ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿರುವ ಎಂ ಎಸ್ ಎಂ ಇ ತಂತ್ರಜ್ಞಾನ ಕೇಂದ್ರಗಳು
Posted On:
05 APR 2020 2:15PM by PIB Bengaluru
ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿರುವ ಎಂ ಎಸ್ ಎಂ ಇ ತಂತ್ರಜ್ಞಾನ ಕೇಂದ್ರಗಳು
ಭಾರತ ದೇಶ ಪ್ರಸ್ತುತ ಮಾರಕ ಕೊರೊನಾ ಸೋಂಕಿನ ವಿರುದ್ಧ ನಾನಾ ಹಂತಗಳಲ್ಲಿ ಹೋರಾಟ ನಡೆಸುತ್ತಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ ಎಂಇ) ಸಚಿವಾಲಯದಡಿಯಲ್ಲಿ ಬರುವ ಹಾಲಿ ಕಾರ್ಯನಿರ್ವಹಿಸುತ್ತಿರುವ 18 ಸ್ವಾಯತ್ತ ಸಂಸ್ಥೆಗಳಾದ ತಂತ್ರಜ್ಞಾನ ಕೇಂದ್ರಗಳೂ ಸಹ ಕೋವಿಡ್-19 ವಿರುದ್ಧ ಹೋರಾಟದಲ್ಲಿ ತಮ್ಮ ಪಾತ್ರ ವಹಿಸುತ್ತಿವೆ ಮತ್ತು ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತಿವೆ.
ಚೆನ್ನೈನ ಕೇಂದ್ರೀಯ ಪಾದರಕ್ಷೆ ತರಬೇತಿ ಕೇಂದ್ರ(ಸಿಎಫ್ ಟಿಐ), ಮಾಸ್ಕ್ ಗಳಿಗೆ ಮತ್ತು ವೈದ್ಯಕೀಯ ಗೌನ್ (ನಿಲುವಂಗಿ) ಗಳಿಗೆ ಮುದ್ರೆಯೊತ್ತುವ ಕೆಲಸ ಮಾಡಲು ಬಿಸಿ ಮುದ್ರೆಯೊತ್ತುವ ಯಂತ್ರವನ್ನು ಖರೀದಿ ಮಾಡಿ ಅದನ್ನು ಅಳವಡಿಸಿಕೊಂಡಿದೆ. ಯಂತ್ರದಲ್ಲಿ ಜಾಬ್ ವರ್ಕ್ ನಂತರ, ಚೆನ್ನೈನ ಶ್ರೀ ಹೆಲ್ತ್ ಕೇರ್ ಆರೋಗ್ಯ ಸಚಿವಾಲಯಕ್ಕೆ ಪೂರೈಕೆದಾರರಾಗಿ ಅನುಮೋದಿಸಿದೆ. ಚೆನ್ನೈನ ಸಿಎಫ್ ಟಿಐ ಉದ್ಯಮದಿಂದ ಮತ್ತೆರಡು ಯಂತ್ರಗಳನ್ನು ಖರೀದಿಸಿ, 2020ರ ಏಪ್ರಿಲ್ 4ರಿಂದ ಆರಂಭವಾಗಿರುವ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದೆ.
