ಸಂಪುಟ

ಭಾರತಕ್ಕೆ ಫೆನಿ ನದಿಯಿಂದ 1.82 ಕ್ಯೂಸೆಕ್ ನೀರು ಪಡೆಯುವ ಕುರಿತು ಭಾರತ ಮತ್ತು ಬಾಂಗ್ಲಾದೇಶ ಸಹಿ ಹಾಕಿರುವ ಒಪ್ಪಂದಕ್ಕೆ ಸಂಪುಟ ಅನುಮೋದನೆ

Posted On: 06 NOV 2019 8:39PM by PIB Bengaluru

ಭಾರತಕ್ಕೆ ಫೆನಿ ನದಿಯಿಂದ 1.82 ಕ್ಯೂಸೆಕ್ ನೀರು ಪಡೆಯುವ ಕುರಿತು ಭಾರತ ಮತ್ತು ಬಾಂಗ್ಲಾದೇಶ ಸಹಿ ಹಾಕಿರುವ ಒಪ್ಪಂದಕ್ಕೆ ಸಂಪುಟ ಅನುಮೋದನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತದ ತ್ರಿಪುರಾದ ಸಬ್ರೂಮ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಫೆನಿ ನದಿಯಿಂದ 1.82 ಕ್ಯೂಸೆಕ್ ನೀರು ಪಡೆಯಲು ಭಾರತ ಮತ್ತು ಬಾಂಗ್ಲಾದೇಶಗಳು ಮಾಡಿಕೊಂಡಿರುವ ಒಪ್ಪಂದಕ್ಕೆ ಘಟನೋತ್ತರ ಅನುಮೋದನೆ ನೀಡಿತು.
 

ಅನುಕೂಲ :

ಈ ದಿನದವರೆಗೆ ಫೆನಿ ನದಿಯ ನೀರು ಹಂಚಿಕೆ ಕುರಿತು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ. ಪ್ರಸ್ತುತ ಸಬ್ರೂಮ್ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ನೀರು ಸಾಕಾಗದೆ ಕೊರತೆ ಎದುರಾಗಿದೆ, ಜೊತೆಗೆ ಈ ಭಾಗದಲ್ಲಿನ ಅಂತರ್ಜಲದಲ್ಲಿ ಅಧಿಕ ಕಬ್ಬಿನಾಂಶವಿದೆ, ಹಾಗಾಗಿ ಈ ಕುಡಿಯುವ ನೀರಿನ ಯೋಜನೆ ಜಾರಿಯಿಂದ ಸಬ್ರೂಮ್ ಪಟ್ಟಣದ ಸುಮಾರು 7 ಸಾವಿರ ಜನಸಂಖ್ಯೆಗೆ ಪ್ರಯೋಜನವಾಗಲಿದೆ.
 

************



(Release ID: 1593017) Visitor Counter : 99