ಹಣಕಾಸು ಸಚಿವಾಲಯ

ಪದೇ  ಪದೇ  ಕೇಳುವ ಪ್ರಶ್ನೆಗಳು: ಅವಧಿ ಸಾಲಗಳ ಮರುಪಾವತಿಯನ್ನು ಮೂರು ತಿಂಗಳು ತಡೆ ಹಿಡಿಯುವ ಅಥವಾ ಮುಂದೂಡುವ ಅಘೋಷಣೆ ಮಾಡಲು ಆರ್ ಬಿ ಐ ನಿಂದ ಬ್ಯಾಂಕುಗಳಿಗೆ ಅವಕಾಶ

Posted On: 01 APR 2020 12:35PM by PIB Bengaluru

ಪದೇ  ಪದೇ  ಕೇಳುವ ಪ್ರಶ್ನೆಗಳು: ಅವಧಿ ಸಾಲಗಳ ಮರುಪಾವತಿಯನ್ನು ಮೂರು ತಿಂಗಳು ತಡೆ ಹಿಡಿಯುವ ಅಥವಾ ಮುಂದೂಡುವ ಅಘೋಷಣೆ ಮಾಡಲು ಆರ್ ಬಿ ಐ ನಿಂದ ಬ್ಯಾಂಕುಗಳಿಗೆ ಅವಕಾಶ

 

ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ 2020ರ ಮಾರ್ಚ್ 1ಕ್ಕೆ ಬಾಕಿ ಇರುವಂತೆ ಎಲ್ಲಾ ಅವಧಿ ಸಾಲಗಳ ಮರುಪಾವತಿಯನ್ನು ಮೂರು ತಿಂಗಳ ತಡೆಹಿಡಿಯುವ ಅಥವಾ ಮುಂದೂಡುವ ಘೋಷಣೆಗೆ ಅವಕಾಶ ನೀಡಿದೆ ಮತ್ತು ದುಡಿಯುವ ಬಂಡವಾಳ ಸೌಕರ್ಯಗಳಿಗೂ ಅವಕಾಶ ನೀಡಿದೆ.

ಭಾರತೀಯ ಬ್ಯಾಂಕುಗಳ ಒಕ್ಕೂಟ ಈ ಸಾಲ ತಡೆಹಿಡಿಯುವ ಅಥವಾ ಮುಂದೂಡುವ ತಾಂತ್ರಿಕ ಅಂಶಗಳ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ.

ಪ್ರಶ್ನೆ 1: ಆರ್ ಬಿ ಐ ಘೋಷಣೆ ಏನು/ಎತ್ತ ?

ಉತ್ತರ : ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ 2020ರ ಮಾರ್ಚ್ 1ಕ್ಕೆ ಬಾಕಿ ಇರುವಂತೆ ಎಲ್ಲಾ ಅವಧಿ ಸಾಲಗಳ ಮರುಪಾವತಿಯನ್ನು ಮೂರು ತಿಂಗಳ ತಡೆ ಹಿಡಿಯುವ ಅಥವಾ ಮುಂದೂಡುವ ಘೋಷಣೆಗೆ ಅವಕಾಶ ನೀಡಿದೆ ಮತ್ತು ದುಡಿಯುವ ಬಂಡವಾಳ ಸೌಕರ್ಯಗಳಿಗೂ ಅವಕಾಶ ನೀಡಿದೆ.

ಪ್ರಶ್ನೆ 2: ಆರ್ ಬಿ ಐ ಏಕೆ ಈ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದೆ ?

ಉತ್ತರ : ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ತೊಂದರೆಗಳಿಂದ ಸಾಲ ಸೇವೆಗಳ ಹೊರೆಯನ್ನು ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ಕೆಲವು ನಿಯಂತ್ರಣ ಕ್ರಮಗಳನ್ನು ಪ್ರಕಟಿಸಿದೆ ಮತ್ತು ವ್ಯಾಪಾರ ವಹಿವಾಟು ಸುಗಮ ರೀತಿಯಲ್ಲಿ ಮುಂದುವರಿಯಲಿ ಎಂಬುದು ಇದರ ಉದ್ದೇಶವಾಗಿದೆ. ನಗದು ಹರಿವಿನಲ್ಲಿ ತಾತ್ಕಾಲಿಕ ತೊಂದರೆಯಾಗಬಹುದು ಎಂಬುದನ್ನು ಗಮನಿಸಲಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ವೈಯಕ್ತಿಕವಾಗಿ ಹಾಗೂ ವಹಿವಾಟಿನಲ್ಲಿ ಆದಾಯ ನಷ್ಟವಾಗಲಿದೆ ಮತ್ತು ಈ ಪ್ರಸ್ತುತ ಕ್ರಮಗಳು ಅಂತಹ ವ್ಯಕ್ತಿಗಳಿಗೆ ಮತ್ತು ವಹಿವಾಟು ದಾರರಿಗೆ ಸ್ವಲ್ಪಮಟ್ಟಿನ ಪರಿಹಾರವನ್ನು ಒದಗಿಸಲಿದೆ.

