ಪ್ರಧಾನ ಮಂತ್ರಿಯವರ ಕಛೇರಿ

ಜರ್ಮನಿಯ ಚಾನ್ಸಲರ್ ಅವರ ಭಾರತ ಭೇಟಿ ವೇಳೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ (ನವೆಂಬರ್ 1, 2019)

Posted On: 01 NOV 2019 3:10PM by PIB Bengaluru

ಜರ್ಮನಿಯ ಚಾನ್ಸಲರ್ ಅವರ ಭಾರತ ಭೇಟಿ ವೇಳೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ (ನವೆಂಬರ್ 1, 2019)
 

ಕ್ರಮ ಸಂ

ಶೀರ್ಷಿಕೆ

ಪಕ್ಷಕಾರರು

ಭಾರತದ ಕಡೆ ವಿನಿಮಯ ಮಾಡಿಕೊಂಡವರು

ಜರ್ಮನಿಯ ಕಡೆ ವಿನಿಮಯ ಮಾಡಿಕೊಂಡವರು

1.

2020-2024ರ ಅವಧಿಯ ಉದ್ದೇಶಿತ ಸಮಾಲೋಚನೆಗಳ ಕುರಿತಂತೆ ಜಂಟಿ ಘೋಷಣೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಜರ್ಮನಿಯ ವಿದೇಶಾಂಗ ಸಚಿವಾಲಯಗಳ ನಡುವೆ

ಡಾ. ಎಸ್. ಜೈಶಂಕರ್ ವಿದೇಶಾಂಗ ಸಚಿವರು

ಶ್ರೀ ಹೈಕೋ ಮಾಸ್, ವಿದೇಶಾಂಗ ಸಚಿವರು

2.

ವ್ಯೂಹಾತ್ಮಕ ಯೋಜನೆಗಳ ಕುರಿತ ಸಹಕಾರಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಜಂಟಿ ಘೋಷಣೆ (ಜೆಡಿಐ)

ರೈಲ್ವೆ ಸಚಿವಾಲಯ ಮತ್ತು ಆರ್ಥಿಕ ವ್ಯವಹಾರ ಮತ್ತು ಇಂಧನ ಸಚಿವಾಲಯಗಳ ನಡುವೆ

ಶ್ರೀ ವಿನೋದ್ ಕುಮಾರ್ ಯಾದವ್, ಅಧ್ಯಕ್ಷರು ರೈಲ್ವೆ ಮಂಡಳಿ

ಶ್ರೀ. ಕ್ರಿಶ್ಚಿಯನ್ ಹಿರ್ಟೆ, ಸಂಸದೀಯ ರಾಜ್ಯ ಕಾರ್ಯದರ್ಶಿ, ಆರ್ಥಿಕ ವ್ಯವಹಾರ ಮತ್ತು ಇಂಧನ ಸಚಿವಾಲಯ

3.

ಹಸಿರು ನಗರ ಸಂಚಾರ ಕುರಿತಂತೆ ಭಾರತ – ಜರ್ಮನಿ ಸಹಯೋಗ ಕುರಿತ ಉದ್ದೇಶಿತ ಜಂಟಿ ಘೋಷಣೆ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಓ. ಎಚ್.ಯು.ಎ)  ಮತ್ತು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವಾಲಯಗಳ ನಡುವೆ

ಶ್ರೀ ದುರ್ಗ ಶಂಕರ್ ಮಿಶ್ರಾ, ಕಾರ್ಯದರ್ಶಿ ಎಂಓ ಎಚ್.ಯು.ಎ

ಶ್ರೀ ನೋರ್ಬರ್ಟ್ ಬಾರ್ತ್ಲೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವಾಲಯದ ಸಂಸದೀಯ ರಾಜ್ಯ ಕಾರ್ಯದರ್ಶಿ.

4.

