ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಕೋವಿಡ್ – 19 : ತೈಲ ಮಾರುಕಟ್ಟೆ ಕಂಪನಿಗಳು ಎಲ್ ಪಿ ಜಿ ಸರಬರಾಜು ಸರಪಳಿಯಲ್ಲಿ ಕಾರ್ಯನಿರ್ವಹಿಸುವ ಡೆಲಿವರಿ ಬಾಯ್ಸ್ ಮತ್ತು ಇತರ ಕೆಲಸಗಾರರಿಗೆ 5 ಲಕ್ಷ ಸಹಾಯ ಘೋಷಿಸಿವೆ

प्रविष्टि तिथि: 30 MAR 2020 5:25PM by PIB Bengaluru

ಕೋವಿಡ್ – 19 : ತೈಲ ಮಾರುಕಟ್ಟೆ ಕಂಪನಿಗಳು ಎಲ್ ಪಿ ಜಿ ಸರಬರಾಜು ಸರಪಳಿಯಲ್ಲಿ ಕಾರ್ಯನಿರ್ವಹಿಸುವ ಡೆಲಿವರಿ ಬಾಯ್ಸ್ ಮತ್ತು ಇತರ ಕೆಲಸಗಾರರಿಗೆ 5 ಲಕ್ಷ ಸಹಾಯ ಘೋಷಿಸಿವೆ


ಈ ನಡೆಯನ್ನು ಶ್ರೀ ಧರ್ಮೇಂದ್ರ ಪ್ರಧಾನ್ ಸ್ವಾಗತಿಸಿದ್ದಾರೆ 

ಕೋವಿಡ್ – 19 ಪ್ರಭಾವದಿಂದ ಸೋಂಕಿತರಾದರೆ ಕಾರ್ಯ ನಿರ್ವಹಿಸುತ್ತಿರುವ ಶೋ ರೂಂ ಸಿಬ್ಬಂದಿ, ಗೋದಾಮು ಸಿಬ್ಬಂದಿ, ಮೆಕ್ಯಾನಿಕ್ ಗಳು, ಡೆಲಿವರಿ ಬಾಯ್ಸ್ ಮತ್ತು ಎಲ್ ಪಿ ಜಿ ಸರಬರಾಜು ಸರಪಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮರಣ ಹೊಂದಿದಲ್ಲಿ ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್ ಮತ್ತು ಹೆಚ್ ಪಿ ಸಿ ಎಲ್ ತಲಾ 5 ಲಕ್ಷ ರೂಪಾಯಿಯನ್ನು ಒಂದು ಬಾರಿಯ ಪರಿಹಾರ ರೂಪದಲ್ಲಿ ನೀಡವುದಾಗಿ ಇಂದು ಘೋಷಿಸಿದ್ದಾರೆ.  
ಎಲ್ ಪಿ ಜಿ ಒಂದು ಅವಶ್ಯಕ ಸಾಮಗ್ರಿಯಾಗಿದ್ದು ಲಾಕ್ ಡೌನ್ ನಿಂದ ಹೊರತುಪಡಿಸಲಾಗಿದೆ ಮತ್ತು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶಾದ್ಯಂತ ಎಲ್ಲ ಗ್ರಾಹಕರಿಗೆ ತಡೆರಹಿತ ಎಲ್ ಪಿ ಜಿ ಸಿಲಿಂಡರ್ ಸರಬರಾಜು ಮಾಡಲು ಸಿಬ್ಬಂದಿಯ ಕಾರ್ಯನಿರ್ವಹಿಸಬೇಕಿದೆ.  
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ತೈಲ ಕಂಪನಿಗಳ ಈ ಉಪಕ್ರಮವನ್ನು ಸ್ವಾಗತಿಸಿದ್ದಾರೆ. “ ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಹೆಚ್ ಪಿ ಸಿ ಎಲ್ ತೆಗೆದುಕೊಂಡ ಈ ಮಾನವೀಯ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ಕ್ಲಿಷ್ಟ ಸಮಯದಲ್ಲಿ ನಮ್ಮ ಸಿಬ್ಬಂದಿ ಒದಗಿಸುತ್ತಿರುವ ಸೇವೆಗಳನ್ನು ಪರಿಗಣಿಸಲು ಸದಾಶಯದ ಸಂಕೇತವಾಗಿದೆ. ನಮ್ಮ ಕೆಲಸಗಾರರ ಯೋಗಕ್ಷೇಮ ಈಗ ಅತ್ಯಂತ ಮಹತ್ವದ್ದಾಗಿದೆ. ಈ ಸಹಾನುಭೂತಿಯ ನಡೆಯು ನಮ್ಮ ಸಿಬ್ಬಂದಿಯ ಸುರಕ್ಷತಾ ಜಾಲವನ್ನು ಮತ್ತಷ್ಟು ಬಲಪಡಿಸುತ್ತದೆ. ಕರೋನಾ ವಿರುದ್ಧದ ಭಾರತದ ಹೋರಾಟಕ್ಕೂ ಇದು ಸಹಾಯಕರವಾಗಿದೆ” ಎಂದು ತಮ್ಮ ಟ್ವೀಟ್ ಸಂದೇಶದಲ್ಲಿ ಬರೆದಿದ್ದಾರೆ.     


*****


(रिलीज़ आईडी: 1609443) आगंतुक पटल : 157
इस विज्ञप्ति को इन भाषाओं में पढ़ें: English , Marathi , हिन्दी , Assamese , Bengali , Punjabi , Gujarati , Tamil , Telugu , Malayalam