ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಎಫ್‌ಐಪಿ (FIP) ಪುಸ್ತಕ ಉತ್ಪಾದನಾ ಶ್ರೇಷ್ಠತಾ ಪ್ರಶಸ್ತಿಗಳು 2026 ರಲ್ಲಿ ಪ್ರಕಾಶನ ವಿಭಾಗಕ್ಕೆ 7 ಗೌರವಗಳು


ಎಫ್‌ಐಪಿ ಪ್ರಶಸ್ತಿಗಳು 2026 ರಲ್ಲಿ ‘ಭಾರತ್ 2026’ ಗೆ ದ್ವಿತೀಯ ಬಹುಮಾನ, ‘ಧರ್ತಿ ಕಿ ಸೇಹತ್’ ಗೆ ತೃತೀಯ ಬಹುಮಾನ

ಪ್ರಕಟಣಾ ದಿನಾಂಕ: 25 AUG 2026 1:59PM by PIB Bengaluru

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗವು, ಪ್ರಕಾಶನ ರಂಗದ ಶ್ರೇಷ್ಠತೆಗಾಗಿ ಫೆಡರೇಶನ್ ಆಫ್ ಇಂಡಿಯನ್ ಪಬ್ಲಿಷರ್ಸ್ (FIP) ನ ‘ಪುಸ್ತಕ ಉತ್ಪಾದನಾ ಶ್ರೇಷ್ಠತಾ ಪ್ರಶಸ್ತಿಗಳು 2026’ ರಲ್ಲಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ವಿಭಾಗದ ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳ ಪತ್ರಿಕೆಗಳು, ಪುಸ್ತಕಗಳು ಮತ್ತು ಆಕರ ಪ್ರಕಟಣೆಗಳನ್ನು ವಿವಿಧ ವಿಭಾಗಗಳಲ್ಲಿ ಗುರುತಿಸಲಾಗಿದೆ.

ಪ್ರಕಾಶನ ವಿಭಾಗದ ಮಹಾನಿರ್ದೇಶಕರಾದ ಡಾ. ಧೀರಜ್ ಕಾಕಡಿಯಾ ಅವರು ಪ್ರಶಸ್ತಿ ವಿಜೇತ ಪುಸ್ತಕಗಳು ಮತ್ತು ಪತ್ರಿಕೆಗಳ ಸಂಪಾದಕರನ್ನು ಸನ್ಮಾನಿಸಿದರು ಹಾಗೂ ಈ ಸಾಧನೆಗೆ ಕಾರಣರಾದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಧೀರಜ್ ಕಾಕಡಿಯಾ, “ಪ್ರಕಾಶನ ವಿಭಾಗ ಪಡೆದ ಏಳು ಪ್ರಶಸ್ತಿಗಳು ಅದರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮೂಹಿಕ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಶ್ರೇಷ್ಠತೆಗೆ ಸಾಕ್ಷಿಯಾಗಿವೆ. ಈ ಮನ್ನಣೆಯು ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಮತ್ತು ಉಪಯುಕ್ತ ವಿಷಯವನ್ನು ಪ್ರಕಟಿಸಲು ನಮಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ. ಜ್ಞಾನ, ಸಾಹಿತ್ಯ, ಸಂಸ್ಕೃತಿ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಒಳಗೊಂಡ ಅತ್ಯುತ್ತಮ ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಓದುಗರಿಗೆ ತಲುಪಿಸಲು ಪಬ್ಲಿಕೇಷನ್ಸ್ ಡಿವಿಷನ್ ಬದ್ಧವಾಗಿದೆ” ಎಂದು ಹೇಳಿದರು.