ಹೈದರಾಬಾದ್ ನ ಎಂಎಸ್ ಎಂಇ ತಂತ್ರಜ್ಞಾನ ಕೇಂದ್ರ ಪ್ರೊಟೋಟೈಪ್ ವೆಂಟಿಲೇಟರ್ ಅನ್ನು ಅಭಿವೃದ್ಧಿಗೊಳಿಸುತ್ತಿದೆ. ಇದು ಎಲೆಕ್ಟ್ರೋ ಮ್ಯಾಕ್ಯಾನಿಕಲ್ ವೆಂಟಿಲೇಟರ್ ಆಗಿದ್ದು, ಸೆನ್ಸಾರ್ ಗಳನ್ನು ಆಧರಿಸಿರುತ್ತದೆ. ಮೊದಲ ಪ್ರೋಟೋಟೈಪ್ ವೆಂಟಿಲೇಟರ್ ಸದ್ಯದಲ್ಲೇ ಸಿದ್ಧವಾಗಲಿದೆ. ಔರಂಗಾಬಾದ್ ನ ಎಸ್ ಎಂಇ ಟಿಸಿ , 3ಡಿ ಪ್ರೋಟೋಟೈಪ್ ಮುಖಗವಸನ್ನು ಅಭಿವೃದ್ಧಿಪಡಿಸಿದೆ. ತನ್ನ ಸಂಪರ್ಕದಲ್ಲಿ ಸ್ಥಳೀಯ ಆಸ್ಪತ್ರೆಗೆ ಅನುಮೋದನೆಗೆ ಕಳುಹಿಸಿದೆ.
ಕೋಲ್ಕತ್ತಾದ ಕೇಂದ್ರೀಯ ಯಂತ್ರೋಪಕರಣಗಾರ ಮತ್ತು ತರಬೇತಿ ಸಂಸ್ಥೆ(ಸಿಟಿಟಿಸಿ), ಸಾಗರ್ ದತ್ತಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಸಮಾಲೋಚನೆ ನಡೆಸಿ ಸರಳ ಮತ್ತು ಅತಿ ಕಡಿಮೆ ವೆಚ್ಚದ ವೆಂಟಿಲೇಟರ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆ ಆಸ್ಪತ್ರೆ, ಪರೀಕ್ಷಗೆ ಮತ್ತು ಪ್ರಯೋಗದ ವೇಳೆ ನಿರ್ವಹಣೆಗೆ ಭರವಸೆ ನೀಡಿದೆ. ಕೆಲವು ನ್ಯೂಮ್ಯಾಟಿಕ್ ಸಲಕರಣೆಗಳಿಗೆ ಬೇಡಿಕೆ ಒಡ್ಡಲಾಗಿದ್ದು, ಪ್ರೊಟೊಟೈಪ್ ವೆಂಟಿಲೇಟರ್ ಅನ್ನು ಅಂತಿಮವಾಗಿ ಸಿದ್ಧಪಡಿಸಲು ಅವುಗಳಿಗಾಗಿ ಕಾಯಲಾಗುತ್ತಿದೆ. ಅಲ್ಲದೆ ಇದು ಮುಖ ರಕ್ಷಿಸುವ ಪ್ರೊಟೊಟೈಪ್ ಮಾಸ್ಕ್ ಅನ್ನು ಅಭಿವೃದ್ಧಿಪಡಿಸಿದೆ. ಅದು ಸುಮಾರು(ತಿಂಗಳಿಗೆ 20,000) ಮಾಸ್ಕ್ ಅನ್ನು ಉತ್ಪಾದಿಸಲಿದ್ದು, ಅವುಗಳ ವೆಚ್ಚ ಒಂದಕ್ಕೆ 15 ರಿಂದ 20 ರೂ..
ಕನ್ನೂಜ್ ನ ಎಂಎಸ್ ಎಂಇ ತಂತ್ರಜ್ಞಾನ ಕೇಂದ್ರ ಮದ್ಯಸಾರ ಆಧರಿಸಿದ ಸ್ಯಾನಿಟೈಸರ್ ಅನ್ನು ಈಗಾಗಲೇ ಉತ್ಪಾದಿಸುತ್ತಿದೆ ಮತ್ತು ಡಿಎಂ ಫಾರುಖಾಬಾದ್ ಗೆ ಕಳುಹಿಸುತ್ತಿದೆ. ಅಲ್ಲದೆ ರೈಲ್ವೆ ಮತ್ತು ಇತರೆ ಸಂಸ್ಥೆಗಳಿಗೂ ಸಹ ಪೂರೈಕೆ ಮಾಡುತ್ತಿವೆ.
