ಸಂಪುಟ

ಕೇಂದ್ರ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣದ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಸಂವಿಧಾನದ 340 ನೇ ವಿಧಿ ಅನ್ವಯ ರಚಿಸಲಾಗಿರುವ ಆಯೋಗದ ಅಧಿಕಾರಾವಧಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ

Posted On: 22 JAN 2020 3:37PM by PIB Bengaluru

ಕೇಂದ್ರ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣದ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಸಂವಿಧಾನದ 340 ನೇ ವಿಧಿ ಅನ್ವಯ ರಚಿಸಲಾಗಿರುವ ಆಯೋಗದ ಅಧಿಕಾರಾವಧಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣದ ವಿಷಯದ ಬಗ್ಗೆ ಪರಿಶೀಲನೆ ನಡೆಸಲು ಸಂವಿಧಾನದ 340 ನೇ ವಿಧಿ ಅನ್ವಯ ರಚಿಸಲಾಗಿರುವ ಆಯೋಗದ ಅಧಿಕಾರಾವಧಿಯನ್ನು 6 ತಿಂಗಳುಗಳವರೆಗೆ ಅಂದರೆ ಜುಲೈ 31, 2020 ರವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ.

ಅಸ್ತಿತ್ವದಲ್ಲಿರುವ "ಆಯೋಗ"ದ ಉಲ್ಲೇಖಿತ ನಿಯಮಗಳಿಗೆ ಈ ಕೆಳಗಿನ ಉಲ್ಲೇಖಿತ ನಿಯಮಗಳನ್ನು ಸೇರಿಸಲು ಸಂಪುಟ ಅನುಮೋದನೆ ನೀಡಿದೆ –

 “iv. ಕೇಂದ್ರ ಒ ಬಿ ಸಿ ಪಟ್ಟಿಯಲ್ಲಿನ ವಿವಿಧ ಉಲ್ಲೇಖಗಳನ್ನು ಅಧ್ಯಯನ ಮಾಡಿ ಮತ್ತು ಯಾವುದೇ ಪುನರಾವರ್ತನೆಗಳುಅಸ್ಪಷ್ಟತೆಗಳುಅಸಂಗತಗಳು ಮತ್ತು ಕಾಗುಣಿತ ಅಥವಾ ಪ್ರತಿಲೇಖನದ ದೋಷಗಳನ್ನು ಸರಿಪಡಿಸಲು ಶಿಫಾರಸು ಮಾಡಲು."

ಪರಿಣಾಮಗಳು: 

ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ನೇಮಕಾತಿ ಮತ್ತು ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಒಬಿಸಿಗಳು ಮೀಸಲಾತಿ ಯೋಜನೆಯ ಯಾವುದೇ ಪ್ರಮುಖ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದ ಅಸ್ತಿತ್ವದಲ್ಲಿರುವ ಒಬಿಸಿಗಳ ಪಟ್ಟಿಯಲ್ಲಿರುವ ಸಮುದಾಯಗಳಿಗೆ ಆಯೋಗದ ಈ ಶಿಫಾರಸುಗಳ ಅನುಷ್ಠಾನದಿಂದ ಪ್ರಯೋಜನವಾಗುವ ನಿರೀಕ್ಷೆಯಿದೆ. ಆಯೋಗವು ಇಂಥ ವಂಚಿತ ಸಮುದಾಯಗಳಿಗೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಪ್ರಯೋಜನ ದೊರಕಿಸಲು ಶಿಫಾರಸು ಮಾಡುವ ಸಾಧ್ಯತೆ ಇದೆ.

ಆರ್ಥಿಕ ಪರಿಣಾಮಗಳು:

ಆಯೋಗದ ಸ್ಥಾಪನೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮುಂದುವರಿಸಲಿದೆ.

