ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಕೋವಿಡ್ -19 ವಿರುದ್ದ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವಿಮಾ ಯೋಜನೆ

Posted On: 29 MAR 2020 5:14PM by PIB Bengaluru

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಕೋವಿಡ್ -19 ವಿರುದ್ದ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವಿಮಾ ಯೋಜನೆ

 ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ಘೋಷಿಸಿದಂತೆ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ : ಕೋವಿಡ್ -19 ವಿರುದ್ದ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವಿಮಾ ಯೋಜನೆ” ಆರಂಭ ಮಾಡಲು ಈ ಕೆಳಗಿನ ಶರತ್ತುಗಳ ಅನ್ವಯ ಅನುಮೋದನೆ ನೀಡಲಾಗಿದೆ:

 

I . ಸಮುದಾಯ ಆರೋಗ್ಯ ಸಿಬ್ಬಂದಿ ಸಹಿತ 22.12 ಲಕ್ಷ ಸಾರ್ವಜನಿಕ ಆರೋಗ್ಯ ರಕ್ಷಣಾ ಸೇವಾ ಪೂರೈಕೆದಾರರಿಗೆ ಅವರು ಕೋವಿಡ್-19 ರೋಗಿಗಳ ನೇರ ಸಂಪರ್ಕದಲ್ಲಿದ್ದರೆ ಅಥವಾ ಆವರಿಗೆ ಶ್ರುಶ್ರೂಶೆ ಒದಗಿಸುತ್ತಿದ್ದರೆ ಮತ್ತು ಆ ರೋಗದ ಪರಿಣಾಮವನ್ನು ಎದುರಿಸುವ ಅಪಾಯದಲ್ಲಿದ್ದರೆ ಅವರಿಗೆ 90 ದಿನಗಳ ಅವಧಿಗೆ 50 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಕೋವಿಡ್ -19 ರ ಸಂಪರ್ಕದಿಂದ ಆಗುವ ಆಕಸ್ಮಿಕ ಜೀವಹಾನಿಯನ್ನು ಇದು ಒಳಗೊಂಡಿರುತ್ತದೆ.

Ii .ಅಭೂತಪೂರ್ವ ಪರಿಸ್ಥಿತಿಯಲ್ಲಿ ಕೇಂದ್ರೀಯ/ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ, ಎ.ಐ.ಐ.ಎಂ.ಎಸ್. ಮತ್ತು ಐ.ಎನ್.ಐ.ಗಳ/ ಕೇಂದ್ರೀಯ ಸಚಿವಾಲಯಗಳ ಆಸ್ಪತ್ರೆಗಳ  /ಸ್ವಾಯತ್ತ ಆಸ್ಪತ್ರೆಗಳ ಹಾಗು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ/ನಿವೃತ್ತ / ಸ್ವಯಂಸೇವಕ/ ಸ್ಥಳೀಯ ನಗರ ಸಂಸ್ಥೆಗಳ ಗುತ್ತಿಗೆ /ದಿನಗೂಲಿ/ತಾತ್ಕಾಲಿಕ/ಹೊರಗುತ್ತಿಗೆ ಸಿಬ್ಬಂದಿಗಳನ್ನು ಅವಶ್ಯಕಂಡಂತೆ ಕೋವಿಡ್ 19 ಸಂಬಂಧಿ ಜವಾಬ್ದಾರಿ ನಿಭಾವಣೆಗೆ ನಿಯೋಜಿಸಿದಲ್ಲಿ ಅಂತಹ ಪ್ರಕರಣಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚಿಸಿರಬೇಕು ಎಂಬ ನಿಬಂಧನೆಯಡಿ ಈ ವಿಮಾ ಸೌಲಭ್ಯಕ್ಕೆ ಒಳಪಡಿಸಲಾಗುವುದು.

iii. ಈ ಯೋಜನೆ ಅಡಿಯಲ್ಲಿ ಒದಗಿಸಲಾಗುವ  ವಿಮಾ ಸೌಲಭ್ಯವು ಫಲಾನುಭವಿ ಈಗಾಗಲೇ ಪಡೆದುಕೊಂಡಿರುವ ಯಾವುದೇ ಇತರ ವಿಮಾ ಸೌಲಭ್ಯವನ್ನು ಹೊರತುಪಡಿಸಿ  ಒದಗಿಸುವ ಸೌಲಭ್ಯವಾಗಿದೆ.


(Release ID: 1609177) Visitor Counter : 306