ಕೃತಕ ಬುದ್ಧಿಮತ್ತೆ ಸಂಶೋಧನೆ ಮತ್ತು ಅಭಿವೃದ್ಧಿಯ ಜಂಟಿ ಸಹಕಾರ ಕುರಿತಂತೆ ಉದ್ದೇಶಿತ ಜಂಟಿ ಘೋಷಣೆ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (ಎಂಎಸ್ಟಿ) ಮತ್ತು ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆ ಸಚಿವಾಲಯ (ಬಿಎಂಬಿಎಫ್)

ಪ್ರೊ. ಅಶುತೋಷ್ ಶರ್ಮಾ, ಕಾರ್ಯದರ್ಶಿ, ಎಂಎಸ್ಟಿ

ಶ್ರೀಮತಿ ಅಂಜಾಕಾರ್ಲಿಕ್ಜೆಕ್, ಶಿಕ್ಷಣ ಮತ್ತು ಸಂಶೋಧನಾ ಸಚಿವರು

5.

ಸಾಗರ ತ್ಯಾಜ್ಯ ತಡೆ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಉದ್ದೇಶಿತ ಜಂಟಿ ಘೋಷಣೆ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಪರಿಸರ, ಪ್ರಕೃತಿ ಸಂರಕ್ಷಣೆ ಮತ್ತು ಪರಮಾಣು ಸುರಕ್ಷತೆ ಸಚಿವಾಲಯ (ಬಿಎಂಯು)

ಶ್ರೀ ದುರ್ಗ ಶಂಕರ್ ಮಿಶ್ರಾ, ಕಾರ್ಯದರ್ಶಿ ಎಂಓ ಎಚ್.ಯು.ಎ

ಶ್ರೀ ಜಾಕೆನ್ ಫ್ಲಾಶ್ಬರ್ತ್, ಪರಿಸರ, ಪ್ರಕೃತಿ ಸಂರಕ್ಷಮೆ ಮತ್ತು ಪರಮಾಣು ಸುರಕ್ಷತೆ ಸಚಿವಾಲಯದ ಸಂಸದೀಯ ರಾಜ್ಯ ಕಾರ್ಯದರ್ಶಿ.


