ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
21 OCT 2026 6:38PM by PIB Bengaluru
ಪ್ರವೀಣ್ ಕುಮಾರ್ ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪುರುಷರ ಹೈ ಜಂಪ್ T64 ಸ್ಪರ್ಧೆಯಲ್ಲಿ ಅದ್ಭುತ ಜಿಗಿತದೊಂದಿಗೆ ಚಿನ್ನದ ಪದಕವನ್ನು ಯಶಸ್ವಿಯಾಗಿ ಉಳಿಸಿಕೊಂಡ ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ತಮ್ಮದೇ ಆದ ಗೇಮ್ಸ್ ದಾಖಲೆಯನ್ನು ಮುರಿದಿದ್ದಾರೆ.
ಪ್ರವೀಣ್ ಕುಮಾರ್ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ತಮ್ಮ ಯಶಸ್ಸನ್ನು ಮುಂದುವರಿಸುತ್ತಿದ್ದಾರೆ ಮತ್ತು ಈ ಅಸಾಧಾರಣ ಸಾಧನೆಯು ಅವರ ಸ್ಥಿರತೆ, ಕ್ರೀಡಾ ಪ್ರತಿಭೆ ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಗಮನಿಸಿದ ಶ್ರೀ ಮೋದಿ, ಮತ್ತೊಮ್ಮೆ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಪ್ರವೀಣ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿ X ಪೋಸ್ಟ್‌ನಲ್ಲಿ ಹೀಗೆ ಹಂಚಿಕೊಂಡಿದೆ.
"ಪ್ರವೀಣ್ ಕುಮಾರ್ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ತಮ್ಮ ಯಶಸ್ಸನ್ನು ಮುಂದುವರೆಸಿದ್ದಾರೆ!
ಅದ್ಭುತವಾದ ಜಿಗಿತದೊಂದಿಗೆ, ಅವರು ಪುರುಷರ ಹೈ ಜಂಪ್ T64 ಸ್ಪರ್ಧೆಯಲ್ಲಿ ತಮ್ಮ ಚಿನ್ನದ ಪದಕವನ್ನು ಯಶಸ್ವಿಯಾಗಿ ಉಳಿಸಿಕೊಂಡಿದ್ದಾರೆ, ತಮ್ಮದೇ ಆದ ಗೇಮ್ಸ್ ದಾಖಲೆಯನ್ನು ಮುರಿದಿದ್ದಾರೆ. ಈ ಅಸಾಧಾರಣ ಸಾಧನೆಯು ಅವರ ಸ್ಥಿರತೆ, ಕ್ರೀಡಾ ಪ್ರತಿಭೆ ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆಯನ್ನು ಪ್ರತಿಬಿಂಬಿಸುತ್ತದೆ. ಮತ್ತೊಮ್ಮೆ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಪ್ರವೀಣ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು: ಪ್ರಧಾನಮಂತ್ರಿ @narendramodi"
*****
(ಪ್ರಕಟಣೆ ಐ.ಡಿ.: 2326336)
ವಿಸಿಟರ್ ಕೌಂಟರ್ : 4