿ ಮತ್ತು ಸ್ಪೇನ್ ಪ್ರಧಾನಮಂತ್ರಿಯವರೊಂದಿಗೆ ದೂರವಾಣಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಪೇನ್ ಸರ್ಕಾರದ ಅಧ್ಯಕ್ಷ (ಪ್ರಧಾನಮಂತ್ರಿಗೆ ಸಮನಾದ) ಘನತೆವೆತ್ತ ಪೆಡ್ರೊ ಸ್ಯಾಂಚೆ ಪೆರೆಜ್-ಕ್ಯಾಸ್ಟೆಜಾನ್ ಅವರೊಂದಿಗೆ ದೂರವಾಣಿ ಸೆಂಭಾಷಣೆ ನಡೆಸಿದರು. ಇಬ್ಬರೂ ನಾಯಕರು ಕೋವಿಡ್ -19 ಮಹಾಮಾರಿಯಿಂದ ಎದುರಾಗಿರುವ ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಿದರು.

https://pib.gov.in/PressReleseDetail.aspx?PRID=1611252

161 ಟನ್ ಸರಕನ್ನು ದೇಶಾದ್ಯಂತ ಸಾಗಿಸಿದ ಲೈಫ್ ಲೈನ್ ಉಡಾನ್ ವಿಮಾನಗಳು

ಲೈಫ್ ಲೈನ್ ಉಡಾನ್, 116 ವಿಮಾನಗಳು ಕಾರ್ಯಾಚರಣೆ ಮಾಡಿದ್ದು, ಈ ದಿನಾಂಕದವರೆಗೆ 161 ಟನ್ ಸರಕನ್ನು ಸಾಗಾಟ ಮಾಡಿವೆ. ಅಂತಾರಾಷ್ಟ್ರೀಯ ವಿಭಾಗದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಏರ್ ಇಂಡಿಯಾ ಚೈನಾದೊಂದಿಗೆ ಆಪ್ತವಾಗಿ ಕಾರ್ಯೋನ್ಮುಖವಾಗಿದ್ದು, ಮಹತ್ವದ ವೈದ್ಯಕೀಯ ಪೂರೈಕೆಗಾಗಿ ಎರಡೂ ದೇಶಗಳ ನಡುವೆ ವಾಯು ಸೇತು ಸಾಧಿಸಿವೆ.

https://pib.gov.in/PressReleseDetail.aspx?PRID=1611411

ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಣಕಾಸು ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್/ಉದ್ದಿಮೆಗಳು ಪಿಎಂ ಕೇರ್ಸ್ ನಿಧಿಗೆ 430 ಕೋಟಿ ರೂ. ದೇಣಿಗೆ ನೀಡಿವೆ.

ರೂ. 228.84 ಕೋಟಿ ಅಂದಾಜು ಸಂಬಳ ಮತ್ತು ರೂ. 201.79 ಕೋಟಿ ಸಿಎಸ್ಆರ್ ಮತ್ತು ಇನ್ನಿತರ ದೇಣಿಗೆಯನ್ನು ನೀಡಲಾಗಿದೆ.

https://pib.gov.in/PressReleseDetail.aspx?PRID=1611414

ದೀಪ ಆರಿಸುವ ವೇಳೆ ವಿದ್ಯುತ್ ಗ್ರಿಡ್ ಕಾರ್ಯಾಚರಣೆ ಕುರಿತಂತೆ ಎಫ್.ಎ.ಕ್ಯು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

https://pib.gov.in/PressReleseDetail.aspx?PRID=1611507

ಸಂಸ್ಥೆಗಳುಸ್ವಾಯತ್ತ ಸಂಸ್ಥೆಗಳುಎಚ್.ಆರ್.ಡಿ. ಸಚಿವಾಲಯದ ಇಲಾಖೆಗಳು ಕೋವಿಡ್ -19 ವಿರುದ್ಧ ಸೆಣೆಸಲು ಪಿ.ಎಂ. ಕೇರ್ ಗೆ 38.91 ಕೋಟಿ ರೂ.ಗಳಿಗೂ ಅಧಿಕ ದೇಣಿಗೆಯನ್ನು ನೀಡಿವೆ