ಪ್ರಯೋಜನಗಳು:

ಎಸ್.ಇ.ಬಿ.ಸಿ.ಯ ಕೇಂದ್ರೀಯ ಪಟ್ಟಿಯಲ್ಲಿ ಸೇರಿರುವ ಜಾತಿ/ಸಮುದಾಯಗಳಿಗೆ ಸೇರಿದ ಎಲ್ಲ ವ್ಯಕ್ತಿಗಳೂ ಆದರೆ, ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಮತ್ತು ಕೇಂದ್ರಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಯಾವುದೇ ಪ್ರಮುಖ ಪ್ರಯೋಜನಗಳನ್ನು ಹಾಲಿ ಇರುವ ಮೀಸಲಾತಿ ಯೋಜನೆಯಲ್ಲಿ ಪಡೆಯಲಾಗದ ಒಬಿಸಿಯವರು ಇದರಿಂದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಕಾರ್ಯತಂತ್ರದ ಅನುಷ್ಠಾನ ಮತ್ತು ಗುರಿಗಳು:

ಆಯೋಗದ ಅವಧಿಯನ್ನು ವಿಸ್ತರಿಸುವ ಆದೇಶಗಳು ಮತ್ತು ಅದರ ಉಲ್ಲೇಖಿತ ನಿಯಮಗಳಲ್ಲಿ ಸೇರ್ಪಡೆಗೊಳ್ಳುವಿಕೆಯನ್ನು  'ರಾಷ್ಟ್ರಪತಿಯವರು ಮಾಡಿದ ಆದೇಶದ ರೂಪದಲ್ಲಿಗೌರವಾನ್ವಿತ ರಾಷ್ಟ್ರಪತಿಗಳ ಅನುಮೋದನೆ ಪಡೆದ ನಂತರ ಗೆಜೆಟ್‌ನಲ್ಲಿ ಅಧಿಸೂಚಿಸಲಾಗುವುದು.

ಹಿನ್ನೆಲೆ: 

ಆಯೋಗವನ್ನು ಸಂವಿಧಾನದ 340 ನೇ ವಿಧಿ ಅಡಿಯಲ್ಲಿ 2017 ರ ಅಕ್ಟೋಬರ್ 2 ರಂದು ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ ಸ್ಥಾಪಿಸಲಾಯಿತು. ಈ ಆಯೋಗದ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಶ್ರೀಮತಿ ಜಿ. ರೋಹಿನಿ ವಹಿಸಿದ್ದು, 2017ರ ಅಕ್ಟೋಬರ್ 11ರಿಂದ ಕಾರ್ಯಾರಂಭಿಸಿತು ಮತ್ತು ಓಬಿಸಿಯನ್ನು ಉಪ ವರ್ಗೀಕರಣ ಮಾಡಿರುವ ರಾಜ್ಯಗಳು/ಕೇಂದ್ರಾಡಳಿತ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳೊಂದಿಗೆ ಪ್ರದೇಶಗಳೊಂದಿಗೆ ಸಂವಾದ ನಡೆಸಿದೆ. ಹಾಲಿ ಕೇಂದ್ರ ಒಬಿಸಿಗಳ ಪಟ್ಟಿಯಲ್ಲಿ ಕಂಡುಬರುವ ಪುನರಾವರ್ತನೆಗಳುಅಸ್ಪಷ್ಟತೆಗಳುಅಸಂಗತಗಳು ಮತ್ತು ಕಾಗುಣಿತ ಅಥವಾ ಪ್ರತಿಲೇಖನ ದೋಷ ಇತ್ಯಾದಿಗಳನ್ನು ಸರಿಪಡಿಸಿ ತನ್ನ ವರದಿ ಸಲ್ಲಿಸಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂಬ ಅಭಿಪ್ರಾಯಕ್ಕೆ ಆಯೋಗವು ಬಂದಿದೆ. ಹೀಗಾಗಿ ಆಯೋಗವು ತನ್ನ ಆಡಳಿತಾವಧಿಯನ್ನು ಆರು ತಿಂಗಳುಗಳ ಕಾಲ ಅಂದರೆ 2020ರ ಜುಲೈ 31ರವರೆಗೆ ವಿಸ್ತರಿಸುವಂತೆ ಕೋರಿತ್ತು ಮತ್ತು ತನ್ನ ಉಲ್ಲೇಖಿತ ನಿಯಮಗಳಲ್ಲಿ ಸೇರಿಸಲು ಬಯಸಿತ್ತು.

**********



(Release ID: 1600192) Visitor Counter : 137