ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮಾರ್ಗ

Posted On: 29 MAR 2020 4:02PM by PIB Bengaluru

ಕೋವಿಡ್-19 ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮಾರ್ಗ

ದೇಶವಾಸಿಗಳು ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳುವಂತೆ ಕರೆ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಮೋದಿ ಅವರು, ಕೋವಿಡ್-19 ವಿರುದ್ಧದ ಸಮರದಲ್ಲಿ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಸಮರ್ಥಿಸಿದರು

ಸಾಂಕ್ರಾಮಿಕ ನಿಯಂತ್ರಣಕ್ಕೆ ಕೆಲವೊಂದು ಕಠಿಣ ನಿರ್ಧಾರಗಳ ಅಗತ್ಯವಿದೆ ಎಂದು ಹೇಳಿದ ಪ್ರಧಾನಿ; ಕೊರೋನಾ ಸೋಂಕು ನಿರ್ಮೂಲನೆಗೆ ಜಾಗತಿಕ ಸಮುದಾಯ ಒಂದಾಗಿ ಕೈಜೋಡಿಸಬೇಕು

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳು ಹಾಗೂ ವೈದ್ಯರ ಜೊತೆ ಸಮಾಲೋಚಿಸಿದ ಅನುಭವ ಹಂಚಿಕೊಂಡ ಪ್ರಧಾನಮಂತ್ರಿ ಅವರ ಬದ್ಧತೆ ಮತ್ತು ದೃಢತೆ ಬಗ್ಗೆ ಮೆಚ್ಚುಗೆ

ಜನರು ಐಸೋಲೇಶನ್  ಮತ್ತು ಸ್ವಯಂ ಕ್ವಾರಂಟೈನ್ ನಲ್ಲಿರುವವರ ಸಹಕಾರ ಮತ್ತು ಅನುಕಂಪ ತೋರುವ ಅಗತ್ಯವಿದೆ: ಪ್ರಧಾನಿ

ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಹಲವು ಯೋಧರು ತಮ್ಮ ಮನೆಗಳಿಗೆ ಸೀಮಿತವಾಗಿಲ್ಲ, ಅವರು ಮನೆಯ ಹೊರಗಿದ್ದು ಕೆಲಸ ಮಾಡುತ್ತಿದ್ದಾರೆ, ಅವರು ನಮ್ಮ ಮುಂಚೂಣಿ ಯೋಧರು, ವಿಶೇಷವಾಗಿ ನಮ್ಮ ಸಹೋದರ ಸಹೋದರಿಯರಾದ ನರ್ಸ್ ಗಳು, ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ, ನಾನು ಅವರೊಂದಿಗೆ ಸಮಾಲೋಚಿಸಿದೆ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದೆ ಮತ್ತು ಅವರು ಅದೇ ಉತ್ಸಾಹದಿಂದ ಕೆಲಸ ಮಾಡುವಂತೆ ಕೋರಿದೆ. ಅವರ ಪ್ರಾಮಾಣಿಕತೆ ಮತ್ತು ಬದ್ಧತೆಗೆ ನಾನು ಇನ್ನಷ್ಟು ಸ್ಫೂರ್ತಿಯಿಂದ ಕೆಲಸ ಮಾಡಲು ಸಹಾಯಕವಾಗಿದೆ”.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೋವಿಡ್-19 ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ, ಲಾಕ್ ಡೌನ್ ಆದೇಶವನ್ನು ಪಾಲಿಸುವ ಮೂಲಕ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇಂದು ಮನ್ ಕಿ ಬಾತ್ 2.010ನೇ ಆವೃತ್ತಿಯಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡ ಮೋದಿ ಅವರು, “ಪ್ರತಿಯೊಬ್ಬರೂ ತಮ್ಮನ್ನು ತಾವು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು, ಮುಂದಿನ ಹಲವು ದಿನಗಳ ಕಾಲ ಎಲ್ಲರೂ ಲಕ್ಷ್ಮಣರೇಖೆಯನ್ನು ಪಾಲಿಸಬೇಕು. ಪ್ರತಿಯೊಬ್ಬ ಭಾರತೀಯರ ಬದ್ಧತೆ ಮತ್ತು ಸಂಯಮ ಈ ಬಿಕ್ಕಟ್ಟಿನಿಂದ ಹೊರಬರಲು ಸಹಾಯಕವಾಗುತ್ತದೆಎಂದರು.