ವಿದ್ಯುನ್ಮಾನ ಅಳತೆ ಮಾಪಕಗಳ ವಿನ್ಯಾಸ ಕೇಂದ್ರ(ಐಡಿಇಎಂಐ) ಐಯಾನ್ ಆಧಾರಿತ ಸ್ಯಾನಿಟೈಸರ್ ಅನ್ನು ಉತ್ಪಾದಿಸುತ್ತಿದೆ. ಇದು ಬಿಎಆರ್ ಸಿ ಯ ಸಂಶೋಧನೆಯನ್ನು ಆಧರಿಸಿದ್ದಾಗಿದೆ. ಇದು ಯಶಸ್ವಿಯಾದರೆ ಅದು ಬಹು ಬಳಕೆಗೆ ಅನ್ವಯವಾಗಲಿದೆ.
ಹೈದ್ರಾಬಾದ್, ಭುವನೇಶ್ವರ್ ಮತ್ತು ಜಮ್ ಶೆಡ್ ಪುರದ ಎಂಎಸ್ ಎಂಇ ತಾಂತ್ರಿಕ ಕೇಂದ್ರಗಳು 650 ಕೊರೋನಾ ಪರೀಕ್ಷಾ ಕಿಟ್ ಗಳಿಗೆ ಅಗತ್ಯ ಉಪಕರಣಗಳ ಉತ್ಪಾದನೆಯಲ್ಲಿ ತೊಡಗಿವೆ. ಪ್ರತಿಯೊಂದು ಕಿಟ್ ನಲ್ಲೂ 20 ಬಗೆಯ ಹಾರ್ಡ್ ವೇರ್ ಬಿಡಿ ಭಾಗಗಳಿರುತ್ತವೆ. ಭುವನೇಶ್ವರದಲ್ಲಿ ಸದ್ಯದಲ್ಲೇ ಮೊದಲ ಸೆಟ್ ನ ಬಿಡಿ ಭಾಗಗಳು ಸಿದ್ಧವಾಗಲಿವೆ. ಒಮ್ಮೆ ಅದಕ್ಕೆ ಮಾನ್ಯತೆ ದೊರೆತರೆ ಇತರೆ ತಾಂತ್ರಿಕ ಕೇಂದ್ರಗಳಲ್ಲೂ ಸಹ ಅವುಗಳ ಉತ್ಪಾದನೆಯಾಗಲಿವೆ.
ಎಎಂಟಿಝಡ್ ಗೆ 10000 ವೆಂಟಿಲೇಟರ್ ಗಳ ಬಿಡಿ ಭಾಗಗಳ ಅಗತ್ಯವಿದೆ. ಅದರ ವಿನ್ಯಾಸದ ಚಿತ್ರಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಭುವನೇಶ್ವರದ ಜಿಎಂಟಿಸಿಗೆ ಈಗಾಗಲೇ ಅಗತ್ಯ ಬಿಡಿ ಭಾಗಗಳನ್ನು ಉತ್ಪಾದಿಸಲು ಸೂಚಿಸಲಾಗಿದ್ದು, ಉಳಿದ ಬಿಡಿ ಭಾಗಗಳನ್ನು ಇತರೆ ತಾಂತ್ರಿಕ ಕೇಂದ್ರಗಳಿಗೆ ವಹಿಸಲಾಗಿದೆ. ಉದಾಹರಣೆಗೆ ಸಿಟಿಆರ್ ಲೂಧಿಯಾನ, ಐಡಿಇಎಂಐ ಇಂಡೋ ಜರ್ಮನ್ ಯಂತ್ರೋಪಕರಣಗಾರ(ಐಜಿಟಿಆರ್), ಔರಂಗಾಬಾದ್, ಕೋಲ್ಕತ್ತಾ ಮತ್ತು ಐಡಿಟಿಆರ್ ಜೆಮ್ ಶೆಡ್ ಪುರ, ತಾಂತ್ರಿಕ ಕೇಂದ್ರಗಳಿಗೆ ತಮ್ಮ ಕೆಲಸವನ್ನು ಚುರುಕುಗೊಳಿಸುವಂತೆ ಮನವಿ ಮಾಡಲಾಗಿದೆ.