28 ವಿವಿಧ ಸಂಸ್ಥೆಗಳು/ಸ್ವಾಯತ್ತ ಸಂಸ್ಥೆಗಳು/ಎಚ್.ಆರ್.ಡಿ. ಸಚಿವಾಲಯದ ಇಲಾಖೆಗಳು 38.91 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಕೋವಿಡ್ ವಿರುದ್ಧ ಹೋರಾಟಕ್ಕಾಗಿ ಪಿಎಂ ಕೇರ್ಸ್ ಗೆ ದೇಣಿಗೆಯಾಗಿ ನೀಡಿವೆ.

https://pib.gov.in/PressReleseDetail.aspx?PRID=1611451

ದಕ್ಷಿಣ ನೌಕಾ ಕಮಾಂಡ್ ವೈದ್ಯಕೀಯೇತರ ಸಿಬ್ಬಂದಿಗೆ ತರಬೇತಿ ತುಣಕನ್ನು ವಿನ್ಯಾಸಗೊಳಿಸಿದೆ

ದಕ್ಷಿಣ ನೇವಲ್ ಕಮಾಂಡ್ ನ ಕೋವಿಡ್ ಕೋರ್ ಕಾರ್ಯ ಗುಂಪು ವೈದ್ಯಕೀಯೇತರ ಸಿಬ್ಬಂದಿಗೆ ತರಬೇತಿ ನೀಡಲು ಯುದ್ಧ ಭೂಮಿಯ ನರ್ಸಿಂಗ್ ಅಸಿಸ್ಟೆಂಟ್ ಗಳಿಗೆ (ಬಿ.ಎಫ್.ಎನ್.ಎ.)ತರಬೇತಿಯ ಕ್ಯಾಪ್ಸುಲ್ ಅನ್ನು ವಿನ್ಯಾಸಗೊಳಿಸಿದ್ದು, ಅವರು ತುರ್ತು ಸಂದರ್ಭಗಳಲ್ಲಿ ಬಹು ಕಾರ್ಯ ಪಡೆಯಾಗಿ ಕಾರ್ಯನಿರ್ವಹಿಸುತ್ತಾರೆ.

https://pib.gov.in/PressReleseDetail.aspx?PRID=1611288

ಕೇಂದ್ರೀಯ ವಿಶ್ವವಿದ್ಯಾಲಯಗಳ ವಿಸಿಗಳೊಂದಿಗೆ ಸಂವಾದ ನಡೆಸಿದ ಎಚ್.ಆರ್.ಡಿ. ಸಚಿವರು

ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸಲು ಸ್ವಯಂ ಮತ್ತು ಸ್ವಯಂ ಪ್ರಭಾವನ್ನು ಯಂತ್ರೋಪಾದಿಯಲ್ಲಿ ಮತ್ತು ಆನ್ ಲೈನ್ ಡಿಜಿಟಲ್ ಮಾಧ್ಯಮಗಳನ್ನು ಬಳಸುವಂತೆ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಸೂಚಿಸುವಂತೆ ಎಲ್ಲ ಕುಲಪತಿಗಳಿಗೆ ಎಚ್.ಆರ್.ಡಿ. ಸಚಿವರು ನಿರ್ದೇಶಿಸಿದ್ದಾರೆ. ಆನ್ ಲೈನ್ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಆನ್ ಲೈನ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಲು ಪ್ರೊ. ನಾಗೇಶ್ವರ ರಾವ್, ವಿ.ಸಿ. ಇಗ್ನೋ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

https://pib.gov.in/PressReleseDetail.aspx?PRID=1611283

ಜಜ್ಜಾರ್ ಏಮ್ಸ್ ಗೆ ಭೇಟಿ ನೀಡಿದ ಡಾ. ಹರ್ಷವರ್ಧನ್, ಕೋವಿಡ್ 19ರಿಂದ ಹೊರಬರಲು ಮಾಡಿಕೊಂಡಿರುವ ಸಿದ್ಧತೆಗಳ ಖುದ್ದು ಪರಿಶೀಲನೆ