ಭೇಟಿ ವೇಳೆ ಅಂಕಿತ ಹಾಕಲಾದ ಒಪ್ಪಂದ/ತಿಳಿವಳಿಕೆ ಒಪ್ಪಂದಗಳ ಪಟ್ಟಿ

  1. ಇಸ್ರೋ ಮತ್ತು ಜರ್ಮನಿಯ ಏರೋಸ್ಪೇಸ್ ಕೇಂದ್ರದ ಸಿಬ್ಬಂದಿಯ ವಿನಿಮಯ ಜಾರಿಗಾಗಿ ಒಪ್ಪಂದ
  2. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ.
  3. ಅಂತಾರಾಷ್ಟ್ರೀಯ ಸ್ಮಾರ್ಟ್ ನಗರಗಳ ಜಾಲದೊಳಗಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ (ಜೆಡಿಐ)
  4. ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ಶಿಕ್ಷಣ ಹಾಗೂ ತರಬೇತಿ ರಂಗದ ನಡುವಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ
  5. ನವೋದ್ಯಮ ಕ್ಷೇತ್ರದಲ್ಲಿನ ಆರ್ಥಿಕ ಸಹಕಾರ ವರ್ಧನೆಗಾಗಿ ಉದ್ದೇಶಿತ ಜಂಟಿ ಘೋಷಣೆ
  6. ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಯೋಜನೆಯ ಸ್ಥಾಪನೆಗಾಗಿ ಉದ್ದೇಶಿತ ಜಂಟಿ ಘೋಷಣೆ.
  7. ವಿಮೆ ಹೊಂದಿರುವ ವ್ಯಕ್ತಿಗಳಿಗೆ ಮತ್ತು ವಿಕಲಾಂಗತೆ ಹೊಂದಿರುವ ಕಾರ್ಮಿಕರಿಗೆ ವೃತ್ತಿ ತರಬೇತಿ, ವೃತ್ತಿಸಂಬಂಧಿ ಕಾಯಿಲೆಗಳು ಮತ್ತು ಪುನರ್ವಸತಿಗಾಗಿ ತಿಳಿವಳಿಕೆ ಒಪ್ಪಂದ
  8. ಒಳನಾಡು,ಕರಾವಳಿ ಮತ್ತು ಸಾಗರ ತಂತ್ರಜ್ಞಾನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
  9. ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆ ಸಹಕಾರ ವಿಸ್ತರಣೆಗಾಗಿ, ಸ್ಥಾಪನೆ ಮತ್ತು ಉತ್ತೇಜಿಸಲು ತಿಳಿವಳಿಕೆ ಒಪ್ಪಂದ.
  10.  ಆಯುರ್ವೇದ, ಯೋಗ ಮತ್ತು ಧ್ಯಾನದಲ್ಲಿನ ಅಕಾಡಮಿಕ್ ಸಹಯೋಗ ಸ್ಥಾಪನೆಗೆ ತಿಳಿವಳಿಕೆ ಒಪ್ಪಂದ.
  11. ಉನ್ನತ ಶಿಕ್ಷಣದಲ್ಲಿ ಭಾರತ-ಜರ್ಮನ್ ನಡುವಿನ ಸಹಭಾಗಿತ್ವದ ಅವಧಿಯ ವಿಸ್ತರಣೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಭಾರತ ಮತ್ತು ಜರ್ಮನಿ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಅನುಬಂಧ.
  12. ಕೃಷಿ ವಿಸ್ತರಣೆ ನಿರ್ವಹಣೆ ರಾಷ್ಟ್ರೀಯ ಸಂಸ್ಥೆ ಎಂ.ಎ.ಎನ್.ಎ.ಜಿ.ಇ. ಮತ್ತು ನಿಯಾನ್ ಬರ್ಗ್ ನಗರದಲ್ಲಿರುವ ಜರ್ಮನಿ ಕೃಷಿ ಅಕಾಡಮಿ ಡಿಇಯುಎಲ್ಎ ನಡುವೆ ಕೃಷಿ ತಂತ್ರಜ್ಞಾನ ಮತ್ತು ವೃತ್ತಿ ತರಬೇತಿಯ ಸಹಯೋಗಕ್ಕಾಗಿ ತಿಳಿವಳಿಕೆ ಒಪ್ಪಂದ.
  13. ಸುಸ್ಥಿರ ಅಭಿವೃದ್ಧಿಗಾಗಿ ಭಾರತದ ಸಿಮನ್ಸ್ ಲಿಮಿಟೆಡ್ ಮತ್ತು ಎಂಎಸ್ಡಿಇ ಹಾಗೂ ಜರ್ಮನಿಯ ಆರ್ಥಿಕ ಸಹಕಾರ ಮತ್ತು ಕೌಶಲ ಅಭಿವೃದ್ಧಿ ಸಚಿವಾಲಯಗಳ ನಡುವೆ ಉದ್ದೇಶಿತ ಜಂಟಿ ಘೋಷಣೆ
  14.  ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತ ಜರ್ಮನಿ ಸಹಯೋಗ ವಿಸ್ತರಣೆಯ ತಿಳಿವಳಿಕೆ ಒಪ್ಪಂದ
  15.   ರಾಷ್ಟ್ರೀಯ ವಸ್ತು ಸಂಗ್ರಹಾಲಯ, ಆಧುನಿಕ ಕಲೆ ಕುರಿತ ರಾಷ್ಟ್ರೀಯ ಗ್ಯಾಲರಿ, ಕೋಲ್ಕತ್ತಾದ ಭಾರತೀಯ ವಸ್ತು ಸಂಗ್ರಹಾಲಯ, ಪರ್ಶಿಯಾದ ಸಾಂಸ್ಕೃತಿಕ ಪರಂಪರೆ ಪ್ರತಿಷ್ಠಾನ ಮತ್ತು ಬರ್ಲಿನರ್ ಶ್ಲೋಸ್‌ ನಲ್ಲಿರುವ ಸ್ಟಿಫ್ಟಂಗ್ ಹಂಬೋಲ್ಟ್ ಫೋರಂ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
  16. ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎ.ಐ.ಎಫ್.ಎಫ್.) ಮತ್ತು ಡಾಯ್ಚರ್‌ ಫುಬಾಲ್-ಬಂಡ್ ಇ.ವಿ. (ಡಿಎಫ್.ಬಿ) ನಡುವೆ ತಿಳಿವಳಿಕೆ ಒಪ್ಪಂದ
  17.  ಭಾರತ ಜರ್ಮನಿ ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ಪ್ರಮುಖ ಅಂಶಗಳ ಕುರಿತ ಉದ್ದೇಶಿತ ಹೇಳಿಕೆ.

     

***



(Release ID: 1592588) Visitor Counter : 143