ಪ್ರಶ್ನೆ 3: ಆರ್ ಬಿ ಐನ  ಕೋವಿಡ್-19 ನಿಯಂತ್ರಣ ಕ್ರಮಗಳ ಪ್ಯಾಕೇಜ್ ನಿಂದ ಯಾವ್ಯಾವ ಸೌಕರ್ಯಗಳು ಅರ್ಹರಿಗೆ ಲಭ್ಯವಾಗಲಿವೆ ಮತ್ತು ಎಲ್ಲ ಸಾಲಗಾರರಿಗೆ ಯಾವ್ಯಾವ ಸೌಕರ್ಯಗಳನ್ನು ವಿಸ್ತರಿಸಲಾಗಿದೆ ?

ಉತ್ತರ : ಎಲ್ಲ ಅಲ್ಪಾವಧಿ ಸಾಲಗಳು (ಕೃಷಿ ಅಲ್ಪಾವಧಿ ಸಾಲ, ಸಗಟು ಮತ್ತು ಬೆಳೆ ಸಾಲ ಹಾಗೂ ಒಟ್ಟಾರೆ ಖರೀದಿ ಸಾಲಗಳು) ಮತ್ತು ನಗದು ಸಾಲ/ಓವರ್ ಡ್ರಾಫ್ಟ್, ಈ ಪ್ಯಾಕೇಜ್ ನಡಿ ಪ್ರಯೋಜನ ಪಡೆಯಲು ಅರ್ಹವಾಗಿರುತ್ತವೆ. ಇದು 2020ರ ಮಾರ್ಚ್ 1 ಕ್ಕೆ ಅನ್ವಯವಾಗುವಂತೆ ಪಡೆದಿರುವ ಎಲ್ಲಾ ಆಸ್ತಿಗಳು ಮತ್ತು ಖಾತೆಗಳಿಗೆ ಅನ್ವಯವಾಗಲಿದೆ. ಅಲ್ಲದೆ ಕಾಗದ ಪತ್ರಗಳ ಅನಗತ್ಯ ಹೊರೆಯನ್ನು ತಪ್ಪಿಸುವ ಸಲುವಾಗಿ ಎಲ್ಲ ಅಲ್ಪಾವಧಿ ಸಾಲಗಳ (ಬಡ್ಡಿಯೂ ಸೇರಿ) ಮರು ಪಾವತಿಗೆ ಸಾಲಗಾರರಿಗೆ 90 ದಿನಗಳ ಅವಧಿಯ ವಿಸ್ತರಣೆ ಸಾಲ ಸೌಕರ್ಯ ಸಿಗಲಿದೆ. ಮೂಲತಃ ಎಲ್ಲಾ ಅಲ್ಪಾವಧಿ ಸಾಲಗಳ ಮರುಪಾವತಿ ಅವಧಿ 90 ದಿನಗಳು ವಿಸ್ತರಣೆಯಾಗಲಿದೆ. ಉದಾಹರಣೆಗೆ 60 ಕಂತುಗಳ ಸಾಲದ ಮರುಪಾವತಿ ಅವಧಿ ಮಾರ್ಚ್ 1, 2025ಕ್ಕೆ ಮುಗಿಯುವಂತಿದ್ದರೆ ಅದು ಜೂನ್ 01, 2025ಕ್ಕೆ ಮುಕ್ತಾಯಗೊಳ್ಳುತ್ತದೆ.

ಪ್ರಶ್ನೆ 4: ಎಲ್ಲ ಬಗೆಯ ಅವಧಿ ಸಾಲಗಳಿಗೂ ಪಾವತಿ  ಅವಧಿ ಮರು ನಿಗದಿ ಮಾಡಿಕೊಳ್ಳಬಹುದೇ ?

ಉತ್ತರ : ಎಲ್ಲಾ ಅವಧಿ ಸಾಲಗಳಿಗೂ ಇದು ಅನ್ವಯವಾಗುತ್ತದೆ. ಅದರಲ್ಲಿ ಯಾವುದೇ ವಲಯ ಅಥವಾ ವಿಭಾಗ ಎಂಬುದೇನು ಇಲ್ಲ.