300 ಹಾಸಿಗೆಗಳ ಪ್ರತ್ಯೇಕೀಕರಣ ವಾರ್ಡ್ ಒಳಗೊಂಡ ಜಜ್ಜಾರ್ ನ ಏಮ್ಸ್ ಸಮರ್ಪಿತ ಕೋವಿಡ್-19 ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಇದು ಪ್ರತ್ಯೇಕೀಕರಣ ಅಗತ್ಯ ಇರುವ ಮುಂದುವರಿದ ವೈದ್ಯಕೀಯ ಚಿಕಿತ್ಸೆ ಬೇಕಿರುವ ರೋಗಿಗಳಿಗೆ ಪ್ರಾಮಾಣಿಕ ಚಿಕಿತ್ಸೆಯ ಖಾತ್ರಿ ಪಡಿಸುತ್ತದೆ ಎಂದರು.

https://pib.gov.in/PressReleseDetail.aspx?PRID=1611450

ಈಶಾನ್ಯ ರಾಜ್ಯಗಳಿಗೆ ವೈದ್ಯಕೀಯ ಸಲಕರಣೆಗಳು, ಅಗತ್ಯ ವಸ್ತುಗಳು ಸೇರಿದಂತೆ ಸರಕುಗಳನ್ನು ವಾಯು ಸಾಗಣೆ ಮೂಲಕ ನಿಯಮಿತವಾಗಿ ಪೂರೈಸಲಾಗುತ್ತಿದೆ: ಡಾ. ಜಿತೇಂದ್ರ ಸಿಂಗ್

ಲಾಕ್ ಡೌನ್ ಘೋಷಣೆ ಮಾಡಿದ ತರುವಾಯ ಆಶಾನ್ಯ ವಲಯಕ್ಕೆ ಮತ್ತು ಜಮ್ಮು ಹಾಗೂ ಕಾಶ್ಮೀರ ಮತ್ತು ಲಡಾಕ್ ಹಾಗೂ ದ್ವೀಪದ ಗಡಿ ಪ್ರದೇಶಗಳು ಸೇರಿದಂತೆ ಇತರ ದೂರದ ಪ್ರದೇಶಗಳಿಗೆ ಆದ್ಯತೆಯ ಮೇಲೆ ಸರಕು ಸಾಗಣೆ ವಿಮಾನಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡುವ ನಿರ್ಧಾರವನ್ನು ತಕ್ಷಣವೇ ಕೈಗೊಳ್ಳಲಾಯಿತು ಎಂದು  ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

https://pib.gov.in/PressReleseDetail.aspx?PRID=1611455

ಪ್ರಧಾನಮಂತ್ರಿಯವರ ಕೇರ್ಸ್ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ನೀಡಿದ ಸಿಎಸ್ಓಐ

ವಿವರಗಳಿಗೆ ಭೇಟಿ ನೀಡಿ: https://pib.gov.in/PressReleseDetail.aspx?PRID=1611256

ಕೋವಿಡ್ -19 ಸಂಬಂಧಿತ ಸ್ಪಂದನಾ ಚಟುವಟಿಕೆಗಳಿಗಾಗಿ ಖಾಸಗಿ ವಲಯ, ಎನ್.ಜಿ.ಓ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಯೋಗಕ್ಕಾಗಿ ಅಧಿಕಾರಯುತ ಗುಂಪು #6  ಸ್ಥಾಪನೆ

ಕೈಗಾರಿಕಾ ಸಂಘಟನೆಗಳು, ಐಓಗಳು ಮತ್ತು ಸಿಎಸ್.ಓಗಳೊಂದಿಗೆ ಆರು ಸಭೆಗಳನ್ನು ಮಾರ್ಚ್ 30ರಿಂದ ಏಪ್ರಿಲ್ 3ರವರೆಗೆ ನಡೆಸಲಾಗಿದ್ದು, ಅವರ ಪ್ರತಿಕ್ರಿಯೆಗೆ ಅವರು ನೀಡಿದ ಕೊಡುಗೆ, ಮುಂಬರುವ ವಾರಗಳ ಯೋಜನೆಗಳು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸರ್ಕಾರದಿಂದ ಅವರ ನಿರೀಕ್ಷೆಗಳ ಬಗ್ಗೆ ಚರ್ಚಿಸಲಾಗಿದೆ.