ಮೋದಿ ಅವರು, ಇಡೀ ಮನುಕುಲಕ್ಕೆ ಮಹಾಮಾರಿಯಾಗಿ ಅಪಾಯ ತಂದೊಡ್ಡಿರುವ ಸೋಂಕನ್ನು ನಿರ್ಮೂಲನೆ ಮಾಡಲು ಇಡೀ ಜಾಗತಿಕ ಸಮುದಾಯ ಒಂದಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ, ಅದು ಜ್ಞಾನ, ವಿಜ್ಞಾನ, ಶ್ರೀಮಂತರು ಮತ್ತು ಬಡವರು, ಬಲಿಷ್ಠರು ಮತ್ತು ದುರ್ಬಲರು ಎಲ್ಲದಕ್ಕೂ ಸವಾಲನ್ನು ಒಡ್ಡಿದೆ. ಅದು ಯಾವುದೇ ರಾಷ್ಟ್ರಗಳ ಗಡಿಗಳಿಗೆ ಸೀಮಿತವಾಗಿಲ್ಲ ಅಥವಾ ಅದು ಯಾವುದೇ ಪ್ರದೇಶ ಅಥವಾ ಋತುಮಾನದ ನಡುವೆ ಬೇಧ-ಭಾವ ಮಾಡಿಲ್ಲ ಒಂದು ರೀತಿಯಲ್ಲಿ ಆ ಸೋಂಕು ಇಡೀ ಮನುಕುಲ ನಿರ್ಮೂಲನೆಗೆ ತನ್ನ ಕಬಂದ ಬಾಹುಗಳನ್ನು ಚಾಚಿದೆ. ಹಾಗಾಗಿ ಇಡೀ ಮನುಕುಲ ಅದರ ವಿರುದ್ಧ ಒಗ್ಗೂಡಬೇಕಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಲು ಹೋರಾಟ ನಡೆಸಬೇಕಿದೆಎಂದು ಹೇಳಿದರು.

ಪ್ರಧಾನಮಂತ್ರಿ ಅವರು 130 ಕೋಟಿ ಜನರಿರುವ ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡಲು ಲಾಕ್ ಡೌನ್ ಮಾಡದೆ ಬೇರೆ ಆಯ್ಕೆ ಇರಲಿಲ್ಲ ಎಂದರು. ಕೊರೋನಾ ವಿರುದ್ಧದ ಹೋರಾಟ ಸಾವು-ಬದುಕಿನ ನಡುವಿನ ಹೋರಾಟ ಎಂದು ಪ್ರತಿಪಾದಿಸಿದ ಅವರು, ಅದಕ್ಕಾಗಿ ಅಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಯಿತು ಎಂದರು. ಇಡೀ ವಿಶ್ವ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ಲಾಕ್ ಡೌನ್ ಒಂದೇ ಉಳಿದಿರುವ ದಾರಿ. ಜನರ ಸುರಕ್ಷತೆಯನ್ನು ನಾವು ಖಾತ್ರಿಗೊಳಿಸಬೇಕಿದೆ ಎಂದು ಅವರು ಹೇಳಿದರು.

ಕೋವಿಡ್-19 ತಡೆಗೆ ಮಾಡಿರುವ ಲಾಕ್ ಡೌನ್ ನಿಯಮಾವಳಿಯನ್ನು ಉಲ್ಲಂಘಿಸುತ್ತಿರುವವರು ತಮ್ಮ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಯಾರು ಲಾಕ್ ಡೌನ್ ನಿಯಮವನ್ನು ಅರ್ಥಮಾಡಿಕೊಂಡು ಪಾಲಿಸುವುದಿಲ್ಲವೋ ಅವರಿಗೆ ಕೊರೋನಾ ಸೋಂಕಿನ ವಿರುದ್ಧ ಜನರ ಜೀವವನ್ನು ಉಳಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

ಪ್ರಧಾನಮಂತ್ರಿ ಅವರು ವಿಶ್ವದಾದ್ಯಂತ ಹಲವು ಜನರು ಅದರ ಭ್ರಮೆಯಲ್ಲಿದ್ದರೋ ಅವರೆಲ್ಲಾ ಈಗ ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಕೊರೋನಾ ವಿರುದ್ಧದ ಸಮರ ಅನಿರೀಕ್ಷಿತ ಮತ್ತು ಸವಾಲಿನದ್ದಾಗಿದ್ದು, ಇಂತಹ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು ವಿಶ್ವದ ಇತಿಹಾಸದಲ್ಲಿ ಎಂದೂ ಕೇಳಿಲ್ಲಎಂದರು.

