ನೌಕಾ ಸಚಿವಾಲಯ

ಬಂದರುಗಳಲ್ಲಿ ಆಮದು ಮತ್ತು ರಫ್ತು ಸಾಗಣೆ ಕಂಟೇನರ್ ಗಳ ತಡೆ ಹಿಡಿತದ ಮೇಲೆ ಶುಲ್ಕವನ್ನು ವಿಧಿಸದಂತೆ ನೌಕಾ ಸಮೂಹ ಸಾರಿಗೆಗಳಿಗೆ ಸಲಹೆ

Posted On: 29 MAR 2020 2:09PM by PIB Bengaluru

ಬಂದರುಗಳಲ್ಲಿ ಆಮದು ಮತ್ತು ರಫ್ತು ಸಾಗಣೆ ಕಂಟೇನರ್ ಗಳ ತಡೆ ಹಿಡಿತದ ಮೇಲೆ ಶುಲ್ಕವನ್ನು ವಿಧಿಸದಂತೆ ನೌಕಾ ಸಮೂಹ ಸಾರಿಗೆಗಳಿಗೆ ಸಲಹೆ 



ನೌಕಾ ಸಚಿವಾಲಯ ಬಂದರುಗಳಲ್ಲಿ ಆಮದು ಮತ್ತು ರಫ್ತು ಸಾಗಣೆ ಕಂಟೇನರ್ ಗಳ ತಡೆ ಹಿಡಿತದ ಮೇಲೆ ಶುಲ್ಕವನ್ನು ವಿಧಿಸದಂತೆ ನೌಕಾ ಸಮೂಹ ಸಾರಿಗೆಗಳಿಗೆ ಸಲಹೆ ನೀಡಿದೆ. ಪ್ರಸ್ತುತ ಒಪ್ಪಿಕೊಂಡಂತಹ ಮತ್ತು ಬಳಸುತ್ತಿರುವ ಅಂಗೀಕರಿಸಿದ ಉಚಿತ ಸಮಯದ ಮತ್ತು ಅದಕ್ಕೂ ಹೆಚ್ಚಿನ ಸಮಯದ ಯಾವುದೇ ವ್ಯವಸ್ಥೆಗಳು ಮತ್ತು ಒಪ್ಪಿಕೊಂಡಂತಹ ನಿಯಮಗಳ ಸಂಧಾನದ ಭಾಗವಾಗಿ  22 ಮಾರ್ಚ್ 2020 ರಿಂದ 14 ಏಪ್ರೀಲ್ 2020 (ಎರಡೂ ದಿನಗಳು ಒಳಗೊಂಡಂತೆ) ರವರೆಗೆ ಇದರ ಅಳವಡಿಕೆಗೆ ಸಲಹೆ ನೀಡಲಾಗಿದೆ. ಭಾರತೀಯ ಬಂದರುಗಳಲ್ಲಿ ಸೂಕ್ತ ರೀತಿಯಲ್ಲಿ ಸರಬರಾಜು ಮಾರ್ಗಗಳನ್ನು ನಿರ್ವಹಿಸಲೆಂದು ಈ ಸಲಹೆ ನೀಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಅಥವಾ ಹೆಚ್ಚುವರು ಶುಲ್ಕಗಳನ್ನು ವಿಧಿಸದಂತೆ ಶಿಪ್ಪಿಂಗ್ ಮಾರ್ಗಗಳಿಗೆ ಸೂಚಿಸಲಾಗಿದೆ. ಇದು ಕೋವಿಡ್ – 19 ಸ್ಫೋಟದ ಸಂದರ್ಭದಲ್ಲಿ ಉಂಟಾದ ಪ್ರಸ್ತುತ ಅಡತಡೆಗಳನ್ನು ಎದುರಿಸಲು ಕೇವಲ ಒಂದು ಬಾರಿಗೆ ಕೈಗೊಂಡ ಕ್ರಮವಾಗಿದೆ.     

ಕೋವಿಡ್ – 19 ರ ಹರಡುವಿಕೆಯಿಂದಾಗಿ 25 ಮಾರ್ಚ್ 2020 ರಂದು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಿಂದಾಗಿ ಕೆಳ ಹಂತಹ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು ಬಂದರುಗಳಿಂದ ಸರಕುಗಳನ್ನು ಸಾಗಿಸುವಲ್ಲಿ ವಿಳಂಬ ಉಂಟಾಗಿದೆ. ಪರಿಣಾಮ ಕೆಲವು ಸರಕು ಸಾಗಣೆದಾರ ಸಂಸ್ಥೆ ಮಾಲೀಕರು ತಮ್ಮ ಸರಕು ಸಾಗಿಸಲು ಮತ್ತು ಅವಶ್ಯಕ ದಾಖಲೆ ಕಾರ್ಯಗಳನ್ನು ಪೂರ್ಣಗೊಳಿಸಲು ಕಷ್ಟವಾಗಿದೆ. ಆದ್ದರಿಂದ, ಅವರು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಹಾಗಾಗಿ  ತಮ್ಮ ದೋಷವಿಲ್ಲದೆ ತಮ್ಮ ಕಂಟೇನರ್ ಗಳನ್ನು ಬಂದರುಗಳಲ್ಲೇ ಉಳಿಸಲು ಕಾರಣವಾಗಿದೆ. ಈ ಸಲಹೆ ದೇಶದಲ್ಲಿ ವ್ಯಾಪಾರ ಸುಲಲಿತವಾಗಿ ನಡೆಯುವಂತೆ ಮತ್ತು ಸರಬರಾಜು ಸರಪಳಿಯ ನಿರ್ವಹಣೆಗೆ ಸಹಾಯ ಮಾಡುತ್ತದೆ. 


***


(Release ID: 1609197) Visitor Counter : 134