ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಯೋಗಾಭ್ಯಾಸ ನವ ಭಾರತದ ಮಂತ್ರ” : ಪ್ರಕಾಶ್ ಜಾವಡೇಕರ್ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರದಾನ ಮಾಡಲು ಅಂತಾರಾಷ್ಟ್ರೀಯ ಯೋಗ ದಿನದ ಮಾಧ್ಯಮ ಸನ್ಮಾನ (ಎ.ವೈ.ಡಿ.ಎಂ.ಎಸ್.) ಸ್ಥಾಪಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ

Posted On: 08 JUN 2019 2:42PM by PIB Bengaluru

ಯೋಗಾಭ್ಯಾಸ ನವ ಭಾರತದ ಮಂತ್ರ” : ಪ್ರಕಾಶ್ ಜಾವಡೇಕರ್

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರದಾನ ಮಾಡಲು ಅಂತಾರಾಷ್ಟ್ರೀಯ ಯೋಗ ದಿನದ ಮಾಧ್ಯಮ ಸನ್ಮಾನ (ಎ.ವೈ.ಡಿ.ಎಂ.ಎಸ್.) ಸ್ಥಾಪಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ

 

ಯೋಗಾಭ್ಯಾಸ ಮತ್ತು ಅದರ ಪ್ರಸರಣ "ಆರೋಗ್ಯಪೂರ್ಣ ಜೀವನ, ಆರೋಗ್ಯಕರ ಬದುಕು, ಸ್ವಾಸ್ಥ್ಯ ಮತ್ತು ರೋಗ ನಿಗ್ರಹಕ್ಕೆ" ಗೆ ಕಾರಣವಾಗಲಿದೆ, ಯೋಗ ಜಗತ್ತಿಗೆ ಭಾರತ ನೀಡಿದ ಕೊಡುಗೆಗಳಲ್ಲಿ ಒಂದಾಗಿದೆ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವ ಭಾರತದ ಮಂತ್ರವಾಗಿದೆ, ಯೋಗ ವಿಶ್ವಸಂಸ್ಥೆಯ ಮೂಲಕ ಸಾರ್ವತ್ರಿಕವಾಗಿ ಅಂಗೀಕೃತವಾಗಿದೆ ಮತ್ತು ಜಾಗತಿಕವಾಗಿ ಪ್ರತಿವರ್ಷ ಜೂನ್ 21 ರಂದು 200 ದೇಶಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಭಾರತ ಮತ್ತು ವಿದೇಶದಲ್ಲಿ ಯೋಗವನ್ನು ಪಸರಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಜವಾಬ್ದಾರಿ ಮತ್ತು ಪಾತ್ರವನ್ನು ಶ್ಲಾಘಿಸಿದ ಸಚಿವರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈ ವರ್ಷದಿಂದ ಯೋಗ ಸಂದೇಶ ಪಸರಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಕೊಡುಗೆಯನ್ನು ಸ್ಮರಿಸಲು ಮೊದಲಬಾರಿಗೆ ಅಂತಾರಾಷ್ಟ್ರೀಯ ಯೋಗ  ದಿನದ ಮಾಧ್ಯಮ ಸನ್ಮಾನ (ಎ.ವೈ.ಡಿ.ಎಂ.ಎಸ್.) ಸ್ಥಾಪಿಸಿದೆ ಎಂದು ತಿಳಿಸಿದರು. ಈ ಕೆಳಗಿನ ವರ್ಗೀಕರಣದಲ್ಲಿ ಮಾಧ್ಯಮ ಸಂಸ್ಥೆಗಳಿಗೆ ಸಮ್ಮಾನ್ ಪ್ರದಾನ ಮಾಡಲಾಗುವುದು:

·   ಮುದ್ರಣ, ವಿದ್ಯುನ್ಮಾನ ಮತ್ತು (ದೂರದರ್ಶನ ಮತ್ತು ರೇಡಿಯೋ)ದಲ್ಲಿ ತೊಡಗಿಸಿಕೊಂಡಿರುವ ಮಾಧ್ಯಮ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ಯೋಗ  ದಿನದ ಮಾಧ್ಯಮ ಸನ್ಮಾನ (ಎ.ವೈ.ಡಿ.ಎಂ.ಎಸ್.)

·    ಮೂರು (3) ಪ್ರವರ್ಗಗಳಲ್ಲಿ ಮೂವತ್ತ ಮೂರು  (33) ಸನ್ಮಾನಗಳನ್ನು ನೀಡಲಾಗುವುದು.

·     “ವಾರ್ತಾ ಪತ್ರಿಕೆಗಳಲ್ಲಿ ಯೋಗ ಕುರಿತಂತೆ ಉತ್ತಮ ಮಾಧ್ಯಮ ಪ್ರಕಟಣೆಗಳಿಗೆ 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯ ಪ್ರವರ್ಗದಲ್ಲಿ 11 ಪುರಸ್ಕಾರ ನೀಡಲಾಗುವುದು.

·     ಟೆಲಿವಿಷನ್ ನಲ್ಲಿ ಯೋಗದ ಬಗ್ಗೆ ಉತ್ತಮ ಪ್ರಸಾರಕ್ಕಾಗಿ 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯ ಪ್ರವರ್ಗದಲ್ಲಿ 11 ಪುರಸ್ಕಾರ ನೀಡಲಾಗುವುದು.

·   ರೇಡಿಯೋದಲ್ಲಿ  ಯೋಗದ ಬಗ್ಗೆ ಉತ್ತಮ ಪ್ರಸಾರಕ್ಕಾಗಿ 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯ ಪ್ರವರ್ಗದಲ್ಲಿ 11 ಪುರಸ್ಕಾರ ನೀಡಲಾಗುವುದು.

 ·     ಈ ಸನ್ಮಾನವು ವಿಶೇಷ ಪದಕ/ಫಲಕ/ಪ್ರಶಸ್ತಿ ಮತ್ತು ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ.

·  ಎವೈಡಿಎಂ.ಎಸ್.ಗೆ 2019ರ ಜೂನ್ 10ರಿಂದ 25ರವರೆಗಿನ ಅವಧಿಯ ಪ್ರಸಾರ/ ಪ್ರಕಟಣೆಗಳನ್ನು ಪರಿಗಣಿಸಲಾಗುವುದು. 

 ·   ಯೋಗವನ್ನು ಜನಪ್ರಿಯಗೊಳಿಸುವಲ್ಲಿ ಮಾಧ್ಯಮದ ಕೊಡುಗೆಯನ್ನು 6 ತೀರ್ಪುಗಾರರ ಮಂಡಳಿ ನಿರ್ಧರಿಸಲಿದೆ.

·   ಪ್ರಶಸ್ತಿಗಳನ್ನು ಮತ್ತು ಅಂತಾರಾಷ್ಟ್ರೀಯ ಯೋಗ ದಿನದ ಸನ್ಮಾನ (ಎವೈಡಿಎಂ.ಎಸ್.) ಪ್ರದಾನ ಸಮಾರಂಭದ ಸೂಕ್ತ ದಿನವನ್ನು ನಂತರ ಪ್ರಕಟಿಸಲಾಗುವುದು. ಬಹುತೇಕ ಜುಲೈ 2019ರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಚಿವರ ಸಂವಾದದ ವೇಳೆ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು.

*****



(Release ID: 1573853) Visitor Counter : 131