ಪ್ರಧಾನಮಂತ್ರಿ ಅವರು, ಕೊರೋನಾ ಸೋಂಕು ತಡೆಯುವ ಸಲುವಾಗಿ ಭಾರತೀಯರು ಕೈಗೊಂಡ ನಿರ್ಧಾರಗಳು ಮತ್ತು ನಡೆಸುತ್ತಿರುವ ಪ್ರಯತ್ನಗಳು ಭಾರತ ಸಾಂಕ್ರಾಮಿಕದ ವಿರುದ್ಧ ವಿಜಯಶಾಲಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಡವರ ಬಗೆಗಿನ ನಮ್ಮ ಅನುಕಂಪ ಇನ್ನೂ ಹೆಚ್ಚಾಗಬೇಕು. ನಾವು ಯಾವುದೇ ಬಡ ಅಥವಾ ಹಸಿದ ಜನರನ್ನು ಕಂಡರೆ ನಮ್ಮಲ್ಲಿನ ಮಾನವೀಯತೆ ಮಿಡಿದು, ಮೊದಲು ಅವರಿಗೆ ಆಹಾರವನ್ನು ನೀಡಬೇಕು ಮತ್ತು ಇಂತಹ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕುಎಂದು ಪ್ರಧಾನಮಂತ್ರಿ ಹೇಳಿದರು.

ನಾವು ಬಡವರ ಅಗತ್ಯತೆಗಳ ಬಗ್ಗೆ ಯೋಚಿಸಬೇಕು ಮತ್ತು ಭಾರತ ತನ್ನ ಮೌಲ್ಯ ಮತ್ತು ಸಂಸ್ಕೃತಿಯ ಭಾಗವಾಗಿ ಈ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಅವರು, ರೋಗವನ್ನು ಮತ್ತು ಅದರ ಸೋಂಕನ್ನು ಆರಂಭದಲ್ಲೇ ಕಿತ್ತೊಗೆಯಬೇಕು ಎಂದು ಹೇಳಿದ ಅವರು, ಅದು ಹೆಚ್ಚಾದಂತೆ ಅದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯರು ಅದನ್ನೇ ಇತ್ತೀಚಿನ ದಿನಗಳಲ್ಲಿ ಮಾಡುತ್ತಿದ್ದಾರೆ ಎಂದರು.

ಕೊರೋನಾ ಸೋಂಕು ಇಡೀ ವಿಶ್ವವನ್ನು ವ್ಯಾಪಿಸಿದೆ ಮತ್ತು ಅದು ನಮ್ಮ ಜ್ಞಾನ, ವಿಜ್ಞಾನ, ಬಡವರು, ಶ್ರೀಮಂತರು, ದುರ್ಬಲರು ಮತ್ತು ಬಲಿಷ್ಠರು ಸೇರಿದಂತೆ ಎಲ್ಲರಿಗೂ ಸವಾಲನ್ನು ಒಡ್ಡಿದ್ದು, ಎಲ್ಲ ಖಂಡಗಳನ್ನು ವ್ಯಾಪಿಸಿದೆ ಮತ್ತು ಇದೇ ಕಾರಣಕ್ಕೆ ನಾನು ಈ ಮನ್ ಕಿ ಬಾತ್ ಆವೃತ್ತಿಯಲ್ಲಿ ಅದೊಂದೇ ವಿಷಯಕ್ಕೆ ಸೀಮಿತಗೊಳಿಸಿಕೊಂಡಿದ್ದೇನೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶವಾಸಿಗಳಲ್ಲಿ ಹೃದಯಾಂತರಾಳದಿಂದ ಕ್ಷಮೆ ಕೋರಿದ್ದಾರೆ ಮತ್ತು ತಾವು  ಕೈಗೊಂಡ ಕೆಲವು ದೃಢ ನಿರ್ಧಾರಗಳ ಕಾರಣ ಕೆಲವು ಜನರಿಗೆ ತೊಂದರೆಯಾಗಿದೆ, ಆದರೆ ಅವರೂ ಸಹ ತಮ್ಮ ಮನಸ್ಸಿನಿಂದ ತನ್ನನ್ನು ಕ್ಷಮಿಸುತ್ತಾರೆಂಬ ಭಾವನೆ ನನಗಿದೆ ಎಂದು ಹೇಳಿದರು. ಅವರು ವಿಶೇಷವಾಗಿ ದುರ್ಬಲ ವರ್ಗದ ಸಹೋದರ ಸಹೋದರಿಯರನ್ನು ಉಲ್ಲೇಖಿಸಿ ಮಾತನಾಡುತ್ತಾ, ಅವರು ಯಾವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬುದು ನನಗೆ ಸಂಪೂರ್ಣ ಅರ್ಥವಾಗುತ್ತಿದೆ ಎಂದರು. ಮತ್ತೊಂದು ಗಾದೆಯನ್ನು  ಉಲ್ಲೇಖಿಸಿದ ಅವರು, ಉತ್ತಮ ಆರೋಗ್ಯ ಅತಿ ದೊಡ್ಡ ಅದೃಷ್ಟವಿದ್ದಂತೆ ಮತ್ತು ಜಗತ್ತಿನ ಸಂತೋಷಕ್ಕೆ ಆರೋಗ್ಯ ಒಂದೇ ದಾರಿ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು, ಕೊರೋನಾ ವಿರುದ್ಧದ ಈ ಸಮರದಲ್ಲಿ ಹಲವು ಯೋಧರು ಹೋರಾಟ ನಡೆಸುತ್ತಿದ್ದಾರೆ, ಅವರು ತಮ್ಮ ಮನೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ, ಮನೆಯಿಂದ ಹೊರಗೂ ಅವರು ಹೋರಾಡುತ್ತಿದ್ದಾರೆ ಎಂದರು.

