ಸಂಪುಟ
ಕಾನೂನು ಮಾಪನ ಕ್ಷೇತ್ರದಲ್ಲಿ ಭಾರತ ಮತ್ತು ಕಿರ್ಗಿಜ್ ಸ್ತಾನ್ ನಡುವೆ ತಿಳಿವಳಿಕೆ ಒಪ್ಪಂದದ ಅಂಕಿತಕ್ಕೆ ಸಂಪುಟ ಸಭೆ ಸಮ್ಮತಿ
Posted On:
12 JUN 2019 8:08PM by PIB Bengaluru
ಕಾನೂನು ಮಾಪನ ಕ್ಷೇತ್ರದಲ್ಲಿ ಭಾರತ ಮತ್ತು ಕಿರ್ಗಿಜ್ ಸ್ತಾನ್ ನಡುವೆ ತಿಳಿವಳಿಕೆ ಒಪ್ಪಂದದ ಅಂಕಿತಕ್ಕೆ ಸಂಪುಟ ಸಭೆ ಸಮ್ಮತಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಕಾನೂನು ಮಾಪನ ಕ್ಷೇತ್ರದಲ್ಲಿ ಭಾರತ ಮತ್ತು ಕಿರ್ಗಿಜ್ ಸ್ತಾನ್ ನಡುವೆ ತಿಳಿವಳಿಕೆ ಒಪ್ಪಂದದ ಅಂಕಿತಕ್ಕೆ ತನ್ನ ಸಮ್ಮತಿ ಸೂಚಿಸಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ಎಸ್.ಸಿ.ಓ. ಸಂದರ್ಭದಲ್ಲಿ 2019ರ ಜೂನ್ 13-14ರಲ್ಲಿ ಅಂಕಿತ ಹಾಕಲಾಗಿತ್ತು.
ಪ್ರಯೋಜನಗಳು:
i. ಕಾನೂನು ಮಾಪನಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯ ವಿನಿಮಯ;
ii. ಕಾನೂನು ಮಾಪನಶಾಸ್ತ್ರದ ವಿಚಾರದಲ್ಲಿ ವ್ಯವಹರಿಸುತ್ತಿರುವ ಅಧಿಕಾರಿಗಳು ಮತ್ತು ಅಧಿಕಾರೇತರರಿಗೆ ತರಬೇತಿ ಕಾರ್ಯಕ್ರಮ ಅಭಿವೃದ್ಧಿ;
iii. ಕಾನೂನು ಮಾಪನ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ಅಧಿಕಾರಿಗಳು, ತಜ್ಞರು ಮತ್ತು ವೃತ್ತಿಪರರ ವಿನಿಮಯ;
iv. ಪರಸ್ಪರ ಆಸಕ್ತಿಯ, ಸೂಕ್ತವೆನಿಸುವ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಸಭೆಗಳು, ಸಂಪರ್ಕಿತ ಕಲಿಕಾ ಕಾರ್ಯಕ್ರಮ ಇತ್ಯಾದಿಗಳಲ್ಲಿ ಭಾಗಿಯಾಗುವುದು;
v. ಪೂರ್ವ ಪೊಟ್ಟಣ ಮಾಡುವ ಸರಕುಗಳ ರಾಜ್ಯ ಕಾನೂನು ಮಾಪನ ನಿಗಾ ಕೈಗೊಳ್ಳಲು ಮತ್ತು ಪೂರ್ವ ಪೊಟ್ಟಣ ಸರಕುಗಳ ಅಗತ್ಯತೆಗಳನ್ನು ಸ್ಥಾಪಿಸಲು;
vi. ಪೂರ್ವ ಪೊಟ್ಟಣ ಸರಕುಗಳ ಮೇಲಿನ ನಿಯಮ/ನಿಬಂಧನೆಗಳ ಸ್ಥಿತಿಯ ಪರಾಮರ್ಶೆ;
vii. ಉತ್ಪಾದಕರು ಮತ್ತು ಗ್ರಾಹಕರ ನಡುವಿನ ಪರಸ್ಪರ ಇತ್ಯರ್ಥ ಕುರಿತು ಕೈಗೊಳ್ಳುವ ಮಾಪನ ಉಸ್ತುವಾರಿಯ ಅನುಭವದ ಹಂಚಿಕೆ.
(Release ID: 1574182)
Visitor Counter : 173