ಸಂಪುಟ

ಶಿಪ್ಪಿಂಗ್ ಕ್ಷೇತ್ರದಲ್ಲಿ ಭಾರತ ಮತ್ತು ಮಾಲ್ದೀವ್ಸ್ ನಡುವಿನ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

Posted On: 03 JUL 2019 4:42PM by PIB Bengaluru

ಶಿಪ್ಪಿಂಗ್ ಕ್ಷೇತ್ರದಲ್ಲಿ ಭಾರತ ಮತ್ತು ಮಾಲ್ದೀವ್ಸ್ ನಡುವಿನ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

 

ಮಾಲ್ದೀವ್ಸ್ ಮತ್ತು ಕೇರಳ ನಡುವೆ ಹಡಗು  ಸೇವೆಗೆ ತಿಳುವಳಿಕಾ ಒಡಂಬಡಿಕೆಯಿಂದ ಅವಕಾಶ

ಇದು ಕೊಚ್ಚಿಯನ್ನು ಮಾಲ್ದೀವ್ಸ್ ನ  ಮಾಲೆ ಮತ್ತು ಕುಲ್ಹುಧುಫುಶಿಯನ್ನು ಸಮುದ್ರ ಮಾರ್ಗದ ಮೂಲಕ ಬೆಸೆಯಲಿದೆ. 

 

ಭಾರತ ಮತ್ತು ಮಾಲ್ದೀವ್ಸ್ ನಡುವೆ  ಸಮುದ್ರ ಮಾರ್ಗದ ಮೂಲಕ ಪ್ರಯಾಣಿಕ ಮತ್ತು ಸರಕು ಸಾಗಾಣಿಕೆ ಸೇವೆ ಸ್ಥಾಪಿಸುವುದಕ್ಕೆ ಸಂಬಂಧಿಸಿದ ತಿಳುವಳಿಕಾ ಒಡಂಬಡಿಕೆಗೆ ಕೇಂದ್ರ ಸಂಪುಟವು ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿದೆ. ಭಾರತದ ಪ್ರಧಾನ ಮಂತ್ರಿ ಅವರು ಮಾಲ್ದೀವ್ಸ್ ಗೆ ಭೇಟಿ ನೀಡಿದಾಗ 2019 ರ ಜೂನ್ 8 ರಂದು ಈ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಗಿತ್ತು.

ಮಾಲ್ದೀವ್ಸ್ ನಲ್ಲಿ ಹಲವು ಪ್ರಮುಖ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭಾರತವು ಅದರ  ಅಭಿವೃದ್ದಿಯ ಪ್ರಮುಖ ಸಹಭಾಗಿಯಾಗಿದೆ. ಪ್ರಸ್ತುತ ಭಾರತವು ಮಾಲ್ದೀವ್ಸ್ ಗೆ 100 ಮಿಲಿಯನ್ ಅಮೇರಿಕನ್ ಡಾಲರ್ ತಾತ್ಕಾಲಿಕ ಮುಂಗಡ ಸೌಲಭ್ಯವನ್ನು ( ಎಸ್.ಸಿ.ಎಫ್.) ಧೀರ್ಘಾವಧಿ ಸಾಲ ಮತ್ತು ಆವರ್ತ ಸಾಲ ಸಹಿತ ವ್ಯಾಪಾರಕ್ಕಾಗಿ ಒದಗಿಸಿದೆ.

