ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಸರಾಗವಾಗಿ ಸರಬರಾಜು ಆಗುವಂತೆ ನೋಡಿಕೊಳ್ಳಲು ಮತ್ತು ಅಕ್ರಮ ದಾಸ್ತಾನು ತಡೆಯಲು ಸಕ್ಕರೆ ದಾಸ್ತಾನು ಮಾನದಂಡಗಳನ್ನು ಪರಿಷ್ಕರಿಸಿದ ಕೇಂದ್ರ ಸರ್ಕಾರ
ಚಿಲ್ಲರೆ ಸಕ್ಕರೆ ಬೆಲೆಗಳು ಶೇ.15 ರಷ್ಟು ಇಳಿಕೆ; ಕಾರ್ಖಾನೆಯ ಬೆಲೆ (ಎಕ್ಸ್-ಮಿಲ್) ಗಳು ಸುಮಾರು ಶೇ.28 ರಷ್ಟು ಇಳಿಕೆ
ಪ್ರಕಟಣಾ ದಿನಾಂಕ:
01 OCT 2026 12:54PM by PIB Bengaluru
ಅಕ್ಟೋಬರ್ 1 ರಿಂದ ಹೊಸ ಸಕ್ಕರೆ ಋತುವಿನ ಆರಂಭವಾಗುವುದರೊಂದಿಗೆ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಸಕ್ಕರೆಯ ಸಾಕಷ್ಟು ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಈಗಾಗಲೇ ಕಯಗೊಂಡಿರುವ ಕ್ರಮಗಳನ್ನು ಮತ್ತಷ್ಟು ಬಲಪಡಿಸಿದೆ.
ಕೊಲ್ಕತ್ತಾ ಮತ್ತು ಅದರ ವಿಸ್ತೃತ ಮಹಾನಗರ ಪ್ರದೇಶಗಳು ಮತ್ತು ಅಸ್ಸಾಂ ರಾಜ್ಯವನ್ನು ಹೊರತುಪಡಿಸಿ, ಸರ್ಕಾರವು ಸಕ್ಕರೆ ವಿತರಕರ ದಾಸ್ತಾನು ಅವಧಿಯನ್ನು 15 ದಿನಗಳವರೆಗೆ ಕಡಿತಗೊಳಿಸಿದೆ ಮತ್ತು 2026ರ ಅಕ್ಟೋಬರ್ 15 ರಿಂದ 2026ರ ನವೆಂಬರ್ 30 ರವರೆಗೆ ಜಾರಿಗೆ ಬರುವಂತೆ ದಾಸ್ತಾನು ಮಿತಿಯನ್ನು 1,000 ಕ್ವಿಂಟಾಲ್‌ಗಳಿಗೆ ನಿಗದಿಪಡಿಸಿದೆ.
ಪರಿಷ್ಕೃತ ನಿಬಂಧನೆಗಳ ಅಡಿಯಲ್ಲಿ 2026ರ ಅಕ್ಟೋಬರ್ 15 ರಿಂದ ಜಾರಿಗೆ ಬರಲಿದ್ದು, ಸಕ್ಕರೆ ವಿತರಕರು ಈ ನಿಯಮಗಳನ್ನು ಪಾಲನೆ ಮಾಡಬೇಕಿದೆ :
- ಅಂತಹ ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳನ್ನು ಮೀರಿದ ಅವಧಿಗೆ ಸಕ್ಕರೆ ದಾಸ್ತಾನು ಹೊಂದಿರಬಾರದು.
- ದೇಶಾದ್ಯಂತ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ 1,000 ಕ್ವಿಂಟಾಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದಿರಬಾರದು.
- ಪ್ರದೇಶದ ನಿರ್ದಿಷ್ಟ ಮಾರುಕಟ್ಟೆ ಅವಶ್ಯಕತೆಗಳನ್ನು ಪರಿಗಣಿಸಿ, ಕೋಲ್ಕತ್ತಾ ಮತ್ತು ಅದರ ವಿಸ್ತೃತ ಮಹಾನಗರ ಪ್ರದೇಶಗಳು ಮತ್ತು ಅಸ್ಸಾಂ ರಾಜ್ಯಕ್ಕೆ ದಾಸ್ತಾನು ಮಿತಿಯನ್ನು 2,000 ಕ್ವಿಂಟಾಲ್‌ಗಳಿಗೆ ನಿಗದಿಪಡಿಸಲಾಗಿದೆ.
