ಪ್ರವಾಸೋದ್ಯಮ ಸಚಿವಾಲಯ

ಭಾರತದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರವಾಸಿಗರ ಸಹಾಯಕ್ಕಕಾಗಿ  ಪ್ರವಾಸೋದ್ಯಮ ಸಚಿವಾಲಯದಿಂದ ‘ಸ್ಟ್ರಾಂಡೆಡ್ ಇನ್ ಇಂಡಿಯಾ’ ಪೋರ್ಟಲ್

Posted On: 31 MAR 2020 1:09PM by PIB Bengaluru

ಭಾರತದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರವಾಸಿಗರ ಸಹಾಯಕ್ಕಕಾಗಿ  ಪ್ರವಾಸೋದ್ಯಮ ಸಚಿವಾಲಯದಿಂದ ‘ಸ್ಟ್ರಾಂಡೆಡ್ ಇನ್ ಇಂಡಿಯಾ’ ಪೋರ್ಟಲ್ 

 

ಭಾರತದಲ್ಲಿ ಸಿಲುಕಿಕೊಂಡಂತಹ ವಿದೇಶಿ ಪ್ರವಾಸಿಗರಿಗೆ ಸಹಾಯ ಮಾಡಲೆಂದು ತಮ್ಮ ಮಾತೃಭೂಮಿಯಿಂದ ದೂರ ಸಿಲುಕಿರುವ ವಿದೇಶಿ ಪ್ರವಾಸಿಗರು ಪಡೆಯಬಹುದಾದ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಉದ್ದೇಶದಿಂದ ಪೋರ್ಟಲ್ ವೊಂದನ್ನು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಆರಂಭಿಸಿದೆ.ಈ ಪೋರ್ಟಲ್ ನ್ನು ‘ಸ್ಟ್ರಾಂಡೆಡ್ ಇನ್ ಇಂಡಿಯಾ’  ಎಂದು ಹೆಸರಿಸಲಾಗಿದ್ದು ದೇಶದ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಂತಹ ವಿದೇಶಿ ಪ್ರವಾಸಿಗರಿಗೆ ಸಹಾಯ ನೀಡುವ ಜಾಲದಂತೆ ಕಾರ್ಯ ನಿರ್ವಹಿಸುವ ಗುರಿಯನ್ನು ಇದು ಹೊಂದಿದೆ.  

ಕರೋನಾ ವೈರಸ್ ನಿಂದಾಗಿ ಇಡೀ ವಿಶ್ವ ಹಿಂದೆಂದೂ ಕಂಡಿರದಂಥ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಪ್ರವಾಸಿಗರ, ವಿಶೇಷವಾಗಿ ವಿದೇಶದಿಂದ ಬಂದವರ ಯೋಗಕ್ಷೇಮವನ್ನು ಖಚಿತಪಡಿಸುವ ನಿರಂತರ ಪ್ರಯತ್ನ ಇದಾಗಿದೆ. ಅದರಂತೆ ಪ್ರವಾಸೋದ್ಯಮ ಸಚಿವಾಲಯ ಜಾಗರೂಕವಾಗಿದೆ ಮತ್ತು ಅಗತ್ಯವಿರುವವರಿಗೆ  ನೆರವು ನೀಡಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ 

strandedinindia.com ಪೋರ್ಟಲ್ ಪ್ರವಾಸಿಗರಿಗೆ ಅಗತ್ಯವಿರುವ ಸಮಯದಲ್ಲಿ ಉಪಯುಕ್ತವಾಗುವಂತಹ ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿದೆ. 

a) ವಿದೇಶಿ ಪ್ರವಾಸಿಗರು ಸಹಾಯ ಪಡೆಯಬಹುದಾದಂತಹ ಕೋವಿಡ್ -19 ಸಹಾಯವಾಣಿ ಸಂಖ್ಯೆಗಳು ಅಥವಾ ಕಾಲ್ ಸೆಂಟರ್ ಗಳ ಸಮಗ್ರ ಮಾಹಿತಿ 

b) ವಿದೇಶಾಂಗ ಸಚಿವಾಲಯದ ನಿಯಂತ್ರಣ ಕೇಂದ್ರಗಳಲ್ಲಿ ಲಭ್ಯವಿರುವ ವಿವಿಧ ಮಾಹಿತಿ ಮತ್ತು ಅವರ ಸಂಪರ್ಕದ ವಿವರ.  

c) ರಾಜ್ಯಾಧಾರಿತ/ಪ್ರಾದೇಶಿಕ ಪ್ರವಾಸೋದ್ಯಮ ಸಹಕಾರದ ಮೂಲಭೂತ ಸೌಕರ್ಯದ ಕುರಿತು ಮಾಹಿತಿ.

d) ಹೆಚ್ಚಿನ ಮಾಹಿತಿಯ ಅಗತ್ಯವಿರುವವರಿಗೆ ಸಹಾಯ ಮಾಡಲು ಮತ್ತು ವಿದೇಶಿ ಪ್ರವಾಸಿಗರನ್ನು ಸಂಬಂಧಿತ ಅಧಿಕಾರಿಗಳಿಗೆ ಸಂಪರ್ಕ ಕಲ್ಪಿಸಲು ಸಹಾಯ ವಿಭಾಗ

 ಈ ಜಾಲತಾಣ ಪ್ರವಾಸೋದ್ಯಮ ಜಾಲತಾಣ ಮತ್ತು ಪ್ರವಾಸೋದ್ಯಮ ಸಚಿವಾಲಯದ ಮುಖ್ಯ ವಾಹಿನಿಗಳಲ್ಲಿ ಈ ಮಾಹಿತಿ ಪಡೆಯಬಹುದಾಗಿದೆ.  

 

ಹೆಚ್ಚಿನ ಮಾಹಿತಿಗಾಗಿ strandedinindia.com  ಅಥವಾ incredibleindia.org ಗೆ ಭೇಟಿ ನೀಡಿ.  

 

*******


(Release ID: 1609536) Visitor Counter : 279