ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜಮ್ಮು ಮತ್ತು ಕಾಶ್ಮೀರದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಭಾರತೀಯ ಭದ್ರತಾ ಪಡೆಗಳಿಂದ ಹತನಾದ ಹಿರಿಯ ಲಷ್ಕರ್-ಎ-ತೊಯ್ಬಾ ಕಮಾಂಡರ್ ಮುಸಾ ಅಲಿಯಾಸ್ ಆಸಿಫ್ ಫೌಜಿ


ಭದ್ರತಾ ಪಡೆಗಳು ದೀರ್ಘಕಾಲದಿಂದ ಮುಸಾನ ಮೇಲೆ ನಿಗಾ ಇಟ್ಟಿದ್ದವು ಮತ್ತು ಇತ್ತೀಚೆಗೆ ಆತನನ್ನು ಮಟ್ಟ ಹಾಕಲು ಎಲ್ಲಾ ಪಾಲುದಾರರನ್ನೊಳಗೊಂಡ ನಿರ್ದಿಷ್ಟ ಯೋಜನೆಯನ್ನು ರೂಪಿಸಲಾಗಿತ್ತು

ಭಾರತೀಯ ಭದ್ರತಾ ಪಡೆಗಳು ಮೂಸಾನನ್ನು ಹತ್ಯೆಗೈದಿರುವುದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿನ ಎಲ್ ಇ ಟಿ ಜಾಲಕ್ಕೆ ಭಾರಿ ಹೊಡೆತವನ್ನು ನೀಡಿದೆ

ಮುಸಾನ ಹತ್ಯೆಯೊಂದಿಗೆ, 2022 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದ, ಹಲವು ಪ್ರಮುಖ ದಾಳಿಗಳಿಗೆ ಕಾರಣರಾಗಿದ್ದ ನಾಲ್ವರು ಹಿರಿಯ ಎಲ್ ಇ ಟಿ ಕಮಾಂಡರ್ ಗಳ ಇಡೀ ಗುಂಪನ್ನು ಸಂಪೂರ್ಣವಾಗಿ ಮಟ್ಟಹಾಕಿದಂತಾಗಿದೆ

ಭದ್ರತಾ ಪಡೆಗಳು ಈ ಗುಂಪಿನ ಇತರ ಮೂವರು ಸದಸ್ಯರಾದ ಜುನೈದ್ ಭಟ್, ಸುಲೇಮಾನ್ ಮತ್ತು ಯಾಸಿರ್ ಅವರನ್ನು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಹೊಡೆದುರುಳಿಸಿವೆ

ಮುಸಾನನ್ನು ಮಟ್ಟಹಾಕಲು ನಡೆದ ಈ ಕಾರ್ಯಾಚರಣೆಯು, ಮೇ 2026 ರಲ್ಲಿ ಪ್ರಾರಂಭವಾದ ಸುದೀರ್ಘ 'ಆಪರೇಷನ್ ಶೇರುವಾಲಿ'ಯ ಭಾಗವಾಗಿದೆ

