ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಇಪಿಎಫ್ ಯೋಜನೆ 2026ರಲ್ಲಿ ಅಮ್ನೆಸ್ಟಿ (ಕ್ಷಮಾದಾನ) ನಿಬಂಧನೆಗಳ ಮೂಲಕ ಭವಿಷ್ಯ ನಿಧಿ ಟ್ರಸ್ಟ್‌ಗಳಿಗೆ ಪೂರ್ವಾನ್ವಯವಾಗುವಂತೆ ವಿನಾಯಿತಿಯನ್ನು ಕ್ರಮಬದ್ಧಗೊಳಿಸುವುದು
ಸಂಭಾವ್ಯ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ ಇಪಿಎಫ್‌ಒ
ಪ್ರಕಟಣಾ ದಿನಾಂಕ:
02 SEP 2026 1:05PM by PIB Bengaluru
ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆ 2026 ರಲ್ಲಿ ಬದಲಾವಣೆಯ ಕ್ರಮವಾಗಿ ಅಮ್ನೆಸ್ಟಿ ಗಾಗಿ (ಕ್ಷಮಾದಾನಕ್ಕಾಗಿ) ನಿಬಂಧನೆಗಳನ್ನು ಪರಿಚಯಿಸಲಾಗಿದ್ದು, ಆ ಕುರಿತು 29.06.2026 ರಂದು ಅಧಿಸೂಚನೆ ಹೊರಡಿಸಲಾಗಿದೆ. ಅಂತಹ ನಿಬಂಧನೆಗಳು ಆದಾಯ ತೆರಿಗೆ ಕಾಯ್ದೆ 1961 (1961 ರ 43) ಅಡಿಯಲ್ಲಿ ಗುರುತಿಸಲ್ಪಟ್ಟ ಭವಿಷ್ಯ ನಿಧಿ (ಪಿಎಫ್) ಟ್ರಸ್ಟ್‌ಗಳ ವಿನಾಯಿತಿ ಸ್ಥಿತಿಯನ್ನು ಕ್ರಮಬದ್ಧಗೊಳಿಸಲು ಒಂದು ಬಾರಿಯ ಅವಕಾಶವಾಗಿದೆ, ಆದರೆ ನೌಕರರ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳು (ಇಪಿಎಫ್ ಮತ್ತು ಎಂಪಿ) ಕಾಯ್ದೆ, 1952 ರ ಸೆಕ್ಷನ್ 17 ಅಥವಾ ಸಾಮಾಜಿಕ ಭದ್ರತೆ (ಸಿಒಎಸ್ಎಸ್), 2020 ರ ಸಂಹಿತೆಯ ಸೆಕ್ಷನ್ 143 ರ ಅಡಿಯಲ್ಲಿ ನೀಡಲಾದ ಔಪಚಾರಿಕ ವಿನಾಯಿತಿ ಆದೇಶವನ್ನು ಹೊಂದಿರುವುದಿಲ್ಲ.