ಮಾಲೆಯು   ರಾಜಧಾನಿ ಮತ್ತು ಅತ್ಯಂತ  ಜನನಿಬಿಡ ಪ್ರದೇಶವಾಗಿದೆ ಮತ್ತು ಕುಲ್ಹುಧುಫುಶಿಯು ಮಾಲ್ದೀವ್ಸ್ ನ  ಜನಸಂಖ್ಯಾಬಾಹುಳ್ಯದ ಮೂರನೇ ಅತಿ ದೊಡ್ಡ ನಗರವಾಗಿದ್ದು, ಕೊಚ್ಚಿಯಿಂದ ಪ್ರವಾಸೀ ಮತ್ತು ಸರಕು ಸಾಗಾಣಿಕೆ ಹಡಗುಗಳ ಸಂಚಾರ ಆರಂಭಿಸಲು ಉತ್ತಮ ಅವಕಾಶಗಳನ್ನು ಹೊಂದಿವೆ. ಮಾಲೆಯು ಕೊಚ್ಚಿಯಿಂದ 708 ಕಿಲೋ ಮೀಟರ್ ದೂರದಲ್ಲಿದೆ. ಕುಲ್ಹುಧುಫುಶಿಯು 509 ಕಿಲೋ ಮೀಟರ್ ದೂರದಲ್ಲಿದೆ.  ಕುಲ್ಹುಧುಫುಶಿ ಮತ್ತು  ಸುತ್ತಮುತ್ತಲಿನ ದ್ವೀಪಗಳು  ಮಾಲ್ದೀವ್ಸ ನ ಉತ್ತರ ಭಾಗದ ಜನಸಂಖ್ಯಾ ಬಾಹುಳ್ಯದ ಪ್ರದೇಶಗಳಾಗಿವೆ ಹಾಗು ಬಹು ಸಂಖ್ಯೆಯಲ್ಲಿ ರಿಸಾರ್ಟ್ ಗಳನ್ನು ಹೊಂದಿದ್ದು, ಭಾರತೀಯರಿಗೆ ಪ್ರಮುಖ ಪ್ರವಾಸೀ ಆಕರ್ಷಣೆಯ ತಾಣಗಳಾಗುವ ಸಾಧ್ಯತೆಗಳಿವೆ. ಪ್ರಸ್ತುತ ಮಾಲೆಗೆ ಸಂಪರ್ಕ ವಾಯುಯಾನದ ಮೂಲಕ ಮಾತ್ರವೇ ಇದೆ. ಇದು ವೆಚ್ಚದಾಯಕವಾಗಿದೆ. ಇದಲ್ಲದೆ ಕೊಚ್ಚಿಯಿಂದ ಸಮುದ್ರ ಮಾರ್ಗದ ಮೂಲಕ ಸಂಪರ್ಕ ಒದಗಿಸಿದರೆ ಅದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಲ್ಲುದಾಗಿದೆ. ಭಾರತಕ್ಕೆ ಇದರಿಂದ ಆರೋಗ್ಯ ಮತ್ತು ಕ್ಷೇಮ ಪ್ರವಾಸೋದ್ಯಮದಿಂದ ಲಾಭವಾಗುವ ಸಾಧ್ಯತೆ ಇದೆ. ಬಹು ಸಂಖ್ಯೆಯಲ್ಲಿ ಮಾಲ್ದೀವ್ಸ್ ಜನತೆ ಶಿಕ್ಷಣದ ಉದೇಶಕ್ಕಾಗಿ ಕೇರಳ ಮತ್ತು ದಕ್ಷಿಣ ಭಾರತದ ನಗರಗಳಿಗೆ ಪ್ರಯಾಣಿಸುತ್ತಾರೆ.

ಉಭಯ ದೇಶಗಳ ನಡುವೆ ಸಮುದ್ರ ಮಾರ್ಗದ ಮೂಲಕ ಪ್ರಯಾಣಿಕ ಮತ್ತು ಸರಕು ಸಾಗಾಣಿಕೆಯಲ್ಲಿ ಇರುವ ಅವಕಾಶ ಮತ್ತು ಸಾಮರ್ಥ್ಯವನ್ನು ಪರಿಗಣಿಸಿ ಅದನ್ನು ಉತ್ತೇಜಿಸಲು  ಮಾಲ್ದೀವ್ಸ್ ಜೊತೆ ಈ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ. ಉದ್ದೇಶಿತ ಹಡಗು ಯಾನ ಸೇವೆ ಜನತೆ ಮತ್ತು ಜನತೆಯ ನಡುವೆ ಸಂಪರ್ಕ ವೃದ್ದಿಗೆ ದೊಡ್ಡ ಕೊಡುಗೆ ನೀಡಲಿದೆ ಮಾತ್ರವಲ್ಲ ದ್ವಿಪಕ್ಷೀಯ ವ್ಯಾಪಾರಕ್ಕೂ ಉತ್ತೇಜನ ನೀಡಲಿದೆ.



(Release ID: 1576996) Visitor Counter : 153