ಪ್ರಧಾನ ಮಂತ್ರಿಯವರ ಕಛೇರಿ

ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

Posted On: 03 APR 2020 12:54PM by PIB Bengaluru

ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

COVID-19 ನಿಭಾಯಿಸಲು ಪ್ರಧಾನಮಂತ್ರಿಯವರು ‘ಸಂಕಲ್ಪ, ಸಂಯಮ, ಸಕಾರಾತ್ಮಕತೆ, ಸಮ್ಮಾನ ಮತ್ತು ಸಹಯೋಗ’ ಎಂಬ ಐದು ಅಂಶಗಳ ಮಂತ್ರವನ್ನು ನೀಡಿದ್ದಾರೆ
ಕ್ರೀಡಾಪಟುಗಳು ರಾಷ್ಟ್ರಕ್ಕೆ ಘನತೆಯನ್ನು ತಂದಿದ್ದಾರೆ, ಈಗ ಅವರು ರಾಷ್ಟ್ರದ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಮತ್ತು ಸಕಾರಾತ್ಮಕತೆಯನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಪ್ರಧಾನಿ
ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿರುವ  ಕ್ರೀಡಾಪಟುಗಳು ಸಕಾರಾತ್ಮಕತೆ ಮತ್ತು ಸಾಮಾಜಿಕ ಅಂತರದ ಸಂದೇಶವನ್ನು ಹರಡಲು ಪ್ರತಿಜ್ಞೆ ಮಾಡಿದ್ದಾರೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಖ್ಯಾತ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು.
COVID-19 ಇಡೀ ಮಾನವ ಕುಲಕ ವಿರೋಧಿ ಮತ್ತು ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್ ಅನ್ನು ಮುಂದೂಡಲಾಗಿದೆ ಎಂಬ ಅಂಶದಿಂದಲೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಬಹುದು ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಸವಾಲುಗಳಿಂದಾಗಿ ವಿಂಬಲ್ಡನ್‌ನಂತಹ ಹಲವಾರು ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ನಂತಹ ದೇಶೀಯ ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ ಎಂದರು.
ಕ್ರೀಡಾಂಗಣದಲ್ಲಿ ಅಮೋಘ ಪ್ರದರ್ಶನಗಳ ಮೂಲಕ ರಾಷ್ಟ್ರಕ್ಕೆ ಘನತೆಯನ್ನು ತಂದ ಕ್ರೀಡಾಪಟುಗಳನ್ನು ಪ್ರಧಾನಿ ಶ್ಲಾಘಿಸಿದರು. ಈಗ ಅವರು ರಾಷ್ಟ್ರದ ಮನೋಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ನೀಡಲಾಗಿರುವ ಸಲಹೆಗಳನ್ನು ನಿರಂತರವಾಗಿ ಪಾಲಿಸುವಂತೆ ಜನರನ್ನು ಕೇಳಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರದ ಸಂದೇಶವನ್ನು ಹರಡುತ್ತಾರೆ. ಕ್ರೀಡಾ ತರಬೇತಿಯಲ್ಲಿ ಕಲಿತ ಗುಣಗಳು, ಅಂದರೆ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ಸ್ವಯಂ-ಶಿಸ್ತು, ಸಕಾರಾತ್ಮಕತೆ ಮತ್ತು ಆತ್ಮಸ್ಥೈರ್ಯ ವೈರಸ್ ಹರಡುವಿಕೆಯನ್ನು ಎದುರಿಸಲು ಅಗತ್ಯ ಸಾಧನಗಳಾಗಿವೆ ಎಂದು ಅವರು ಒತ್ತಿಹೇಳಿದರು.