ಅನ್ವಯಿಸುವ ವಿಧಾನ, ಕಾರ್ಯವಿಧಾನದ ಅವಶ್ಯಕತೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಮ್ನೆಸ್ಟಿಗಾಗಿ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು 11.07.2026 ರಂದು ಹೊರಡಿಸಲಾದ ವಿವರವಾದ ಸುತ್ತೋಲೆಯಲ್ಲಿ ನೀಡಲಾಗಿದೆ. ಅಧಿಸೂಚನೆಯ ದಿನಾಂಕದಿಂದ ಆರು ತಿಂಗಳ ಅವಧಿಗೆ ಅಂದರೆ 28.12.2026 ರವರೆಗೆ ಈ ಅಮ್ನೆಸ್ಟಿ ನಿಬಂಧನೆಗಳು ಮಾನ್ಯವಾಗಿರುತ್ತವೆ. ವಿನಾಯಿತಿ ಸ್ಥಿತಿಯನ್ನು ಪೂರ್ವಾನ್ವಯವಾಗುವಂತೆ ಕ್ರಮಬದ್ಧಗೊಳಿಸುವುದರ ಜೊತೆಗೆ, ಪಿಎಫ್ ಟ್ರಸ್ಟ್‌ಗಳಿಗೆ ಸೇರುವ ಇತರ ಪ್ರಮುಖ ಪ್ರಯೋಜನಗಳಲ್ಲಿ ಕನಿಷ್ಠ ಉದ್ಯೋಗಿಗಳ ಸಂಖ್ಯೆ, ಆವರ್ತ ನಿಧಿಯ ಗಾತ್ರ ಮತ್ತು 3 ವರ್ಷಗಳ ಅನುಸರಣಾ ನಿಯಮದಂತಹ ಕೆಲವು ಅವಶ್ಯಕತೆಗಳನ್ನು ಮನ್ನಾ ಮಾಡುವುದು ಸೇರಿವೆ, ಇವು 2020 ರ CoSS ಅಡಿಯಲ್ಲಿವೆ. ಪೂರ್ವಾನ್ವಯವಾಗುವಂತೆ ಕ್ರಮಬದ್ಧಗೊಳಿಸುವಿಕೆಯ ನಂತರ, ಒಂದು ಸಂಸ್ಥೆಯು ವಿನಾಯಿತಿ ಅಥವಾ ವಿನಾಯಿತಿ ಇಲ್ಲದ ಸಂಸ್ಥೆಯಾಗಿ ಅನುಸರಿಸಲು ಆಯ್ಕೆ ಮಾಡಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸಂಭಾವ್ಯ ಅರ್ಜಿದಾರರಿಗೆ ಅಮ್ನೆಸ್ಟಿ ನಿಬಂಧನೆಗಳ ಬಗ್ಗೆ ಸರಿಯಾಗಿ ಅರಿವು ಮೂಡಿಸಲಾಗಿದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅದರ ತಳಮಟ್ಟದ ಕಚೇರಿಗಳ ಮೂಲಕ ಸಂಪೂರ್ಣ ಪ್ರಕ್ರಿಯೆಯಲ್ಲಿ ಸರಿಯಾಗಿ ಮಾರ್ಗದರ್ಶನ ನೀಡಲಾಗುತ್ತದೆ. ಜನಸಂಪರ್ಕ ಅಭಿಯಾನ ( ಔಟ್ರೀಚ್ ಡ್ರೈವ್)ನ ಭಾಗವಾಗಿ, ವಿವಿಧ ಪಾಲುದಾರರೊಂದಿಗೆ ಒಳಗೊಳ್ಳುವಿಕೆ ಸದ್ಯ ನಡೆಯುತ್ತಿದೆ. ಇಪಿಎಫ್‌ಒ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಂತಹ ವೃತ್ತಿಪರ ಸಂಸ್ಥೆಗಳನ್ನು ಸಂಪರ್ಕಿಸಿದೆ, ಅದರ ಸದಸ್ಯರು (ಸಿಎಗಳು) ಹಲವಾರು ಸಂಸ್ಥೆಗಳ ಶಾಸನಬದ್ಧ ಅಥವಾ ಆದಾಯ ತೆರಿಗೆ ಲೆಕ್ಕಪರಿಶೋಧನೆ ಕೈಗೊಳ್ಳುತ್ತಾರೆ, ಅದರಲ್ಲಿ ಅಂತಹ ಸಂಸ್ಥೆಗಳು ಪಿಎಫ್ ಟ್ರಸ್ಟ್ ನಿಧಿಗಳನ್ನು ರಚಿಸಿರುವ ಮತ್ತು ಆಮ್ನೆಸ್ಟಿ ಯೋಜನೆಯನ್ನು ಸಂಭಾವ್ಯವಾಗಿ ಪಡೆಯಬಹುದಾದ ಪಿಎಫ್ ಟ್ರಸ್ಟ್‌ಗಳನ್ನು ಗುರುತಿಸಲು ಉತ್ತಮ ಸ್ಥಿತಿಯಲ್ಲಿವೆ. ಪಿಎಫ್ ಟ್ರಸ್ಟ್‌ಗಳಿಂದ ಯೋಜನೆಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲು ಐಸಿಎಐ ತನ್ನ ಸದಸ್ಯರಲ್ಲಿ ಆಮ್ನೆಸ್ಟಿ ನಿಬಂಧನೆಗಳನ್ನು ಪ್ರಸಾರ ಮಾಡುವಂತೆ ಕೋರಲಾಗಿದೆ. ಮೇಲಿನವುಗಳ ಜೊತೆಗೆ, ಯುಪಿ ವಲಯ ಕಚೇರಿ ಮತ್ತು ಕೋಲ್ಕತ್ತಾದ ವಲಯ ಕಚೇರಿಯಂತಹ ಇಪಿಎಫ್‌ಒ ವಲಯ ಕಚೇರಿಗಳು ಪಾಲುದಾರರೊಂದಿಗೆ ಸೆಮಿನಾರ್‌ಗಳು/ ಕಾರ್ಯಾಗಾರಗಳನ್ನು ನಡೆಸಿವೆ.
ಹೆಚ್ಚುವರಿಯಾಗಿ, ಇಪಿಎಫ್‌ಒ ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ಗುರುತಿಸಲ್ಪಟ್ಟ ಪಿಎಫ್ ಟ್ರಸ್ಟ್‌ಗಳ ವಿವರಗಳನ್ನು ಕೋರಿ ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಿದೆ, ಐಟಿ ಕಾಯ್ದೆಯಡಿ ಮಾನ್ಯತೆ ನೀಡುವ ಮೊದಲು ಇಪಿಎಫ್ ಮತ್ತು ಎಂಪಿ ಕಾಯ್ದೆ, 1952 ಅಥವಾ CoSS 2020 ರಡಿಯಲ್ಲಿ ಸಂಸ್ಥೆಯ ವ್ಯಾಪ್ತಿ ಮತ್ತು ವಿನಾಯಿತಿಯ ಸ್ಥಿತಿಯ ಅನುಗುಣವಾದ ಪರಿಶೀಲನೆಯನ್ನು ಕೈಗೊಳ್ಳಲು ಅಥವಾ ಇಪಿಎಫ್‌ಒನಿಂದ ಔಪಚಾರಿಕ ವಿನಾಯಿತಿ ಆದೇಶವನ್ನು ಹೊಂದಿರದ ಪಿಎಫ್ ಟ್ರಸ್ಟ್‌ಗಳ ಅಸ್ತಿತ್ವದಲ್ಲಿರುವ ಮಾನ್ಯತೆಯನ್ನು ಹಿಂತೆಗೆದುಕೊಳ್ಳಲು ವಿನಂತಿಸಿದೆ.
11.07.2026ರ ಇಪಿಎಫ್‌ಒ ಸುತ್ತೋಲೆಯಲ್ಲಿ ವಿವರಿಸಿರುವ ವಿವರಗಳ ಪ್ರಕಾರ ಸಂಸ್ಥೆಗಳ ಪಿಎಫ್ ಟ್ರಸ್ಟ್‌ಗಳು ಅಮ್ನೆಸ್ಟಿ ಯೋಜನೆಗೆ ಅರ್ಜಿ ಸಲ್ಲಿಸಬಹುದು (ಇಪಿಎಫ್ ಒ ವೆಬ್ ಸೈಟ್ ನಲ್ಲಿ ಬವಿವರ ಲಭ್ಯವಿದೆ: https://www.epfo.gov.in).
*****
(ಪ್ರಕಟಣೆ ಐ.ಡಿ.: 2305900)
ವಿಸಿಟರ್ ಕೌಂಟರ್ : 15