PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ          

Posted On: 04 APR 2020 7:02PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ          

 

Coat of arms of India PNG images free download

 

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ.)

 

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಈವರೆಗೆ 2902 ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, 68 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 183 ಜನರು ಗುಣಮುಖರಾಗಿ/ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 17 ರಾಜ್ಯಗಳಲ್ಲಿ ತಬ್ಲಿಘಿ ಜಮಾತ್ ನಂಟಿರುವ 1023 ಪ್ರಕರಣಗಳು ವರದಿಯಾಗಿವೆ. ವಯಸ್ಸಾದ ಅಥವಾ ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ/ಹೃದಯ ಸಂಬಂಧಿ ಇತ್ಯಾದಿ ಕಾಯಿಲೆ ಇರುವ ವಯಸ್ಸಾದವರೇ ಹೆಚ್ಚಾಗಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

https://pib.gov.in/PressReleseDetail.aspx?PRID=1611210

ಅಧಿಕಾರಯುತ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ದೇಶಾದ್ಯಂತ ಆಸ್ಪತ್ರೆಗಳ ಲಭ್ಯತೆ, ಸೂಕ್ತ ಪ್ರತ್ಯೇಕೀಕರಣ ಮತ್ತು ದಿಗ್ಭಂದನ ಸೌಲಭ್ಯ ಮತ್ತು ಕಾಯಿಲೆಯ ನಿಗಾ, ಪರೀಕ್ಷೆ ಮತ್ತು ಮಹತ್ವದ ಆರೈಕೆ ತರಬೇತಿಯ ಪರಾಮರ್ಶೆ ನಡೆಸಿದರು ಮತ್ತು ಪಿಪಿಇ, ಮಾಸ್ಕ್ ಗಳು, ಕೈಗವಸುಗಳು ಮತ್ತು ವೆಂಟಿಲೇಟರ್ ಸೇರಿದಂತೆ ಅತ್ಯಾವಶ್ಯಕ ವೈದ್ಯಕೀಯ ಉಪಕರಗಳ ಉತ್ಪಾದನೆ, ದಾಸ್ತಾನು ಮತ್ತು ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಸಂಬಂಧಿತ ಗುಂಪುಗಳು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

https://pib.gov.in/PressReleseDetail.aspx?PRID=1611029

5ನೇ ಏಪ್ರಿಲ್ ರಾತ್ರಿ 9 ಗಂಟೆಗೆ ದೀಪ ಬೆಳಗಿಸುವ ಕಾರ್ಯಕ್ರಮದ ವೇಳೆ ಗ್ರಿಡ್ ಗಳ ಸ್ಥಿರತೆಯನ್ನು ನಿರ್ವಹಿಸಲು ಸೂಕ್ತ ಸಿದ್ಧತೆ ಮತ್ತು ಶಿಷ್ಟಾಚಾರ ಪಾಲನೆಗೆ ಕ್ರಮ

ಪ್ರಧಾನಮಂತ್ರಿಯವರು ಏಪ್ರಿಲ್ 5ರಂದು ರಾತ್ರಿ 9 ಗಂಟೆಯಿಂದ 9.09ರವರೆಗೆ ಸ್ವಯಂ ಮನೆಯ ದೀಪಗಳನ್ನು ನಂದಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಇದರಿಂದ ಗ್ರಿಡ್‌ನಲ್ಲಿ ಅಸ್ಥಿರತೆ ಮತ್ತು ವೋಲ್ಟೇಜ್‌ ಏರಿಳಿತಕ್ಕೆ ಕಾರಣವಾಗಬಹುದು ಮತ್ತು ಅದರಿಂದ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಬಹುದು ಎಂದು ಕೆಲವು ಆತಂಕಗಳನ್ನು ವ್ಯಕ್ತಪಡಿಸಲಾಗಿದೆ. ಈ ಆತಂಕಗಳು ಸರಿಯಲ್ಲ.

