ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಸರಕು ಸಾಗಣೆ ಮತ್ತು ವಿತರಣೆ, ಉತ್ಪಾದನೆ ಮತ್ತು ಅಗತ್ಯ ವಸ್ತುಗಳ ವಿತರಣೆ ಸ್ಥಿತಿಯ ಮೇಲ್ವಿಚಾರಣೆಗೆ ಡಿಪಿಐಐಟಿ ನಿಯಂತ್ರಣ ಕೊಠಡಿ ಸ್ಥಾಪನೆ

प्रविष्टि तिथि: 26 MAR 2020 10:24AM by PIB Bengaluru

ಸರಕು ಸಾಗಣೆ ಮತ್ತು ವಿತರಣೆ, ಉತ್ಪಾದನೆ ಮತ್ತು ಅಗತ್ಯ ವಸ್ತುಗಳ ವಿತರಣೆ ಸ್ಥಿತಿಯ ಮೇಲ್ವಿಚಾರಣೆಗೆ ಡಿಪಿಐಐಟಿ ನಿಯಂತ್ರಣ ಕೊಠಡಿ ಸ್ಥಾಪನೆ

 

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು  (ಡಿಪಿಐಐಟಿ) 25.3.2020 ರಿಂದ 14.4.2020 ರವರೆಗಿನ ಲಾಕ್‌ಡೌನ್ ಅವಧಿಯಲ್ಲಿ ವಿವಿಧ ಪಾಲುದಾರರು ಎದುರಿಸುತ್ತಿರುವ ತೊಂದರೆಗಳು, ಸರಕುಗಳನ್ನು ಸಾಗಿಸುವ ಮತ್ತು ತಲುಪಿಸುವ ಸ್ಥಿತಿ, ಉತ್ಪಾದನೆ, ಅಗತ್ಯ ವಸ್ತುಗಳನ್ನು ಸಾಮಾನ್ಯ ಜನರಿಗೆ ತಲುಪಿಸುವುದು ಮತ್ತು, ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಯಾವುದೇ ಉತ್ಪಾದನೆ, ಸಾರಿಗೆ, ವಿತರಕ, ಸಗಟು ವ್ಯಾಪಾರಿ ಅಥವಾ ಇ-ಕಾಮರ್ಸ್ ಕಂಪನಿಗಳು ಸರಕು ಸಾಗಣೆ ಮತ್ತು ವಿತರಣೆಯಲ್ಲಿ ಅಥವಾ ಸಂಪನ್ಮೂಲಗಳ ಕ್ರೋ ಢೀಕರಣದಲ್ಲಿ ತಳಮಟ್ಟದ ತೊಂದರೆಗಳನ್ನು ಎದುರಿಸುತ್ತಿದ್ದರೆ, ಅದನ್ನು ಈ ಕೆಳಗಿನ ದೂರವಾಣಿ ಸಂಖ್ಯೆ / ಇಮೇಲ್‌ನಲ್ಲಿ ಇಲಾಖೆಗೆ ತಿಳಿಸಬಹುದು: 
            ದೂರವಾಣಿ: + 91 11 23062487
            ಇ-ಮೇಲ್: controlroom-dpiit[at]gov[dot]in
ದೂರವಾಣಿ ಸಂಖ್ಯೆ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸುತ್ತದೆ. ವಿವಿಧ ಸಂಬಂಧಪಟ್ಟವರು ವರದಿ ಮಾಡಿದ ಸಮಸ್ಯೆಗಳನ್ನು ಇಲಾಖೆಯು ಸಂಬಂಧಪಟ್ಟ ರಾಜ್ಯ ಸರ್ಕಾರ, ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಕೈಗೆತ್ತಿಕೊಳ್ಳುತ್ತದೆ.


(रिलीज़ आईडी: 1608377) आगंतुक पटल : 273
इस विज्ञप्ति को इन भाषाओं में पढ़ें: Malayalam , हिन्दी , English , Marathi , Bengali , Assamese , Punjabi , Gujarati , Odia , Tamil