ಪ್ರಕಟಣಾ ದಿನಾಂಕ: 30 SEP 2026 4:09PM by PIB Bengaluru

ಗುಪ್ತಚರ ಮಾಹಿತಿಯ ಆಧಾರಿತ ಜಂಟಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ, ಹಿರಿಯ ಲಷ್ಕರ್-ಎ-ತೊಯ್ಬಾ ಕಮಾಂಡರ್ ಮುಸಾ ಅಲಿಯಾಸ್ ಆಸಿಫ್ ಫೌಜಿಯನ್ನು ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯ ಖಾನ್ ಸಾಹಿಬ್ ಪೊಲೀಸ್ ಠಾಣೆ ವ್ಯಾಪ್ತಿಯ ಗುರ್ವಾಟ್ ಕಲನ್ ನಲ್ಲಿ. ಭದ್ರತಾ ಪಡೆಗಳು ದೀರ್ಘಕಾಲದಿಂದ ಮುಸಾನನ್ನು ಬೆನ್ನಟ್ಟುತ್ತಿದ್ದವು ಮತ್ತು ಆತನ ಚಲನವಲನ ಹಾಗೂ ಉಪಸ್ಥಿತಿಯ ಬಗ್ಗೆ ತಾಂತ್ರಿಕ ಮತ್ತು ಮಾನವ ಗುಪ್ತಚರ ಮಾಹಿತಿ ಲಭಿಸಿದ ನಂತರ, ಆತನನ್ನು ಮಟ್ಟಹಾಕಲು ಇತ್ತೀಚೆಗೆ ಎಲ್ಲಾ ಪಾಲುದಾರರನ್ನೊಳಗೊಂಡ ನಿರ್ದಿಷ್ಟ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಭಾರತೀಯ ಭದ್ರತಾ ಪಡೆಗಳಿಂದ ಮುಸಾನ ಹತ್ಯೆಯು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿನ ಎಲ್ ಇ ಟಿ ವ್ಯವಸ್ಥೆಗೆ ಬಿದ್ದ ತೀವ್ರ ಹೊಡೆತವಾಗಿದೆ. ಮುಸಾನ ಹತ್ಯೆಯೊಂದಿಗೆ, 2022 ರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯರಾಗಿದ್ದ ಹಾಗೂ ಹಾಲನ್ ದಾಳಿ (ಆಗಸ್ಟ್ 2023), ಡಿ ಕೆ ಜಿ ದಾಳಿ (ಡಿಸೆಂಬರ್ 2023), ಕಂಡಿ ದಾಳಿ (ಮೇ 2023), ಶಾ ಸಿತಾರ್ ದಾಳಿ (ಮೇ 2024), ಶಿವ ಖೋರಿ ದಾಳಿ (ಜೂನ್ 2024), ಗಗನ್ ಗಿರ್ ದಾಳಿ (ಅಕ್ಟೋಬರ್ 2024), ಬೂಟಾಪತ್ರಿ ದಾಳಿ (ಅಕ್ಟೋಬರ್ 2024) ಮತ್ತು ಬೈಸರನ್ ದಾಳಿಯಂತಹ (ಏಪ್ರಿಲ್ 2025) ದಾಳಿಗಳಿಗೆ ಕಾರಣರಾಗಿದ್ದ ನಾಲ್ವರು ಹಿರಿಯ ಎಲ್ ಇಟಿ ಕಮಾಂಡರ್ಗಳ ಸಂಪೂರ್ಣ ಗುಂಪನ್ನು ಮಟ್ಟಹಾಕಿದಂತಾಗಿದೆ. ಈ ಗುಂಪಿನ ಇತರ ಮೂವರು ಸದಸ್ಯರಾದ ಜುನೈದ್ ಭಟ್ (ಡಿಸೆಂಬರ್ 03, 2024, ದಾಚಿಗಾಮ್), ಸುಲೇಮಾನ್ (ಜುಲೈ 28, 2025, ಆಪರೇಷನ್ ಮಹಾದೇವ್) ಮತ್ತು ಯಾಸಿರ್ (ಸೆಪ್ಟೆಂಬರ್ 04, 2026, ಆಪರೇಷನ್ ಅಸ್ಧರ್) ಅವರನ್ನು ಭದ್ರತಾ ಪಡೆಗಳು ಪ್ರತ್ಯೇಕ ಎನ್‌ಕೌಂಟರ್ ಗಳಲ್ಲಿ ಹತ್ಯೆ ಮಾಡಿದವು. ಮುಸಾನನ್ನು  ಹೊಡೆದುರುಳಿಸಲು ನಡೆದ ಪ್ರಸ್ತುತ ಎನ್‌ಕೌಂಟರ್, ಸುದೀರ್ಘವಾಗಿ ನಡೆಯುತ್ತಿರುವ ಕಾರ್ಯಾಚರಣೆಯ ಒಂದು ಭಾಗವಾಗಿತ್ತು.

ಕಳೆದ ಕೆಲವು ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಾರತೀಯ ಭೂಸೇನೆ ಮತ್ತು ಸಿಎಪಿಎಫ್  ನಂತಹ ಎಲ್ಲಾ ಭದ್ರತಾ ಸಂಸ್ಥೆಗಳು ನಿಕಟ ಸಮನ್ವಯದೊಂದಿಗೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿವೆ.

 

*****


(ಪ್ರಕಟಣೆ ಐ.ಡಿ.: 2317124) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Punjabi , Gujarati , Odia , Telugu , Malayalam