ರೈಲ್ವೇ ಸಚಿವಾಲಯ

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಎದುರಾಗಿರುವ ಸವಾಲುಗಳ ನಡುವೆಯೂ ಮೂಲಸೌಕರ್ಯ ಹಾಗೂ ಪ್ರಮುಖ ಇಂಧನ ಸರಕುಗಳು ಹಾಗೂ ಅವಶ್ಯಕ ವಸ್ತುಗಳ ಸಾಗಣೆಗಾಗಿ ಭಾರತೀಯ ರೈಲ್ವೆಯ ಸರಕು ರೈಲುಗಳಿಂದ ಪೂರ್ಣ ಪ್ರಮಾಣದ ಕಾರ್ಯ ನಿರ್ವಹಣೆ

Posted On: 02 APR 2020 1:43PM by PIB Bengaluru

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಎದುರಾಗಿರುವ ಸವಾಲುಗಳ ನಡುವೆಯೂ ಮೂಲಸೌಕರ್ಯ ಹಾಗೂ ಪ್ರಮುಖ ಇಂಧನ ಸರಕುಗಳು ಹಾಗೂ ಅವಶ್ಯಕ ವಸ್ತುಗಳ ಸಾಗಣೆಗಾಗಿ ಭಾರತೀಯ ರೈಲ್ವೆಯ ಸರಕು ರೈಲುಗಳಿಂದ ಪೂರ್ಣ ಪ್ರಮಾಣದ ಕಾರ್ಯ ನಿರ್ವಹಣೆ
 ಮೂರು ದಿನಗಳಲ್ಲಿ 7195 ವ್ಯಾಗನ್ ಆಹಾರ ಧಾನ್ಯ, 64567 ವ್ಯಾಗನ್  ಕಲ್ಲಿದ್ದಲು, 3314 ವ್ಯಾಗನ್  ಉಕ್ಕು ಮತ್ತು 3838 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಣೆ
ಕಳೆದ ಮೂರು ದಿನಗಳಲ್ಲಿ 143458 ವ್ಯಾಗನ್ ಸರಕುಗಳ ಭರ್ತಿ

 

ಕೋವಿಡ್-19 ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ವೇಳೆಯಲ್ಲಿ ಭಾರತೀಯ ರೈಲ್ವೆ ತನ್ನ ಸರಕು ಸೇವಾ ರೈಲುಗಳ ಮೂಲಕ ಅವಶ್ಯಕ ವಸ್ತುಗಳ ಲಭ್ಯತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯೋನ್ಮುಖವಾಗಿದೆ.

ಜನರಿಗೆ ಸಕಾಲದಲ್ಲಿ ಅತ್ಯವಶ್ಯಕ ಸಾಮಗ್ರಿಗಳು ಲಭ್ಯವಾಗುವಂತೆ ಮಾಡಲು ಮತ್ತು ಇಂಧನ ಹಾಗೂ ಮೂಲಸೌಕರ್ಯ ವಲಯಕ್ಕೆ ಅಗತ್ಯ ಸರಕುಗಳನ್ನು ಪೂರೈಸಲು ಭಾರತೀಯ ರೈಲ್ವೆ, ಕೋವಿಡ್-19 ಲಾಕ್ ಡೌನ್ ನಡುವೆಯೂ ತನ್ನ ಸರಕು ಕಾರಿಡಾರ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ ಮತ್ತು ಗೃಹ ಸಂಬಂಧಿ ವಲಯ ಹಾಗೂ ಉದ್ಯಮ ವಲಯ ಎರಡಕ್ಕೂ ಬೇಕಾದ ಅಗತ್ಯತೆಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸುತ್ತಿದೆ.

ಕಳೆದ ಮೂರು ದಿನಗಳಲ್ಲಿ ರೈಲ್ವೆ, 7195 ವ್ಯಾಗನ್ ಆಹಾರ ಧಾನ್ಯ, 64567 ವ್ಯಾಗನ್  ಕಲ್ಲಿದ್ದಲು, 3314 ವ್ಯಾಗನ್  ಉಕ್ಕು ಮತ್ತು 3838 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಾಣೆ ಮಾಡಿದೆ. ಒಟ್ಟಾರೆ ಕಳೆದ ಮೂರು ದಿನಗಳಲ್ಲಿ 143458 ವ್ಯಾಗನ್ ಸರಕುಗಳನ್ನು ಭರ್ತಿ ಮಾಡಿದೆ.

ಮಾರ್ಚ್ 30, 2020ರಂದು ಒಟ್ಟಾರೆ 726 ರೇಕ್ ಗಳು/37526 ವ್ಯಾಗನ್ ಗಳನ್ನು ಲೋಡ್ ಮಾಡಲಾಗಿದ್ದು, ಅವುಗಳಲ್ಲಿ 466 ರೇಕ್ /25617 ವ್ಯಾಗನ್ ಗಳು ಅತ್ಯವಶ್ಯಕ ಸಾಮಗ್ರಿಗಳನ್ನು ಭರ್ತಿಮಾಡಲಾಗಿತ್ತು. (ಒಂದು ವ್ಯಾಗನ್ ನಲ್ಲಿ 50 ರಿಂದ 60 ಟನ್ ಸರಕು ಇರುತ್ತದೆ) ಇದರಲ್ಲಿ 51 ರೇಕ್ /2252 ವ್ಯಾಗನ್ ಆಹಾರಧಾನ್ಯ, 6 ರೇಕ್ /252 ವ್ಯಾಗನ್ ಸಕ್ಕರೆ, 8 ವ್ಯಾಗನ್ ಉಪ್ಪು, 2 ರೇಕ್ /63 ವ್ಯಾಗನ್ ಹಣ್ಣು ಮತ್ತು ತರಕಾರಿ, 376 ರೇಕ್ /21628 ವ್ಯಾಗನ್ ಕಲ್ಲಿದ್ದಲು ಮತ್ತು 31 ರೇಕ್ /1414 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ. ವ್ಯಾಗನ್ ಗಳಿಗೆ ಭರ್ತಿಮಾಡಲಾದ ಇತರ ಪ್ರಮುಖ ಉತ್ಪನ್ನಗಳೆಂದರೆ 19 ರೇಕ್ /840 ಉಕ್ಕು ಮತ್ತು 18 ರೇಕ್ /802 ವ್ಯಾಗನ್ ರಸಗೊಬ್ಬರ.

ಮಾರ್ಚ್ 31, 2020ರಂದು ಒಟ್ಟಾರೆ 1005 ರೇಕ್ /51755 ವ್ಯಾಗನ್ ವಸ್ತುಗಳನ್ನು ಭರ್ತಿ ಮಾಡಲಾಗಿದ್ದು, ಅವುಗಳಲ್ಲಿ 598 ರೇಕ್ /33265 ವ್ಯಾಗನ್ ಅತ್ಯಾವಶ್ಯಕ ವಸ್ತುಗಳಿದ್ದವು, ಅದರಲ್ಲಿ 59 ರೇಕ್ /2600 ವ್ಯಾಗನ್ ಆಹಾರಧಾನ್ಯ, 7 ರೇಕ್ /293 ವ್ಯಾಗನ್ ಸಕ್ಕರೆ, 2 ರೇಕ್ /84 ವ್ಯಾಗನ್ ಉಪ್ಪು, 2 ರೇಕ್ /84 ವ್ಯಾಗನ್ ಹಣ್ಣು ಮತ್ತು ತರಕಾರಿಗಳು, 500 ರೇಕ್ /28861 ವ್ಯಾಗನ್ ಕಲ್ಲಿದ್ದಲು ಮತ್ತು 28 ರೇಕ್ /1292 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು. ಅಲ್ಲದೆ ಭರ್ತಿ ಮಾಡಲಾದ ಇತರೆ ಪ್ರಮುಖ ಪದಾರ್ಥಗಳೆಂದರೆ 40 ರೇಕ್ /1789 ವ್ಯಾಗನ್ ಉಕ್ಕು ಮತ್ತು 31 ರೇಕ್ /1287 ವ್ಯಾಗನ್ ರಸಗೊಬ್ಬರ.

2020ರ ಏಪ್ರಿಲ್ 1 ರಂದು ಒಟ್ಟಾರೆ 545 ರೇಕ್ /54177 ವ್ಯಾಗನ್ ಗಳನ್ನು ಭರ್ತಿ ಮಾಡಲಾಗಿತ್ತು. ಅವುಗಳಲ್ಲಿ 328 ರೇಕ್ /17805 ವ್ಯಾಗನ್ ಅವಶ್ಯಕ ವಸ್ತುಗಳಾಗಿವೆ. ಅದರಲ್ಲಿ  54 ರೇಕ್ /2343 ವ್ಯಾಗನ್ ಆಹಾರಧಾನ್ಯ 5 ರೇಕ್ /210 ವ್ಯಾಗನ್ ಸಕ್ಕರೆ, 1 ರೇಕ್ /42 ವ್ಯಾಗನ್ ಹಣ್ಣು ಮತ್ತು ತರಕಾರಿಗಳು, 244 ರೇಕ್ /14078 ವ್ಯಾಗನ್ ಕಲ್ಲಿದ್ದಲು ಮತ್ತು 24 ರೇಕ್ /1132 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು. ಸರಕು ಸಾಗಾಣೆ ರೈಲುಗಳಿಗೆ ಭರ್ತಿ ಮಾಡಲಾದ ಇತರೆ ಪ್ರಮುಖ ಉತ್ಪನ್ನಗಳೆಂದರೆ 16 ರೇಕ್ /685 ವ್ಯಾಗನ್ ಉಕ್ಕು ಮತ್ತು 17 ರೇಕ್ /761 ವ್ಯಾಗನ್  ರಸಗೊಬ್ಬರ.

ಹಲವು ರೈಲು ನಿಲ್ದಾಣಗಳಲ್ಲಿ ಈ ಮೊದಲು ಎದುರಿಸುತ್ತಿದ್ದ ಸರಕುಗಳನ್ನು ತುಂಬುವುದು ಮತ್ತು ಇಳಿಸುವ ಕಾರ್ಯಾಚರಣೆ ಸಮಯದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲಾಗಿದೆ. ಭಾರತೀಯ ರೈಲ್ವೆ, ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಂತಹ ಕಾರ್ಯಾಚರಣೆ ಸಮಸ್ಯೆಗಳನ್ನು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಬಗೆಹರಿಸುತ್ತಿದೆ.

 

****



(Release ID: 1610276) Visitor Counter : 164