ಪ್ರಶ್ನೆ 5: ಅವಧಿ ಸಾಲಗಳ ಪಾವತಿ ಅವಧಿ ಮರು ನಿಗದಿ ಕೇವಲ ಮೂಲ ಮೊತ್ತಕ್ಕೆ ಅಥವಾ ಅದರಲ್ಲಿ ಬಡ್ಡಿಯೂ ಸೇರಿದೆಯೇ ?

ಉತ್ತರ : ಸಾಲದ ಮೂಲ ಮೊತ್ತ ಮರುಪಾವತಿ ಅವಧಿಗೆ ಅವಧಿ ಮೂರು ತಿಂಗಳ ಮಟ್ಟಿಗೆ ಅಂದರೆ 2020ರ ಮಾರ್ಚ್ 1 ರಿಂದ 2020ರ ಮೇ 31ರ ವರೆಗೆ ನಿಗದಿಯಾಗುತ್ತದೆ. ಉದಾಹರಣೆಗೆ ಅವಧಿ ಸಾಲದ ಕೊನೆಯ ಕಂತು ಮಾರ್ಚ್ 1, 2020ಕ್ಕೆ ಬೀಳುತ್ತಿದ್ದರೆ ಅದು 2020 ಜೂನ್ 1 ಕ್ಕೆ ಪಾವತಿಸಬೇಕಾಗುತ್ತದೆ.

ಇಎಂಐ ಆಧಾರಿತ ಅವಧಿ ಸಾಲಗಳಿಗೆ ಮಾರ್ಚ್ 1, 2020 ಮತ್ತು ಮೇ 31, 2020ರ ನಡುವಿನ ಅವಧಿಗೆ ಅನ್ವಯವಾಗಲಿದ್ದು, ಮರುಪಾವತಿ ಅವಧಿ ಮೂರು ತಿಂಗಳು ವಿಸ್ತರಣೆಯಾಗಲಿದೆ ಮತ್ತು ಮೇಲಿನ ಉದಾಹರಣೆಯಲ್ಲಿ(2)ರಲ್ಲಿ ತಿಳಿಸಿರುವಂತೆ ವಿಸ್ತರಿಸಲ್ಪಟ್ಟ ಅವಧಿಗೆ ಮೂರು ತಿಂಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.

ಇತರೆ ಅವಧಿ ಸಾಲಗಳಿಗೆ ಎಲ್ಲಾ ಕಂತುಗಳು ಮತ್ತು ಆ ಅವಧಿಗೆ ಬೀಳುವ ಬಡ್ಡಿಯೂ ಒಳಪಡುತ್ತದೆ. ಇದರಲ್ಲಿ ಪಾವತಿ ಅವಧಿ ಅನ್ವಯಿಸುವುದಿಲ್ಲ ಅಂದರೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ, ಬುಲೆಟ್ ಪೇಮೆಂಟ್ ಇತ್ಯಾದಿ. ಮರು ಪಾವತಿ ಆರಂಭವಾಗದಂತಹ ಅವಧಿ ಸಾಲಗಳಿಗೆ ಮೂರು ತಿಂಗಳ ಬಡ್ಡಿ ಭಾಗ ಮಾತ್ರ ಲೆಕ್ಕ ಮಾಡಬೇಕಾಗುತ್ತದೆ.

ಪ್ರಶ್ನೆ 6:  ಅವಧಿ ಸಾಲಗಳು ಸಾಲ ನೀತಿಯಲ್ಲಿ ನಿಗದಿಪಡಿಸಿರುವುದರಿಂದ ಅಥವಾ ವಿಸ್ತರಿಸಿದ ಅವಧಿಗಿಂತ ಗರಿಷ್ಠ ಅವಧಿ ಮುಂದೆ ಹೋದರೆ ಏನಾಗುತ್ತದೆ?

ಉತ್ತರ : ಯಾವುದೇ ಅನುಮೋದನೆಗಳು ಅಥವಾ ಉಲ್ಲಂಘನೆಗಳ ಅಗತ್ಯವಿಲ್ಲದೆ, ಎಲ್ಲ ಅವಧಿ ಸಾಲಗಳಿಗಳಿಗೂ ಇದನ್ನು ವಿಸ್ತರಿಸಬಹುದಾಗಿದೆ.

ಪ್ರಶ್ನೆ 7: ದುಡಿಯುವ ಬಂಡವಾಳದ ಮೇಲಿನ ಬಡ್ಡಿ ಪರಿಗಣಿಸುವ ಸೌಕರ್ಯವನ್ನು ಹೇಗೆ ಪರಿಗಣಿಸಲಾಗುತ್ತದೆ ?

ಉತ್ತರ : ಮಾರ್ಚ್ 31, ಏಪ್ರಿಲ್ 30 ಮತ್ತು 31 ಮೇ 2020ಕ್ಕೆ ಅನ್ವಯವಾಗುವಂತೆ ಎಲ್ಲಾ ನಗದು ಸಾಲ/ಓವರ್ ಡ್ರಾಫ್ಟ್ ಗಳ ಬಡ್ಡಿ ಮರುಪಾವತಿಯನ್ನು ಮುಂದೂಡಲಾಗುವುದು. ಆದರೆ ಜೂನ್ 30ಕ್ಕೆ ಅನ್ವಯವಾಗುವಂತೆ ಒಟ್ಟು ಬಡ್ಡಿಯನ್ನು ಸೇರಿಸಿ, ವಸೂಲಾತಿ ಮಾಡಲಾಗವುದು. ಒಂದು ವೇಳೆ ಮುಂದಿನ ತಿಂಗಳ ಅವಧಿಯೊಳಗೆ ತಿಂಗಳ ಬಡ್ಡಿ ಪಾವತಿಸಿಲ್ಲ ಎಂದಾದರೆ ಇದು ಅನ್ವಯವಾಗುತ್ತದೆ.

ಪ್ರಶ್ನೆ 8: ಮರುಪಾವತಿಯಲ್ಲಿ ವಿಫಲರಾದವರಿಗೆ ಸಂಬಂಧಿಸಿದಂತೆ ಸಾಲಗಾರರ ಮೇಲೆ ಆರ್ ಬಿ ಐ ಪರಿಹಾರ ಪರಿಣಾಮ ಏನಾಗಲಿದೆ ?

ಉತ್ತರ : ಮರುಪಾವತಿಯಲ್ಲಿ ಯಾವುದೇ ವಿಳಂಬವಾದರೆ ಅದು ಡಿಫಾಲ್ಟ್ ಆಗುತ್ತದೆ ಮತ್ತು ಅದು ಕ್ರೆಡಿಟ್ ಬ್ಯೂರೋದಲ್ಲಿ ವರದಿಯಾಗುತ್ತದೆ. 5 ಕೋಟಿ ಮತ್ತು ಅದಕ್ಕೂ ಮಿಗಿಲಾದ ವಾಣಿಜ್ಯ ಸಾಲಗಳಿಗೆ ಬ್ಯಾಂಕ್ ನಿಂದ ಓವರ್ ಡ್ಯೂ ಸ್ಥಿತಿ ಬಗ್ಗೆ ಸಿಆರ್ ಐಎಲ್ ಸಿ ಮೂಲಕ ವರದಿ ಬರುತ್ತದೆ. ಪರಿಹಾರ ಪ್ಯಾಕೇಜ್ ನ ಪರಿಣಾಮದಿಂದಾಗಿ 2020ರ ಮಾರ್ಚ್ 1 ರ ನಂತರ ಬಾಕಿ ಮರುಪಾವತಿ ಉಳಿಸಿಕೊಂಡಿದ್ದರೂ ಕೂಡ ಮೂರು ತಿಂಗಳ ಅವಧಿಗೆ ಅದು ಕ್ರೆಡಿಟ್ ಬ್ಯೂರೋ/ಸಿಆರ್ ಐಎಲ್ ಸಿ ಅಲ್ಲಿ ವರದಿಯಾಗುವುದಿಲ್ಲ. ಬ್ಯಾಂಕುಗಳಿಗೆ ಯಾವುದೇ ದಂಡದ ಬಡ್ಡಿ ಅಥವಾ ಶುಲ್ಕವನ್ನು ಪಾವತಿಸಬೇಕಿಲ್ಲ. ಅದೇ ರೀತಿ ಸೆಬಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಗೆ ಈ ಸಾಲ ಮರುಪಾವತಿ ವಿಫಲವನ್ನು ಅದು ಕೋವಿಡ್ ನಿಂದಾಗಿ ಘೋಷಿಸಿರುವ ಲಾಕ್ ಡೌನ್ ಪರಿಣಾಮದಿಂದಾದರೆ ಲಿಸ್ಟೆಡ್ ಕಂಪನಿಗಳ ವರದಿಯಲ್ಲಿ ಸೇರಿಸದಂತೆ ಸೂಚಿಸಿದೆ.

ಪ್ರಶ್ನೆ 9: ವ್ಯಕ್ತಿಗಳು/ವಹಿವಾಟುದಾರರು ಅದರ ಪ್ರಯೋಜನ ಪಡೆಯುವುದು ಅತ್ಯಗತ್ಯ ಎಂದು ಅರ್ಥವೇ?

ಉತ್ತರ : ನಿಮ್ಮ ನಗದು ಹರಿವಿನಲ್ಲಿ ವ್ಯತ್ಯಯವಾದರೆ ಅಥವಾ ಆದಾಯ ನಷ್ಟವಾದರೆ ಅಂತಹ ಸಂದರ್ಭಗಳಲ್ಲಿ ನೀವು ಈ ಪ್ಯಾಕೇಜ್ ನ ಪ್ರಯೋಜನ ಪಡೆಯಬಹುದು, ಆದರೆ ನೀವು ಪಡೆದಿರುವ ಸಾಲದ ಮೇಲಿನ ಬಡ್ಡಿ ಕಡ್ಡಾಯವಾಗಿ ತಕ್ಷಣಕ್ಕೇನು ಪಾವತಿಸಬೇಕಿಲ್ಲ, ಆದರೆ ಅದು ಮೂರು ತಿಂಗಳ ಅವಧಿಗೆ ಮುಂದೂಡಲ್ಪಡುತ್ತದೆ ಮತ್ತು ಅದು ನಿಮ್ಮ ಖಾತೆಯ ಮೇಲೆ ಸಂಗ್ರಹವಾಗಿ ಹೆಚ್ಚಿನ ಹೊರೆಯ ಪರಿಣಾಮವೂ ಬೀರುತ್ತದೆ.

ಇದನ್ನು ವಿಸ್ತೃತವಾಗಿ ಹೇಳುವುದಾದರೆ ಉದಾಹರಣೆಗೆ ನಿಮ್ಮ ಬಾಕಿ ಸಾಲ 100,000 ಇದೇ ಎಂದಾದರೆ ನಿಮ್ಮ ಸಾಲದ ಮೇಲೆ ಶೇ. 12ರಷ್ಟು ಬಡ್ಡಿ ವಿಧಿಸುವುದಾದರೆ ನೀವು  ಪ್ರತಿ ತಿಂಗಳು 1,000 ರೂ. ಬಡ್ಡಿ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಪ್ರತಿ ತಿಂಗಳ ಬಡ್ಡಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಎಂದಾದರೆ ನೀವು ವಾರ್ಷಿಕ ಶೇ.12ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಮತ್ತು ಅದರಂತೆ 3ನೇ ತಿಂಗಳ ಕೊನೆಗೆ ನೀವು ಒಟ್ಟಾರೆ 3,030.10 ರೂ. ಬಡ್ಡಿ ಪಾವತಿಸಬೇಕಾಗುತ್ತದೆ.

ಅದೇ ರೀತಿ ಬಡ್ಡಿ ದರ ಶೇ. 10ರಷ್ಟಿದ್ದರೆ ನೀವು ಪ್ರತಿ ತಿಂಗಳು 833 ರೂ. ಪಾವತಿಸಬೇಕಾಗುತ್ತದೆ ಅಥವಾ ಆನಂತರ ಮೂರು ತಿಂಗಳಿಗೆ 2,521 ರೂ. ಪಾವತಿಸಬೇಕಾಗುತ್ತದೆ.

ಪ್ರಶ್ನೆ 10: ಮರುಪಾವತಿಗೆ ನನ್ನನ್ನು ಯಾರಾದರು ಬ್ಯಾಂಕ್ ಸಿಬ್ಬಂದಿ ಅಥವಾ ಕಲೆಕ್ಷನ್ ಏಜೆಂಟ್ ಸಂಪರ್ಕಿಸಿದರೆ ನಾನು  ಅಸಾಮಾಧಾನಗೊಳ್ಳಬಹುದೇ ?

ಉತ್ತರ : ನೀವು ಎದೆಗುಂದಬೇಕಾಗಿಲ್ಲ, ಅಸಮಾಧಾನಗೊಳ್ಳಬೇಕಿಲ್ಲ ಮತ್ತು ಬ್ಯಾಂಕ್ ಸಿಬ್ಬಂದಿ ಅಥವಾ ಕಲೆಕ್ಷನ್ ಏಜೆಂಟ್ ಗೆ ನೀವು ಪರಿಹಾರ ಪ್ಯಾಕೇಜ್ ನಡಿ ಘೋಷಿಸಿರುವ ವಿಸ್ತರಣೆ ಅವಕಾಶವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಬಹುದು.

ಪ್ರಶ್ನೆ 11: ನನ್ನ ಕ್ರೆಡಿಟ್ ಕಾರ್ಡ್ ಬಾಕಿ ಕತೆಯೇನು ?