https://pib.gov.in/PressReleseDetail.aspx?PRID=1611500

ಕೋವಿಡ್ -19 ವಿರುದ್ಧ ಸೆಣಸಲು ಮುಂದಾದ ರಕ್ಷಣಾ ಪಿಎಸ್.ಯುಗಳು, ಓಎಫ್.ಬಿ

ಕೋವಿಡ್ -19 ವಿರುದ್ಧದ ರಾಷ್ಟ್ರೀಯ ಹೋರಾಟಕ್ಕೆ ತಾವೂ ಮುಂದಾದ ರಕ್ಷಣಾ ಸಚಿವಾಲಯದ (ಎಂಓಡಿ) ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳು (ಡಿಪಿಎಸ್.ಯುಗಳು) ಮತ್ತು ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (ಓಎಫ್ಬಿ).

https://pib.gov.in/PressReleseDetail.aspx?PRID=1611306

ಕೋವಿಡ್ 19 ಲಾಕ್ ಡೌನ್ ವೇಳೆ ಕೈಗಾರಿಕಾ ಪ್ರತಿನಿಧಿಗಳೊಂದಿಗೆ 2 ವಿಡಿಯೋ ಸಂವಾದ ನಡೆಸಿದ ಆಹಾರ ಸಂಸ್ಕರಣೆ ಕೈಗಾರಿಕೆ ಸಚಿವಾಲಯ

ಆಹಾರ ಮತ್ತು ಔಷಧ  ಲಭ್ಯತೆಯ ಸಾಗಾಟದ ನಿರ್ವಹಣೆ ಮತ್ತು ಪೂರೈಕೆ ಸರಪಣಿಯಲ್ಲಿ ಕೈಗಾರಿಕೆಗಳು ಎದುರಿಸುತ್ತಿರುವ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಕುಂದುಕೊರತೆ ಘಟಕವನ್ನು ಸ್ಥಾಪಿಸಲಾಗಿದ್ದು, ಸ್ವೀಕರಿಸಲಾಗಿರುವ ಕುಂದುಕೊರತೆ ಪೈಕಿ ಶೇ.50ರಷ್ಟು ಪರಿಹರಿಸಲಾಗಿದ್ದು, ಉಳಿದವುಗಳು ಪರಿಹಾರದ ಹಂತದಲ್ಲಿವೆ.

https://pib.gov.in/PressReleseDetail.aspx?PRID=1611378

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಎಂ.ಎಸ್.ಎಂ.ಇ. ತಂತ್ರಜ್ಞಾನ ಕೇಂದ್ರ ದೊಡ್ಡ ರೀತಿಯಲ್ಲಿ ಕೊಡುಗೆ ನೀಡಿದೆ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ.ಎಸ್.ಎಂ.ಇ) ಸಚಿವಾಲಯಡಿಯ ಹದಿನೆಂಟು ಕಾರ್ಯಾಚರಣೆಯಲ್ಲಿರುವ ತಂತ್ರಜ್ಞಾನ ಕೇಂದ್ರಗಳು, ಸ್ವಾಯತ್ತ ಸಂಸ್ಥೆಗಳು, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ತಮ್ಮದೇ ಪಾತ್ರ ವಹಿಸಿದ್ದು, ಕೊಡುಗೆ ನೀಡುತ್ತಿವೆ.