ಈ ಮುಂಚೂಣಿ ಯೋಧರು ವಿಶೇಷವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಸಹೋದರ ಸಹೋದರಿಯರಾದ ನರ್ಸ್ ಗಳು, ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಅವರು ಕೊರೋನಾ ಸೋಂಕನ್ನು ಸೋಲಿಸುತ್ತಿದ್ದಾರೆ ಎಂದರು.

ಕೋವಿಡ್-19 ವಿರುದ್ಧ ಹೋರಾಟದಲ್ಲಿ ತೊಡಗಿರುವವರಿಗೆ ಉತ್ಸಾಹ ತುಂಬುವ ಸಲುವಾಗಿ ಕೆಲವರೊಂದಿಗೆ ತಾವು ನಡೆಸಿದ ಸಮಾಲೋಚನೆಯ ವಿವರಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಅವರೊಂದಿಗೆ ಮಾತನಾಡಿದ ನಂತರ ಅದಕ್ಕೆ ಪ್ರತಿಯಾಗಿ ನಾನು ಸಾಕಷ್ಟು ವಿಷಯವನ್ನು ತಿಳಿದುಕೊಂಡೆ ಮತ್ತು ಅದು ನನ್ನಲ್ಲಿನ ಉತ್ಸಾಹವನ್ನು ನೂರ್ಮಡಿಗೊಳಿಸಿತು ಎಂದರು.

ಈ ಎಲ್ಲ ಜನರು ಸಾಧ್ಯವಾದಷ್ಟು ಈ ಸಂಕಷ್ಟದಿಂದ ಹೊರಬರಲು ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಅವರು ಹೇಳುವುದು ನಮಗೆ ಮಾತ್ರವಲ್ಲ, ಅದನ್ನು ನಿಜವಾದ ಸ್ಫೂರ್ತಿಯೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆಎಂದು ಹೇಳಿದರು.

ಸ್ವಾರ್ಥರಹಿತ ಆತ್ಮವಿಶ್ವಾಸದಿಂದ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಗಳು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಯ ಕಾರ್ಯದ ಬಗ್ಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ಅತಿದೊಡ್ಡ ಪ್ರಮಾಣದಲ್ಲಿ ಸಮರ ಹೋರಾಟ ನಡೆಸುತ್ತಿದೆ, ಅದರಲ್ಲಿ ವೈದ್ಯರು, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ, ಎಎನ್ಎಂ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು ಮುಂಚೂಣಿಯಲ್ಲಿ ನಿಂತು ಅತ್ಯುತ್ಸಾಹ ಮತ್ತು ದೃಢತೆಯಿಂದ ಹೋರಾಡುತ್ತಿದ್ದಾರೆ. ದೇಶಕ್ಕೆ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ಇದೆ ಮತ್ತು ಅದೇ ಕಾರಣಕ್ಕಾಗಿ ಸರ್ಕಾರ ಈ ಸಮರದಲ್ಲಿ ಕ್ಷೇತ್ರಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಸುಮಾರು 20 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆಯನ್ನು ಘೋಷಿಸಿದೆ. ಇದು ಅವರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿ, ಸಮರವನ್ನು ಮುನ್ನಡೆಸಲು ನೆರವಾಗಲಿದೆ ಎಂದು ಹೇಳಿದರು.