https://pib.gov.in/PressReleseDetail.aspx?PRID=1611153

ರಾಷ್ಟ್ರವ್ಯಾಪಿ ಲಾಕ್‌ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಸರಪಳಿಯ ಸುಗಮ ಹರಿವನ್ನು ಖಾತ್ರಿಪಡಿಸುವಲ್ಲಿ ರಾಜ್ಯಗಳು ಎದುರಿಸುತ್ತಿರುವ ತಳಮಟ್ಟದ ಸಮಸ್ಯೆಗಳ ಬಗ್ಗೆ ಎಂ.ಎಚ್.ಎ ಸ್ಪಷ್ಟಪಡಿಸಿದೆ

ತಳಮಟ್ಟದಲ್ಲಿ ಯಾವುದೇ ಅಸ್ಪಷ್ಟತೆಯ ಗೊಂದಲ ತಪ್ಪಿಸಲು ಸ್ಪಷ್ಟೀಕರಣಗಳ ಬಗ್ಗೆ ಜಿಲ್ಲಾ ಪ್ರಾಧಿಕಾರಿಗಳಿಗೆ ಮತ್ತು ಕ್ಷೇತ್ರೀಯ ಸಂಸ್ಥೆಗಳಿಗೆ ತಿಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

https://pib.gov.in/PressReleseDetail.aspx?PRID=1610985

ಕೃಷಿ ಯಂತ್ರೋಪಕರಣ, ಬಿಡಿಭಾಗ ಮತ್ತು ರಿಪೇರಿ ಮಳಿಗೆಗಳು, ಟ್ರಕ್ ರಿಪೇರಿ ಅಂಗಡಿಗಳು ಮತ್ತು ಚಹಾ ಕೈಗಾರಿಕೆಗಳಿಗೆ ಲಾಕ್ ಡೌನ್ ದಿಗ್ಬಂಧನದಿಂದ ವಿನಾಯಿತಿ ನೀಡಿ ಎಂ.ಎಚ್.ಎ. ಅನುಬಂಧ ಹೊರಡಿಸಿದೆ

https://pib.gov.in/PressReleseDetail.aspx?PRID=1610988

ಕೋವಿಡ್ 19 ವಿರುದ್ಧದ ಹೋರಾಟಕ್ಕಾಗಿ 21 ದಿನಗಳ ಲಾಕ್ ಡೌನ್ ವೇಳೆ ಸುಗಮವಾಗಿ ಕೊಯ್ಲು ಮಾಡಲು ಮತ್ತು ಬಿತ್ತನೆ ಚಟುವಟಿಕೆ ನಡೆಯುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ರಾಜ್ಯಗಳಿಗೆ ಎಂ.ಎಚ್.ಎ. ಪತ್ರ ಬರೆದಿದೆ.

https://pib.gov.in/PressReleseDetail.aspx?PRID=1610920

ಟಿಡಿಎಸ್/ ಟಿಸಿಎಸ್ ನಿಬಂಧನೆಗಳ  ಅನುಸರಣೆಯಿಂದ ತೆರಿಗೆದಾರರಿಗೆ ಉದ್ಭವಿಸುವ ತೊಂದರೆಗಳನ್ನು ತಗ್ಗಿಸಲು ಐಟಿ ಕಾಯಿದೆ 1961ರ 119ನೆ ಸೆಕ್ಷನ್ ಅಡಿಯಲ್ಲಿ ಆದೇಶ ಹೊರಡಿಸಿದ ಸಿಬಿಡಿಟಿ

ಕೋವಿಡ್ -19 ಮಹಾಮಾರಿಯಿಂದಾಗಿ ಎಲ್ಲ ವಲಯಗಳ ಸಾಮಾನ್ಯ ವಹಿವಾಟು ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ತೆರಿಗೆದಾರರಿಗೆ ಎದುರಾಗಿರುವ ತೊಂದರೆ ತಗ್ಗಿಸಲು ಸಿಬಿಡಿಟಿ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 119ರ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು ನಿರ್ದೇಶನ/ಸ್ಪಷ್ಟೀಕರಣ ಹೊರಡಿಸಿದೆ.

https://pib.gov.in/PressReleseDetail.aspx?PRID=1611251

ಡಾ. ಹರ್ಷವರ್ಧನ್ ಕೋವಿಡ್ 19ರಿಂದ ಹೊರಬರಲು ಮಾಡಿಕೊಂಡಿರುವ ಸಿದ್ಧತೆಗಳ ಖುದ್ದು ಪರಿಶೀಲನೆಗಾಗಿ ಎಲ್.ಎನ್.ಜೆ.ಪಿ. ಆಸ್ಪತ್ರೆಗೆ ಭೇಟಿ ನೀಡಿದ್ದರು. ಎಲ್.ಎನ್.ಜೆ.ಪಿ ಸಮರ್ಪಿತ ಕೋವಿಡ್ 19 ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸಲಿದೆ

https://pib.gov.in/PressReleseDetail.aspx?PRID=1611213

ರಾಜ್ಯಗಳ ವಿಪತ್ತು ಅಪಾಯ ನಿರ್ವಹಣಾ ನಿಧಿಯಡಿಯಲ್ಲಿ 11,092 ಕೋಟಿ ರೂ. ಬಿಡುಗಡೆಗೆ ಗೃಹ ಸಚಿವಾಲಯದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಶ್ರೀ ಅಮಿತ್ ಶಆ ಅವರು ರಾಜ್ಯಗಳ ವಿಪತ್ತು ಅಪಾಯ ನಿರ್ವಹಣಾ ನಿಧಿ (ಎಸ್.ಡಿ.ಆರ್.ಎಂ.ಎಫ್.) ಅಡಿಯಲ್ಲಿ ಎಲ್ಲ ರಾಜ್ಯಗಳಿಗೆ ನೀಡಲು 11,092 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ.

https://pib.gov.in/PressReleseDetail.aspx?PRID=1610921

ಪ್ರಧಾನಮಂತ್ರಿ ಮತ್ತು ಇಸ್ರೇಲ್ ಪ್ರಧಾನಮಂತ್ರಿಯವರ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನಮಂತ್ರಿಯವರು ಇಸ್ರೇಲ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರೂ ನಾಯಕರು ಕೋವಿಡ್ 19 ಸಾಂಕ್ರಾಮಿಕ ರೋಗದ ಬಗ್ಗೆ ಮತ್ತು ತಮ್ಮ ತಮ್ಮ ಸರ್ಕಾರಗಳು ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಳವಡಿಸಿಕೊಂಡಿರುವ ಸ್ಪಂದನಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.

https://pib.gov.in/PressReleseDetail.aspx?PRID=1610879

ಕೋವಿಡ್ 19 ಹಿನ್ನೆಲೆಯಲ್ಲಿ ಮತ್ತೆ ರಾಜ್ಯಸಭೆ ಚುನಾವಣೆ ಮುಂದೂಡಿದ ಇ ಸಿ ಐ, ಹೊಸ ದಿನಾಂಕ ನಂತರ ಪ್ರಕಟಣೆ

https://pib.gov.in/PressReleseDetail.aspx?PRID=1610883

ಸುಗಮ ಹಿಂಗಾರು ಬೆಳೆಯ ಕೊಯ್ಲು ಮತ್ತು ಬೇಸಿಗೆ ಬೆಳೆಯ ಬಿತ್ತನೆಗೆ ಕ್ರಮ

ಲಾಕ್ ಡೌನ್ ಸಮಯದಲ್ಲಿ ರೈತರು ಯಾವುದೇ ದುಷ್ಪರಿಣಾಮ ಅನುಭವಿಸಬಾರದು ಎಂಬ ಹಿನ್ನೆಲೆಯಲ್ಲಿ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ಹಿಂಗಾರು ಬೆಳೆಯ ಸುಗಮ ಕೊಯ್ಲು ಮತ್ತು ಬೇಸಿಗೆ ಬೆಳೆಯ ಬಿತ್ತನೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ.

https://pib.gov.in/PressReleseDetail.aspx?PRID=1610923

ಕೋವಿಡ್ -19 ತಡೆಗೆ ಮನೆಯಲ್ಲೇ ತಯಾರಿಸುವ ಮಾಸ್ಕ್ ಗಳಿಗಾಗಿ ಕೈಪಿಡಿ

https://pib.gov.in/PressReleseDetail.aspx?PRID=1610963

ಕೋವಿಡ್ -19 ಮಹಾಮಾರಿಯ ಹಿನ್ನೆಲೆಯಲ್ಲಿ ಎನ್.ಆರ್.ಎಲ್.ಎಂ. ಅಡಿಯಲ್ಲಿ ಮಾಸ್ಕ್ ತಯಾರಿಕೆಗೆ ಕ್ರಮ

ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ.)ದಡಿಯಲ್ಲಿ 399 ಜಿಲ್ಲೆಗಳನ್ನು ಒಳಗೊಂಡ 24 ಸದಸ್ಯ ರಾಜ್ಯಗಳಲ್ಲಿ ಸ್ವ ಸಹಾಯ ಗುಂಪು (ಎಸ್.ಎಚ್.ಜಿ.ಗಳು)ಗಳಿಂದ ಮಾಸ್ಕ್ ತಯಾರಿಕೆಗೆ ಕ್ರಮ.

https://pib.gov.in/PressReleseDetail.aspx?PRID=1611141

ಕೋವಿಡ್ -19 ಮಾದರಿ ಪರೀಕ್ಷೆ ಕೈಗೆತ್ತಿಕೊಂಡ ಸಿಎಸ್ಐಆರ್-ಇಮ್ಟೆಕ್

ವೈಯಕ್ತಿಕ ಸುರಕ್ಷತಾ ಸಾಧನ ಒದಗಿಸುವ ಮೂಲಕ ಆರೋಗ್ಯ ವೃತ್ತಿಪರರಿಗೆ ನೆರವಾಗುತ್ತರುವ ಸಿಎಸ್ಐಆರ್-ಇಮ್ಟೆಕ್

https://pib.gov.in/PressReleseDetail.aspx?PRID=1611170

ಕೋವಿಡ್ 19 ಲಾಕ್ ಡೌನ್ ಅವಧಿಯಲ್ಲಿ ಇಂಧನ, ಸಾರಿಗೆ ಮತ್ತು ಪ್ರಮುಖ ಮೂಲಸೌಕರ್ಯ ವಲಯಗಳಿಗೆ ಪೂರೈಕೆ ಸರಪಣಿಯ ಸಂಪೂರ್ಣ ಕಾರ್ಯಾಚರಣೆಯ ಖಾತ್ರಿ ನೀಡಿದ ಭಾರತೀಯ ರೈಲ್ವೆ

https://pib.gov.in/PressReleseDetail.aspx?PRID=1611189

ಕೋವಿಡ್ 19 ವಿರುದ್ಧದ ಭಾರತದ ಹೋರಾಟಕ್ಕೆ ಬಲ ನೀಡಿದ ದೇಶೀಯ ಸರಕು ಸಾಗಣೆ ವಿಮಾನಗಳು

https://pib.gov.in/PressReleseDetail.aspx?PRID=1611150

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದ ಪೂರಕ ಕೈಗಾರಿಕೆಗಳೊಂದಿಗೆ ವಾಸ್ತವ ಸಮಾವೇಶ ನಡೆಸಿದ ಪ್ರವಾಸೋದ್ಯಮ ಸಚಿವಾಲಯ

https://pib.gov.in/PressReleseDetail.aspx?PRID=1611164

ಕೋವಿಡ್ 19 ಕುರಿತಂತೆ ದೇಶಾದ್ಯಂತದ ವಿವಿಧ ವಿಶ್ವವಿದ್ಯಾಲಯ, ಕಾಲೇಜು ಮತ್ತು ಶಾಲೆಗಳ ಮುಖ್ಯಸ್ಥರು, ಬೋಧಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎಚ್.ಆರ್.ಡಿ. ಸಚಿವಾಲಯ

ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆ ಅರ್ಪಿಸಿದ ಶ್ರೀ ನಿಶಾಂಖ್

https://pib.gov.in/PressReleseDetail.aspx?PRID=1610980

ಎಂ.ಎಚ್.ಆರ್.ಡಿ ಯ ಎ.ಐ.ಸಿ.ಟಿ.ಇ ಕೋವಿಡ್ -19 ವಿದ್ಯಾರ್ಥಿಗಳ ಸಹಾಯವಾಡಿ ಪೋರ್ಟಲ್ ಆರಂಭ

ಕೋವಿಡ್ 19 ಮಹಾಮಾರಿ ಮತ್ತು ರಾಷ್ಟ್ರೀಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಕಾಲೇಜು ಮತ್ತು ಹಾಸ್ಟೆಲ್ ಮುಚ್ಚಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ನೆರವು ಮತ್ತು ಬೆಂಬಲ ನೀಡಲು ಮತ್ತು ಸಮಸ್ಯೆ ಪರಿಹರಿಸಲು ಎಐಸಿಟಿಇ ಒಂದು ಅನನ್ಯ ಎಂಎಚ್ಆರ್.ಡಿ. ಎಐಸಿಟಿಇ ಕೋವಿಡ್ 19 ವಿದ್ಯಾರ್ಥಿ ಸಹಾಯವಾಣಿ ಪೋರ್ಟಲ್ ಆರಂಭಿಸಿದೆ.

ಅದರ ವಿಳಾಸ https://helpline.aicte-india.org

https://pib.gov.in/PressReleseDetail.aspx?PRID=1610978

ಕೋವಿಡ್ 19 ಪರಿಸ್ಥಿತಿಯ ನಿರ್ವಹಣೆಗೆ ಬಂದರುಗಳ ಬಾಧ್ಯಸ್ಥರುಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಶಿಪ್ಪಿಂಗ್ ಸಚಿವರು

https://pib.gov.in/PressReleseDetail.aspx?PRID=1610982

ಅಗತ್ಯ ಇರುವವರಿಗೆ ಗೋವಾ ನೌಕಾ ಪ್ರದೇಶದಿಂದ ನೆರವಿನ ಬೆಂಬಲ

https://pib.gov.in/PressReleseDetail.aspx?PRID=1610993

ಕೊರೊನಾ ವೈರಾಣು ವಿರುದ್ಧದ ಹೋರಾಟಕ್ಕೆ ಐಎಎಫ್ ನ ಮುಂದುವರಿದ ಬೆಂಬಲ

https://pib.gov.in/PressReleseDetail.aspx?PRID=1610994

ಕೋವಿಡ್ 19 ಸಾಂಕ್ರಾಮಿಕ ಪಿಡುಗಿನಿಂದ ಹೊರಬರಲು ಕೆಲಸದ ಪರಿಹಾರಗಳನ್ನು ಕಂಡು ಹಿಡಿಯಲು ಆನ್‌ಲೈನ್ ಹ್ಯಾಕಥಾನ್ ಗೆ ಚಾಲನೆ

https://pib.gov.in/PressReleseDetail.aspx?PRID=1611012

ಕೋವಿಡ್ 19 ಮಹಾಮಾರಿ ವಿರುದ್ಧದ ಹೋರಾಟಕ್ಕೆ ಡಿಎಸ್ಟಿ ಆರ್ಥಿಕ ನೆರವಿನ ನವೋದ್ಯಮದಿಂದ ರಾಸಾಯನಿಕ ಮುಕ್ತ ಬೆಳ್ಳಿ ಆಧಾರಿತ ಸೋಂಕು ನಿವಾರಕ ಅಭಿವೃದ್ಧಿ

https://pib.gov.in/PressReleseDetail.aspx?PRID=1611179

ರಾಷ್ಟ್ರೀಯ ನವೋದ್ಯಮ ಪ್ರತಿಷ್ಠಾನ -  ಕೋವಿಡ್ 19 ಸ್ಪರ್ಧೆಯ ತನ್ನ ಸವಾಲಿನಲ್ಲಿ ಭಾಗಿಯಾಗಲು ನಾವಿನ್ಯತೆಯ ನಾಗರಿಕರಿಗೆ ಭಾರತದ ಆಹ್ವಾನ

https://pib.gov.in/PressReleseDetail.aspx?PRID=1611185

 

Fact Check on #Covid19

 

 

 

https://pbs.twimg.com/profile_banners/231033118/1584354869/1500x500

 

 

 

 

 

 

 

***



(Release ID: 1611204) Visitor Counter : 151