https://pib.gov.in/PressReleseDetail.aspx?PRID=1611373

ಕೋವಿಡ್ -19 ಲಾಕ್ ಡೌನ್ ವೇಳೆ ಶ್ರೀಸಾಮಾನ್ಯರ ಬಳಕೆಗಾಗಿ ಸಕ್ಕರೆ, ಉಪ್ಪು ಮತ್ತು ಖಾದ್ಯ ತೈಲ ಪೂರೈಕೆಯ ಸಂಪೂರ್ಣ ನಿರ್ವಹಣೆ ಖಾತ್ರಿ ಪಡಿಸಿದ ಭಾರತೀಯ ರೈಲ್ವೆ 

2020 ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ರೈಲ್ವೆ 1342 ಬೋಗಿ ಸಕ್ಕರೆ, 958 ಬೋಗಿ ಉಪ್ಪು ಮತ್ತು 378 ಬೋಗಿ/ಟ್ಯಾಂಕ್ ಖಾದ್ಯ ತೈಲವನ್ನು ಸಾಗಾಟ ಮಾಡಿದೆ.

https://pib.gov.in/PressReleseDetail.aspx?PRID=1611407

ಜನ್ಮ ದಾಖಲೆಗಳನ್ನು ಸ್ಥಿರೀಕರಿಸಲು ಪಿಎಫ್ ಸದಸ್ಯರಿಗೆ ಅವಕಾಶ ನೀಡಲು ಪರಿಷ್ಕೃತ ಸೂಚನೆ ನೀಡಿದ ಇಪಿಎಫ್ಓ

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ, ಆರ್ಥಿಕ ಸಂಕಷ್ಟದಲ್ಲಿರುವ ಪಿಎಫ್ ಸದಸ್ಯರಿಗೆ ತಮ್ಮ ಪಿ.ಎಫ್ ಖಾತೆಯಿಂದ ಹಿಂತಿರುಗಿಸಲಾಗದ ಮುಂಗಡವನ್ನು ಪಡೆದುಕೊಳ್ಳಲು ಆನ್‌ಲೈನ್ ಅರ್ಜಿ ಸಲ್ಲಿಸಲು ಮತ್ತು ಅಂಥ ಆನ್ ಲೈನ್ ವಿನಂತಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ಷೇತ್ರ ಅಧಿಕಾರಿಗಳಿಗೆ ಇಪಿಎಫ್ಓ ನಿರ್ದೇಶಿಸಿದೆ.

https://pib.gov.in/PressReleseDetail.aspx?PRID=1611380

 

ಪಿಐಬಿ ಕ್ಷೇತ್ರ ಕಚೇರಿಗಳಿಂದ ಬಂದ ಮಾಹಿತಿ

ಈಶಾನ್ಯ ವಲಯ

1. ಅರುಣಾಚಲ ಪ್ರದೇಶದ ಪಸಿಘಾಟ್ ನಲ್ಲಿ ನಿಯೋಜಿತ ವಿಶೇಷ 50 ಹಾಸಿಗೆಗಳ ಕೋವಿಡ್ 19 ಆಸ್ಪತ್ರೆ.

2. ಗುವಾಹತಿಯ ಕೋವಿಡ್ ಸೋಂಕು ದೃಢಪಟ್ಟ ರೋಗಿಯ ಸಂಪರ್ಕಕ್ಕೆ ಬಂದಿದ್ದ 105 ಜನರಿಂದ  ಗಂಟಲ ದ್ರವ ಸಂಗ್ರಹಣೆ.

3. ಮಣಿಪುರದ ಪ್ರಮುಖ ಆಸ್ಪತ್ರೆಗಳಲ್ಲಿ ಎಲ್ಲ ತುರ್ತು ಅಲ್ಲದ ಪ್ರಕ್ರಿಯೆಗಳ ಅಮಾನತು, ಕೋವಿಡ್ ತುರ್ತಿಗೆ ನಿಯೋಜನೆ.