ಕೋಲ್ಕತ್ತಾ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಸಕ್ಕರೆಯನ್ನು ಪಡೆಯುತ್ತದೆ ಮತ್ತು ಈಶಾನ್ಯ ಪ್ರದೇಶ ಸೇರಿದಂತೆ ದೇಶದ ಪೂರ್ವ ಭಾಗಕ್ಕೆ ಪೂರೈಸುತ್ತದೆ. ಭೌಗೋಳಿಕ ನಿರ್ಬಂಧಗಳು, ಸರಕು ಸಾಗಾಣೆ ಮತ್ತು ಈಶಾನ್ಯ ಪ್ರದೇಶದಲ್ಲಿನ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಸ್ಸಾಂಗೆ ಹೆಚ್ಚಿನ ಮಿತಿಯನ್ನು ಒದಗಿಸಲಾಗಿದೆ
ವಿತರಣಾ ಸರಣಿಯಲ್ಲಿ ಅನಗತ್ಯವಾಗಿ ಸಕ್ಕರೆ ದಾಸ್ತಾನು ಮಾಡದಂರೆ ಮತ್ತು ಸಕ್ಕರೆ ಕಾರ್ಖಾನೆಗಳಿಂದ ವಿತರಕರ ಮೂಲಕ ಸರಬರಾಜು ಸರಾಗವಾಗಿ ಸಾಗಿ ಅಂತಿಮವಾಗಿ ಗ್ರಾಹಕರನ್ನು ತಲುಪುವಂತೆ ನೋಡಿಕೊಳ್ಳುವುದು ಪರಿಷ್ಕೃತ ಮಾನದಂಡಗಳ ಗುರಿಯಾಗಿದೆ. ಈ ಕ್ರಮವು ವಿಶೇಷವಾಗಿ ಅಕ್ರಮ ದಾಸ್ತಾನನನ್ನು ಮತ್ತಷ್ಟು ನಿಗ್ರಹಿಸುವುದು, ಊಹಾತ್ಮಕ ವ್ಯಾಪಾರವನ್ನು ನಿರುತ್ಸಾಹಗೊಳಿಸುವುದು ಮತ್ತು ವಿತರಕರು ಸಕ್ಕರೆ ದಾಸ್ತಾನು ಸಂಗ್ರಹಿಸುವುದನ್ನು ತಡೆಯುವ ಗುರಿಯನ್ನು ಹೊಂದಿದೆ. ಸಕ್ಕರೆಯನ್ನು ಹಿಡಿದಿಟ್ಟುಕೊಳ್ಳಬಹುದಾದ ಪ್ರಮಾಣ ಮತ್ತು ಅವಧಿಯನ್ನು ಮಿತಿಗೊಳಿಸುವ ಮೂಲಕ, ಸರ್ಕಾರವು ಸರಬರಾಜು ಸರಣಿಯ ಮೂಲಕ ಸಕ್ಕರೆಯ ಕ್ರಮಬದ್ಧ ರವಾನೆಯನ್ನು ಸುಗಮಗೊಳಿಸಲು ಮತ್ತು ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಅದರ ನಿರಂತರ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಚಿಲ್ಲರೆ ಸಕ್ಕರೆ ಬೆಲೆ ಶೇ. 15 ರಷ್ಟು ಇಳಿಕೆ
ಆಗಸ್ಟ್‌ನ ಗರಿಷ್ಠ ಮಟ್ಟದಿಂದ ಸರಾಸರಿ ಚಿಲ್ಲರೆ ಸಕ್ಕರೆ ಬೆಲೆಗಳು ಶೇಕಡ 15 ರಷ್ಟು ಕಡಿಮೆಯಾಗಿವೆ ಮತ್ತು ಕಡಿಮೆ ಬೆಲೆಗಳ ಲಾಭ ಪೂರೈಕೆ ಸರಣಿಯ ಮೂಲಕ ಕಾರ್ಖಾನೆಯೊಳಗಿನ ಬೆಲೆಯಲ್ಲಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಕಾರ್ಖಾನೆಯೊಳಗಿನ ಸಕ್ಕರೆ ಬೆಲೆಗಳು ಸುಮಾರು ಶೇಕಡ 28 ರಷ್ಟು ಕುಸಿದಿವೆ ಮತ್ತು ಕಳೆದ ಮೂರು ವಾರಗಳಲ್ಲಿ ಇದು ಸ್ಥಿರವಾಗಿವೆ.