ನೆರೆಹೊರೆಯ ಸಣ್ಣ ಚಿಲ್ಲರೆ ಮಾರಾಟಗಾರರು, ಚಾಲಕರು ಮತ್ತು ಕೆಲಸಗಾರರು ಮತ್ತಿತರರು ಅವಶ್ಯಕ ವಸ್ತುಗಳನ್ನು ರಾಷ್ಟ್ರದ ಜನತೆಗೆ ತಲುಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಅಗತ್ಯ ವಸ್ತುಗಳ ಸರಣಿ ಪೂರೈಕೆಗೆ ತೊಂದರೆಯಾಗಿಲ್ಲ, ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುತ್ತಿರುವವರು ಕೂಡ ಈ ಸಮರವನ್ನು ಮುನ್ನಡೆಸುತ್ತಿದ್ದಾರೆ. ಹಲವು ಇ-ವಾಣಿಜ್ಯ ಕಂಪನಿಗಳು ಇಂತಹ ಕಷ್ಟಕರ ಸಂದರ್ಭದಲ್ಲಿ ದಿನಸಿಗಳನ್ನು ಮನೆ-ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.

ಜನರು ಯಾವುದೇ ಅಡೆತಡೆ ಇಲ್ಲದೆ ಟೆಲಿವಿಶನ್ ವೀಕ್ಷಿಸಲು ಮತ್ತು ಡಿಜಿಟಲ್ ಪಾವತಿಗಳನ್ನು ಮಾಡಲು ಅನುಕೂಲವಾಗುವಂತೆ ಕೆಲಸ ಮಾಡುತ್ತಿರುವವರಿಗೆ ಪ್ರಧಾನಮಂತ್ರಿ ಕೃತಜ್ಞತೆಗಳನ್ನು ಸಲ್ಲಿಸಿದರು. ಆ ಕಾರ್ಯದಲ್ಲಿ ತೊಡಗಿರುವವರು ತಮ್ಮ ಬಗ್ಗೆ ತಾವು ಗಮನಹರಿಸುವುದಲ್ಲದೇ, ತಮ್ಮ ಕುಟುಂಬವನ್ನೂ ರಕ್ಷಿಸಿಕೊಳ್ಳಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ಪ್ರಧಾನಮಂತ್ರಿ ಅವರು, ಪ್ರಸಕ್ತ ಸನ್ನಿವೇಶವನ್ನು ಜನರು ಅರ್ಥಮಾಡಿಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಬೇಕು, ಅದು ಮಾನವೀಯ ಅಥವಾ ಭಾವನಾತ್ಮಕ ಅಂತರವಾಗಿರಬಾರದು ಎಂದು ಹೇಳಿದರು.

ಕೆಲವು ಕ್ವಾರಂಟೈನ್ ಗೊಳಗಾಗಿರುವ ಜನರನ್ನು ಕೀಳಾಗಿ ಅಥವಾ ನಿಕೃಷ್ಟವಾಗಿ ಕಾಣುತ್ತಿರುವುದಕ್ಕೆ ತಮಗೆ ನೋವು ಉಂಟಾಗಿದೆ ಎಂದು ಅವರು ಹೇಳಿದರು. ಬೇರೆಯವರಿಗೆ ಸೋಂಕು ತಗುಲದಂತೆ ತಮ್ಮನ್ನು ತಾವು ಕ್ವಾರಂಟೈನ್ ಗೆ ಒಳಗಾಗಿರುವಂತ ವ್ಯಕ್ತಿಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಈ ಸಮರವನ್ನು ಗೆಲ್ಲಲು ಮತ್ತೊಮ್ಮೆ ದೇಶವಾಸಿಗಳಲ್ಲಿ ಮನೆಗಳಲ್ಲೇ ಉಳಿಯಿರಿ, ಸುರಕ್ಷಿತ ಮತ್ತು ಆರಾಮಾಗಿರಿ ಎಂದು ಮನವಿ ಮಾಡಿದ್ದಾರೆ.

****



(Release ID: 1609163) Visitor Counter : 263