ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಭವಿಷ್ಯ ನಿಧಿ ಸದಸ್ಯರು ತಮ್ಮ ಜನ್ಮ ದಾಖಲೆಗಳನ್ನು ಸರಿಪಡಿಸಲು ಇಪಿಎಫ್‌ಒ ನಿಂದ ಪರಿಷ್ಕೃತ ಸೂಚನೆಗಳು
Posted On:
05 APR 2020 3:47PM by PIB Bengaluru
ಭವಿಷ್ಯ ನಿಧಿ ಸದಸ್ಯರು ತಮ್ಮ ಜನ್ಮ ದಾಖಲೆಗಳನ್ನು ಸರಿಪಡಿಸಲು ಇಪಿಎಫ್‌ಒ ನಿಂದ ಪರಿಷ್ಕೃತ ಸೂಚನೆಗಳು
COVID-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆನ್ಲೈನ್ ಸೇವೆಗಳ ಲಭ್ಯತೆ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿ, ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ ಪರಿಷ್ಕೃತ ಸೂಚನೆಗಳನ್ನು ನೀಡಿದ್ದು, ಪಿಎಫ್ ಸದಸ್ಯರು ತಮ್ಮ ಹುಟ್ಟಿದ ದಿನಾಂಕವನ್ನು ಯುಎಎನ್ KYC ಗೆ ಸರಿ ಹೊಂದುವಂತೆ ಇಪಿಎಫ್‌ಒ ದಾಖಲೆಗಳಲ್ಲಿ ಸರಿಪಡಿಸಲು ನೆರವಾಗುವಂತೆ ಹೇಳಿದೆ.
ಎರಡು ದಿನಾಂಕಗಳಲ್ಲಿನ ವ್ಯತ್ಯಾಸವು 3 ವರ್ಷಗಳಿಗಿಂತ ಕಡಿಮೆಯಿದ್ದರೆ, ಅದನ್ನು ಸರಿಪಡಿಸಲು 'ಆಧಾರ್' ನಲ್ಲಿ ದಾಖಲಾದ ಜನ್ಮ ದಿನಾಂಕವನ್ನು ಜನ್ಮ ದಿನಾಂಕದ ಸಮಂಜಸ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ. ಪಿಎಫ್ ಚಂದಾದಾರರು ತಿದ್ದುಪಡಿ ವಿನಂತಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು.
ಇದು ಯುಐಡಿಎಐನೊಂದಿಗೆ ಆನ್ಲೈನ್ನಲ್ಲಿ ಸದಸ್ಯರ ಹುಟ್ಟಿದ ದಿನಾಂಕವನ್ನು ತ್ವರಿತವಾಗಿ ಸರಿಪಡಿಸಲು ಇಪಿಎಫ್ಒಗೆ ಅನುವು ಮಾಡಿಕೊಡುತ್ತದೆ, ಹೀಗಾಗಿ ದಿನಾಂಕ ಬದಲಾವಣೆ ವಿನಂತಿಗಳ ಪ್ರಕ್ರಿಯೆಯ ಸಮಯವೂ ಕಡಿಮೆಯಾಗುತ್ತದೆ.
ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಆರ್ಥಿಕ ತೊಂದರೆಯಲ್ಲಿರುವ ಪಿಎಫ್ ಸದಸ್ಯರು ತಮ್ಮ ಪಿಎಫ್ ಕ್ರೋಢೀಕರಣದಿಂದ ಮರುಪಾವತಿಸಲಾಗದ ಮುಂಗಡವನ್ನು ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅನುವಾಗುವಂತೆ ಆನ್ಲೈನ್ ವಿನಂತಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ ಸೂಚನೆ ನೀಡಿದೆ.
***
(Release ID: 1611380)
Visitor Counter : 194
Read this release in:
English
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam