ಗ್ರಾಮೀಣಾಭಿವೃದ್ಧಿ ಸಚಿವಾಲಯ
ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಸರ್ಕಾರ ಎಂ ಜಿ-ಎನ್ ಆರ್ ಇ ಜಿ ಎಸ್ ವೇತನವನ್ನು ರೂ.20 ಹೆಚ್ಚಿಸಿದೆ
Posted On:
31 MAR 2020 11:02AM by PIB Bengaluru
ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಸರ್ಕಾರ ಎಂ ಜಿ-ಎನ್ ಆರ್ ಇ ಜಿ ಎಸ್ ವೇತನವನ್ನು ರೂ.20 ಹೆಚ್ಚಿಸಿದೆ
ಎನ್ ಆರ್ ಇ ಜಿ ಎಸ್ ವೇತನ ಮತ್ತು ವಸ್ತುಗಳ ಬಾಕಿಗಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ರೂ. 4,431 ಕೋಟಿ ಗಳನ್ನು ಈ ವಾರ ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದೆ.
ಕೊವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ, ರಾಜ್ಯ ಸರ್ಕಾರಗಳೊಂದಿಗೆ ಜೊತೆಗೂಡಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಏಪ್ರಿಲ್ 1, 2020 ರಿಂದ ಮಹಾತ್ಮಾ ಗಾಂಧಿ ಎನ್ ಆರ್ ಇ ಜಿ ಎಸ್ ವೇತನವನ್ನು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚಿಸಿದೆ. ರಾಷ್ಟ್ರೀಯ ಸರಾಸರಿ ಹೆಚ್ಚಳ ರೂ. 20. ಮಹಾತ್ಮಾ ಗಾಂಧಿ ಎನ್ ಆರ್ ಇ ಜಿ ಎಸ್ ವೈಯಕ್ತಿಕ ಫಲಾನುಭವಿಗಳ ಕೆಲಸವನ್ನು ಆಧರಿಸಿದುದರ ಮೇಲೆ ಗಮನ ಕೇಂದ್ರೀಕರಿಸಬಹುದಾಗಿದೆ, ಇದು ನೇರವಾಗಿ ಎಸ್ ಸಿ, ಎಸ್ ಟಿ ಮತ್ತು ಮಹಿಳಾ ನೇತೃತ್ವದ ಮನೆಗಳಿಗೆ ಹಾಗೂ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಹಾಗೂ ಬಡ ಕುಟುಂಬಗಳಿಗೆ ಪ್ರಯೋಜನಕಾರಿ ಆಗಿದೆ. ಆದಾಗ್ಯೂ, ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿಲ್ಲ ಮತ್ತು ಸಾಮಾಜಿಕ ಅಂತರದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತ ಪಡಿಸಲು ರಾಜ್ಯದ ಹಾಗೂ ಜಿಲ್ಲಾ ಅಧಿಕಾರಿಗಳ ನಿಕಟ ಸಮಾಲೋಚನೆ ಮತ್ತು ಮಾರ್ಗದರ್ಶನ ಅವಶ್ಯಕವಾಗಿರುತ್ತದೆ.
ವೇತನ ಮತ್ತು ವಸ್ತುಗಳ ಬಾಕಿಯನ್ನು ತಲುಪಿಸುವುದೇ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಥಮ ಆದ್ಯತೆಯಾಗಿದೆ. ಪ್ರಸ್ತುತ ಹಣಕಾಸು ವರ್ಷದ ಹೊಣೆಗಾರಿಕೆಯನ್ನು ನಿರ್ವಹಿಸಿಲು ರೂ. 4,431 ಕೋಟಿಯ ಮೊತ್ತವನ್ನು ಈ ವಾರದಲ್ಲಿ ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ, 2020-21 ನೇ ಸಾಲಿನ ಮೊದಲ ಅವಧಿಯ ಉಳಿದ ಇಂತಹ ಹೊಣೆಗಾರಿಕೆಗಳಿಗಾಗಿ 15 ಏಪ್ರಿಲ್ 2020ಕ್ಕೂ ಮೊದಲೇ ಹಣ ಬಿಡುಗಡೆ ಮಾಡಲಾಗುವುದು. ಆಂಧ್ರಪ್ರದೇಶ ರಾಜ್ಯ ಸರ್ಕಾರಕ್ಕೆ ರೂ. 721 ಕೋಟಿಯ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.
****
(Release ID: 1609658)
Visitor Counter : 266
Read this release in:
Punjabi
,
Telugu
,
English
,
Marathi
,
Hindi
,
Assamese
,
Bengali
,
Gujarati
,
Odia
,
Tamil
,
Malayalam