ರಕ್ಷಣಾ ಸಚಿವಾಲಯ

ಎನ್‌ಸಿಸಿ ಕೆಡೆಟ್‌ಗಳನ್ನು ಹೊತ್ತ ಐಎನ್‌ಎಸ್ ತಿರ್ ಸಾಗರೋತ್ತರ ನಿಯೋಜನೆಯಿಂದ ವಾಪಸ್

ಪ್ರಕಟಣಾ ದಿನಾಂಕ: 05 APR 2020 6:41PM by PIB Bengaluru

ಎನ್ಸಿಸಿ ಕೆಡೆಟ್ಗಳನ್ನು ಹೊತ್ತ ಐಎನ್ಎಸ್ ತಿರ್ ಸಾಗರೋತ್ತರ ನಿಯೋಜನೆಯಿಂದ ವಾಪಸ್

 

ದಕ್ಷಿಣ ನೌಕಾ ಕಮಾಂಡ್ (ಎಸ್ಎನ್ಸಿ) ಭಾರತೀಯ ನೌಕಾಪಡೆಯ ಕೆಡೆಟ್ತರಬೇತಿ ಹಡಗು ಐಎನ್ಎಸ್ ತಿರ್, ದೇಶದ ವಿವಿಧ ಭಾಗಗಳ 14 ನೇವಲ್ ವಿಂಗ್ ಎನ್ಸಿಸಿ ಕೆಡೆಟ್ಗಳ "ಮೊದಲ ತರಬೇತಿ ದಳ" ("First Training Squadron") ಸಾಗರೋತ್ತರ ನಿಯೋಜನೆಯನ್ನು ಪೂರ್ಣಗೊಳಿಸಿದ ನಂತರ ಕೊಚ್ಚಿಗೆ ಮರಳಿದೆ.

ಎನ್ಸಿಸಿ ಕೆಡೆಟ್ಗಳು 2020 ಫೆಬ್ರವರಿ 29 ರಂದು ಐಎನ್ಎಸ್ ಟಿರ್ ತರಬೇತಿಯನ್ನು ಪ್ರಾರಂಭಿಸಿದರು. ಅವರಿಗೆ ಭಾರತೀಯ ನೌಕಾಪಡೆಯ ರಚನಾತ್ಮಕ ತರಬೇತಿ ಕಾರ್ಯಕ್ರಮದ ಮೂಲಕ ಸಮುದ್ರದಲ್ಲಿನ ಜೀವನದ ವಿವಿಧ ಆಯಾಮಗಳಿಗೆ ಗರಿಷ್ಠ ಮಾನ್ಯತೆ ನೀಡಲಾಯಿತು. ಕೆಡೆಟ್ಗಳು ಹಡಗಿನ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮಾರಿಷಸ್ ಪೋರ್ಟ್ ಲೂಯಿಸ್ನಲ್ಲಿರುವ ವೃದ್ಧಾಶ್ರಮದಲ್ಲಿ ಹಡಗಿನ ಸಮುದಾಯ ಔಟ್ ರೀಚ್ ಕಾರ್ಯಕ್ರಮದ ಸಮಯದಲ್ಲಿ, ಎನ್ಸಿಸಿ ಕೆಡೆಟ್ಗಳು ಅಲ್ಲಿನ ವಾಸಿಗಳಿಂದ ಮೆಚ್ಚುಗೆ ಗಳಿಸಿದರು. COVID-19 ಸಾಂಕ್ರಾಮಿಕದ ಪರಿಸ್ಥಿತಿಯಿಂದಾಗಿ ಪರಸ್ಪರ ಸಂವಹನಗಳನ್ನು ನಿರ್ಬಂಧಿಸಲಾಗಿತ್ತು. ಭಾರತೀಯ ನೌಕಾ ಅಧಿಕಾರಿಗಳೊಂದಿಗಿನ ನಿಯಮಿತ ಸಂವಾದದಿಂದ ಕೆಡೆಟ್ಗಳು ಅಪಾರ ಲಾಭ ಗಳಿಸಿದರು ಮತ್ತು ಮಾಲ್ಡೀವ್ಸ್, ಸೀಶೆಲ್ಸ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ವಿದೇಶಿ ಸಮುದ್ರ ಸವಾರರು ಮತ್ತು ತರಬೇತುದಾರರು ಸಹ ಹಡಗಿನಲ್ಲಿ ಪ್ರಯಾಣ ಬೆಳೆಸಿದರು.

COVID-19 ಸಾಂಕ್ರಾಮಿಕ ರೋಗದಿಂದಾಗಿ 1 ಟಿಎಸ್ ಹಡಗಗಳ ಸಾಗರೋತ್ತರ ನಿಯೋಜನೆಯನ್ನು ಮೊಟಕುಗೊಳಿಸಲಾಯಿತು ಮತ್ತು ಸಮುದ್ರದಲ್ಲಿ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ನಂತರ  ಏಪ್ರಿಲ್ 04 ರಂದು ಹಡಗುಗಳು ಬಂದರಿಗೆ ಮರಳಿದವು. ಹಡಗುಗಳಲ್ಲಿರುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಕಾರಣ ಇಡೀ ಹಡಗಗಳನ್ನು ಅದರಲ್ಲಿರುವ ಸಿಬ್ಬಂದಿಯೊಂದಿಗೆ ಕ್ವಾರಂಟೈನ್ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹಡಗುಗಳ ಸಿಬ್ಬಂದಿ ಮತ್ತು ಎನ್ಸಿಸಿ ಕೆಡೆಟ್ಗಳು ಪ್ರಸ್ತುತ ಬಂದರಿನಲ್ಲಿ ಹೆಚ್ಚುವರಿಯಾಗಿ 14 ದಿನಗಳ ಕ್ವಾರಂಟೈನ್ ನಲ್ಲಿದ್ದಾರೆ.

***

 

 


(ಪ್ರಕಟಣೆ ಐ.ಡಿ.: 1611457) ವಿಸಿಟರ್ ಕೌಂಟರ್ : 114
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , हिन्दी , Marathi , Bengali , Assamese , Punjabi , Gujarati , Telugu