ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಐ ಎಫ್ ಎಫ್ ಐ 2026 ಗಾಗಿ ಮಾಧ್ಯಮ ಮಾನ್ಯತೆಯ ಗಡುವನ್ನು ಅಕ್ಟೋಬರ್ 17 ರವರೆಗೆ ವಿಸ್ತರಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಎಂಐಬಿ)

ಪ್ರಕಟಣಾ ದಿನಾಂಕ: 15 OCT 2026 2:50PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) 2026ರ ಮಾಧ್ಯಮ ಮಾನ್ಯತೆಗಾಗಿ ಕೊನೆಯ ದಿನಾಂಕವನ್ನು ಎರಡು ದಿನಗಳವರೆಗೆ ಅಂದರೆ 2026ರ 17ನೇ ಅಕ್ಟೋಬರ್ ರವರೆಗೆ ವಿಸ್ತರಣೆ ಮಾಡಿದೆ.  ಗೋವಾದ ಪಣಜಿಯಲ್ಲಿ2026ರ ನವೆಂಬರ್ 20ರಿಂದ 28ರವರೆಗೆ  ನಡೆಯಲಿರುವ ಚಲನಚಿತ್ರೋತ್ಸವವನ್ನು ವರದಿ ಮಾಡಲು ಉದ್ದೇಶಿಸಿರುವ ಮಾಧ್ಯಮ ವೃತ್ತಿಪರರು ಅಧಿಕೃತ ಪಿಐಬಿ ಮಾನ್ಯತೆ ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಹ ಮಾಧ್ಯಮ ವ್ಯಕ್ತಿಗಳು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಲು ಮತ್ತು ಪರಿಷ್ಕೃತ ಗಡುವಿನ ಮೊದಲು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ.

ನೋಂದಣಿಗೆ ಲಿಂಕ್: https://accreditation.pib.gov.in/eventregistration/login.aspx

ಪ್ರಶ್ನೆಗಳಿದ್ದರೆ ಅರ್ಜಿದಾರರು ಈ ಸಂಪರ್ಕ ಮಾಡಬಹುದು iffi.mediadesk@pib.gov.in.

ಐಎಫ್ ಎಫ್ ಐ ಕುರಿತು

1952ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಚಲನಚಿತ್ರ ಉತ್ಸವವಾಗಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಗೋವಾ ರಾಜ್ಯ ಸರ್ಕಾರ (ಇ ಎಸ್ ಜಿ), ಗೋವಾ ರಾಜ್ಯ ಸರ್ಕಾರ, ಐಎಫ್ ಎಫ್ ಐ ಅನ್ನು ಜಂಟಿಯಾಗಿ ಆಯೋಜಿಸುತ್ತಿದ್ದು, ಇದು ವಿಶ್ವದಾದ್ಯಂತ ಇರುವ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ದಿಗ್ಗಜರು ಮತ್ತು ಉದಯೋನ್ಮುಖ ತಾರೆಗಳನ್ನು ಒಗ್ಗೂಡಿಸುತ್ತದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ಗೌರವಗಳೊಂದಿಗೆ ಉತ್ಸವವನ್ನು ಗೋವಾದ ಅದ್ಭುತ ಕಡಲ ಕಿನಾರೆಯಲ್ಲಿ ವೈವಿಧ್ಯಮಯ ಕಥೆಗಳು, ಭಾಷೆಗಳು ಮತ್ತು ಸಿನಿಮೀಯ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. 57ನೇ ಐ ಎಫ್ ಎಫ್ ಐ 2026 ಕುರಿತು ಹೆಚ್ಚಿನ ಮಾಹಿತಿ ಮತ್ತು ಇತ್ತೀಚಿನ ವಿವರಗಳಿಗಾಗಿ ದಯಮಾಡಿ https://www.iffigoa.org/ ಭೇಟಿ ನೀಡಬಹುದು.

 

*****


(ಪ್ರಕಟಣೆ ಐ.ಡಿ.: 2323817) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Punjabi , Gujarati , Urdu , Marathi , हिन्दी , Bengali , Bengali-TR , Tamil , Telugu