4. ಇಂದು ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಆರಿಸುವಾಗ ಏರಿಳಿತ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಂಡ ಮೇಘಾಲಯ ವಿದ್ಯುತ್ ನಿಗಮ  

5. ಮಿಜೋರಾಂನಲ್ಲಿ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಇಲಾಖೆ ಕೋವಿಡ್ -19 ವಿರುದ್ಧದ ಹೋರಾಟಕ್ಕೆ 4.8 ಕೋಟಿ ವೆಚ್ಚ ಮಾಡಿದೆ

6. ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ -19 ಆಸ್ಪತ್ರೆ ಸ್ಥಾಪಿಸಲಿರುವ ನಾಗಾಲ್ಯಾಂಡ್; ಈವರೆಗೆ ಕೋಹಿಮಾ, ಮೋಕೋಕಚುಂಗ್ ಮತ್ತು ದಿಮಾಪುರ್ ನಲ್ಲಿ ಮಾತ್ರ ಇತ್ತು.

7. ಜನರು ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಗಡಿ ಪಟ್ಟಣ ಸಿಕ್ಕಿಂನ ರಾಂಗ್ಪೋದಲ್ಲಿ ವಾರದ ಹಾತ್ ಇಂದು ಮುಚ್ಚಲಾಗಿತ್ತು. 

8. ತ್ರಿಪುರಾ ಮುಖ್ಯಮಂತ್ರಿಯವರು ಇಂದು ರಾತ್ರಿ 9 ಗಂಟೆಗೆ 9 ನಿಮಿಷ ಬಾಲ್ಕನಿ ಅಥವಾ ಬಾಗಿಲ ಬಳಿ ದೀಪ ಹಚ್ಚುವಂತೆ ಜನತೆಗೆ ಮನವಿ ಮಾಡಿದ್ದಾರೆ.

ದಕ್ಷಿಣ ವಲಯ

ಕೇರಳ

ಕೋವಿಡ್ ಅನ್ನು ಸಮರ್ಥವಾಗಿ ನಿಗ್ರಹಿಸುತ್ತಿರುವುದಕ್ಕಾಗಿ ಪತನಂತಿಟ್ಟ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆಗೆ ಪ್ರಶಂಸೆ ವ್ಯಕ್ತಪಡಿಸಿದ ಸಿಎಬಿ ಕಾರ್ಯದರ್ಶಿ.

ಕೇರಳ – ಕರ್ನಾಟಕ ಗಡಿ ಮುಚ್ಚಿದ ಕಾರಣ ಕಾಸರಗೋಡಿನ ರೋಗಿಯ ಸಾವು.

ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ -19 ಸೌಲಭ್ಯ ಸ್ಥಾಪಿಸುತ್ತಿರುವ ರಾಜ್ಯ

ತಮಿಳುನಾಡು

ರಾಜ್ಯದಲ್ಲಿ ಮತ್ತೆರೆಡು ಸಾವು, ಸಾವಿನ ಸಂಖ್ಯೆ ಐದಕ್ಕೆ ಏರಿಕೆ

ಇಂದಿನಿಂದ ಚೆನ್ನೈ ನಿವಾಸಿಗಳಿಗೆ ತಪಾಸಣೆ ನಡೆಸಲಿರುವ 6000 ಕಾರ್ಯಕರ್ತರು

ಕರ್ನಾಟಕ

ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 146.ಬೆಂಗಳೂರು ನಗರದಲ್ಲಿ ಇಂದು ಎರಡು ಹೊಸ ಪ್ರಕರಣಗಳ ಸೇರ್ಪಡೆ.  ಈವರೆಗೆ ನಾಲ್ವರ ಸಾವು, 11 ಮಂದಿ ಗುಣಮುಖ.

ಆಂಧ್ರಪ್ರದೇಶ

ಇಂದು 34ಹೊಸ ಪ್ರಕರಣ, ಒಟ್ಟು  +ve ಪ್ರಕರಣಗಳು ಈಗ 226.

ಕರ್ನೂಲ್ ನಲ್ಲಿ ಇಂದು (23)  ಗರಿಷ್ಠ ಪ್ರಕರಣಗಳ ವರದಿ.

Fact Check on #Covid19

https://pbs.twimg.com/profile_banners/231033118/1584354869/1500x500

 

 

 

 

 

 

*** 



(Release ID: 1611496) Visitor Counter : 163