ಜೊತೆಗೆ, ಈ ವಿಭಾಗ ಪ್ರಕಟಿಸುವ ಪುಸ್ತಕಗಳು ಮತ್ತು ಪತ್ರಿಕೆಗಳು ರಾಷ್ಟ್ರೀಯ ಅಭಿವೃದ್ಧಿ, ಜ್ಞಾನ ಮತ್ತು ವಿಜ್ಞಾನ, ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಸಮಕಾಲೀನ ವಿಷಯಗಳಿಗೆ ಸಂಬಂಧಿಸಿದ ವೈವಿಧ್ಯಮಯ ಮತ್ತು ಮೌಲ್ಯಯುತ ವಿಷಯಗಳನ್ನು ಓದುಗರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ಏಳು ಪ್ರಶಸ್ತಿಗಳು, ನಾಲ್ಕು ದ್ವಿತೀಯ ಬಹುಮಾನಗಳು ಮತ್ತು ಮೂರು ತೃತೀಯ ಬಹುಮಾನಗಳನ್ನು ಒಳಗೊಂಡಿವೆ. ಈ ಸಾಧನೆಯು ಪ್ರಕಾಶನ ಶ್ರೇಷ್ಠತೆ, ಸಂಪಾದಕೀಯ ಗುಣಮಟ್ಟ ಮತ್ತು ವಿಷಯದ ವೈವಿಧ್ಯತೆಗೆ ಪ್ರಕಾಶನ ವಿಭಾಗದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ದ್ವಿತೀಯ ಬಹುಮಾನ ಪಡೆದ ಪ್ರಕಾಶನಳು

  • ಭಾರತ್ 2026 (ಹಿಂದಿ) - ಆಕರ ಗ್ರಂಥಗಳು – ಹಿಂದಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.
  • ವಿಂಗ್ಸ್ ಟು ಅವರ್ ಹೋಪ್ಸ್ ಸಂಪುಟ 2 - ಸಾಮಾನ್ಯ ಮತ್ತು ವಾಣಿಜ್ಯ ಪುಸ್ತಕಗಳು – ಇಂಗ್ಲಿಷ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.
  • ಯೋಜನಾ ಜುಲೈ 2026 (ಹಿಂದಿ), ‘ವಿಕಸಿತ ಭಾರತ@2047’ ಆಶಯದ ಪತ್ರಿಕೆ - ಪತ್ರಿಕೆಗಳು ಮತ್ತು ಹೌಸ್ ಮ್ಯಾಗಝೀನ್‌ಗಳು – ಹಿಂದಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.
  • ಕುರುಕ್ಷೇತ್ರ – 1952 ರಿಂದ ಗ್ರಾಮೀಣಾಭಿವೃದ್ಧಿ ಮಾಸಪತ್ರಿಕೆ - ಪತ್ರಿಕೆಗಳು ಮತ್ತು ಹೌಸ್ ಮ್ಯಾಗಝೀನ್‌ಗಳು – ಇಂಗ್ಲಿಷ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.

ತೃತೀಯ ಬಹುಮಾನ ಪಡೆದ ಪ್ರಕಾಶನಳು

  • ಧರ್ತಿ ಕಿ ಸೇಹತ್ - ಮಕ್ಕಳ ಪುಸ್ತಕಗಳು (ಸಾಮಾನ್ಯ ಆಸಕ್ತಿ) (0-10 ವರ್ಷಗಳು) – ಹಿಂದಿ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ.
  • ರಂಗೋಲಿ ರೂಪ್ ಸುರ್ ಲೇ ಕಿ - ಕಲೆ ಮತ್ತು ಕಾಫಿ ಟೇಬಲ್ ಪುಸ್ತಕಗಳು – ಹಿಂದಿ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ.
  • ಆಜ್‌ಕಲ್ ಉರ್ದು ಜುಲೈ 2026 - ಪತ್ರಿಕೆಗಳು ಮತ್ತು ಹೌಸ್ ಮ್ಯಾಗಝೀನ್‌ಗಳು, ಭಾರತೀಯ ಭಾಷೆಗಳು (ಉರ್ದು) ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ.

ಈ ಪ್ರಶಸ್ತಿಗಳು ವಿಶ್ವಾಸಾರ್ಹ, ಮಾಹಿತಿಪೂರ್ಣ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾದ ವಿಷಯಗಳನ್ನು ಪ್ರಕಟಿಸುವ ಮತ್ತು ಪ್ರಸಾರ ಮಾಡುವ ಪಬ್ಲಿಕೇಷನ್ಸ್ ಡಿವಿಷನ್‌ನ ಪಾತ್ರವನ್ನು ಇನ್ನಷ್ಟು ಬಲಪಡಿಸುತ್ತವೆ. ಈ ಮನ್ನಣೆಯು ಅಧಿಕೃತ ಮತ್ತು ಸಾರ್ವಜನಿಕ-ಪರ ವಿಷಯಗಳೊಂದಿಗೆ ಉನ್ನತ ಗುಣಮಟ್ಟದ ಪುಸ್ತಕಗಳು, ಪತ್ರಿಕೆಗಳು ಮತ್ತು ಆಕರ ಪ್ರಕಟಣೆಗಳನ್ನು ಓದುಗರಿಗೆ ತರುವುದನ್ನು ಮುಂದುವರಿಸಲು ಈ ವಿಭಾಗಕ್ಕೆ ಪ್ರೋತ್ಸಾಹ ನೀಡುತ್ತದೆ.

