ರಕ್ಷಣಾ ಸಚಿವಾಲಯ
ಕೋವಿಡ್-19: ‘ಎಕ್ಸರ್ಸೈಸ್ ಎನ್ ಸಿ ಸಿ ಯೋಗ್ದಾನ್’ ಅಡಿಯಲ್ಲಿ ರಾಷ್ಟ್ರೀಯ ಸೇವೆಗಾಗಿಗಿ ಎನ್‌ಸಿಸಿ ಸ್ವಯಂಸೇವಕ ಕೆಡೆಟ್‌ಗಳು
Posted On:
02 APR 2020 10:09AM by PIB Bengaluru
ಕೋವಿಡ್-19: ‘ಎಕ್ಸರ್ಸೈಸ್ ಎನ್ ಸಿ ಸಿ ಯೋಗ್ದಾನ್’ ಅಡಿಯಲ್ಲಿ ರಾಷ್ಟ್ರೀಯ ಸೇವೆಗಾಗಿಗಿ ಎನ್‌ಸಿಸಿ ಸ್ವಯಂಸೇವಕ ಕೆಡೆಟ್‌ಗಳು
ಕೆಡೆಟ್‌ಗಳ ತಾತ್ಕಾಲಿಕ ಉದ್ಯೋಗಕ್ಕಾಗಿ ಮಾರ್ಗಸೂಚಿಗಳನ್ನು ನೀಡುತ್ತದೆ
ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ‘ಎಕ್ಸರ್ಸೈಸ್ ಎನ್‌ಸಿಸಿ ಯೋಗ್ದಾನ್’ ಅಡಿಯಲ್ಲಿ ಕೆಡೆಟ್‌ಗಳ ಸೇವೆಗಳನ್ನು ಸಲ್ಲಿಸುವ ಮೂಲಕ ಕೋವಿಡ್-19 ವಿರುದ್ಧದ ದೇಶದ ಹೋರಾಟದಲ್ಲಿ ನಾಗರಿಕ ಅಧಿಕಾರಿಗಳಿಗೆ ಸಹಾಯ ಹಸ್ತ ನೀಡಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ತೊಡಗಿರುವ ವಿವಿಧ ಏಜೆನ್ಸಿಗಳ ಪರಿಹಾರ ಪ್ರಯತ್ನಗಳು ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು ತನ್ನ ಕೆಡೆಟ್‌ಗಳ ತಾತ್ಕಾಲಿಕ ಉದ್ಯೋಗಕ್ಕಾಗಿ ಇದು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಎನ್‌ಸಿಸಿ ಕೆಡೆಟ್‌ಗಳಿಗಾಗಿ ವಹಿಸಲಾಗಿರುವ ಕಾರ್ಯಗಳಲ್ಲಿ, ಸಹಾಯವಾಣಿ / ಕರೆ ಕೇಂದ್ರಗಳ ನಿರ್ವಹಣೆ; ಪರಿಹಾರ ಸಾಮಗ್ರಿಗಳು / ಔಷಧಿಗಳು / ಆಹಾರ / ಅಗತ್ಯ ವಸ್ತುಗಳ ವಿತರಣೆ; ಸಮುದಾಯ ನೆರವು; ಡೇಟಾ ನಿರ್ವಹಣೆ ಮತ್ತು ಕ್ಯೂ ಮತ್ತು ಸಂಚಾರ ನಿರ್ವಹಣೆ. ಮಾರ್ಗಸೂಚಿಗಳ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸುವಲ್ಲಿ ಅಥವಾ ಸಕ್ರಿಯ ಮಿಲಿಟರಿ ಕರ್ತವ್ಯಕ್ಕಾಗಿ ಅಥವಾ ಹಾಟ್ ಸ್ಪಾಟ್‌ಗಳಲ್ಲಿ ಕೆಡೆಟ್‌ಗಳನ್ನು ನೇಮಿಸಬಾರದು.
18 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ವಿಭಾಗದ ಸ್ವಯಂಸೇವಕ ಕೆಡೆಟ್‌ಗಳನ್ನು ಮಾತ್ರ ನೇಮಿಸಿಕೊಳ್ಳಲಾಗುತ್ತದೆ. ಶಾಶ್ವತ ಬೋಧಕ ಸಿಬ್ಬಂದಿ ಅಥವಾ / ಮತ್ತು ಸಹಾಯಕ ಎನ್‌ಸಿಸಿ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಎಂಟು ರಿಂದ ಇಪ್ಪತ್ತು ಸಣ್ಣ ಒಗ್ಗೂಡಿಸುವ ಗುಂಪುಗಳಲ್ಲಿ ಅವರನ್ನು ನೇಮಿಸಬೇಕು.
ಸ್ವಯಂಸೇವಕ ಕೆಡೆಟ್‌ಗಳ ಉದ್ಯೋಗಕ್ಕಾಗಿ, ರಾಜ್ಯ ಸರ್ಕಾರಗಳು / ಜಿಲ್ಲಾಡಳಿತವು ರಾಜ್ಯ ಎನ್‌ಸಿಸಿ ನಿರ್ದೇಶನಾಲಯಗಳ ಮೂಲಕ ಕೋರಿಕೆಯನ್ನು ಕಳುಹಿಸಬೇಕಾಗುತ್ತದೆ. ವಿವರಗಳನ್ನು ನಿರ್ದೇಶನಾಲಯ / ಗುಂಪು ಪ್ರಧಾನ ಕಚೇರಿ / ಘಟಕ ಮಟ್ಟದಲ್ಲಿ ರಾಜ್ಯ ಸರ್ಕಾರ / ಸ್ಥಳೀಯ ನಾಗರಿಕ ಪ್ರಾಧಿಕಾರದೊಂದಿಗೆ ಸಂಯೋಜಿಸಲಾಗುವುದು. ಕೆಡೆಟ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಮೊದಲು, ಆಯಾ ಪ್ರದೇಶದ ಪರಿಸ್ಥಿತಿಗಳು ಮತ್ತು ನಿಗದಿಪಡಿಸಿದ ಅವಶ್ಯಕತೆಗಳನ್ನು ಖಚಿತಪಡಿಸಿಕೊಳ್ಳಬೇಕು.
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಸಿಸಿ ದೇಶದ ಅತಿದೊಡ್ಡ ಸಮವಸ್ತ್ರಧಾರಿ ಯುವ ಸಂಘಟನೆಯಾಗಿದ್ದು, ವಿವಿಧ ಸಾಮಾಜಿಕ ಸೇವೆ ಮತ್ತು ಸಮುದಾಯ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುವಲ್ಲಿ ನಿರತವಾಗಿದೆ. ಎನ್‌ಸಿಸಿ ಕೆಡೆಟ್‌ಗಳು ಪ್ರಾರಂಭದಿಂದಲೂ ಪ್ರವಾಹ, ಚಂಡಮಾರುತ ಮುಂತಾದ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ದೇಶ ಸೇವೆಗೆ ಕೊಡುಗೆ ನೀಡುತ್ತಿದ್ದಾರೆ.
(Release ID: 1610204)
Visitor Counter : 148
Read this release in:
Hindi
,
Punjabi
,
Telugu
,
Assamese
,
Gujarati
,
English
,
Marathi
,
Bengali
,
Odia
,
Tamil
,
Malayalam