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು 'ಸಂಕಲ್ಪ', ಸಾಮಾಜಿಕ ದೂರವನ್ನು ಅನುಸರಿಸಲು 'ಸಂಯಮ', ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು 'ಸಕಾರಾತ್ಮಕತೆ', ಈ ಯುದ್ಧದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಮುದಾಯ, ಪೊಲೀಸ್ ಸಿಬ್ಬಂದಿಯನ್ನು ಗೌರವಿಸಲು 'ಸಮ್ಮಾನ' ಮತ್ತು ಪಿಎಂ-ಕೇರ್ಸ್ ನಿಧಿಗೆ ವೈಯಕ್ತಿಕ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡಿದವರ 'ಸಹಯೋಗ' - ಈ ಐದು ಅಂಶಗಳನ್ನು ಜನರಿಗೆ ನೀಡುವ ಸಂದೇಶದಲ್ಲಿ ಸೇರಿಸಿಕೊಳ್ಳುವಂತೆ ಪ್ರಧಾನಿ ಕ್ರೀಡಾಪಟುಗಳಿಗೆ ಮನವಿ ಮಾಡಿದರು. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮಹತ್ವವನ್ನು ಎತ್ತಿ ಹಿಡಿಯಲು ಮತ್ತು ಆಯುಷ್ ಸಚಿವಾಲಯ ಬಿಡುಗಡೆ ಮಾಡಿದ ಮಾರ್ಗಸೂಚಿಗಳನ್ನು ಜನಪ್ರಿಯಗೊಳಿಸಲು ಅವರು ಅವರನ್ನು ಕೇಳಿದರು.
ಈ ಸವಾಲಿನ ಸಂದರ್ಭದಲ್ಲಿ ಕ್ರೀಡಾಪಟುಗಳು ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿದರು. ಈ ಯುದ್ಧದಲ್ಲಿ ಭಾಗಿಯಾಗಿರುವ ಮುಂಚೂಣಿಯ ಆರೋಗ್ಯ ಸಿಬ್ವಂದಿ ಮತ್ತು ಪೊಲೀಸ್ ಸಿಬ್ಬಂದಿ ತಮ್ಮ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ಅರ್ಹವಾದ ಗೌರವವನ್ನು ಪಡೆದುಕೊಳ್ಳುವಂತೆ ನೋಡಿಕೊಂಡಿದ್ದಕ್ಕಾಗಿ ಅವರು ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು. ಶಿಸ್ತು, ಮಾನಸಿಕ ಶಕ್ತಿ, ಫಿಟ್‌ನೆಸ್ ಅನುಸರಿಸುವುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಮಾತನಾಡಿದರು.
ಸಾಂಕ್ರಾಮಿಕ ರೋಗದ ವಿರುದ್ಧದ ಈ ಯುದ್ಧದಲ್ಲಿ ಭಾರತ ವಿಜಯಶಾಲಿಯಾಗುವುದು ಖಂಡಿತ  ಎಂದು ಪ್ರಧಾನಿ ಹೇಳಿದರು ಮತ್ತು ಈ ಹೋರಾಟದಲ್ಲಿ ಕ್ರೀಡಾಪಟುಗಳು ಸಕ್ರಿಯವಾಗಿ ಭಾಗವಹಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ರತ್ನ ಶ್ರೀ ಸಚಿನ್ ತೆಂಡೂಲ್ಕರ್, ಬಿಸಿಸಿಐ ಅಧ್ಯಕ್ಷ ಶ್ರೀ ಸೌರವ್ ಗಂಗೂಲಿ, ಮಹಿಳಾ ಹಾಕಿ ತಂಡದ ನಾಯಕಿ ಕುಮಾರಿ ರಾಣಿ ರಾಂಪಾಲ್, ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಕುಮಾರಿ ಪಿ.ವಿ ಸಿಂಧು, ಕಬಡ್ಡಿ ಆಟಗಾರ ಮತ್ತು ಹಿಮಾಚಲ ಪ್ರದೇಶದಲ್ಲಿ ಪೊಲೀಸ್ ಡಿಎಸ್ಪಿ ಶ್ರೀ ಅಜಯ್ ಠಾಕೂರ್ ಓಟಗಾರ್ತಿ ಕುಮಾರಿ ಹಿಮಾ ದಾಸ್, ಪ್ಯಾರಾ ಅಥ್ಲೀಟ್ ಹೈ ಜಂಪರ್ ಶ್ರೀ ಶರದ್ ಕುಮಾರ್, ಅಗ್ರ ಟೆನಿಸ್ ಆಟಗಾರ್ತಿ ಶ್ರೀಮತಿ ಅಂಕಿತಾ ರೈನಾ, ಕ್ರಿಕೆಟಿಗ ಶ್ರೀ ಯುವರಾಜ್ ಸಿಂಗ್ ಮತ್ತು ಪುರುಷರ ಕ್ರಿಕೆಟ್ ತಂಡದ ನಾಯಕ ಶ್ರೀ ವಿರಾಟ್ ಕೊಹ್ಲಿ ಸೇರಿದಂತೆ 40 ಕ್ಕೂ ಹೆಚ್ಚು ಪ್ರಖ್ಯಾತ ಕ್ರೀಡಾಪಟುಗಳು ವಿಡಿಯೋ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರು ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

 



(Release ID: 1610666) Visitor Counter : 206