ಈ ಕುಸಿತವು ಸಕ್ಕರೆಯ ಸಾಕಷ್ಟು ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಮಾರುಕಟ್ಟೆಯಲ್ಲಿ ಅದರ ಕ್ರಮಬದ್ಧ ರವಾನೆಯನ್ನು ಸುಗಮಗೊಳಿಸಲು ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.
ಸಕ್ಕರೆ ಕಾರ್ಖಾನೆಗಳು, ಡೀಲರ್‌ಗಳು, ಸಗಟು ವ್ಯಾಪಾರಿಗಳು ಮತ್ತು ಇತರ ಮಾರುಕಟ್ಟೆ ಪಾಲುದಾರರು ಪೂರೈಕೆ ಸರಣಿಯ ಮೂಲಕ ಸಕ್ಕರೆಯ ನಿರಂತರ ಸಾಗಾಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಅಕ್ರಮ ದಾಸ್ತಾನು ಅಥವಾ ಊಹಾತ್ಮಕ ದಾಸ್ತಾನನ್ನು ತಡೆಯಬೇಕು ಎಂದು ಸರ್ಕಾರ ಪುನರುಚ್ಚರಿಸಿದೆ. ಕಾರ್ಖಾನೆಯೊಳಗಿನ (ಎಕ್ಸ್ ಮಿಲ್ ಪ್ರೈಸ್) ಸಕ್ಕರೆ ಬೆಲೆಯಲ್ಲಿನ ಗಣನೀಯ ಕುಸಿತದ ಲಾಭವನ್ನು ಗ್ರಾಹಕರಿಗೆ ತಕ್ಷಣವೇ ವರ್ಗಾಯಿಸಲು ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸೂಚಿಸಲಾಗಿದೆ.
ಈಗಾಗಲೇ ಎಲ್ ನಿನೊ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ಆರಂಭಿಸಲು ಸೂಚಿಸಲಾಗಿದೆ. ಕೆಲವು ಸಕ್ಕರೆ ಉತ್ಪಾದಿಸುವ ಪ್ರದೇಶಗಳಲ್ಲಿ ಕಬ್ಬಿನ ಮೇಲೆ ಎಲ್ ನಿನೊ ಪರಿಸ್ಥಿತಿಗಳಿಗೆ ಸಂಬಂಧಿಸಿದ ಅಸಮಾನ ಮತ್ತು ಕೊರತೆಯ ಮಳೆಯ ಪರಿಣಾಮವನ್ನು ಕೇಂದ್ರ ಸರ್ಕಾರವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ದೇಶೀಯ ಲಭ್ಯತೆ, ಗ್ರಾಹಕರ ಹಿತಾಸಕ್ತಿ ಮತ್ತು ಕಬ್ಬು ರೈತರ ಹಿತಾಸಕ್ತಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಎಲ್ಲಾ ಅಗತ್ಯ ಮತ್ತು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಸದ್ಯ ಕಬ್ಬಿನ ಗದ್ದೆಗಳಲ್ಲಿನ ಪರಿಸ್ಥಿತಿಗಳ ಆಧಾರದ ಮೇಲೆ ಕಬ್ಬು ಅರೆಯುವ ಕಾರ್ಯಾಚರಣೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.
ಕಬ್ಬು ರೈತರು ಮತ್ತು ಗ್ರಾಹಕರು ಭಾರತದ ಸಕ್ಕರೆ ನೀತಿಯ ಎರಡು ಕೇಂದ್ರ ಸ್ತಂಭಗಳು ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಕಬ್ಬು ಬೆಳೆಗಾರರಿಗೆ ಲಾಭದಾಯಕ ಆದಾಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ, ಆದರೆ ಸಕ್ಕರೆ ಬೆಲೆಯಲ್ಲಿನ ಅಸಮಂಜಸ ಏರಿಕೆಗಳಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ದೇಶಾದ್ಯಂತ ಸಕ್ಕರೆಯ ಸಮರ್ಪಕ ಲಭ್ಯತೆ ಖಾತ್ರಿಪಡಿಸಿಕೊಳ್ಳಲು ಸಮಾನವಾಗಿ ಬದ್ಧವಾಗಿದೆ.
*****
(ಪ್ರಕಟಣೆ ಐ.ಡಿ.: 2317575)
ವಿಸಿಟರ್ ಕೌಂಟರ್ : 9