ಇಎಸ್ ಟಿಸಿ ರಾಮನಗರ, ಕೋವಿಡ್-19ಗೆ ನಾಲ್ಕನೇ ದರ್ಜೆಯ ಮೋಟಿವೇಟೆಡ್ 70 ಎಂಎಫ್ಆರ್ ಎಸ್ ಗಳನ್ನು ವಿನ್ಯಾಸಗೊಳಿಸಿದೆ ಮತ್ತು ಜಿಇಎಂ ಜೊತೆ ನೋಂದಣಿ ಮಾಡಿಕೊಳ್ಳಲಾಗಿದೆ. ಇಎಸ್ ಟಿಸಿ ವಿದ್ಯಾರ್ಥಿ ನಿಲಯವನ್ನು 80 ವಲಸೆ ಕಾರ್ಮಿಕರ ನಿರಾಶ್ರಿತ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಭಿವಾಡಿ ಎಂಎಸ್ ಎಂಇ ತಂತ್ರಜ್ಞಾನ ಕೇಂದ್ರ ಮತ್ತು ಜೆಮ್ ಶೆಡ್ ಪುರ ತಂತ್ರಜ್ಞಾನ ಕೇಂದ್ರಗಳು ತಮ್ಮ ಖಾಲಿ ಇರುವ ಕೋಣೆಗಳಲ್ಲಿ ಐಸೋಲೇಶನ್ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿವೆ.
ಆಗ್ರಾದ ಸಂಸ್ಕರಣೆ ಮತ್ತು ಪದಾರ್ಥಗಳ ಉತ್ಪಾದನಾ ಅಭಿವೃದ್ಧಿ ಕೇಂದ್ರ(ಪಿಪಿಡಿಸಿ) ಮತ್ತು ಇಂದೋರ್ ನ ಐಜಿಟಿಆರ್ ಜಂಟಿಯಾಗಿ ಆಸ್ಪತ್ರೆ ಪೀಠೋಪಕರಣಗಳ ಉತ್ಪಾದನೆಗೆ ಯೋಜನೆ ರೂಪಿಸಿವೆ. ಆ ಪೀಠೋಪಕರಣಗಳ ವಿನ್ಯಾಸ ಮತ್ತಿತರ ಪ್ರಕ್ರಿಯೆಗಳು ನಡೆದಿವೆ. ಪಿಪಿಡಿಸಿ ಮೀರತ್ ಫ್ಯಾಬ್ರಿಕೇಟೆಡ್ ಮುಖಗವಸನ್ನು ಸಿದ್ಧಪಡಿಸಿ, ಉಚಿತವಾಗಿ ವಿತರಣೆ ಮಾಡಿದೆ. ಆಗ್ರಾ ಸಿಎಫ್ ಟಿಐ ಕೂಡ ಫ್ಯಾಬ್ರಿಕೇಟೆಡ್ ವೈದ್ಯಕೀಯ ಗೌನ್ (ನಿಲುವಂಗಿ) ಗಳನ್ನು ಆಗ್ರಾದ ಮೆಸರ್ಸ್ ರಾಮ್ ಸನ್ಸ್ ಗೆ ಪೂರೈಸಿದೆ. ಅಲ್ಲದೆ ಇದು ಮೂರು ಪದರಗಳುಳ್ಳ ಫ್ಯಾಬ್ರಿಕೇಟ್ ಮಾಸ್ಕ್ ಗಳನ್ನು ಸಿದ್ಧಪಡಿಸಿದೆ.
******
(Release ID: 1611373)
Visitor Counter : 294
Read this release in:
English
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam