ರಕ್ಷಣಾ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಡಲು ನಾಗರಿಕ ಆಡಳಿತದೊಂದಿಗೆ ಹೆಗಲು ಕೊಟ್ಟು ಶ್ರಮಿಸುತ್ತಿರುವ ಸಶಸ್ತ್ರ ಪಡೆಗಳು

Posted On: 03 APR 2020 11:25AM by PIB Bengaluru

ಕೋವಿಡ್-19 ವಿರುದ್ಧ ಹೋರಾಡಲು ನಾಗರಿಕ ಆಡಳಿತದೊಂದಿಗೆ ಹೆಗಲು ಕೊಟ್ಟು ಶ್ರಮಿಸುತ್ತಿರುವ ಸಶಸ್ತ್ರ ಪಡೆಗಳು

1737 ಕ್ವಾರಂಟೈನ್ ಗೆ ಒಳಗಾಗಿದ್ದ ಜನರ ಪೈಕಿ 403 ಮಂದಿಯನ್ನು ಕಡ್ಡಾಯ ಪರಿಶೀಲನೆಯ ನಂತರ ಬಿಡುಗಡೆ

 

 

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಸಶಸ್ತ್ರ ಪಡೆಗಳು ಅಗತ್ಯ ವೈದ್ಯಕೀಯ ಹಾಗೂ ಸಾರಿಗೆ ನೆರವು ನೀಡಲು ದಿನದ 24 ಗಂಟೆಗಳು ಕಾರ್ಯೋನ್ಮುಖವಾಗಿವೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು(ಎಎಫ್ಎಂಎಸ್)ಅನ್ನು ನಿಯೋಜಿಸಲಾಗಿದ್ದು, ಅದರ ಸಂಪನ್ಮೂಲದ ನೆರವನ್ನು ಈ ಸಂಕಷ್ಟದ ಸಮಯದಲ್ಲಿ ನಾಗರಿಕ ಆಡಳಿತಕ್ಕೆ ಒದಗಿಸಲಾಗುತ್ತಿದೆ.

ಸಶಸ್ತ್ರ ಪಡೆಗಳು ಮುಂಬೈ, ಜೈಸಲ್ಮೇರ್, ಜೋಧ್ ಪುರ್, ಹಿಂಡಾನ್, ಮಾನೆಸರ್ ಮತ್ತು ಚೆನ್ನೈ ಈ ಆರು ಸ್ಥಳಗಳಲ್ಲಿ ಕ್ವಾರಂಟೈನ್ ಸೌಕರ್ಯಗಳನ್ನು ನಡೆಸುತ್ತಿದೆ. ಈ ಕೇಂದ್ರಗಳಲ್ಲಿ ಈವರೆಗೆ 1737 ಮಂದಿಯನ್ನು ನಿರ್ವಹಣೆ ಮಾಡಲಾಗಿದ್ದು, ಅವರಲ್ಲಿ 403 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಮೂರು ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, 2 ಹಿಂಡಾನ್ ನಲ್ಲಿ ಮತ್ತು ಒಂದು ಮಾನೆಸರ್ ನಲ್ಲಿ ಖಚಿತವಾಗಿದೆ.  ಆ ಪ್ರಕರಣಗಳಲ್ಲಿ ಸೋಂಕಿತರನ್ನು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ಸಫ್ದಾರ್ ಜಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಅಲ್ಲದೆ ಅಗತ್ಯಬಿದ್ದರೆ ಬಳಕೆಗಾಗಿ 15 ಇತರೆ ಸೌಕರ್ಯಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಲಾಗಿದೆ.

ದೇಶಾದ್ಯಂತ ಸಶಸ್ತ್ರ ಪಡೆಗಳಿಗೆ ಸೇರಿದ 51 ಆಸ್ಪತ್ರೆಗಳಲ್ಲಿ ಕೋವಿಡ್-19 ಸೌಕರ್ಯಕ್ಕೆ ಮೀಸಲಾದ ಅತಿಯಾದ ಅವಲಂಬನೆ ಘಕಟಗಳು ಮತ್ತು ಇಂಟೆನ್ಸಿವ್ ಕೇರ್ ಯುನಿಟ್ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಅವುಗಳಲ್ಲಿ ಕೆಲವು ಸೌಕರ್ಯಗಳ ಸ್ಥಳಗಳೆಂದರೆ ಕೋಲ್ಕತಾ, ವಿಶಾಖಪಟ್ಟಣಂ, ಕೊಚ್ಚಿ, ಹೈದ್ರಾಬಾದ್ ಸಮೀಪದ ದುಂಡಿಗಲ್, ಬೆಂಗಳೂರು, ಕಾನ್ಪುರ, ಜೈಸಲ್ಮೇರ್, ಜೊರಾಹಟ್ ಮತ್ತು ಗೋರಖ್ ಪುರ್.

ಸಶಸ್ತ್ರ ಪಡೆಗಳಿಗೆ ಸೇರಿದ ಆಸ್ಪತ್ರೆಗಳಲ್ಲಿರುವ 5 ವೈರಾಣು ಪರೀಕ್ಷಾ ಪ್ರಯೋಗಾಲಯಗಳನ್ನು ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ರಾಷ್ಟ್ರೀಯ ಜಾಲ(ಗ್ರಿಡ್)ಗೆ ಸೇರಿಸಲಾಗಿದೆ. ಅವುಗಳೆಂದರೆ ಸೇನಾ ಆಸ್ಪತ್ರೆ(ಸಂಶೋಧನಾ ಮತ್ತು ರೆಫರೆಲ್) ದೆಹಲಿ ಕಂಟೋನ್ಮೆಂಟ್; ವಾಯುಪಡೆ ಕಮಾಂಡ್ ಆಸ್ಪತ್ರೆ ಬೆಂಗಳೂರು ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಪುಣೆ; ಕಮಾಂಡ್ ಆಸ್ಪತ್ರೆ(ಸೆಂಟ್ರಲ್ ಕಮಾಂಡ್) ಲಖನೌ ಮತ್ತು ಕಮಾಂಡ್ ಆಸ್ಪತ್ರೆ(ನಾದರ್ನ್ ಕಮಾಂಡ್) ಉಧಂಪುರ್. ಅಲ್ಲದೆ ಹೆಚ್ಚುವರಿಯಾಗಿ ಸದ್ಯದಲ್ಲೇ ಇನ್ನೂ ಆರು ಆಸ್ಪತ್ರೆಗಳನ್ನು ಕೋವಿಡ್-19 ಪರೀಕ್ಷೆ ನಡೆಸಲು ಸಜ್ಜುಗೊಳಿಸಲಾಗುವುದು.

ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ವಿಮಾನಗಳು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸಲು ಮಾತ್ರವಲ್ಲದೆ, ಅಗತ್ಯ ವೈದ್ಯಕೀಯ ಸಾಮಗ್ರಿಗಳ ಪೂರೈಕೆಯನ್ನೂ ಮಾಡುತ್ತಿವೆ. ಎ ಸಿ -17 ಗ್ಲೋಬ್ ಮಾಸ್ಟರ್ 3 ಚಾಲಕರನ್ನೊಳಗೊಂಡ ವೈದ್ಯಕೀಯ ತಂಡ ಮತ್ತು ಸಿಬ್ಬಂದಿ ಚೀನಾಕ್ಕೆ 15 ಟನ್ ವೈದ್ಯಕೀಯ ಸಲಕರಣೆಗಳನ್ನು ಪೂರೈಸಿದೆ ಮತ್ತು 5 ಮಕ್ಕಳೂ ಸೇರಿದಂತೆ 125 ವ್ಯಕ್ತಿಗಳನ್ನು ವಿಮಾನದಲ್ಲಿ ಕರೆತರಲಾಗಿದೆ. ಜೊತೆಗೆ ವಾಪಸ್ಸಾಗುವಾಗ ಹಲವು ಮಿತ್ರ ರಾಷ್ಟ್ರಗಳ ನಾಗರಿಕರನ್ನೂ ಸಹ ವಿಮಾನಗಳಲ್ಲಿ ಕರೆತರಲಾಗಿದೆ. ಸಿ – 17 ಗ್ಲೋಬ್ ಮಾಸ್ಟರ್ 3 ಮತ್ತೊಂದು ಪ್ರಯಾಣ ನಡೆಸಿ, ಇರಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 31 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 58 ಭಾರತೀಯರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತಂದಿದೆ. ಅಲ್ಲದೆ ವಿಮಾನಗಳು ಕೋವಿಡ್-19 ತನಿಖೆಯ 529 ಮಾದರಿಗಳನ್ನೂ ಸಹ ರವಾನಿಸಿವೆ.

ಸಿ – 130 ಜೆ ಸೂಪರ್ ಹರ್ಕ್ಯುಲಸ್  ವಿಮಾನ ಸುಮಾರು 6.2 ಟನ್ ಔಷಧಗಳನ್ನು ಮಾಲ್ಡವೀಸ್ ಗೆ ಕೊಂಡೊಯ್ದಿದೆ. ಸೇನೆಯ ವೈದ್ಯಕೀಯ ತಂಡ ಐವರು ವೈದ್ಯರು, ಐವರು ನರ್ಸ್ ಗಳು ಮತ್ತು 7 ಅರೆ ವೈದ್ಯಕೀಯ ಸಿಬ್ಬಂದಿಯನ್ನು ಮಾಲ್ಡವೀಸ್ ಗೆ ನಿಯೋಜಿಸಲಾಗಿದ್ದು, ಅಲ್ಲಿ ಅವರು ಸಾಮರ್ಥ್ಯವೃದ್ಧಿ ಕ್ರಮಗಳ ಜೊತೆಗೆ 2020ರ ಮಾರ್ಚ್ 13 ರಿಂದ 21ರ ವರೆಗೆ ಪರೀಕ್ಷೆಗಳನ್ನು ನಡೆಸುವುದು, ಚಿಕಿತ್ಸೆ ಮತ್ತು ಕ್ವಾರಂಟೈನ್ ಸೌಕರ್ಯಗಳ ಸ್ಥಾಪನೆಗೆ ನೆರವು ನೀಡಿದ್ದಾರೆ.

ಐಎಎಫ್ ನ ಸಾರಿಗೆ ವಿಮಾನಗಳನ್ನು ಅಗತ್ಯ ಪೂರೈಕೆಗಳು, ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗೆಳ ಸಾಗಾಣೆಗೆ ನೆರವು ನೀಡಲು ಬಳಸಿಕೊಳ್ಳಲಾಗುತ್ತಿದೆ. ಈವರೆಗೆ ಸುಮಾರು 60 ಟನ್ ವಸ್ತುಗಳನ್ನು ದೇಶದ ನಾನಾ ಭಾಗಗಳಿಗೆ ವಿಮಾನದ ಮೂಲಕ ಕೊಂಡೊಯ್ಯಲಾಗಿದೆ. ದೇಶಾದ್ಯಂತ ನಾನಾ ಕಡೆ 28 ವಿಮಾನ ಮತ್ತು 21 ಹೆಲಿಕಾಪ್ಟರ್ ಗಳನ್ನು ಸನ್ನದ್ಧವಾಗಿ ಇಡಲಾಗಿದೆ.

ಆರು ನೌಕಾ ಹಡುಗುಗಳನ್ನು ನೆರೆಯ ರಾಷ್ಟ್ರಗಳ ಸಹಾಯಕ್ಕಾಗಿ ಸರ್ವ ಸನ್ನದ್ಧುಗೊಳಿಸಿ ಇಡಲಾಗಿದೆ. 5 ವೈದ್ಯಕೀಯ ತಂಡಗಳನ್ನು ಮಾಲ್ಡವೀಸ್, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಅಫ್ಘಾನಿಸ್ತಾನಗಳಿಗೆ ನಿಯೋಜಿಸಲು ಸಜ್ಜಾಗಿ ಇಡಲಾಗಿದೆ.

 

*********



(Release ID: 1610886) Visitor Counter : 171