ಭಾರತ್ 2026 (ಹಿಂದಿ) - ಆಕರ ಗ್ರಂಥಗಳು ಹಿಂದಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.

ವಿಂಗ್ಸ್ ಟು ಅವರ್ ಹೋಪ್ಸ್ ಸಂಪುಟ 2 - ಸಾಮಾನ್ಯ ಮತ್ತು ವಾಣಿಜ್ಯ ಪುಸ್ತಕಗಳು ಇಂಗ್ಲಿಷ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.

ಯೋಜನಾ ಹಿಂದಿ ಜುಲೈ 2026, ‘ವಿಕಸಿತ ಭಾರತ@2047’ ಆಶಯದ ಪತ್ರಿಕೆ - ಪತ್ರಿಕೆಗಳು ಮತ್ತು ಹೌಸ್ ಮ್ಯಾಗಝೀನ್‌ಗಳು ಹಿಂದಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.

ಕುರುಕ್ಷೇತ್ರ – 1952 ರಿಂದ ಗ್ರಾಮೀಣಾಭಿವೃದ್ಧಿ ಮಾಸಪತ್ರಿಕೆ - ಪತ್ರಿಕೆಗಳು ಮತ್ತು ಹೌಸ್ ಮ್ಯಾಗಝೀನ್‌ಗಳು ಇಂಗ್ಲಿಷ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದೆ.

ಧರ್ತಿ ಕಿ ಸೇಹತ್ - ಮಕ್ಕಳ ಪುಸ್ತಕಗಳು (ಸಾಮಾನ್ಯ ಆಸಕ್ತಿ) (0-10 ವರ್ಷಗಳು) ಹಿಂದಿ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ.

ರಂಗೋಲಿ ರೂಪ್ ಸುರ್ ಲೇ ಕಿ - ಕಲೆ ಮತ್ತು ಕಾಫಿ ಟೇಬಲ್ ಪುಸ್ತಕಗಳು ಹಿಂದಿ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ.

ಆಜ್‌ಕಲ್ ಉರ್ದು ಜುಲೈ 2026 - ಪತ್ರಿಕೆಗಳು ಮತ್ತು ಹೌಸ್ ಮ್ಯಾಗಝೀನ್‌ಗಳು, ಭಾರತೀಯ ಭಾಷೆಗಳು (ಉರ್ದು) ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ.

ಫೆಡರೇಶನ್ ಆಫ್ ಇಂಡಿಯನ್ ಪಬ್ಲಿಷರ್ಸ್ (FIP) ಕುರಿತು

ದಿ ಫೆಡರೇಶನ್ ಆಫ್ ಇಂಡಿಯನ್ ಪಬ್ಲಿಷರ್ಸ್ ಎಂಬುದು ಭಾರತದಾದ್ಯಂತದ ಸದಸ್ಯತ್ವವನ್ನು ಹೊಂದಿರುವ ಇಂಗ್ಲಿಷ್, ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳ ಪ್ರಕಾಶಕರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಪ್ರಕಾಶನ ಉದ್ಯಮದ ಶೇಕಡಾ 80 ಕ್ಕಿಂತ ಹೆಚ್ಚು ಭಾಗವನ್ನು ಪ್ರತಿನಿಧಿಸುತ್ತದೆ. ದೇಶದ ಎಲ್ಲಾ ಪ್ರಮುಖ ಪ್ರಕಾಶಕರು ಇದರ ನೇರ ಸದಸ್ಯರಾಗಿದ್ದು, ಇತರ ಪ್ರಕಾಶಕರನ್ನು ವಿವಿಧ ಸ್ಥಳೀಯ ಸಂಘಗಳ ಮೂಲಕ ಪ್ರತಿನಿಧಿಸಲಾಗುತ್ತದೆ.

 

*****


(ಪ್ರಕಟಣೆ ಐ.ಡಿ.: 2303067) ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Assamese , Gujarati , Telugu , Malayalam