ಉತ್ತರ : ಕ್ರೆಡಿಟ್ ಕಾರ್ಡ್ ಪಾವತಿಗೂ ಈ ಪರಿಹಾರ ಸೌಲಭ್ಯ ಅನ್ವಯವಾಗಲಿದೆ. ಕ್ರೆಡಿಟ್ ಕಾರ್ಡ್ ಬಾಕಿ ವಿಚಾರದಲ್ಲಿ ಕನಿಷ್ಠ ಮೊತ್ತ ಪಾವತಿಸುವ ಅಗತ್ಯವಿದೆ. ಒಂದು ವೇಳೆ ಅದನ್ನು ಪಾವತಿಸದಿದ್ದರೆ ಅದು ಕ್ರೆಡಿಟ್ ಬ್ಯೂರೋದಲ್ಲಿ ದಾಖಲಾಗುತ್ತದೆ. ಆರ್ ಬಿಐ ಸುತ್ತೋಲೆ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್ ಪಾವತಿ ಮೂರು  ತಿಂಗಳು ಬಾಕಿ ಉಳಿಸಿಕೊಂಡರೂ ಸಹ ಅದರ ವಿವರಗಳು ಕ್ರೆಡಿಟ್ ಬ್ಯೂರೋದಲ್ಲಿ ದಾಖಲಾಗುವುದಿಲ್ಲ.

ಆದರೆ ಪಾವತಿಸದೇ ಇರುವ ಮೊತ್ತಕ್ಕೆ ಕ್ರೆಡಿಟ್ ಕಾರ್ಡ್ ನೀಡಿರುವ ಕಂಪನಿ ಬಡ್ಡಿಯನ್ನು ವಿಧಿಸುತ್ತದೆ. ನೀವು ಎಷ್ಟು ಬಡ್ಡಿಯನ್ನು ಪಾವತಿಸಬೇಕು ಎಂಬುದನ್ನು ನಿಮಗೆ ಕಾರ್ಡ್ ನೀಡಿರುವವರ ಬಳಿ ಪರಿಶೀಲಿಸಿ ತೆಗೆದುಕೊಳ್ಳಬೇಕು. ಆದರೆ ಈ ಅವಧಿಯಲ್ಲಿ ಯಾವುದೇ ದಂಡದ ಬಡ್ಡಿ ವಿಧಿಸುವುದಿಲ್ಲ. ಆದರೆ ಸಾಮಾನ್ಯ ಬ್ಯಾಂಕ್ ಬಡ್ಡಿ ದರಕ್ಕೆ ಹೋಲಿಸಿದರೆ ಕ್ರೆಡಿಟ್ ಕಾರ್ಡ್ ಬಡ್ಡಿ ದರ ತುಂಬಾ ಹೆಚ್ಚಿರುವುದರಿಂದ ಈ ವಿಚಾರದಲ್ಲಿ ನೀವು ಅದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ.

ಪ್ರಶ್ನೆ 12: ನಿಧಿ ಆಧರಿಸಿದಿಂದ ನಿಧಿಯಿಲ್ಲದೆ ಆಧರಿಸಿದ ಅಥವಾ ಎಫ್ ಬಿ ಯಿಂದ ಎನ್ಎಫ್ ಬಿ, ಬಿಸಿನೆಸ್ ಗೆ ಅಂತರ ಬದಲಾವಣೆಗೆ ಅವಕಾಶ ವಿದೆಯೇ ?

ಉತ್ತರ : ನಿಧಿ ಆಧರಿತ ಅಂಶದಲ್ಲಿ ಅಂತರ ಬದಲಾವಣೆ ಮಾರ್ಚ್ 1 ರಿಂದ 2020ರ ಮೇ 31ರ ಅವಧಿಗೆ ಲಭ್ಯವಿದ್ದು, ಅದಕ್ಕೆ ಬಡ್ಡಿ ಅನ್ವಯವಾಗುತ್ತದೆ. ಮಾರ್ಚ್ 1ರ ನಂತರ ಅನುಮೋದಿಸಲ್ಪಟ್ಟಿರುವ ಸಾಲಗಳಿಗೆ ನಿಧಿ ಆಧರಿಸಿದ ಭಾಗಕ್ಕೆ ಮಾತ್ರ ಬಡ್ಡಿ ಅನ್ವಯವಾಗುತ್ತದೆ.

ಪ್ರಶ್ನೆ 13: ಇನ್ಯಾವ ರೀತಿಯಲ್ಲಿ ವಾಣಿಜ್ಯೋದ್ಯಮಿಗಳಿಗೆ ಪರಿಹಾರವನ್ನು ನೀಡಲಾಗಿದೆ ?

ಉತ್ತರ :ನಗದು ಹರಿವಿನ ವ್ಯತ್ಯಯ ಅಥವಾ ದುಡಿಯುವ ಬಂಡವಾಳದಲ್ಲಿ ಆಗಿರುವ ತೊಂದರೆಗಳನ್ನು ಆಧರಿಸಿ ದುಡಿಯುವ ಬಂಡವಾಳ ಮರುಪಾವತಿ ಅವಧಿಯನ್ನು ಮರುಮೌಲ್ಯಮಾಪನ ಮಾಡಲು ಬ್ಯಾಂಕ್ ಗೆ ವಾಣಿಜ್ಯೋದ್ಯಮಿಗಳು ಮನವಿ ಮಾಡಬಹುದು. ಆಗ ಬ್ಯಾಂಕ್ ಎನ್ಎಫ್ ಬಿ ಸೌಕರ್ಯಗಳು(ಎಲ್ ಸಿಎಸ್/ಬಿಜಿಎಸ್ ಇತ್ಯಾದಿ) ಅಥವಾ ಭದ್ರತೆಯ ಮೇಲೆ ಇತರೆ ಪರಿಹಾರಗಳನ್ನು ಅಥವಾ ಕಡಿತಕ್ಕೆ ಮನವಿ ಸಲ್ಲಿಸಬಹುದು. ಪ್ರಕರಣಗಳ ಸತ್ಯಾಸತ್ಯತೆ ಆಧರಿಸಿ ಪ್ರತಿಯೊಂದು ಪ್ರಕರಣದಲ್ಲೂ ಬ್ಯಾಂಕ್ ಶಾಖೆಗಳು ತನ್ನದೇ ನಿರ್ಧಾರಗಳನ್ನು ಕೈಗೊಳ್ಳಬಹುದು.

ಪ್ರಶ್ನೆ 14: ದುಡಿಯುವ ಬಂಡವಾಳದ ಹಣಕಾಸು ಸುಗಮಗೊಳಿಸುವದರಲ್ಲಿ ಎನ್ ಬಿ ಎಫ್ ಸಿಎಸ್/ಎಂಎಫ್ ಐಎಸ್/ಎಚ್ ಸಿ ಎಫ್ ಗಳು ಅರ್ಹವಾಗಿವೆಯೇ?

ಉತ್ತರ : ಪ್ರಸ್ತುತಯೋಜನೆಯಡಿ ಅವುಗಳನ್ನು ಪರಿಗಣಿಸಲಾಗಿಲ್ಲ, ಆದರೆ ಆರ್ ಬಿಐ ಇತ್ತೀಚೆಗೆ ಪರಿಚಯಿಸಲಾಗಿರುವ ನಿಗದಿತ ದೀರ್ಘಾವಧಿಯ ಮರು ಹಣಕಾಸು ಕಾರ್ಯಾಚರಣೆ ಅಂದರೆ     ಟಿಎಲ್ ಟಿಆರ್ ಒ ಅಡಿಯಲ್ಲಿ ಇಂತಹ ಹಣಕಾಸು ಸಂಸ್ಥೆಗಳಿಗೆ ಸೂಕ್ತ ನಗದು ಪೂರೈಕೆಯನ್ನು ದೊರಕುವಂತೆ ಮಾಡುವ ಅಂಶವನ್ನು ಆರ್ ಬಿ ಐ ಸೇರಿಸಿದೆ. ಈ ಯೋಜನೆಯಡಿ ಲಭ್ಯವಾಗುವ ನಗದನ್ನು ಬ್ಯಾಂಕುಗಳು ಹೂಡಿಕೆ ಶ್ರೇಣಿಯ ಕಾರ್ಪೊರೇಟ್ ಬಾಂಡ್ ಗಳು, ವಾಣಿಜ್ಯ ಪತ್ರಗಳು ಮತ್ತು ನಾನ್ ಕನ್ವರ್ಟಬಲ್ ಡಿಬೆಂಚರ್ಸ್ ಮತ್ತು  2020ರ ಮಾರ್ಚ್ 27ರೊಳಗಿನ ಬಾಕಿ ಮೊತ್ತದ ಹೂಡಿಕೆಗಳನ್ನಾಗಿ ಪರಿಗಣಿಸಲಿವೆ.

ಬ್ಯಾಂಕುಗಳು ಶೇ.50ರ ವರೆಗಿನ ತಮ್ಮ ಇನ್ ಕ್ರಿಮೆಂಟಲ್ ಹೋಲ್ಡಿಂಗ್ಸ್ ಅನ್ನು ಪ್ರಾಥಮಿಕ ಮಾರುಕಟ್ಟೆ ಹೂಡಿಕೆಗಳಿಗೆ ಅರ್ಹ ಎಂದು ಪರಿಗಣಿಸಬಹುದು. ಉಳಿದ ಶೇ.50ರಷ್ಟನ್ನು ಮ್ಯೂಚುಯಲ್ ಫಂಡ್ ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳೂ ಸೇರಿದಂತೆ ಸೆಕೆಂಡರಿ ಮಾರುಕಟ್ಟೆಗಳಲ್ಲಿ ತೊಡಗಿಸಬಹುದು. ಈ ಸೌಕರ್ಯದಡಿ ಬ್ಯಾಂಕುಗಳು ಹೂಡಿಕೆ ಮಾಡುವ ಹಣವನ್ನು(ಎಚ್ ಟಿಎಂ) ಎಂದು ವರ್ಗೀಕರಿಸಲಾಗುವುದು. ಒಟ್ಟಾರೆ ಹೂಡಿಕೆಯ ಶೇ.25ಕ್ಕೂ ಅಧಿಕ ಹಣವನ್ನು ಈ ಎಚ್ ಟಿಎಂ ವಿಭಾಗದಲ್ಲಿ ಸೇರಿಸಬಹುದು.  ಈ ಸೌಕರ್ಯದಡಿ ದೊಡ್ಡ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬಾಕಿ ಎಂದು ಪರಿಗಣಿಸುವಂತಿಲ್ಲ. ಬ್ಯಾಂಕುಗಳು ಎನ್ ಬಿ ಎಫ್ ಸಿಎಸ್/ಎಂಎಫ್ ಐಎಸ್/ಎಚ್ ಸಿ ಎಫ್ ಗಳಿಗೆ ಬೆಂಬಲ ನೀಡುತ್ತವೆ. ಈ ಗವಾಕ್ಷಿಯಡಿ ನಾವು ಇಂತಹ ಹಣಕಾಸು ಸಂಸ್ಥೆಗಳಿಗೆ ನಗದು ಕೊರತೆಯಾಗುತ್ತದೆ ಎಂಬುದು ಗೋಚರಿಸುತ್ತಿಲ್ಲ.

ಪ್ರಶ್ನೆ 14: ಆರ್ ಬಿ ಐ ನ ಈ ಎಲ್ಲ ಕ್ರಮಗಳನ್ನು “ಪುನರ್ ರಚನೆ ’ ಎಂದು ಪರಿಗಣಿಸಬಹುದೇ ? ಮತ್ತು ಅದಕ್ಕೆ ಅನ್ವಯವಾಗುವಂತಹ ಅಂಶಗಳೇನು ?

ಉತ್ತರ : ಆರ್ ಬಿಐ 2020ರ ಮಾರ್ಚ್ 27ರಂದು ಹೊರಡಿಸಿರುವ ಕೋವಿಡ್-19 ನಿಯಂತ್ರಣ ಪ್ಯಾಕೇಜ್ ನಲ್ಲಿ ಉಲ್ಲೇಖಿಸಲಾಗಿರುವ ಕ್ರಮಗಳನ್ನು “ಪುನರ್ ರಚನೆ ” ಎಂದು ಪರಿಗಣಿಸಬೇಕಾಗಿಲ್ಲ ಮತ್ತು ಅದರಿಂದಾಗಿ ಆಸ್ತಿ ವರ್ಗೀಕರಣ ಇಳಿಮುಖವಾಗುತ್ತದೆ ಎಂದು ಭಾವಿಸಬೇಕಿಲ್ಲ. ಅಂತೆಯೇ ಮರು ನಿಗದಿಗೊಳಿಸಲಾದ ಲೆಕ್ಕಗಳು ಕೂಡ ಅನ್ವಯವಾಗುವುದಿಲ್ಲ.

ಪ್ರಶ್ನೆ 15: ಎಸ್ ಐ/ಇಸಿಎಸ್ /ಎನ್ಎಸಿಎಚ್ ಮೂಲಕ ವಸೂಲಿ ಮಾಡಲಾಗುವ ಇಎಂಐ/ಕಂತುಗಳ ವಿಚಾರವೇನು ? ಸಾಲಗಾರರು ಕಂತುಗಳ/ಇಎಂಐಗಳ ಮರುಪಾವತಿಗೆ ಬೇಡಿಕೆ ಒಡ್ಡಿದರೆ ಆಗ ಯಾವ ಅಂಶಗಳನ್ನು ಪಾಲಿಸಬೇಕು ?

ಉತ್ತರ : ಪರಿಷ್ಕೃತ ಮಾರ್ಗಸೂಚಿಗಳಿಗಾಗಿ ನೀವು ನಿಮ್ಮ ಬ್ಯಾಂಕ್ ಜೊತೆ ದಯವಿಟ್ಟು ಸಂಪರ್ಕದಲ್ಲಿರಿ.

 

****

 (Release ID: 1610126) Visitor Counter : 788