ಸಂಪುಟ

ಭಾರತೀಯ ವೈದ್ಯ ಪದ್ದತಿ ರಾಷ್ಟ್ರೀಯ ಆಯೋಗ ವಿಧೇಯಕ, 2019  ಅಧಿಕೃತ ತಿದ್ದುಪಡಿಗಳ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ

Posted On: 29 JAN 2020 2:01PM by PIB Bengaluru

ಭಾರತೀಯ ವೈದ್ಯ ಪದ್ದತಿ ರಾಷ್ಟ್ರೀಯ ಆಯೋಗ ವಿಧೇಯಕ, 2019  ಅಧಿಕೃತ ತಿದ್ದುಪಡಿಗಳ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ರಾಜ್ಯ ಸಭೆಯಲ್ಲಿ ಬಾಕಿ ಉಳಿದಿದ್ದ ಭಾರತೀಯ ವೈದ್ಯ ಪದ್ದತಿಗಾಗಿ ರಾಷ್ಟ್ರೀಯ ಆಯೋಗ ವಿಧೇಯಕ ,2019 ರ  (ಎನ್.ಸಿ.ಐ.ಎಂ.) ಅಧಿಕೃತ ತಿದ್ದುಪಡಿಗಳ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿತು.

ಈ ಉದ್ದೇಶಿತ ಶಾಸನವು ಭಾರತೀಯ ವೈದ್ಯ ಪದ್ದತಿಯ ಶಿಕ್ಷಣ ಕ್ಷೇತ್ರದಲ್ಲಿ ಅವಶ್ಯ ನಿಯಂತ್ರಣ ಸುಧಾರಣೆಗಳನ್ನು ಖಾತ್ರಿ ಪಡಿಸಲಿದೆ. ಪ್ರಸ್ತಾವಿತ ನಿಯಂತ್ರಣ ವ್ಯವಸ್ಥೆಯು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ನಿಗದಿ ಮಾಡುತ್ತದೆ. ಆಯೋಗವು ದೇಶದ ಎಲ್ಲಾ ಭಾಗಗಳಲ್ಲಿಯೂ ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆಯ ಲಭ್ಯತೆಯನ್ನು ಉತ್ತೇಜಿಸುತ್ತದೆ.

ಭಾರತೀಯ ವೈದ್ಯಪದ್ದತಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಗುಣಮಟ್ಟಗಳು, ಮೌಲ್ಯಮಾಪನ , ಶಿಕ್ಷಣ ಸಂಸ್ಥೆಗಳ ಮಾನ್ಯತೆ ಹಾಗು ಮೌಲ್ಯಾಂಕನ ಕಾರ್ಯ ಚಟುವಟಿಕೆಗಳನ್ನು ವ್ಯವಸ್ಥಿತಗೊಳಿಸುವಂತೆ ಆಯೋಗವನ್ನು ರಚಿಸಲಾಗುತ್ತಿದೆ. ಎನ್.ಸಿ.ಐ.ಎಂ. ಸ್ಥಾಪನೆಯ ಪ್ರಮುಖ ಉದ್ದೇಶ ಗುಣಮಟ್ಟದ ವೈದ್ಯಕೀಯ ವೃತ್ತಿಪರರನ್ನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವುದು ಮತ್ತು ಭಾರತೀಯ ವೈದ್ಯ ಪದ್ದತಿಯ ವೈದ್ಯಕೀಯ ಸೇವೆಗಳ ಎಲ್ಲಾ ಹಂತದಲ್ಲಿಯೂ ಉನ್ನತ ನೈತಿಕ ಮಾನದಂಡಗಳನ್ನು ಜಾರಿಗೆ ತರುವ ಮೂಲಕ ಸಮಾನತೆಯನ್ನು ಉತ್ತೇಜಿಸುವುದಾಗಿದೆ.

***


(Release ID: 1601005) Visitor Counter : 195